Homeಕರ್ನಾಟಕ’ತಾನೂ ಕೃಷಿಕ’ ಎಂದು ಫೋಟೊ ಫೋಸು ನೀಡಿ ಹಾಸ್ಯಕ್ಕೊಳಗಾದ ಕೃಷಿ ಸಚಿವ ಬಿ.ಸಿ. ಪಾಟಿಲ್!

’ತಾನೂ ಕೃಷಿಕ’ ಎಂದು ಫೋಟೊ ಫೋಸು ನೀಡಿ ಹಾಸ್ಯಕ್ಕೊಳಗಾದ ಕೃಷಿ ಸಚಿವ ಬಿ.ಸಿ. ಪಾಟಿಲ್!

- Advertisement -
- Advertisement -

ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟಿಲ್‌ ಮತ್ತು ತೋಟಗಾರಿಕೆ ಸಚಿವ ನಾರಾಯಣಗೌಡ ಇಬ್ಬರೂ ಜೊತೆ ಸೇರಿ ರೈತರಂತೆ ಜಮೀನಿಗಿಳಿದು ಕೃಷಿ ಕೆಲಸದಲ್ಲಿ ಭಾಗಿಯಾಗಿ, ಇಬ್ಬರೂ ಜಮೀನಲ್ಲಿ ಟ್ರ್ಯಾಕ್ಟ ರ್ ಚಾಲನೆ ಮಾಡಿದ್ದರು. ಇದೆಲ್ಲವನ್ನೂ ಮೀರಿಸುವಂತೆ ಸಚಿವ ಬಿ.ಸಿ. ಪಾಟೀಲ್ ‘ತಾನೂ ಕೃಷಿಕ’ ಎಂದು ತೋರಿಸಿಕೊಳ್ಳಲು‌ ತೆನೆಯೊಡೆದು ವಡೆಯಾಗಿದ್ದ ಭತ್ತದ ಗದ್ದೆಗೆ ಗೊಬ್ಬರ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟಿಲ್ “ರೈತರೊಂದಿಗೊಂದು ದಿನ” ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಇದಕ್ಕಾಗಿ ಮಂಡ್ಯ ಜಿಲ್ಲೆಯ ಮಡುವಿನ ಕೋಡಿ ಹಳ್ಳಿಯಲ್ಲಿ ಒಂದು ದಿನ ಕಳೆದಿದ್ದರು. ಈ ವೇಳೆ ಅಲ್ಲಿ ರೈತರಂತೆ ತಲೆಗೆ ಹಸಿರು ಪೇಟ ಸುತ್ತಿಕೊಂಡು, ರೈತರೊಬ್ಬರ ಗದ್ದೆಗಿಳಿದು ಗೊಬ್ಬರ ಹಾಕಿದ್ದಾರೆ.

ಇದನ್ನೂ ಓದಿ: ’ರೈತರೊಂದಿಗೊಂದು ದಿನ’ ಎನ್ನುತ್ತಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್!

ಆದರೆ ಇದೀಗ ಈ ಪೋಟೋ ವೈರಲಾಗಿದ್ದು, ನೆಟ್ಟಿಗರು ಫೋಟೋದಲ್ಲಿರುವ ಭತ್ತದ ಗದ್ದೆಯಲ್ಲಿನ ಭತ್ತವು ಕಟಾವಿಗೆ ಬಂದ ಭತ್ತವಾಗಿದೆ ಎಂದು ಗಮನಸೆಳೆದಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದಾರೆ.

ಭತ್ತದ ಬೆಳೆ ಹೊಡೆ ಕಡೆದು ಭತ್ತ ಕಟ್ಟುವ ಸಮಯದಲ್ಲಿ ಬೆಳೆಗೆ ಯಾವುದೇ ಗೊಬ್ಬರ ಹಾಕುವುದಿಲ್ಲ‌. ಈ ಬಗ್ಗೆ ಜ್ಞಾನವಿರದ ಇಬ್ಬರು ಸಚಿವರು ಮಾತ್ರ ತಾವು ‘ಕೃಷಿಕ’ ಅಥವಾ ರೈತರ ಮಕ್ಕಳು, ತಮಗೂ ಕೃಷಿ ಬಗ್ಗೆ ಜ್ಞಾನವಿದೆ. ನಾವು ಕೃಷಿ ಕೆಲಸ ಮಾಡುತ್ತೇವೆ ಎಂಬುದನ್ನು ನಿರೂಪಿಸಿಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ‌.

ಇವರ ಮೂರ್ಖತನದ ಫೋಟೋವನ್ನು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಾಕಿ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ಹೊಡೆ ಕಡೆಯುತ್ತಿರುವ ಭತ್ತಕ್ಕೆ ಗೊಬ್ಬರ ಹಾಕ್ತಿರೋ ಇಬ್ಬರು ಸಚಿವರಿಗೆ ಉತ್ತಮ ರೈತ ಪ್ರಶಸ್ತಿ ಕೊಡಬೇಕು ಎಂದಿರುವ ನೆಟ್ಟಿಗರು, ಹೊಡೆ ಕಡೆಯುತ್ತಿರುವ ಭತ್ತದ ಗದ್ದೆಗೆ ಗೊಬ್ಬರ ಹಾಕಿ ಫೋಟೋಗೆ ಫೋಸು ನೀಡಿರುವ ಇವರಿಬ್ಬರಿಗೂ ಕೃಷಿ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲವೆಂಬದನ್ನು ತಾವೇ ನಿರೂಪಿಸಿಕೊಂಡಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.ಇದನ್ನೂ ಓದಿ: ಬೆಂಬಲ ಬೆಲೆ ಹಿಂದೆಯೂ ಇರಲಿಲ್ಲ, ಈಗಲೂ ಕೊಡಲು ಸಾಧ್ಯವಿಲ್ಲ: ಕೇಂದ್ರ ಕೃಷಿ ಸಚಿವ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಂಡ್ಯದಲ್ಲಿ ಕಾಯ್ರಕ್ರಮ ಮಾಡಿದ್ರೆ ಉತ್ತರ ಕರ್ನಾಟಕ ರೈತರು ಹೇಗ ತಿಳ್ಕೊಬೇಕೋ ??

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....