HomeUncategorizedಎ.14ರೊಳಗೆ ರೋಹಿತ್ ಕಾಯ್ದೆ ಜಾರಿ ಕುರಿತು ಸರಕಾರ ಘೋಷಣೆ ಮಾಡಲಿ: ಮಾವಳ್ಳಿ ಶಂಕರ್

ಎ.14ರೊಳಗೆ ರೋಹಿತ್ ಕಾಯ್ದೆ ಜಾರಿ ಕುರಿತು ಸರಕಾರ ಘೋಷಣೆ ಮಾಡಲಿ: ಮಾವಳ್ಳಿ ಶಂಕರ್

- Advertisement -
- Advertisement -

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಇದೇ ಎ.14ರೊಳಗೆ ರಾಜ್ಯ ಸರಕಾರವು ರೋಹಿತ್ ಕಾಯ್ದೆ ಜಾರಿ ಕುರಿತು ಘೋಷಣೆ ಮಾಡಬೇಕೆಂದು ದಲಿತ ಚಳವಳಿಯ ನಾಯಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ಇಂದು (ಮಂಗಳವಾರ) ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಾಯ್ದೆಯ ಜಾರಿಗಾಗಿ ರಾಜ್ಯಾದ್ಯಂತ ಎಲ್ಲ ವಿದ್ಯಾರ್ಥಿ ಸಂಘಟನೆಗಳ ಜೊತೆಗೂಡಿ  ಬೃಹತ್ ಪ್ರಮಾಣದಲ್ಲಿ ಜನಾಂದೋಲನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಪೀಠಿಕೆ ಪ್ರತಿ ಪ್ರಜೆಗೆ ಅವಕಾಶ ಹಾಗು ಸ್ಥಾನಮಾನದ, ಸಮಾನತೆಯ ಭರವಸೆ ನೀಡುತ್ತದೆ. ಆದರೆ ಸಂವಿಧಾನ ಜಾರಿಯಾದ 75  ವರ್ಷಗಳ ನಂತರವೂ ದಲಿತ ಬಹುಜನ ಯುವಜನರಿಗೆ ಈ ಎರಡು ಭರವಸೆಗಳು ಈಡೇರಿಲ್ಲ. ರೋಹಿತ್ ವೇಮುಲ, ಪಾಯಲ್ ತದ್ವಿ ಅವರ ಸಾಂಸ್ಥಿಕ ಕೊಲೆಗಳು ಈ ಭರವಸೆಯ ನಿರಾಕರಣೆಯ ತೀವ್ರ ಉದಾಹರಣೆಯಾಗಿದೆ. 2021ರಲ್ಲಿ  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭಾ ಸದಸ್ಯರಿಗೆ 2014-2021 ರ ಅವಧಿಯಲ್ಲಿ, ಐಐಟಿ, ಐಐಎಂ, ಎನ್‌ಐಟಿ ಮತ್ತು ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಹೇಳಿರುವುದು ಕಳವಳಕಾರಿಯಾದ ವಿಷಯವಾಗಿದೆ ಎಂದು ಅವರು ಹೇಳಿದರು.

ಈ ಆತ್ಮಹತ್ಯೆಗೈದ 122ರಲ್ಲಿ 68 ವಿದ್ಯಾರ್ಥಿಗಳು SC/ST/OBC ವರ್ಗಗಳಿಗೆ ಸೇರಿದವರು. ಜೊತೆಗೆ ಈ ಸಮಾನತೆಯ ನಿರಾಕರಣೆಯಿಂದ ಪ್ರತಿ ವರ್ಷ ಸಾವಿರಾರು ದಲಿತ ಬಹುಜನರು ಉನ್ನತ ಶಿಕ್ಷಣ ಸೇರಿದ ನಂತರ ಡ್ರಾಪ್ ಔಟ್ ಆಗುತ್ತಿದ್ದಾರೆ. ಡಿಸೆಂಬರ್ 2023ರಲ್ಲಿ ಸರ್ಕಾರ ಸಂಸತ್ತಿನಲ್ಲಿ ನೀಡಿದ ಅಂಕಿ-ಅಂಶಗಳ ಪ್ರಕಾರ , ಕೇವಲ ಕೇಂದ್ರೀಯ ವಿಶ್ವಾ ವಿದ್ಯಾನಿಲಯಗಳಿಂದಲೇ ,  2018-2023  ಮಧ್ಯೆ  13,000ಕ್ಕೂ  ಹೆಚ್ಚು  SC/ST/OBC ಸಮುದಾಯದ ವಿಧಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ. ಜೊತೆಗೆ , ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಾತಿ ತಾರತಮ್ಯ ದಿನನಿತ್ಯ ಎದುರಿಸುವ ಹಿಂಸೆಯಾಗಿದೆ. ಈ ದಿನನಿತ್ಯದ ಹಿಂಸೆಯನ್ನು ನಿವೃತ್ತ ಯು.ಜಿ.ಸಿ ಅಧ್ಯಕ್ಷರಾದ ಸುಖದೇವ್ ಥೋರಟ್ ನೇತೃತ್ವದ ಸಮಿತಿಯ ವರದಿಯಲ್ಲಿ ವಿವರಿಸಲಾಯಿತು. ಹಾಸ್ಟೆಲ್ ನಲ್ಲಿ , ಮೆಸ್ ನಲ್ಲಿ, ಆಟದ ಮೈದಾನ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಹ ಹೇಗೆ ಜಾತಿಯು ಅಡ್ಡವಾಗಿದೆ ಎಂದು ಅವರ ವರದಿ ವಿವರಿಸಿದೆ ಎಂದು ಮಾವಳ್ಳಿ ಶಂಕರ್ ಹೇಳಿದರು.

