Homeಮುಖಪುಟಕೊಳಕು ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಲೋಕಸಭೆಯ ಸಮಿತಿ ಸಭೆಯಿಂದ ಹೊರಬಂದ ಮಹುವಾ ಮೊಯಿತ್ರಾ

ಕೊಳಕು ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಲೋಕಸಭೆಯ ಸಮಿತಿ ಸಭೆಯಿಂದ ಹೊರಬಂದ ಮಹುವಾ ಮೊಯಿತ್ರಾ

- Advertisement -
- Advertisement -

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಲೋಕಸಭೆಯ ನೈತಿಕತೆ ಸಮಿತಿ ಮುಂದೆ ಹಾಜರಾದ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಮಗೆ ಕೆಟ್ಟ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದಿದ್ದಾರೆ.

ಮಹುವಾ ಮೊಯಿತ್ರಾ ಅವರಲ್ಲದೆ ಸಮಿತಿಯ ವಿಪಕ್ಷ ಸದಸ್ಯರೂ ಹೊರನಡೆದಿದ್ದಾರೆ. ಕೊಳಕು ಪ್ರಶ್ನೆಗಳನ್ನು ಕೇಳಿದ್ದರಿಂದ ತಾವು ಸಹಕರಿಸಿಲ್ಲ, ಇನ್ನಷ್ಟು ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಹೊರನಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಮೋಯಿತ್ರಾ ಅವರು ವಿಚಾರಣೆ ವೇಳೆ ಸಹಕರಿಸಲಿಲ್ಲ ಮತ್ತು ಪ್ರಶ್ನೆಗಳನ್ನು ಎದುರಿಸುವುದನ್ನು ತಪ್ಪಿಸಲು ಹೊರನಡೆದರು ಎಂದು ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ.  ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಸಭೆಯಿಂದ ಇದ್ದಕ್ಕಿದ್ದಂತೆ ಹೊರನಡೆದರು. ಸಮಿತಿಯ ಕಾರ್ಯನಿರ್ವಹಣೆ ಮತ್ತು ನನ್ನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಮಹುವಾ ಮೊಯಿತ್ರಾ ಬಳಸಿದ್ದಾರೆ ಎಂದು ಸೋಂಕರ್ ಪ್ರತ್ಯಾರೋಪವನ್ನು ಮಾಡಿದ್ದಾರೆ.

ದರ್ಶನ್ ಹಿರಾನಂದನಿ ಅವರ ಅಫಿಡವಿಟ್ ಬಗ್ಗೆ ಕೇಳಿದಾಗ ಮೋಯಿತ್ರಾ ಕೋಪದಿಂದ ವರ್ತಿಸಿದರು ಎಂದು   ಸಮತಿಯ ಇನ್ನೋರ್ವ ಸದಸ್ಯ ಅಪರಾಜಿತಾ ಸಾರಂಗಿ ಹೇಳಿದ್ದಾರೆ.

ಸಮಿತಿಯು ಮೊಯಿತ್ರಾ ಅವರಿಗೆ ವೈಯಕ್ತಿಕ ಮತ್ತು ಅನೈತಿಕ ಪ್ರಶ್ನೆಗಳನ್ನು ಕೇಳಿದೆ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ್ದಾರೆ ಮತ್ತು ಸಭೆ ನಡೆಯುತ್ತಿರುವಾಗಲೇ ಸಂಸದರೊಬ್ಬರು ಮಾಧ್ಯಮಗಳಿಗೆ ಸಭೆಯ ವಿವರಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಯಾವ ರೀತಿಯ ಸಭೆ? ಅವರು ಹೊಲಸು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ಸಂಸದರ ಜೊತೆ ಕೊಠಡಿಯಿಂದ ಹೊರಬರುವಾಗ ಅವರು ಹೇಳಿದ್ದಾರೆ. ಅಸಂಬದ್ಧವಾಗಿ ಅವರು ಮಾತನಾಡುತ್ತಿದ್ದಾರೆ, ನಿಮ್ಮ ಕಣ್ಣಲ್ಲಿ ನೀರು ಇದೆ ಎಂದರು ನನ್ನ ಕಣ್ಣಲ್ಲಿ ನೀರು ಇದೆಯೇ, ಕಾಣಿಸುತ್ತಿದೆಯೇ? ಎಂದು ಮಹುವಾ ಪ್ರಶ್ನಿಸಿದರು.

ಈ ಬಗ್ಗೆ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಪ್ರತಿಕ್ರಿಯಿಸಿದ್ದು, ಮಹುವಾ ಮೊಯಿತ್ರಾ ಅವರಲ್ಲಿ ನೀವು ಎಲ್ಲಿಗೆಲ್ಲ ಪ್ರಯಾಣಿಸುತ್ತೀರಾ? ನೀವು ಯಾರನ್ನೆಲ್ಲ ಭೇಟಿಯಾಗುತ್ತೀರಾ? ನಿಮ್ಮ ಫೋನ್ ದಾಖಲೆಗಳನ್ನು ನಮಗೆ ನೀಡಬಹುದೇ? ನೀವು ಏನೆಲ್ಲ ಮಾತನಾಡುತ್ತೀರಾ? ಎಷ್ಟು ಹೊತ್ತು ಮಾತನಾಡ್ತೀರಾ? ಹೋಟೆಲಿನಲ್ಲಿ ಯಾರೊಂದಿಗೆ ವಾಸ ಮಾಡಿದ್ರಿ? ಯಾರು ಹೋಟೆಲ್ ಬಿಲ್ ಕೊಟ್ಟರು? ಎಂಬಿತ್ಯಾದಿ ಮಹಿಳೆಗೆ ಕೇಳಬಾರದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ತೀರಾ ವೈಯಕ್ತಿಕ ಮತ್ತು ಕೊಳಕು ಪ್ರಶ್ನೆಗಳು. ಮಹಿಳೆಗೆ ಈ ರೀತಿ ಕೇಳಲು ಈ ಸಮಿತಿಗೆ ಹಕ್ಕಿದೆಯಾ? ಎಂದು ಪ್ರಶ್ನಿಸಿದರು. ಹಾಗಾಗಿಯೇ, ವಿಪಕ್ಷಗಳ ಎಲ್ಲ ಸಂಸದರು ಸಭೆಯಿಂದ ಹೊರ ನಡೆದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಸರಕಾರ ಅಂಗೀಕರಿಸಿದ 8 ಮಸೂದೆಗಳಿಗೆ ಅಂಕಿತ ಹಾಕದ ರಾಜ್ಯಪಾಲರು: ಸುಪ್ರೀಂ ಕದ ತಟ್ಟಿದ ಕೇರಳ ಸರಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...