ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ರೈತರ ಹತ್ಯೆಯು ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಆತನ ಮಗ ಆಶೀಶ್ ಮಿಶ್ರಾನಿಂದ ನಡೆದ “ಅತ್ಯಂತ ಯೋಜಿತ ಪಿತೂರಿ” ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಲು ಸೇರಿದ್ದ ರೈತರ ಮೇಲೆ ಭಾನುವಾರ ವಾಹನಗಳನ್ನು ಹತ್ತಿಸಿದಾಗ ಒಟ್ಟು ಎಂಟು ಜನರು ಸಾವನ್ನಪ್ಪಿದ್ದರು. ಸೋಮವಾರ ಎಫ್‌ಐಆರ್ ದಾಖಲಾಗಿತ್ತು.
ಆಶೀಶ್ ಮಿಶ್ರಾ ಹಾಗೂ ಇತರರ ಗುಂಪು ರೈತರ ಮೇಲೆ ವಾಹನ ಹತ್ತಿಸಿದ್ದಾರೆ ಎಂದು ರೈತರು ಆರೋಪಿಸಿದ್ದರು. ಆದರೆ ಸಚಿವರು ರೈತರೇ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಆರೋಪಿಸಿದ್ದರು.
ಇದನ್ನೂ ಓದಿರಿ: ನರೇಂದ್ರ ಮೋದಿಯವರೆ ಈ ವಿಡಿಯೋ ನೋಡಿದ್ದೀರಾ? ಪ್ರಿಯಾಂಕ ಗಾಂಧಿ ಆಕ್ರೋಶ
ಮಿಶ್ರಾ ಅವರನ್ನು ಇನ್ನೂ ಬಂಧಿಸಲಾಗಿಲ್ಲ. “ರೈತರೊಂದಿಗೆ ಮಾತುಕತೆ, ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಸಂಸ್ಕಾರದ ಕಾರ್ಯದಲ್ಲಿ ಪಾಲ್ಗೊಂಡಿದ್ದರಿಂದ ಇನ್ನೂ ಬಂಧಿಸಲಾಗಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಬಹರಿಚ್ ಜಿಲ್ಲೆಯ ನನ್ಪರ ಜಿಲ್ಲೆಯ ಜಗಜೀತ್ ಸಿಂಗ್ ಅವರ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ. ಕೊಲೆ ಹಾಗೂ ನಿರ್ಲಕ್ಷ್ಯದಿಂದ ಸಾವು ಸೇರಿದಂತೆ ವಿವಿಧ ಕಾರಣಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.
“ಮೂರು ವಾಹನಗಳಲ್ಲಿ ಆಶೀಶ್ ಮಿಶ್ರಾ ಹಾಗೂ ಶಸ್ತ್ರಸಜ್ಜಿತ 10-20 ಮಂದಿ ನುಗ್ಗಿದಾಗ ರೈತರು ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದರು” ಎಂದು ಎಫ್ಐಆರ್ ಹೇಳಿದೆ. ಆತ ಎಡಬದಿಯಲ್ಲಿ ಕುಳಿತ್ತಿದ್ದಾಗ ಗುಂಡು ಹಾರುತ್ತಲೇ ಇದ್ದನು. ಜನರನ್ನು ಮೇಲೆ ಹರಿಯುತ್ತಲೇ ವಾಹನ ಮುನ್ನಡೆಯಿತು” ಎಂದು ಎಫ್‌ಐಆರ್ ಉಲ್ಲೇಖಿಸಿದೆ.
“ಗುಂಡು ಹಾರಿಸಿದ್ದರಿಂದ ಗುರ್‍ವಿಂದರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ಬದಿಯಲ್ಲಿದ್ದ ರೈತರನ್ನು ಅಪ್ಪಚ್ಚಿ ಮಾಡುತ್ತಾ ವಾಹನ ವೇಗವಾಗಿ ಚಲಿಸಿತು. ರೈತರನ್ನು ಛಿದ್ರಛಿದ್ರ ಮಾಡಿದ ನಂತರ, ನಿಯಂತ್ರಣ ಕಳೆದುಕೊಂಡ ವಾಹನ ಕಂದಕಕ್ಕೆ ಉರುಳಿದೆ” ಎಂದು ಹೇಳಲಾಗಿದೆ.