ಇಂದು ಸಹ  ಕರ್ನಾಟಕದಲ್ಲಿ ಜಾತಿ ಸಾಮಾನ ಶಿಕ್ಷಣಕ್ಕೆ ಅಡ್ಡಿಯಾಗಿದೆ.  ಒಂದು ಕಡೆ ಸರ್ಕಾರ ಸಾರ್ವಜನಿಕ ಶಿಕ್ಷಣಕ್ಕಾಗಿ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ, ಇನ್ನೊಂದೆಡೆ ಶಿಕ್ಷಣದ ಖಾಸಗೀಕರಣ ವೇಗವಾಗಿ ಮುಂದುವರಿಯುತ್ತಿದೆ. ಇದರ ಜೊತೆಗೆ  NEP, CUET, NEET  ನಂತಹ ನೀತಿಗಳಿಂದ ಶಿಕ್ಷಣದ ಕೇಂದ್ರೀಕರಣವಾಗುತ್ತಿದೆ ಎಂದು ಮತ್ತೊಬ್ಬ ದಲಿತ ಚಳವಳಿಯ ನಾಯಕ ಬಸವರಾಜ್ ಕೌತಾಳ್ ತಿಳಿಸಿದರು.

ರೋಹಿತ್ ವೇಮುಲ ಅವರ ತಾಯಿ ಹಾಗು ಪಾಯಲ್ ತದ್ವಿ ಅವರ ತಾಯಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು  2019ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯವನ್ನು ತಡೆಯಲು ಯು.ಜಿ.ಸಿ ನಿಯಮಗಳೇನೋ ಇವೆ (ಉದಾಹರಣೆಗೆ – Equal Opportunity Cell), ಆದರೆ ಅವುಗಳು ಸಂಪೂರ್ಣವಾಗಿ ಜಾರಿಯಾಗದೇ ತಾರತಮ್ಯವನ್ನು, ದಲಿತ ಬಹುಜನ ವಿದ್ಯಾರ್ಥಿಗಳು ಶಿಕ್ಷಣ ತೊರೆಯುವುದನ್ನು ತಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ ಆರು ವರ್ಷಗಳಾಗಿದ್ದು ಹಾಗು ಯು.ಜಿ.ಸಿ ನಿಯಮಾವಳಿ ಜಾರಿಯಾಗಿ 13 ವರ್ಷಗಳಾಗಿದ್ದರೂ, ದೇಶದ ವಿಶ್ವವಿದ್ಯಾನಿಲಯಗಳ ಮೇಲ್ವಿಚಾರಣೆ ಮಾಡುವ ಯು.ಜಿ.ಸಿ ತಾರತಮ್ಯವಾನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಸ್ತುತದಲ್ಲಿರುವ ನಿಯಮಾವಳಿಯನ್ನು ಜಾರಿ ಮಾಡದೆ, ಸ್ವೆಚ್ಚಾನುಸಾರವಾಗಿ ನಿಶ್ಯಕ್ತವಾದ ನೂತನ ನಿಯಮಾವಳಿಯನ್ನು 2025ರ ಫೆಬ್ರವರಿಯಲ್ಲಿ ಜಾರಿಮಾಡಿದೆ ಎಂದು ಡಾ.ಕೆ.ಪಿ.ಅಶ್ವಿನಿ ಹೇಳಿದರು.

