ಕೊರೊನಾ ಸಾಂಕ್ರಾಮಿಕದ ನಡುವೆಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ಆರೋಪದಲ್ಲಿ ನೂರಾರು ವಿದೇಶಿಯರ ಮೇಲೆ ಪ್ರಕರಣ ದಾಖಲಿಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇವರಲ್ಲಿ 36 ವಿದೇಶಿಯರು ವಿಚಾರಣೆ ಎದುರಿಸುತ್ತಿದ್ದರು. ಈಗ ದೆಹಲಿ ಹೈಕೋರ್ಟ್ ಇವರ ಮೇಲಿನ ಪ್ರಕರಣವನ್ನು ಖುಲಾಸೆಗೊಳಿಸಿ ದೋಷಮುಕ್ತರನ್ನಾಗಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಲೈವ್ ಲಾ, “ಕೊರೊನಾ ಸಾಂಕ್ರಾಮಿಕ ರೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಬ್ಲೀಘಿ ಜಮಾತ್ ಸಭೆಗೆ ಹಾಜರಾಗಿದ್ದ ಆರೋಪದಡಿ 36 ವಿದೇಶಿಯರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ” ಎಂದು ವರದಿ ಮಾಡಿದೆ.
ಇದನ್ನೂ ಓದಿ: ತಿರುಪತಿ ವರ್ಸಸ್ ತಬ್ಲಿಘಿ: ಸಾಂಕ್ರಾಮಿಕದ ಕೋಮುವಾದೀಕರಣಕ್ಕೆ ಸ್ಪಷ್ಟ ಉದಾಹರಣೆ
Breaking: A Delhi court acquits 36 foreigners, who were charge sheeted for attending #TablighiJamaat congregation here by allegedly being negligent and disobeying the government guidelines issued in wake of #Covid_19 pandemic in the country. pic.twitter.com/5XwgI8Snzk
— Live Law (@LiveLawIndia) December 15, 2020
ಇದನ್ನೂ ಓದಿ: ತಬ್ಲೀಘಿ ಜಮಾತ್ ಕ್ಷಮೆಯಾಚಿಸಿದರೆ ಭಾರತವನ್ನು ತೊರೆಯಬಹುದು: ಕೇಂದ್ರ
ಕಳೆದ ಮಾರ್ಚ್‌ನಲ್ಲಿ ನಿಝಾಮುದ್ದೀನ್ ಮರ್ಕಝ್ ಕೋವಿಡ್-19 ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದ್ದಾಗ ಭಾರೀ ಸುದ್ದಿಯಾಗಿತ್ತು. ವೀಸಾ ಷರತ್ತುಗಳ ಉಲ್ಲಂಘನೆ ಹಾಗೂ ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದಕ್ಕೆ ದೆಹಲಿ ಪೊಲೀಸರು ಸುಮಾರು 955 ವಿದೇಶಿಗರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬಹುಪಾಲು ವಿದೇಶಿ ತಬ್ಲೀಘಿ ಜಮಾತ್ ಸದಸ್ಯರು ಮನವಿಯ ಮೇರೆಗೆ ತಮ್ಮ ದೇಶಗಳಿಗೆ ಮರಳಿದ್ದರೆ, 44 ಮಂದಿ ದೆಹಲಿಯಲ್ಲಿ ವಿಚಾರಣೆ ಎದುರಿಸಲು ನಿರ್ಧರಿಸಿದ್ದರು. ಇವರ ಪೈಕಿ ಮೊದಲು 8 ಸದಸ್ಯರುಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷಧಾರಗಳಿರಲಿಲ್ಲ.
ಇದನ್ನೂ ಓದಿ: ತಬ್ಲಿಘಿಗಳ ಮೇಲೆ ಮತ್ತೊಂದು ಸುಳ್ಳು ಸುದ್ದಿ ಪ್ರಕಟಿಸಿ ಸಿಕ್ಕಿಬಿದ್ದ ಝೀ ನ್ಯೂಸ್!
ಇದೀಗ ಎಲ್ಲಾ ಸದಸ್ಯರ ಮೇಲಿನ ಪ್ರಕರಣವನ್ನು ಖುಲಾಸೆಗೊಳಿಸಿದೆ.
ಜುಲೈನಲ್ಲಿ ದೆಹಲಿಯ ನ್ಯಾಯಾಲಯವು ಈ ಕಾರ್ಯಕ್ರಮಕ್ಕೆ ಹಾಜರಾದ 82 ಬಾಂಗ್ಲಾದೇಶಿಗಳಿಗೆ ಜಾಮೀನು ನೀಡಿತ್ತು. ಮತ್ತೊಂದು ಸ್ಥಳೀಯ ನ್ಯಾಯಾಲಯವು ದಂಡ ಪಾವತಿಸಿದ ನಂತರ ಅರವತ್ತೆರಡು ಮಲೇಷಿಯನ್ನರು ಮತ್ತು 11 ಸೌದಿ ಅರೇಬಿಯನ್ನರನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರವು ಜೂನ್‌ನಲ್ಲಿ 2,500 ಕ್ಕೂ ಹೆಚ್ಚು ತಬ್ಲೀಘಿ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿ, 10 ವರ್ಷಗಳ ಕಾಲ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತ್ತು.
ಇದನ್ನೂ ಓದಿ: ತಬ್ಲಿಘಿದು ಬೇಜವಾಬ್ದಾರಿ, ಸರ್ಕಾರದ್ದು ಹೊಣೆಗೇಡಿತನ : ಅದಕ್ಕಿಂತಲೂ ಭೀಕರ ಕಮ್ಯುನಲ್ ವೈರಸ್
ಮಾರ್ಚ್ 25 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಆರಂಭಿಕ ವಾರಗಳಲ್ಲಿ ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಹರಡಿದ್ದಕ್ಕೆ ತಬ್ಲೀಘಿ ಜಮಾತ್ ಸಭೆಯನ್ನು ದೂಷಿಸಲಾಗಿತ್ತು.
ಈ ಸಭೆಯಲ್ಲಿ ಅನೇಕ ವಿದೇಶಿಯರು ಭಾಗವಹಿಸಿದ್ದರು. ತಬ್ಲೀಘಿ ಜಮಾತ್ ಸುನ್ನಿ ಮುಸ್ಲಿಂ ಪಂಥವಾಗಿದ್ದು, 80 ಕ್ಕೂ ಹೆಚ್ಚು ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿದೆ.
ಇದನ್ನೂ ಓದಿ: ಮತ್ತೇ 12 ತಬ್ಲೀಘಿಗಳನ್ನು ದೋಷಮುಕ್ತ ಗೊಳಿಸಿದ ನ್ಯಾಯಾಲಯ


