Homeಮುಖಪುಟಪತ್ರಕರ್ತ ಮುಹಮ್ಮದ್‌ ಝುಬೇರ್‌ಗೆ 2023ರ ಫ್ರೀಡಂ ಆಫ್‌ ಎಕ್ಸ್‌ಪ್ರೆಶನ್‌ ಅವಾರ್ಡ್‌

ಪತ್ರಕರ್ತ ಮುಹಮ್ಮದ್‌ ಝುಬೇರ್‌ಗೆ 2023ರ ಫ್ರೀಡಂ ಆಫ್‌ ಎಕ್ಸ್‌ಪ್ರೆಶನ್‌ ಅವಾರ್ಡ್‌

- Advertisement -
- Advertisement -

‘2023ರ ಫ್ರೀಡಂ ಆಫ್‌ ಎಕ್ಸ್‌ಪ್ರೆಶನ್‌ ಅವಾರ್ಡ್‌’ನ್ನು ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮುಹಮ್ಮದ್‌ ಝುಬೇರ್ ಅವರಿಗೆ ನೀಡಲಾಗಿದೆ.

ಈ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದವರಿಗೆ ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ನೀಡುತ್ತದೆ. ಇದು ಲಂಡನ್‌ ಮೂಲದ ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಉದ್ದೇಶಗಳಿಗಾಗಿ ಹೋರಾಡುತ್ತಿದೆ.

”ಆಡಳಿತ ಪಕ್ಷದ ಪ್ರಭಾವಿ ಸದಸ್ಯರು ಪ್ರಚುರಪಡಿಸಿದ ತಪ್ಪು ಮಾಹಿತಿಯನ್ನು ಅನಾವರಣಗೊಳಿಸಿದ ನಂತರ ಝುಬೇರ್ ಸಾಕಷ್ಟು ಬೆದರಿಕೆಗಳನ್ನು ಎದುರಿಸಿದ್ದಾರೆ,” ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ಹೇಳಿದೆ.

ವಿಜೇತರಿಗೆ ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ಅವರ ಕೆಲಸ ಕಾರ್ಯಗಳಿಗೆ ಆರ್ಥಿಕ ಬೆಂಬಲವೂ ದೊರೆಯಲಿದೆ.

ಈ ಪ್ರಶಸ್ತಿ ಬಂದಿರುವ ಬಗ್ಗೆ ಹೇಳಿಕೆ ನೀಡಿರುವ ಝುಬೇರ್, ತಮಗೆ ದೊರೆತ ಈ ಗೌರವವು ತಮ್ಮ ಯುವ ಸಹೋದ್ಯೋಗಿಗಳಿಗೆ ಆಶಾಕಿರಣವಾಗಲಿದೆ ಎಂದು ಹೇಳಿದ್ದಾರೆ.

”ಭಾರತದಲ್ಲಿ ತಪ್ಪು ಮಾಹಿತಿ ಹಾಗೂ ನಕಲಿ ಸುದ್ದಿಗಳು ರಾಕ್ಷಸ ರೂಪ ತಾಳಿರುವಂತಹ ಸಂದರ್ಭದಲ್ಲಿ ಈ ಪ್ರಶಸ್ತಿ ಪಡೆಯುವುದು ಗೌರವವಾಗಿದೆ” ಎಂದು ಝುಬೇರ್ ಅವರು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ಪೋಸ್ಟ್‌ ಮಾಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮುಜಾಫರ್‌ನಗರ ಪ್ರಕರಣ: ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ ಆರೋಪದ ಮೇಲೆ ಪತ್ರಕರ್ತ ಜುಬೇರ್ ವಿರುದ್ಧ FIR

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read