ಇನ್ನೊಂದು ಕಡೆ ಜಾತಿ ತಾರತಮ್ಯವನ್ನು ತಡೆಯಲು ಇರುವ ಕಾಯ್ದೆ ಎಂದರೆ ಜಾತಿ ದೌರ್ಜನ್ಯ ತಡೆ ಕಾಯ್ದೆ. ಈ ದೌರ್ಜನ್ಯ ತಡೆ ಕಾಯ್ದೆಯು ಹಲ್ಲೆ, ಜಾತಿ ನಿಂದನೆ, ಲೈಂಗಿಕ ಅತ್ಯಾಚಾರದಂತಹ ಕ್ರಿಮಿನಲ್ ಆಚರಣೆಗಳಿಗೆ ಸೂಕ್ತವಾಗಿದೆ. ಆದರೆ  ಕಾಲೇಜು ಮಟ್ಟದಲ್ಲಿ ನಡೆಯುವ ತಾರತಮ್ಯ ಈ ಕಾಯ್ದೆಯಡಿ ಪರಿಹರಿಸಲು ಸೂಕ್ತವಾಗಿರುವುದಿಲ್ಲ ಹಾಗು ಈ ಕಾಯ್ದೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು  ಸಾಧ್ಯವಿಲ್ಲ. ಥೋರಟ್ ಸಮಿತಿ ವರದಿ ಹೇಳಿದಂತೆ ಉತ್ತಮ ವಾತಾವರಣ ಸೃಷ್ಟಿಸಲು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಆಂಗ್ಲದಲ್ಲಿ ವಿಶೇಷ ತರಬೇತಿ ನೀಡುವುದು, ದಮನಿಸುವ ಜಾತಿಗಳಿಗೆ ಸೇರಿದ ಶಿಕ್ಷಕರಿಗೂ ಹಾಗು ವಿದ್ಯಾರ್ಥಿಗಳಿಗೂ ಜಾತಿ ಬಗ್ಗೆ caste sensitization workshops  ಮಾಡುವುದು ಇತ್ಯಾದಿ ಸಹ ಆಗಬೇಕು. ಅದು ಇಂದಿನ ನಿಯಮ-ಕಾನೂನುಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಈಗಿರುವ ನಿಯಮಗಳು ಹಾಗು ಕಾನೂನು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಘನತೆ, ಸಮಾನ ಅವಕಾಶ, ಸ್ಥಾನಮಾನ ಖಾತ್ರಿಪಡಿಸಲು ವಿಫಲವಾದ ಕಾರಣ, ಇಂದು ರೋಹಿತ್ ಕಾಯ್ದೆ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ರೋಹಿತ್ ಕಾಯ್ದೆ ಜಾರಿಯಾಗುವಂತೆ, ಸಾರ್ವಜನಿಕ ವಿಶ್ವಾವಿದ್ಯಾನಿಲಯಗಳಲ್ಲಿ ಉತ್ತಮ, ಗುಣಮಟ್ಟ ಶಿಕ್ಷಣ ನೀಡುವಂತೆ  ಹಾಗು ಖಾಸಗಿ ವಿಶ್ವವಿದ್ಯಾನಿಲಯಗಳ  ನಿಯಂತ್ರಣ ಆಗುವಂತೆ ಒತ್ತಾಯಿಸಲು ನಾವು ರಾಜ್ಯ ಮಟ್ಟದ ಆಂದೋಲನ ಕೈಗೊಳ್ಳುತ್ತಿದ್ದೇವೆ. ರಾಜ್ಯದ ಯುವಜನರು ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇವೆ. ಜಾತಿ ರಹಿತ ಕರ್ನಾಟಕವನ್ನು ಕಟ್ಟುವುದೇ ನಮ್ಮ ಅಂತಿಮ ಗುರಿ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ (ಕೆ.ವಿ.ಎಸ್.) ಸರೋವರ್ ಬೆಂಕಿಕೆರೆ ಮಾಹಿತಿ ನೀಡಿದರು.

ಏಪ್ರಿಲ್ 14, ಅಂದರೆ ಅಂಬೇಡ್ಕರ್ ಜಯಂತಿಯ ಒಳಗೆ ರಾಜ್ಯ ಸರ್ಕಾರ ರೋಹಿತ್ ಕಾಯ್ದೆ ಜಾರಿಮಾಡಲು ಅಗತ್ಯ ಕ್ರಮವನ್ನು ಮುಖ್ಯಮಂತ್ರಿಗಳು  ಘೋಷಿಸಬೇಕು. ಕಾಯ್ದೆ ಜಾರಿ ಮಾಡಲು ದಲಿತ-ವಿಧಾರ್ಥಿ ಸಂಘಟನೆಗಳ ಪ್ರತಿನಿಧಿಗಳಿರುವ ಸಮಿತಿ ರಚನೆಯಾಗಬೇಕು. ಕಾರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರವು ತಾರತಮ್ಯ ರಹಿತವಾಗುವಂತೆ, ಎಲ್ಲರಿಗು ಸಮಾನ ಅವಕಾಶ ಸಿಗುವಂತೆ ಸೂಕ್ತ, ಶೀಘ್ರ ಕ್ರಮ ಕೈಗೊಳ್ಳಬೇಕು. ಜಾತಿ ವಿನಾಶವೇ ನಮ್ಮ ಅಂತಿಮ ಗುರಿ, ಅದಕ್ಕೆ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಶ್ನಾ, ಡಾ.ನಂದಕುಮಾರ್, ಲೇಖಾ ಅಡವಿ, ವೆಂಕಟೇಶ್ ಮುಂತಾದವರು ಹಾಜರಿದ್ದರು.

ತಮಿಳುನಾಡು ಬಿಜೆಪಿಯಲ್ಲಿ ಜಾತಿ ಲೆಕ್ಕಾಚಾರ: ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಕೆಳಗಿಳಿಯುವ ಸಾಧ್ಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...