Homeಮುಖಪುಟಹರಿಯಾಣದಲ್ಲಿಯೂ ಬಿಜೆಪಿ ಮೈತ್ರಿಗೆ ಆತಂಕ: ಜೆಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಗೌತಮ್‌ ರಾಜೀನಾಮೆ

ಹರಿಯಾಣದಲ್ಲಿಯೂ ಬಿಜೆಪಿ ಮೈತ್ರಿಗೆ ಆತಂಕ: ಜೆಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಗೌತಮ್‌ ರಾಜೀನಾಮೆ

ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರೊಬ್ಬರೇ 11 ಸಚಿವಾಲಯಗಳನ್ನು ಇಟ್ಟುಕೊಂಡಿದ್ದರೆ, ಕೇವಲ ಒಂದನ್ನು ಮಾತ್ರ ಪಕ್ಷದ ಶಾಸಕರೊಬ್ಬರಿಗೆ ನೀಡದ್ದಾರೆ

- Advertisement -
- Advertisement -

ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷ ಜೆಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಉಪಾಧ್ಯಕ್ಷ ಮತ್ತು ಹಿರಿಯ ಮುಖಂಡ ರಾಮ್ ಕುಮಾರ್ ಗೌತಮ್ ತಮ್ಮ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಜೆಜೆಪಿಯ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರಿಗೆ ತೊಂದರೆಯಾಗುವ ಲಕ್ಷಣಗಳು ಕಾಣಿಸಿಕೊಂಡಿವೆ.

“ದುಶ್ಯಂತ್ ಚೌತಲಾ ಅವರು ತಮ್ಮ ಪಕ್ಷದ ಶಾಸಕರ ಬೆಂಬಲದೊಂದಿಗೆ ಉಪಮುಖ್ಯಮಂತ್ರಿಯಾದರು ಎಂಬುದನ್ನು ಮರೆಯಬಾರದು” ಎಂದು 73ವರ್ಷದ ರಾಮ್ ಕುಮಾರ್ ಗೌತಮ್ ಜೆಜೆಪಿ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಶ್ಯಂತ್ ಚೌತಲಾ ಅವರು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದರು. ಆನಂತರ ಫಲಿತಾಂಶ ಬಂದ ಕೂಡಲೇ ಅವರ ಜೊತೆ ಕೈಜೋಡಿಸಿದ್ದರು. ಅವರು ಮೊದಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟೀಕಿಸಿದ ಹಲವು ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಇಂತಹ ದುಶ್ಯಂತ್ ಚೌತಲಾ ಜೆಜೆಪಿ ಪಕ್ಷದ ಶಾಸಕರಿಗೆ ತಿಳಿಸದೇ ಜೆಜೆಪಿ-ಬಿಜೆಪಿ ಮೈತ್ರಿಕೂಟವನ್ನು ರಚಿಸಿದ್ದಾರೆ ಎಂದು ಗೌತಮ್ ಹೇಳಿದ್ದಾರೆ. “ಅವರು ಆಂಬಿಯನ್ಸ್ ಮಾಲ್‌ನಲ್ಲಿ ಮೈತ್ರಿ ಮಾತುಕತೆ ಮಾಡಿದ್ದಾರೆ ಎಂದು ತಿಳಿದಾಗ ನಾನು ಅಸಮಾಧಾನಗೊಂಡಿದ್ದೇನೆ ಮತ್ತು ನಮಗೆ ತುಂಬಾ ನೋವುಂಟಾಗಿದೆ. ಅಷ್ಟೇ ಅಲ್ಲದೇ ಪಕ್ಷದ ಜನರು ಮತ್ತು ಎಲ್ಲಾ ಶಾಸಕರು ತುಂಬಾ ಅಸಮಾಧಾನಗೊಂಡಿದ್ದಾರೆ. ದುಶ್ಯಂತ್ ಎಲ್ಲಾ ಮುಖ್ಯ ಹುದ್ದೆಗಳನ್ನು ತೆಗೆದುಕೊಂಡರು. ಉಳಿದ ಶಾಸಕರ ಬಗ್ಗೆ ಏನು? ಅವರು ಜನರಿಂದ ಆಯ್ಕೆಯಾದವರಲ್ಲವೇ? ಇದು ದೊಡ್ಡ ಹೊಡೆತ “ಎಂದು ಗೌತಮ್ ಸುದ್ದಿಗಾರರಿಗೆ ತಿಳಿಸಿದರು.

