Homeಮುಖಪುಟಉದ್ಯಮಿ ದರ್ಶನ್ ಹಿರಾನಂದಾನಿಯ ಅಫಿಡವಿಟ್‌ಗೆ ಮಹುವಾ ಮೊಯಿತ್ರಾ ಕಿಡಿ

ಉದ್ಯಮಿ ದರ್ಶನ್ ಹಿರಾನಂದಾನಿಯ ಅಫಿಡವಿಟ್‌ಗೆ ಮಹುವಾ ಮೊಯಿತ್ರಾ ಕಿಡಿ

- Advertisement -
- Advertisement -

ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಗುರುವಾರ ರಾತ್ರಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಸಹಿ ಮಾಡಿದ ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ವಿವರವಾದ ಹೇಳಿಕೆಯನ್ನು ನೀಡಿದ್ದಾರೆ.

ಈ ಕುರಿತಂತೆ ಮಹುವಾ ಮೊಯಿತ್ರಾ ಅವರು, ಎರಡು ಪುಟಗಳ ಹೇಳಿಕೆ ಹಾಗೂ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ”ಪ್ರಧಾನಿ ಕಾರ್ಯಾಲಯವು ಬೆದರಿಕೆ ತಂತ್ರಗಳ ಮೂಲಕ ಶ್ವೇತಪತ್ರಕ್ಕೆ ಸಹಿಹಾಕಿಸಿದೆ ಹಾಗೂ ನಂತರ ಅದನ್ನು ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

”ದರ್ಶನ್‌ ಹಿರಾನಂದಾನಿ ಅವರಿಗೆ ಸಿಬಿಐ ಅಥವಾ ನೈತಿಕತೆ ಸಮಿತಿ ಸಮನ್ಸ್‌ ಕಳುಹಿಸಿಲ್ಲ, ಅಥವಾ ಯಾವುದೇ ತನಿಖಾ ಏಜನ್ಸಿ ಇಂತಹ ಕ್ರಮಕೈಗೊಂಡಿಲ್ಲ. ಹಾಗಿದ್ದರೆ ಅವರು ಅಫಿಡವಿಟ್‌ ನೀಡಿದ್ದಾದರೂ ಯಾರಿಗೆ?” ಎಂದು ಮಹುವಾ ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

”ಈ ಅಫಿಡವಿಟ್‌ ಅಧಿಕೃತ ಲೆಟರ್‌ಹೆಡ್‌ನಲ್ಲಿಲ್ಲ ಅಥವಾ ನೋಟರಿ ಸಹಿಯಿಲ್ಲ, ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿಲ್ಲ ಬದಲು ಆಯ್ದ ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ಧಾರೆ.

”ಅದಾನಿಯನ್ನು ಪ್ರಶ್ನಿಸುವ ಧೈರ್ಯ ತೋರುವ ಪ್ರತಿ ರಾಜಕೀಯ ನಾಯಕರ ವಿರುದ್ಧ ದ್ವೇಷ ಸಾಧಿಸುವ ರೀತಿಯಿದು” ಎಂದು ಅವರು ಹೇಳಿದ್ದಾರೆ.

ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ಮೊಯಿತ್ರಾ ಹೇಳಿದ್ದು ಇಲ್ಲಿದೆ:

”ಮೂರು ದಿನಗಳ ಹಿಂದೆ (16.10.2023), ಹಿರಾನಂದಾನಿ ಗ್ರೂಪ್ ತಮ್ಮ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳು ಆಧಾರರಹಿತ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ನೀಡಿತು. ಇಂದು (19.10.2023) “ಅನುಮೋದಕ ಅಫಿಡವಿಟ್” ಪತ್ರಿಕೆಗಳಿಗೆ ಸೋರಿಕೆಯಾಗಿದೆ. ಈ “ಅಫಿಡವಿಟ್” ಲೆಟರ್‌ಹೆಡ್‌ ಇಲ್ಲದ ಬಿಳಿ ಕಾಗದದ ಮೇಲೆ ಮತ್ತು ಪತ್ರಿಕಾ ಸೋರಿಕೆಯ ಹೊರತಾಗಿ ಯಾವುದೇ ಅಧಿಕೃತ ಮೂಲವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ಪ್ರಶ್ನೆಗಳನ್ನು ತುರ್ತಾಗಿ ಕೇಳಬೇಕಾಗಿದೆ: 1. ದರ್ಶನ್ ಹಿರಾನಂದನಿಗೆ ಸಿಬಿಐ ಅಥವಾ ನೈತಿಕ ಸಮಿತಿ ಅಥವಾ ಯಾವುದೇ ತನಿಖಾ ಸಂಸ್ಥೆಯು ಇನ್ನೂ ಸಮನ್ಸ್ ನೀಡಿಲ್ಲ. ಹಾಗಾದರೆ ಅವರು ಈ ಅಫಿಡವಿಟ್ ಅನ್ನು ಯಾರಿಗೆ ನೀಡಿದ್ದಾರೆ?

