ಸಂಬಳ
PC: Anil Shakya, EPS

ಕೊರೊನಾ ನಿರ್ವಹಣೆಗೆಂದು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ರಾಜ್ಯದಾದ್ಯಂತ ನೇಮಕವಾಗಿದ್ದ ಕೊರೊನಾ ವಾರಿಯರ್ಸ್‌ಗಳಿಗೆ ಕಳೆದೆರೆಡು ತಿಂಗಳಿನಿಂದ ಯಾವುದೆ ಸಂಬಳ ನೀಡದೆ, ಸರ್ಕಾರ ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಲಾಗಿದೆ.

ಗುತ್ತಿನ ಆಧಾರದಲ್ಲಿ 6 ತಿಂಗಳು ಅಥವಾ ಮುಂದಿನ ಆದೇಶದವರೆಗೆ ಎಂದು, ಪ್ರತಿ ಜಿಲ್ಲೆಗೆ 36 ಲ್ಯಾಬ್ ಟೆಕ್ನಿಷಿಯನ್ಸ್, 36 ಡೇಟಾ ಎಂಟ್ರಿ ಆಪರೇಟರ್‌ಗಳು, 36 ಡಿ ಗ್ರೂಪ್ ನೌಕರರು ಸೇರಿದಂತೆ ಒಟ್ಟು 108 ಜನರನ್ನು ಸರ್ಕಾರ ನೇಮಿಸಿಕೊಂಡಿತ್ತು. ಅವರನ್ನು ನೇಮಿಸುವಾಗ ಮಾಸಿಕವಾಗಿ 10 ಸಾವಿರ ಗೌರವಧನ ಹಾಗೂ ಪ್ರತಿ ತಪಾಸನೆಗೆ 15 ರೂ. ಇಂನ್ಸೆಂಟೆವ್ ನೀಡುವುದಾಗಿ ಕೂಡಾ ಸರ್ಕಾರ ಹೇಳಿಕೊ೦ಡಿತ್ತು.

ಇದನ್ನೂ ಓದಿ: ಮಿತಿ ಮೀರುತ್ತಿರುವ ಪೊಲೀಸರ ವರ್ತನೆ-ಕೊರೊನಾ ವಾರಿಯರ್‌ ಸ್ವಯಂಸೇವಕನ ಕೈ ಮುರಿದ ದಾವಣಗೆರೆ ಪೊಲೀಸ್‌

ಆದರೆ ಇದೀಗ ಮೂರು ತಿಂಗಳಿನಿಂದ ಸಂಬಳ ಕೊಡದೆ ಕೊರೊನಾ ವಾರಿಯರ್ಸ್‌ಗಳನ್ನು ದುಡಿಸುತ್ತಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಮಾಸ್ಕ್ ಹಾಕದೆ ಇದ್ದರೆ ಸಾರ್ವಜನಿರಿಂದ ಭಾರಿ ದಂಡ ಪಡೆಯುತ್ತಿರುವ ಸರ್ಕಾರ, ಕೊರೊನಾ ವಾರಿಯರ್‌ಗಳು ಮಾಸ್ಕ್ ಕೇಳಿದರೆ ಮೂರು ದಿನಕ್ಕೊಂದರಂತೆ ಮಾಸ್ಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಡಿ ಗ್ರೂಪ್ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿದ್ದು, ಕಳೆದೊಂದು ವಾರದಿಂದ ಮದ್ಯಾಹ್ನದ ಊಟವು ನೀಡುತ್ತಿಲ್ಲ ಎಂದು ನೌಕರರು ಅಲವತ್ತುಕೊಂಡಿದ್ದಾರೆ.

“ನಮ್ಮನ್ನು ಮೇಲ್ವಿಚಾರಣೆ ಮಾಡುವ ಎಲ್ಲಾ ಅಧಿಕಾರಿಗಳೊಂದಿಗೂ ಸಂಬಳ ಕೊಡಿ ಎಂದು ಕೇಳಿಯೆ ಸುಸ್ತಾಗಿದೆ. ಯಾರೊಂದಿಗಾದರೂ ಸಾಲ ಕೇಳಿದರೆ ಕೊಡುವ ಪರಿಸ್ಥಿತಿಯಲ್ಲೂ ಯಾರೂ ಇಲ್ಲ. ಜೀವನ ನಿರ್ವಹಣೆಯೆ ಕಷ್ಟಕರವಾಗಿದೆ. ನಮ್ಮ ಕಷ್ಟಗಳಿಗೆ ಸ್ಪಂದಿಸುವವರೆ ಇಲ್ಲವಾಗಿದ್ದಾರೆ” ಎಂದು ಹೆಸರು ಹೇಳಲಿಚ್ಚಿಸದ ಲ್ಯಾಬ್ ಟೆಕ್ನೀಷಿಯನ್ ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಪಡಿತರ ವಿತರಕರನ್ನೂ ’ಕೊರೊನಾ ವಾರಿಯರ್’ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ 

LEAVE A REPLY

Please enter your comment!
Please enter your name here