ದುಶ್ಯಂತ್ ಚೌತಲಾ

“ಅವರು ಮೂರು ತಿಂಗಳಲ್ಲಿ ನಮ್ಮನ್ನು ಪರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ. ನಮ್ಮನ್ನು ಪರೀಕ್ಷಿಸಲು ಅವರು ಯಾರು?” ಎಂದು ಗೌತಮ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರೊಬ್ಬರೇ 11 ಸಚಿವಾಲಯಗಳನ್ನು ಇಟ್ಟುಕೊಂಡಿದ್ದರೆ, ಕೇವಲ ಒಂದನ್ನು ಮಾತ್ರ ಪಕ್ಷದ ಶಾಸಕರೊಬ್ಬರಿಗೆ ನೀಡದ್ದಾರೆ ಎಂದು ಆರೋಪಿಸಿದ್ದಾರೆ.

ಗೌತಮ್ ಅವರ ರಾಜೀನಾಮೆಯನ್ನು ಮಾಧ್ಯಮಗಳಿಂದ ಮಾತ್ರ ತಿಳಿದುಕೊಂಡಿದ್ದೇನೆ ಎಂದು ದುಶ್ಯಂತ್ ಚೌತಲಾ ಹೇಳಿದ್ದಾರೆ. “ನಾನು ನಿಮ್ಮಿಂದ ತಿಳಿದುಕೊಂಡೆ ಮತ್ತು ನಾನು ಅವನೊಂದಿಗೆ (ಗೌತಮ್) ಮಾತನಾಡುತ್ತೇನೆ” ಎಂದು ಅವರು ಹೇಳಿದರು.

ಜೆಜೆಪಿ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಗೌತಮ್ ಅವರು ಸಚಿವಸ್ಥಾನದ ಅಭ್ಯರ್ಥಿಯಾಗಿ ಕಾಣಿಸಿಕೊಂಡರು, ಆದರೆ ಅದು ಆಗಲಿಲ್ಲ. “ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯೂ ಇರಲಿಲ್ಲ. ಆದರೆ ದುಶ್ಯಂತ್ ಮತ್ತು ಅವರ ತಂದೆ ಅಜಯ್ ಚೌತಲಾ ನಾನು ಸ್ಪರ್ಧಿಸಬೇಕೆಂದು ಒತ್ತಾಯಿಸಿದರು. ಏಕೆಂದರೆ ಬಿಜೆಪಿ ಶಾಸಕ ಕ್ಯಾಪ್ಟನ್ ಅಭಿಮನ್ಯು ಅವರನ್ನು ಸೋಲಿಸುವವರು ನಾನು ಒಬ್ಬನೇ ಎಂದು ಅವರಿಗೆ ತಿಳಿದಿತ್ತು” ಎಂದು ಅವರು ಹೇಳಿದರು.

ಆದಾಗ್ಯೂ ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ, ಅವರ ಬಗ್ಗೆ ನನಗೆ ಜವಾಬ್ದಾರಿ ಇದೆ. ನಾನು ನನ್ನ ಪಕ್ಷಕ್ಕೆ ರಾಜೀನಾಮೆ ನೀಡಿದರೆ ಜನರಿಗೆ ಒಳ್ಳೆಯದು ಮಾಡಲಾಗುವುದಿಲ್ಲ. ಅಲ್ಲದೆ, ನನ್ನ ಬೆವರು ಮತ್ತು ರಕ್ತದಿಂದ ಪಕ್ಷವನ್ನು ಪೋಷಿಸಿದ್ದೇನೆ” ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...