Homeಮುಖಪುಟಅತಿ ದೊಡ್ಡ ಮಾನವೀಯ ಬಿಕ್ಕಟ್ಟಿನ ಕಾಲ ಮತ್ತು ಐಪಿಎಲ್ ಔಚಿತ್ಯ

ಅತಿ ದೊಡ್ಡ ಮಾನವೀಯ ಬಿಕ್ಕಟ್ಟಿನ ಕಾಲ ಮತ್ತು ಐಪಿಎಲ್ ಔಚಿತ್ಯ

- Advertisement -
- Advertisement -

ಸಾಂಕ್ರಾಮಿಕ ತಂದೊಡ್ಡಿದ ಅತಿ ದೊಡ್ಡ ಮಾನವೀಯ ಬಿಕ್ಕಟ್ಟಿನಲ್ಲಿ ಜನ ನರಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್, ಔಷಧಿ ಕೊರತೆಯಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಗಳು ಸೋಂಕಿನ, ಸಾವಿನ ಪ್ರಕರಣಗಳನ್ನು ಮುಚ್ಚಿಡುತ್ತಿವೆ ಎಂಬ ಆರೋಪಗಳ ನಡುವೆಯೂ ಎಲ್ಲೆಲ್ಲೂ ಸಾವಿನ ಸುದ್ದಿಗಳು ಕಂಗೆಡಿಸುತ್ತಿವೆ. ಆದರೆ ಅದೇ ಸಮಯದಲ್ಲಿ ಇದ್ಯಾವುದರ ಪರಿವೆ ಇಲ್ಲದೆ ಫೋರ್, ಸಿಕ್ಸ್, ವಿಕೆಟ್‌ಗಳ ಸಂಭ್ರಮದಲ್ಲಿ ಮತ್ತೊಂದು ಜಗತ್ತು ಅಸ್ತಿತ್ವದಲ್ಲಿದೆ! ‘ಬಯೋ ಬಬಲ್‘ ಎಂಬ ರಕ್ಷಣೆ ಅವರಿಗಿದ್ದು ಯಾವುದೇ ಭಯವಿಲ್ಲದೆ ಅವರು ಆಟದಲ್ಲಿ ನಿರತರಾಗಿದ್ದಾರೆ.

ಮನರಂಜನೆ ಬೇಕು, ಖಿನ್ನತೆಯಲ್ಲಿರುವವರಿಗೆ ಅದು ಅಗತ್ಯವಿದೆ, ಇದು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂಬ ಮಾತುಗಳು ಸಹ ಐಪಿಎಲ್ ಪರ ಕೇಳಿಬರುತ್ತವೆ. ಐಪಿಎಲ್ ಅಥವಾ ಯಾವುದಾದರೊಂದು ಜನಕ್ಕೆ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಕಳೆದ ವರ್ಷದ ಅಮೆರಿಕ ಸೇರಿದಂತೆ ಇತರೆಡೆ ಸಾಂಕ್ರಾಮಿಕದ ನಡುವೆ ಹಲವು ಸ್ಪರ್ಧೆಗಳು ನಡೆದಾಗ ಬಹಳಷ್ಟು ಕ್ರೀಡಾಪಡುಗಳು ಮೊಣಕಾಲೂರಿ ಜಾರ್ಜ್ ಫ್ಲಾಯ್ಡ್ ಜನಾಂಗೀಯ ಹತ್ಯೆಯನ್ನು ಖಂಡಿಸಿ ವಿಷಾಧ ವ್ಯಕ್ತಪಡಿಸಿದ್ದರು. ಮಾಸ್ಕ್ ನಲ್ಲಿ ಬ್ಲಾಕ್ ಲೈವ್ಸ್ ಮ್ಯಾಟರ್ ಎಂಬ ಬರಹದ ಮೂಲಕ ತಮ್ಮ ಸಾಮಾಜಿಕ ಕಾಳಜಿ ಮೆರೆದಿದ್ದರು. ಈ ಐಪಿಎಲ್‌ನಲ್ಲಿ ಪ್ರಸ್ತುತ ಸಾಂಕ್ರಾಮಿಕದ ಬಗ್ಗೆ ಅಂತಹ ಕಾಳಜಿಗಳೇನಾದರೂ ಕಾಣುತ್ತಿವೆಯೇ?