2. ಅಫಿಡವಿಟ್ ಬಿಳಿ ಕಾಗದದಲ್ಲಿದೆ ಮತ್ತು ಅಧಿಕೃತ ಲೆಟರ್‌ಹೆಡ್ ಅಥವಾ ನೋಟರೈಸ್ ಮಾಡಿಲ್ಲ. ಭಾರತದ ಅತ್ಯಂತ ಗೌರವಾನ್ವಿತ/ಶಿಕ್ಷಿತ ಉದ್ಯಮಿಯೊಬ್ಬರು ಈ ರೀತಿಯ ಪತ್ರಕ್ಕೆ ಬಿಳಿ ಕಾಗದದ ಮೇಲೆ ಏಕೆ ಸಹಿ ಹಾಕುತ್ತಾರೆ? ಈ ರೀತಿ ಮಾಡಲು ಅವರ ತಲೆಗೆ ಬಂದೂಕು ಇರಿಸಿದ್ದರೇ?

ಅಫಿಡವಿಟ್‌ನಲ್ಲಿ ಏನಿದೆ?

ಮಹುವಾ ಅವರು ಪ್ರಧಾನಿ ಮೋದಿಯವರನ್ನು ಗುರಿ ಮಾಡಲು ಹಾಗೂ ಅವರ ಮಾನಹಾನಿಗೈಯ್ಯಲು ಅದಾನಿ ಸಮೂಹದ ವಿಚಾರ ಬಳಸಲು ತಮ್ಮ ಸಹಾಯ ಕೇಳಿದ್ದರು ಎಂದು ಹಿರಾನಂದಾನಿ ಅವರ ಅಫಿಡವಿಟ್‌ ಹೇಳಿದೆ.

ಗೌತಮ್‌ ಅದಾನಿ ವಿರುದ್ಧ ದಾಳಿ ನಡೆಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ದಾಳಿ ನಡೆಸಲು ಇರುವ ಏಕೈಕ ಮಾರ್ಗ ಎಂದು ಮಹುವಾ ನಂಬಿದ್ದರು ಮತ್ತು ಅದಕ್ಕೆ ಬೆಂಬಲ ನಿರೀಕ್ಷಿಸಿದ್ದರು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇದಕ್ಕಾಗಿ ತಾನು ಪ್ರಶ್ನೆ ರಚಿಸುವಂತಾಗಲು ಮಹುವಾ ತಮ್ಮ ಪಾರ್ಲಿಮೆಂಟ್‌ ಲಾಗಿನ್‌ ಐಡಿ ತಮಗೆ ನೀಡಿದ್ದರು ಎಂದೂ ಹಿರಾನಂದಾನಿ ಹೇಳಿಕೊಂಡಿದ್ದಾರೆ.

ಮಹುವಾ ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ, ಅವರನ್ನು ತಕ್ಷಣ  ಅಮಾನತುಗೊಳಿಸಬೇಕೆಂದು ಕೋರಿ ಕಳೆದ ವಾರ ಬಿಜೆಪಿ ಸಂಸದ ನಿಷಿಕಾಂತ್‌ ದುಬೆ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ: ಭಾರತದಿಂದ 41 ರಾಜತಾಂತ್ರಿಕರನ್ನು ವಾಪಾಸು ಕರೆಸಿಕೊಂಡ ಕೆನಡಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...