Homeಎಂಟರ್ತೈನ್ಮೆಂಟ್ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

ಚಾ ಮತ್ತು ಪಂಕ್ಚರ್‌: ಬೆಕ್ಕಣ್ಣನಿಗೂ ದಾಖಲೆಗಳ ಚಿಂತೆ!

2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ... ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ..

- Advertisement -
- Advertisement -

ಬೆಕ್ಕಣ್ಣ ಯಾಕೋ ಬಲು ಬೇಜಾರಿನ ಮುಖ ಹೊತ್ತು ಮನೆಗೆ ಬಂದಿತು.

“ಏನಾತಲೇ… ಈರುಳ್ಳಿ ಇನ್ನೂ ಆಕಾಶದಾಗೆ ತೇಲಾಡಕಹತ್ತೈತಿ ಅಂತ ಬೇಜಾರಾಗಿಯೇನ್” ಅಂತ ಕೇಳಿದೆ.

‘ಅದಕ್ಯಾಕ್ ನಾ ಬೇಜಾರಾಗ್ಲಿ… ನಾ ಏನ್ ಈರುಳ್ಳಿ ತಿನ್ನಾಂವ ಅಲ್ಲ, ಹಾಲು ಕುಡಿಯಾಂವ. ಈರುಳ್ಳಿ ತಿನ್ನಾಕಿ ನೀ ಅಳಬಕು, ನಾ ಅಲ್ಲ’ ಎಂದು ಮುಗುಮ್ಮಾಗಿ ಉತ್ತರಿಸಿತು.

“ಮತ್ಯಾಕ ಹಿಂಗ ಗಡಗಿ ಮಾರಿ ಮಾಡೀ” ಎಂದು ತುಸು ಅನುನಯಿಸಿದೆ.

“ನಾ ಎಷ್ಟ್ ಬಡಕಂಡೆ… ನನ್ನೂ ಸಾಲಿಗಿ ಹಚ್ಚು, ನಾಕ್ ಅಕ್ಸರ ಕಲೀತೀನಿ ಅಂತ. ನೀ ಕೇಳಲಿಲ್ಲ…. ಪಂಕ್ಚರ್ ಅಂಗಡ್ಯಾಗ ಇಲಿ ಹಿಡಿಯೂ ಕೆಲಸಕ್ಕೆ ಹಚ್ಚಿದಿ. ಸಾಲಿ ಕಲಿತು ಏನ್ ಕಡಿತಿ, ದಗದ ಮಾಡಬಕು ಅಂತ್ಹೇಳಿ ನಾ ಮರಿ ಇದ್ದಾಗೇ ಕೆಲಸಕ್ಕೆ ಹಚ್ಚಿದಿ…ಈಗ ನೋಡು” ಎಂದು ಅಳುಮುಖ ಮಾಡಿತು.

“ಏನಾತಲೇ ಈಗ… ಮತ್ತ ಎಲ್ಲಾರೂ ಸಾಲಿ ಕಲಿತು ಶಾಣೇ ಆಗಿ, ಕಂಪ್ಯೂಟರ್ ಮುಂದ ಕುಂತ್ರ, ಪಂಕ್ಚರ್ ತಿದ್ದೋರು ಯಾರಲೇ… ಬೆಳಗ್ಗಿ ಬೆಳಗ್ಗಿ ಏನ್ ಗೋಳು ಹಚ್ಚಿ ಹೋಗಲೇ” ಎಂದು ಜಬರಿಸಿದೆ.

“ಎದೆ ಸೀಳಿದರೆ ನಾಕ್ ಅಕ್ಸರ ಇಲ್ಲದೋರು, ಪಂಕ್ಚರ್ ಅಂಗಡ್ಯಾಗ ಕೆಲಸ ಮಾಡೋರೆಲ್ಲ ಬೀದೀ ಬದಿ ಪ್ರತಿಭಟನೆ ನಡೆಸ್ಯಾರ ಅಂತ ತೇಜಣ್ಣ ವದರಾಕ ಹತ್ತಿದ್ದ…” ಸುಂಬಳ ಮೇಲೇರಿಸುತ್ತಲೇ ವಿವರಿಸಿತು.

“ಅಂವನ ಕಾರು ಪಂಕ್ಚರ್ ಆದಾಗ ಐಟಿ ಸೆಲ್‍ ವಳಗ ಕುತ್ತೋರು ಬಂದು ತಿದ್ದತಾರೇನು… ಮತ್ತ ಅವನಿಗೆ ವೋಟು ಹಾಕಿದೋರು ಬರೀ ಪಿಎಚ್‍ಡಿ ಮಂದಿ, ಕಂಪ್ಯೂಟರ್ ಕಲಿತ ಮಂದಿ ಅಷ್ಟೇ ಏನು…ನಿನಗ ಗೊತೈತಿಲ್ಲೋ, 2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ… ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ… ಚಾ ಮಾರೂದು ಎಷ್ಟ್ ವಳ್ಳೆ ಕೆಲಸನೋ ಪಂಕ್ಚರ್ ತಿದ್ದೂದೂ ಅಷ್ಟೇ ವಳ್ಳೆ ಕೆಲಸ” ನಾನು ಇಷ್ಟುದ್ದ ಹೇಳಿ ಸಮಾಧಾನಿಸಲು ಯತ್ನಿಸಿದೆ.

“ಆದ್ರ ಚಾ ಮಾರೂ ಮಂದೀನೆ ಬ್ಯಾರೆ ಅಂತ, ಪಂಕ್ಚರ್ ತಿದ್ದೂ ಮಂದೀನೆ ಬ್ಯಾರೆ ಅಂತ. ನನಗೇನ್ ಅಷ್ಟ್ ತಿಳಿಯಂಗಿಲ್ಲ  ಅಂತ ಮಾಡೀಯೇನ್. ಹೋಗ್ಲಿ, ನನ್ನುವು ಎಲ್ಲಾ ಡಾಕ್ಯುಮೆಂಟ್ಸ್ ಸರಿ ಇಟ್ಟೀಯಿಲ್ಲೋ… ಆಮ್ಯಾಗೆ ನಿನ್ ಮುತ್ತಜ್ಜಿ ಎಲ್ಲಿಂದ ಬಂದಾಳ ಅಂತ್ಲೇ ಗೊತ್ತಿಲ್ಲ, ನೀ  ಬ್ಯಾರೆ ಪಂಕ್ಚರ್ ಅಂಗಡಿ ಮಂದಿ ಜೋಡಿ ಕೆಲಸ ಮಾಡಾಂವ, ನೀ ಹಿಂದೂಸ್ಥಾನದಂವ ಅಲ್ಲ ಅಂತೆಲ್ಲ ಹೇಳಿ ಕ್ಯಾಂಪಿಗೆ ಕಳಿಸಬ್ಯಾಡ್ರಿ” ಎನ್ನುತ್ತ ಮನೆಯಲ್ಲಿ ತನ್ನ ಡಾಕ್ಯುಮೆಂಟ್ಸ್ ಹುಡುಕತೊಡಗಿತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...