ಭಾರತದ ಕ್ರೀಡಾಪಟುಗಳ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್‌ಗಳಿಗೆ ಲಕ್ಷ-ಕೋಟಿ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ. ಅದನ್ನು ಬಳಸಿ ‘ಕೈತೊಳೆಯಿರಿ, ಮಾಸ್ಕ್ ಧರಿಸಿ, ಮನೆಯಲ್ಲಿಯೇ ಇರಿ’ ಎಂಬ ಉಪದೇಶಗಳನ್ನು ಹೊರತುಪಡಿಸಿ ಮತ್ತೇನಾದರೂ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆಯೇ? ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ, ಒಟ್ಟಾಗಿ ಇದನ್ನು ಎದುರಿಸೋಣ ಎಂದು ಧೈರ್ಯ ತುಂಬಿದ್ದಾರೆಯೇ? ಜನರ ಸಂಕಷ್ಟ ಅರಿತು ಆಕ್ಸಿಜನ್, ಔಷಧಿ, ಬಡಜನರಿಗೆ ಆಹಾರಕ್ಕಾಗಿ ನಿಧಿ ಸಂಗ್ರಹಿಸಿದ್ದಾರೆಯೇ? ಇಲ್ಲ, ಬದಲಿಗೆ ಅವರ ಸೆಲ್ಫಿಗಳು, ತಿನಿಸುಗಳ ಫೋಟೊಗಳು ಮಾತ್ರ ಅವರ ಟೈಮ್‌ಲೈನ್‌ನಲ್ಲಿ ಕಾಣುತ್ತಿವೆಯೆಂದರೆ ಏನರ್ಥ?

ಕಳೆದ ಮೂರು ತಿಂಗಳ ಹಿಂದೆ ಗಣರಾಜ್ಯೋತ್ಸವದಂದು ರೈತರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಆಗ ಅಹಿತಕರ ವಾತವಾರಣ ನಿರ್ಮಾಣವಾಗಿತ್ತು. ರೈತರನ್ನು ಬೆಂಬಲಿಸಿ ಅಂತರಾಷ್ಟ್ರೀಯ ತಾರೆಯರು ಟ್ವೀಟ್ ಮಾಡಿ ಆ ವಿಷಯ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದರು. ಅದರ ಮಾರನೇ ದಿನ ‘ಇದು ಭಾರತದ ಆಂತರೀಕ ವಿಷಯ, ಇದರಲ್ಲಿ ಹೊರಗಿನವರು ಮೂಗು ತೂರಿಸುವ ಅಗತ್ಯವಿಲ್ಲ. ನಾವು ಭಾರತದೊಂದಿಗೆ ನಿಲ್ಲುತ್ತೇವೆ’ ಎಂಬ ಒಂದೇ ಸಂದೇಶವನ್ನು ಈ ಬಹುಪಾಲು ಕ್ರಿಕೆಟಿಗರು ಮತ್ತು ಬಾಲಿವುಡ್ ತಾರೆಯರು ಟ್ವೀಟ್ ಮಾಡುವ ಮೂಲಕ ತಮ್ಮ ಹಿಪಾಕ್ರಸಿ ಮೆರೆದಿದ್ದರು! ಭಾರತದ ಕೃಷಿ ಬಿಕ್ಕಟ್ಟು, ರೈತರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಈ ಆಟಗಾರರು ತಮಗೆ ಬಂದ ಸಂದೇಶವನ್ನು ಟ್ವೀಟ್ ಮಾಡಿ ಆಳುವವರ ಹಿತ ಕಾಪಾಡಿದ್ದರು… ಆದರೆ ಇಂದು ಜನ ಬೀದಿಯಲ್ಲಿ ಹುಳಗಳ ರೀತಿ ಸಾಯುತ್ತಿರುವಾಗ ಅದಕ್ಕೂ ತಮಗೂ ಸಂಬಂಧವೇ ಇಲ್ಲದ ರೀತಿ ಮತ್ತೊಂದು ಗ್ರಹವಾಸಿಗಳಾಗಿಬಿಟ್ಟಿದ್ದಾರೆ!

ಈ ಕ್ರಿಕೆಟ್ ತಾರೆಯರನ್ನು ಭಾರತದ ಕೋಟ್ಯಂತರ ಜನ ಆರಾಧಿಸುತ್ತಾರೆ.. ಅಂತಹ ಕೋಟ್ಯಾಂತರದ ಜನರ ಜೀವವೇ ಅಪಾಯದಲ್ಲಿದೆ. ಆದರೆ ಅದರ ಬಗ್ಗೆ ಈ ಕ್ರಿಕೆಟಿಗರು ಕಿಂಚಿತ್ ಕಾಳಜಿ ವಹಿಸುತ್ತಿದ್ದಾರೆಯೇ? ಐಪಿಎಲ್ ಪಂದ್ಯ ನಡೆಯುವಾಗ ವೀಕ್ಷಕ ವಿವರಣೆ ನೀಡುವವರು 10 ಓವರ್‌ಗಳಿಗೆ ಒಮ್ಮೆ ಮಾಸ್ಕ್ ಹಾಕಿ, ಸುರಕ್ಷಿತ ಅಂತರ ಕಾಪಾಡಿ ಎಂದು ಹೇಳುತ್ತಾರೆ ಹೊರತು ಇಂದಿನ ಬಿಕ್ಕಟ್ಟಿಗೂ, ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲದಂತೆ ನಡೆಯುತ್ತಿದೆ. ಈ ಕಾರಣದಿಂದಲೇ “ದೇಶವು ಕೋವಿಡ್ ಎರಡನೆ ಅಲೆ ಉಲ್ಬಣದಿಂದ ತತ್ತರಿಸಿರುವ ಈ ಸಮಯದಲ್ಲಿ ಐಪಿಎಲ್ ಎಂಬ ಕ್ರಿಕೆಟ್ ಹಬ್ಬ ನಡೆಯುತ್ತಿರುವುದು ವಿಷಾದಕರ. ದೇಶದ ಸಂಕಷ್ಟದ ಜೊತೆ ನಿಂತು ಜನರಲ್ಲಿ ನೈತಿಕ ಶಕ್ತಿ ತುಂಬುವುದರ ಸಂಕೇತವಾಗಿ ನಾವು ಈಗಿನಿಂದಲೇ ಕ್ರಿಕೆಟ್ ಹಬ್ಬದ ಕವರೇಜ್ ನಿಲ್ಲಿಸಿದ್ದೇವೆ ಮತ್ತು ಅದಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪ್ರಕಟಿಸದಿರಲು ನಿರ್ಧರಿಸಿದ್ದೇವೆ” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ಮಂಡಳಿ ತೆಗೆದುಕೊಂಡ ನಿಲುವು ಪ್ರಶಂಸೆಗೆ ಒಳಗಾಗಿದೆ.

ಅಪವಾದಗಳು

ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ 50 ಸಾವಿರ ಡಾಲರ್ ಹಣವನ್ನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದಾರೆ. ಹರ್ಭಜನ್ ಸಿಂಗ್ ಪುಣೆಯಲ್ಲಿ ದಿನಕ್ಕೆ 1500 ಜನರನ್ನು ಟೆಸ್ಟ್ ಮಾಡುವ ಸಾಮರ್ಥ್ಯದ ಕೊರೊನಾ ಪರೀಕ್ಷೆ ಕೇಂದ್ರವನ್ನು ತೆರೆದಿದ್ದಾರೆ. ವಾಸಿಂ ಜಾಫರ್, ಇರ್ಫಾನ್ ಪಠಾಣ್ ಮತ್ತು ರವಿಚಂದ್ರನ್ ಅಶ್ವಿನ್ ಜನರಿಗೆ ಈ ಸಂದರ್ಭದಲ್ಲಿ ಇತರರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಇವರನ್ನು ಇವರ ಈ ಕಾರ್ಯಕ್ಕಾಗಿ ಶ್ಲಾಘಿಸಬೇಕಿದೆ. ಅಶ್ವಿನ್ ನಮ್ಮ ಕುಟುಂಬ ಕೋವಿಡ್‌ನಿಂದ ಬಳಲುತ್ತಿದ್ದು ಈ ಸಂದರ್ಭದಲ್ಲಿ ನಾನು ಅವರೊಂದಿಗೆ ನಿಲ್ಲಬೇಕು ಎಂದು ಹೇಳಿ ಐಪಿಎಲ್ ತೊರೆದು ಹೊರಟಿದ್ದಾರೆ.


ಇದನ್ನೂ ಓದಿ; ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....