“ಇಲ್ಲಿಯವರೆಗೆ ಬಂದ ಮಾಹಿತಿಯ ಪ್ರಕಾರ, ನಾಲ್ಕು ರೈತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ” ಎಂದು ಎಫ್ಐಆರ್ ಹೇಳಿದೆ. ಸಚಿವರ ಮಗನ ಹೆಸರನ್ನು ಎಫ್‌ಐಆರ್ ಸೇರಿಸಲಾಗಿದೆ. ಘಟನೆಯ ಬಳಿಕ ಜನರು ಕಬ್ಬಿನ ಹೊಲಕ್ಕೆ ಓಡಿಹೋದರು ಮತ್ತು ಗುಂಡು ಹಾರಿಸುವುದನ್ನು ಮುಂದುವರಿಸಲಾಗಿತ್ತು” ಎಂದು ತಿಳಿಸಲಾಗಿದೆ. ಕೇಂದ್ರ ಸಚಿವರ ವಿಡಿಯೋ ಕೂಡ ಎಫ್‌ಐಆರ್‌ನ ಭಾಗವಾಗಿದೆ.
“ಭಾನುವಾರದ ಘಟನೆಯ ಹಿಂದಿನ ದಿನ, ಕೇಂದ್ರ ಸಚಿವರು ರೈತರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು” ಎಂದು ಎಫ್ಐಆರ್ ಹೇಳಿದೆ. “ಸಚಿವರು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.”
ವೀಡಿಯೊದಲ್ಲಿ, ಪ್ರತಿಭಟನಾ ನಿರತ ರೈತರನ್ನು ‘ಸರಿದಾರಿಗೆ ತರುವ ಬಗ್ಗೆ’ ಸಚಿವರು ಮಾತನಾಡಿದ್ದರು. “ನಿಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ನಾವು ಅವುಗಳನ್ನು ಸರಿಪಡಿಸುತ್ತೇವೆ” ಎಂದು ಅವರು ಹೇಳಿದ್ದರು. “ಸರಿಪಡಿಸುವ ಕಾರ್ಯ ಕೇವಲ ಎರಡು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.” ಎಂದಿದ್ದರು.
ಸ್ಥಳೀಯರು ನೀಡಿದ ದೂರಿನ ಅನ್ವಯ, ನಾಲ್ಕು ಜನರನ್ನು ಹೊಡೆದು ಸಾಯಿಸಿದ ಆರೋಪದ ಮೇಲೆ ಸುಮಿತ್ ಜೈಸ್ವಾಲ್ ಎಂದು ಗುರುತಿಸಲಾಗಿರುವ ವ್ಯಕ್ತಿಯ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಿತವಾಗಿ ಹಿಂಸಾಕೃತ್ಯ), 336 (ಇತರರ ಜೀವನ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ತರುವ ಕ್ರಿಯೆ) ಆಪಾದನೆಗಳನ್ನು ಹೊರಿಸಲಾಗಿದೆ. ಈ ಪ್ರಕರಣದ ತನಿಖೆಗೆ ಇಬ್ಬರು ಉಪ ಅಧೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಇದನ್ನೂ ಓದಿರಿ: ಲಖಿಂಪುರ್ ಘಟನೆಯಲ್ಲಿ ಪತ್ರಕರ್ತನ ಹತ್ಯೆ: ನ್ಯಾಯಾಂಗ ತನಿಖೆಗೆ ಎಡಿಟರ್ಸ್ ಗಿಲ್ಡ್ ಆಗ್ರಹ



I want all notifications
https://chat.whatsapp.com/JLoPb67zQtP9XP5ZH6R3Nk ಈ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಿ ದಯವಿಟ್ಟು