ಟೋಕಿಯೊ ಒಲಿಂಪಿಕ್ಸ್ ಮುಗಿಲು ಇನ್ನೇನು ಎರಡು ದಿನಗಳು ಬಾಕಿಯಿದೆ. ಆಗಸ್ಟ್ 8 ರ ಭಾನುವಾರದಂದು ಜಪಾನಿನ ಟೋಕಿಯೊದ ಒಲಿಂಪಿಕ್ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಈಗಾಗಲೆ ನಿಗದಿಯಾಗಿದೆ. ಪದಕ ಗಳಿಕೆಯಲ್ಲಿ 74 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಜನಸಂಖ್ಯೆಯಲ್ಲಿ ಚೀನಾಕ್ಕಿಂತ ಮೂರು ಕೋಟಿ ಕಡಿಮೆಯಿರುವ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ 65 ನೇ ಸ್ಥಾನ!. ಆದರೆ ಒಲಿಂಪಿಕ್ ಗೇಮ್ಸ್ ಅನ್ನು ಹಿಡಿದು ದೇಶದ ಒಳಗೆ ನಡೆಯುತ್ತಿರುವ ರಾಜಕೀಯ ಮತ್ತು ಜಾತೀಯತೆಯ ಆಟಗಳಿಗೆ ಲೆಕ್ಕವೆ ಇಲ್ಲ.
ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯಲ್ಲಿ ಭಾರತದ ತಂಡ ಸೋತಿದ್ದಕ್ಕಾಗಿ, ಆಟಗಾರರನ್ನು ಜನಾಂಗೀಯ ನಿಂದನೆಗೆ ಗುರಿಮಾಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಆಟಗಾರ್ತಿ ಒಬ್ಬರನ್ನು ಇಟ್ಟುಕೊಂಡು ತನ್ನ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸಿರುವ ಘಟನೆ ಇದೀಗ ವರದಿಯಾಗಿದೆ.
ಕ್ರೀಡಾಕೂಟದ ಮಹಿಳಾ ಬಾಕ್ಸಿಂಗ್ ವೆಲ್ಟರ್ ವೇಟ್ ವಿಭಾಗದಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಅಸ್ಸಾಂ ರಾಜ್ಯದವರಾದ ಅವರು ತನ್ನ ಚೊಚ್ಚಲ ಒಲಿಂಪಿಕ್ಸ್ ಪಂದ್ಯದಲ್ಲೇ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ ವರದಿಗಳು ಓದಿ

ಆದರೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕೂಡಲೇ ಅವರ ಹೆಸರಲ್ಲಿ ರಾಜಕೀಯ ಮೈಲೇಜ್ ಹೆಚ್ಚಿಸುರುವ ಘಟನೆ ನಡೆದಿದೆ. ಲವ್ಲೀನಾ ಅವರಿಗೆ ಶುಭ ಹಾರೈಸಿದ ಹಾಕಿರುವ ಅವರ ಫೋಟೋ ಕಾಣದಾಗಿದ್ದು, ಕೇವಲ ಶುಭಹಾರೈಸಿರುವವರ ಫೋಟೋಗಳಷ್ಟೇ ಕಾಣಿಸಿಕೊಂಡಿದೆ.
ಬ್ಯಾನರ್‌ಗಳಲ್ಲಿ, “ಟೋಕಿಯೊ ಒಲಿಂಪಿಕ್-2020 ಕ್ಕೆ ಅರ್ಹತೆ ಪಡೆದಿದ್ದಕ್ಕಾಗಿ ಲವ್ಲಿನಾ ಬೊರ್ಗೊಹೈನ್ (ಬಾಕ್ಸರ್) ಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ನೀವು ಅಸ್ಸಾಂನ ಹೆಮ್ಮೆ” ಎಂಬ ಶೀರ್ಷಿಕೆಯ ಬ್ಯಾನರ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವ ಬಿಮಲ್ ಬೋರಾ ಅವರ ಚಿತ್ರ ಮಾತ್ರವಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಬಾಕ್ಸಿಂಗ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಹೆಣ್ಣುಮಗಳು ಲವ್ಲಿನಾ
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರೆ, ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Indian Boxer *Lovlina Borgohain* has entered Semi Finals ensuring an Olympic medal for India, the only question now is the color of the medal. For those who want to know *how she looks like*, here are some of the *billboards on display in Guwahati*! pic.twitter.com/wiY7ee9cxk
— Kiran Mazumdar-Shaw (@kiranshaw) August 3, 2021
ಈ ಮಧ್ಯೆ, “ಮಹಿಳೆಯರ ಹಾಕಿ ತಂಡದಲ್ಲಿ ದಲಿತ ಆಟಗಾರರೇ ಇರುವುದರಿಂದ ಸೆಮಿಫೈನಲ್ ಸೋತು ಹೋಯಿತು. ದಲಿತರನ್ನು ಹಾಕಿ ಮಾತ್ರವಲ್ಲ, ಯಾವುದೆ ಆಟಕ್ಕೂ ಸೇರಿಸಿಕೊಳ್ಳಬಾರದು” ಎಂದು ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆಯ ಮುಂದೆ ಗಲಾಟೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಇಬ್ಬರು ದುಷ್ಕರ್ಮಿಗಳು ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿ ಜನಾಂಗೀಯ ಮತ್ತು ಜಾತಿ ನಿಂದನೆ ಮಾಡಿ ವಂದನಾ ಅವರ ಮನೆಯ ಮುಂದೆ ಕುಣಿದು ಸಂತೋಷ ವ್ಯಕ್ತಪಡಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ


