Homeಅಂತರಾಷ್ಟ್ರೀಯಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

- Advertisement -
- Advertisement -

ಈಗ ಫ್ರೆಂಚ್ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಮೋದಿಯವರ ಅಸಮರ್ಥತೆಯ ಕುರಿತು ಟೀಕೆ ಬಂದಿದೆ. ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮೂರು ದಿನದ ಹಿಂದೆ ಆಸ್ಟ್ರೇಲಿಯಾದ ಪತ್ರಿಕೆಯೊಂದು, ‘ಮೋದಿ ಭಾರತವನ್ನು ವೈರಲ್ ವಿನಾಶದ ಕಡೆ ಒಯ್ಯುತ್ತಿದ್ದಾರೆ’ ಎಂದು ಬರೆದಾಗ, ನಮ್ಮ ವಿದೇಶಾಂಗ ಇಲಾಖೆಯು ಇದಕ್ಕೆ ಆಕ್ಷೇಪಿಸಿ, ‘ಮೋದಿ ಸರಿಯಾದ ದಾರಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಬೋಧನೆ ಮಾಡಿತ್ತು. ಆದರೆ, ಈ ಅಸಹಜ ಆಕ್ಷೇಪವನ್ನು ನಿರ್ಲಕ್ಷಿಸಿದ ವಿದೇಶಿ ಮಾಧ್ಯಮಗಳು ಮೋದಿ ವೈಫಲ್ಯ ಕುರಿತು ಬರೆಯುವುದನ್ನು ಮುಂದುವರೆಸಿವೆ.

ಕಳೆದ ವಾರ ದಿ ಗಾರ್ಡಿಯನ್ ಪತ್ರಿಕೆ ಮೋದಿ ವೈಫಲ್ಯವೇ 2ನೆ ಅಲೆಗೆ ಕಾರಣ ಎಂದು ಸಂಪಾದಕೀಯ ಬರೆದಿತ್ತು. ವಾಷಿಂಗ್ಟನ್ ಪೋಸ್ಟ್ ಒಂದು ಪುಟದ ಲೇಖನದಲ್ಲಿ ಮೋದಿಯ ಅಸಮರ್ಥ ಆಡಳಿತವನ್ನು ಮತ್ತು ಭಾರತದ ಕೋವಿಡ್ ದುರಂತವನ್ನು ವಿವರಿಸಿತ್ತು.
ಬುಧವಾರ ಫ್ರೆಂಚ್ ಪತ್ರಿಕೆ ‘ಲೆ ಮಾಂಡೆ’, ಮೋದಿಯವರ ದುರಂಹಕಾರ ಮತ್ತು ವಾಕ್ಚಾತುರ್ಯ ಭಾರತದಲ್ಲಿ ಕೋವಿಡ್ 2ನೇ ಅಲೆ ಸಂಭವಿಸಲು ಮತ್ತು ತೀವ್ರವಾಗಲು ಕಾರಣವಾಗಿದೆ’ ಎಂದು ಟೀಕಿಸಿದೆ.

ಆಸ್ಪತ್ರೆಗಳ ಎದುರು ಆಂಬ್ಯುಲೆನ್ಸ್‌ಗಳ ಸಾಲುಗಳು, ಅನಾರೋಗ್ಯ ಪೀಡಿತರ ಸಂಬಂಧಿಕರು ಆಮ್ಲಜನಕಕ್ಕಾಗಿ ಗೋಗರೆಯುವುದು ಮತ್ತು ಸಾಮೂಹಿಕ ಶವಸಂಸ್ಕಾರಗಳು ಸುಳ್ಳಾಗುವುದಿಲ್ಲ. ಅವು ಕಣ್ಣಿಗೆ ರಾಚುತ್ತಿವೆ ಎಂದು ಸಂಪಾದಕೀಯ ಹೇಳಿದೆ.

“ನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ, ಶ್ರೀಮಂತರಿಂದ ಬಡವರವರೆಗೆ, ಈ ‘ಹತ್ಯಾಕಾಂಡ’ವು ಯಾರನ್ನೂ ಬಿಡುತ್ತಿಲ್ಲ. ಫೆಬ್ರವರಿ ತನಕ ಕ್ಷೀಣಿಸುತ್ತಾ ಬಂದ ಹೊಸ ಸೋಂಕಿನ ರೇಖೆಯು (curve) ಈಗ ಬಹುತೇಕ ಲಂಬವಾಗಿದೆ” ಎಂದು ಲೆ ಮಾಂಡೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

“ವೈರಸ್ ಮತ್ತು ಅದರ ರೂಪಾಂತರಗಳ ಅನಿರೀಕ್ಷಿತ ದಾಳಿ ಎಂಬ ಏಕಮಾತ್ರ ಹೇಳಿಕೆಯಿಂದ ಈ ನಿರ್ವಹಣಾ ವೈಫಲ್ಯವನ್ನು ವಿವರಿಸಲಾಗುವುದಿಲ್ಲ. ನರೇಂದ್ರ ಮೋದಿಯವರ ಮುಂಗಾಣುವಿಕೆ-ದೂರದರ್ಶಿತ್ವದ (ಪ್ರಿಡಿಕ್ಸನ್) ಕೊರತೆ, ದುರಹಂಕಾರ ಮತ್ತು ಮಾತಿನ ಮೋಡಿ-ಇವೆಲ್ಲವೂ ಇಂದಿನ ಸ್ಥಿತಿಗೆ ಕಾರಣವಾಗಿವೆ. ಹೀಗಾಗಿ ಈಗ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಅಂತಾರಾಷ್ಟ್ರೀಯ ಸಹಕಾರ-ಸಂಪನ್ಮೂಲಗಳ ಅಗತ್ಯ ಬಿದ್ದಿದೆ” ಎಂದು ಸಂಪಾದಕೀಯ ವಿಮರ್ಶಿಸಿದೆ.

ಪ್ರಧಾನ ಮಂತ್ರಿ ಮೋದಿಯವರು ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಆರಂಭದಲ್ಲಿ, ಯಾವುದೇ ಸಿದ್ಧತೆಯಿಲ್ಲದೇ ಏಕಾಏಕಿ ಕ್ರೂರ ಲಾಕ್ ಡೌನ್ ವಿಧಿಸುವ ಮೂಲಕ, ಲಕ್ಷಾಂತರ ವಲಸೆ ಕಾರ್ಮಿಕರ ಬದುಕುಗಳನ್ನು ಮೂರಾಬಟ್ಟೆ ಮಾಡಿದರು. 2021ರ ಆರಂಭದಲ್ಲಿ ಕೋವಿಡ್ ಕುರಿತು ಅವರು ಚಿಂತಿಸಲೇ ಇಲ್ಲ’ ಎಂದು ಸಂಪಾದಕೀಯ ಟೀಕಿಸಿದೆ,

“ಆರೋಗ್ಯ ತಜ್ಞರ ಸಲಹೆ ನಿರ್ಲಕ್ಷಿಸಿ ರಾಷ್ಟ್ರೀಯತಾವಾದಿ ಉಪದೇಶಗಳಿಗೆ ಆದ್ಯತೆ ನೀಡುತ್ತ, ಜನರನ್ನು ರಕ್ಷಿಸುವುದಕ್ಕಿಂತ ಸ್ವಯಂ ಸಂಭ್ರಮಕ್ಕೆ ಹೆಚ್ಚು ಒಲವು ತೋರುತ್ತ ಬಂದ ಮೋದಿ ಅವರು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು” ಎಂದು ಪತ್ರಿಕೆ ಹೇಳಿದೆ. ಚುನಾವಣಾ ಪ್ರಚಾರ ಮತ್ತು ಕುಂಭಮೇಳವನ್ನು ಉಲ್ಲೇಖಿಸಿ, ‘ಇದು ಗಂಗಾ ನೀರನ್ನು (ನದಿಪ್ರದೇಶವನ್ನು) ಸಾಂಕ್ರಾಮಿಕದ ಬೃಹತ್ ತಾಣವನ್ನಾಗಿ ಪರಿವರ್ತಿಸಿತು’ ಎಂದು ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕೀಯವು ಮೋದಿಯವರ ಹೆಚ್ಚು ಪ್ರಚಾರ ಪಡೆದ ಲಸಿಕೆ ಕಾರ್ಯತಂತ್ರವನ್ನು ಒಡೆದು ಹಾಕಿದೆ. ಲಸಿಕೆ ರಾಜತಾಂತ್ರಿಕತೆಯು ತಮ್ಮ ಮಹತ್ವಾಕಾಂಕ್ಷೆಗಳಿಗೆ ಅಧೀನವಾಗಿದೆ ಎಂದು ನಂಬಿದ ಮೋದಿ, ದೇಶದ ಉತ್ಪಾದನಾ ಸಾಮರ್ಥ್ಯದ ವಾಸ್ತವತೆಯನ್ನು ಕಡೆಗಣಿಸಿದರು ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

ಸೋಮವಾರ, ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತೀಯ ನಾಯಕತ್ವದ-ಮೋದಿಯವರ- ವೈಫಲ್ಯ ಟೀಕಿಸಿದ ಆಸ್ಟ್ರೇಲಿಯಾದ ಪತ್ರಿಕೆಗೆ ಪತ್ರವೊಂದನ್ನು ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ, ವಿದೇಶಿ ಪ್ರಕಟಣೆಗಳಲ್ಲಿ ನಕಾರಾತ್ಮಕ ಸುದ್ದಿಗಳು ಬಂದಾಗ ಹೀಗೆ ಆಕ್ಷೇಪ ಸಲ್ಲಿಸಲಾಗುತ್ತಿತ್ತು.

ಭಾರತೀಯ ರಾಯಭಾರಿ ಕಚೇರಿಯು, ಆಸ್ಟ್ರೇಲಿಯಾ ಪತ್ರಿಕೆಯ ಲೇಖನವನ್ನು “ಆಧಾರರಹಿತ, ದುರುದ್ದೇಶಪೂರಿತ ಮತ್ತು ಅಪಪ್ರಚಾರ” ಎಂದು ವಿವರಿಸಿತ್ತು. ಈಗ ಫ್ರೆಂಚ್ ಪತ್ರಿಕೆ ಸಂಪಾದಕೀಯಕ್ಕೂ ಭಾರತ ಆಕ್ಷೇಪ ಸಲ್ಲಿಸುವುದೇ?


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಯಾರೋ ಒಬ್ಬರು ಅದ್ಭುತವಾಗಿ ಹೇಳಿದ್ದಾರೆ.

    ಕೊರೋನಾದಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಒಂದು ವೇಳೆ ಬಿಜೆಪಿ ರಕ್ಷಿಸುತ್ತಿದ್ದರೆ ಮಧ್ಯಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಒಂದು ವೇಳೆ ಕಾಂಗ್ರೆಸ್ ರಕ್ಷಿಸುತ್ತಿದ್ದರೆ ಇದು ಛತ್ತೀಸಗಡದಲ್ಲಿ ಹರಡುತ್ತಿರಲಿಲ್ಲ. ಶಿವಸೇನೆ ಯೋಗ್ಯ ಅನ್ನುವುದಾದರೆ ಮಹಾರಾಷ್ಟ್ರ ದಲ್ಲಿ ಹರಡುತ್ತಿರಲಿಲ್ಲ. ಕೇಜ್ರಿವಾಲ ಯೋಗ್ಯನಾಗಿದ್ದರೆ ದೆಹಲಿಯಲ್ಲಿ ಹರಡುತ್ತಿರಲಿಲ್ಲ. ಯೋಗಿ ಯೋಗ್ಯನೆಂದರೆ ಉತ್ತರ ಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಮೋದಿಯವರು ಶಕ್ತಿವಂತನೆನ್ನುವುದಾದರೆ ಭಾರತದಲ್ಲಿ ಹರಡುತ್ತಿರಲಿಲ್ಲ. ಹೀಗಾಗಿ ಕೊರೋನಾ ಯಾರ ಕಾರಣದಿಂದಲೂ, ಯಾವ ಪಕ್ಷದ ಕಾರಣದಿಂದಲೂ ಹರಡುತ್ತಿಲ್ಲ.

    ಹಣದಿಂದ ಇದನ್ನು ನಿರ್ಮೂಲನೆ ಮಾಡುವುದಾಗಿದ್ದರೆ ಅಮೇರಿಕದಲ್ಲಿ ಹರಡುತ್ತಿರಲಿಲ್ಲ. ವೈದ್ಯರು ಮತ್ತು ಔಷಧದಿಂದ ಇದನ್ನು ಗುಣಪಡಿಸಬಹುದಾಗಿದ್ದರೆ ಸ್ವೀಡನ್, ಫ್ರಾನ್ಸ್, ಬೆಲ್ಜಿಯಂ, ಇಟಲಿಯಲ್ಲಿ ತಡೆಯಬಹುದಾಗಿತ್ತು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

    ಹೀಗಾಗಿ ಇದಕ್ಕೆ ಯಾವುದ್ಯಾವುದೋ ಕಾರಣ ಹೇಳಿ ಯಾರ ಯಾರನ್ನೋ ತೆಗಳುವುದಕ್ಕಿಂತ.. ಸುಮ್ಮನೆ ಮನೆಯಲ್ಲಿರಿ. ಹೊರಬರಲು ಸಕಾರಣವಿದ್ದರೆ ಮಾಸ್ಕ ಧರಿಸಿರಿ ಮತ್ತು ಸೈನಿಟೈಜರ ಬಳಸಿ.. ಸುರಕ್ಷಿತರಾಗಿ ಇರಿ.. ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮದೇ ಜವಾಬ್ದಾರಿ ಆಗಿರಲಿ.

    ಮನೆಯಲ್ಲಿರಿ.. ಬದುಕಿದರೆ ಬದುಕು ಇದೆ.

    ಈ ಕ್ಷಣ ಗೆಲ್ಲುವ ವಿಶ್ವಾಸವಿದೆ.

  2. Nice suggestion, nobody save from covid-19, but ourselves protect from the covid-19.
    Positive thinking, physical exersie and balanced food with humanity action needed for the time.

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...