ಕೋಮು ಸೌಹಾರ್ದತೆ ಕೆಡಿಸುವ ಯಾವುದೇ ವಿಷಯಗಳಲ್ಲಿ ಪಾಲ್ಗೊಳ್ಳದಂತೆ ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ರಾಜ್ಯದ ಎಲ್ಲಾ ವೈದ್ಯರಿಗೆ ಎಚ್ಚರಿಕೆ ನೀಡಿದೆ. ಸುತ್ತೋಲೆಯನ್ನು ಏಪ್ರಿಲ್ 26 ರಂದು ಕೌನ್ಸಿಲ್‌ನ ರಿಜಿಸ್ಟ್ರಾರ್ ಆಗಿರುವ ಡಾ. ಶ್ಯಾಮರಾವ್ ಬಿ. ಪಾಟಿಲ್ ಹೊರಡಿಸಿದ್ದಾರೆ.
ಸುತ್ತೋಲೆಯು, “ರಾಜ್ಯದ ವೈದ್ಯರು ಕೋಮು ಸೌಹಾರ್ದತೆ ಕೆಡಿಸುವ ವಿಚಾರಗಳಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದರೆ ಅವರ ವಿರುದ್ಧವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ಸೌಹಾರ್ದತೆ ಕೆಡಿಸುತ್ತಾ ಅದನ್ನು ಹರಡುವಲ್ಲಿ ವೈದ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ಗಮನಕ್ಕೆ ತರಲಾಗಿದೆ. ವೈದ್ಯರು ರೋಗಿಯನ್ನು ಜಾತಿ ಧರ್ಮವನ್ನು ಲೆಕ್ಕಿಸದೆ ಚಿಕಿತ್ಸೆ ನೀಡಬೇಕಾಗಿದೆ. ಈ ಕಾರಣಕ್ಕಾಗಿ ಕೋಮು ಸೌಹಾರ್ದತೆ ಕೆಡಿಸುವ ವಿಷಯಗಳಲ್ಲಿ ವೈದ್ಯರ ಭಾಗವಹಿಸುವುದು ವೃತ್ತಿಪರ ದುರ್ನಡತೆಯಾಗಿದೆ” ಎಂದು ಸುತ್ತೋಲೆ ಹೇಳಿದೆ.
ಇದನ್ನೂ ಓದಿ: ಕೋಮುದ್ವೇಷ ತಡೆಗೆ ಆಗ್ರಹಿಸಿ 13 ವಿಪಕ್ಷಗಳ ನಾಯಕರಿಂದ ಜಂಟಿ ಪತ್ರಿಕಾ ಹೇಳಿಕೆ
ವೈದ್ಯಕೀಯ ನೈತಿಕತೆ ಅಥವಾ ವೃತ್ತಿಪರ ನಡವಳಿಕೆಯ ಉಲ್ಲಂಘನೆಯ ಒಂದು ಸಣ್ಣ ಅವಕಾಶವೂ ಇರಬಾರದು ಎಂಬ ರೀತಿಯಲ್ಲಿ ವೈದ್ಯರು ಕೆಲಸ ಮಾಡಬೇಕೆಂದು ಸುತ್ತೋಲೆ ಒತ್ತಿ ಹೇಳಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃತ್ತಿನಿರತ ವೈದ್ಯರು ಕ್ರಿಮಿನಲ್ ಕೃತ್ಯಗಳಂತಹ ಯಾವುದೆ ಘಟನೆಗಳಲ್ಲಿ ಭಾಗಿವಾಗಿರಬಾರದು. ವೈದ್ಯಕೀಯ ನೀತಿ ಅಥವಾ ವೃತ್ತಿಯ ಉಲ್ಲಂಘನೆಯ ಬಗ್ಗೆ ಮಂಡಳಿಯ ಗಮನಕ್ಕೆ ಬಂದರೆ ಅಂತಹ ವೈದ್ಯರೊಂದಿಗೆ ಕಾನೂನಿನ ಪ್ರಕಾರ ವ್ಯವಹರಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.

ಸುತ್ತೋಲೆಯನ್ನು ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳ ನಿರ್ದೇಶಕರು, ಪ್ರಾಂಶುಪಾಲರು, ಡೀನ್‌ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೃತ್ತಿಪರ ವೈದ್ಯರಿಗೆ ಪ್ರಸಾರ ಮಾಡಲಾಗಿದೆ.


