ರಷ್ಯಾ ಉಕ್ರೇನ್ ಮೇಲೆ ಯುದ್ದ ಸಾರಿದ್ದು, ಕನ್ನಡಿಗ ವೈದ್ಯ ವಿದ್ಯಾರ್ಥಿಯ ಸಾವು ಕನ್ನಡಿಗರನ್ನು ಕೆರಳಿಸಿದೆ. ಅಲ್ಲದೆ ಪ್ರತಿಭಾವಂತ ಕನ್ನಡಿಗರೇಕೆ ವಿದ್ಯಾಭ್ಯಾಸಕ್ಕೆ ವಿದೇಶಗಳಿಗೆ ಹೋಗಿ ಬಲಿಯಾಗಬೇಕು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ NEET ಪರೀಕ್ಷೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ಕೂಡಲೇ ಅದನ್ನು ರದ್ದಗೊಳಿಸಬೇಕೆಂಬ ಗಟ್ಟಿ ದನಿ ಕೇಳಿಬಂದಿದೆ.
ಇಂದು ಕನ್ನಡಿಗರು ನೀಟ್ ವಿರುದ್ಧ ಟ್ವಿಟರ್‌ನಲ್ಲಿ ಅಭಿಯಾನ ನಡೆಸಿದ್ದಾರೆ. “ಒಂದೆಡೆ ಸೀಟಿಗೆ ಕೋಟಿಗಟ್ಟಲೆ ಹಣ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರ. ಬಲಿಯಾಗುತ್ತಿರುವುದು ಕನ್ನಡಿಗರು” ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಿಡಿಕಾರಿದೆ.
ಕರ್ನಾಟಕವು ಭಾರತದಲ್ಲಿಯೇ ಅತಿ ಹೆಚ್ಚು MBBS ಕಾಲೇಜುಗಳು ಮತ್ತು ಸೀಟುಗಳನ್ನು ಹೊಂದಿದೆ. ಆದರೆ #NEET ನಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಗ್ರಾಮೀಣ ಮತ್ತು ಕಡಿಮೆ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಅಧ್ಯಯನದ ಕನಸನ್ನು ನನಸಾಗಿಸಲು ಇರುವ ಏಕೈಕ ಮಾರ್ಗವೆಂದರೆ ನೀಟ್ ರದ್ದುಗೊಳಿಸಬೇಕು ಎಂದು ಚೇತನ್ ಜೀರಾಳ್ ಟ್ವೀಟ್ ಮಾಡಿದ್ದಾರೆ.
List of colleges offering MBBS state wise. Karnataka has highest number of seats in India and the domiciles of Karnataka are at loss due to #NEET.
Only way to ensure the rural and low economic background students can fulfill their dream of studying medicine is to #BanNeet pic.twitter.com/KPCOB4mUov— Chetan Jeeral | ಚೇತನ್ ಜೀರಾಳ್ (@chetanjeeral) March 2, 2022
ಲಕ್ಷಾಂತರ ರೂಪಾಯಿ ದುಡ್ಡುಕೊಟ್ಟು ಟ್ಯೂಶನ್ ಕೊಡಿಸಲು ಆಗುವ ಶ್ರೀಮಂತರಿಗೆ ಮಾತ್ರ ಅನುಕೂಲವಾಗುವಂತಹಾ NEET ಪರೀಕ್ಷಾ ವ್ಯವಸ್ತೆಯನ್ನು ಕರ್ನಾಟಕ ಕೈಬಿಡಬೇಕು. #BanNeet ಎಂದು ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ದುಡ್ಡುಕೊಟ್ಟು ಟ್ಯೂಶನ್ ಕೊಡಿಸಲು ಆಗುವ ಶ್ರೀಮಂತರಿಗೆ ಮಾತ್ರ ಅನುಕೂಲವಾಗುವಂತಹಾ NEET ಪರೀಕ್ಷಾ ವ್ಯವಸ್ತೆಯನ್ನು ಕರ್ನಾಟಕ ಕೈಬಿಡಬೇಕು. #BanNeet
— ಅರುಣ್ ಜಾವಗಲ್ | Arun Javgal (@ajavgal) March 2, 2022
ಕರ್ನಾಟಕದಲ್ಲಿ 3200 MBBS ಸೀಟುಗಳೊಂದಿಗೆ 20 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. 3200 ಸೀಟುಗಳಲ್ಲಿ ಸುಮಾರು 480 ಸೀಟುಗಳನ್ನು ಕೇಂದ್ರೀಯ ಕೋಟಾಕ್ಕೆ ನೀಡಲಾಗಿದೆ. ಕಟ್ಟಡ ನಮ್ಮದು, ಸೌಲಭ್ಯಗಳು ನಮ್ಮದು, ಅಧ್ಯಾಪಕರು ನಮ್ಮದು, ವಿಶ್ವವಿದ್ಯಾಲಯ ನಮ್ಮದು. ನಾವು ನಮ್ಮ ಸ್ಥಾನಗಳನ್ನು ಇತರರಿಗೆ ಏಕೆ ನೀಡಬೇಕು? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಶೇ.95 ಅಂಕ ಪಡೆದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳೂ ಸಹ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೀಸಲಾತಿಯನ್ನು ದೂಷಿಸುವುದನ್ನು ನಿಲ್ಲಿಸಿ ಮತ್ತು ನೀಟ್ ಅನ್ನು ದೂಷಿಸಿ. ಸಮಸ್ಯೆ ಪರಿಹಾರಕ್ಕೆ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರತಿಮೆಗಳ ಬದಲಿಗೆ ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿ. ಕ್ಯಾಪಿಟೇಶನ್ ಮಾಫಿಯಾವನ್ನು ನಿಯಂತ್ರಿಸಿ ಎಂದು ಚೇತನ್ ಕೃಷ್ಣ ಒತ್ತಾಯಿಸಿದ್ದಾರೆ.
Even SC ST students who score 95% are not getting medical seats. So stop blaming Reservation and blame neet .
⏺️Ask to #BanNEET.
⏺️ Increase the number of medical seats
⏺️Build more medical Colleges instead of statues.
⏺️ Regulate Donation Mafia.pic.twitter.com/nv9WCiTTmQ
— Chetan Krishna👑 🇮🇳 (@ckchetanck) March 2, 2022
7245 ಮೆಡಿಕಲ್ ಸೀಟುಗಳು ಇರುವ ಕರ್ನಾಟಕದಿಂದ ಅತಿ ಹೆಚ್ಚು ಸೀಟುಗಳನ್ನು ಬೇರೆ ರಾಜ್ಯಗಳಿಗೆ ಹಂಚುವ ವ್ಯವಸ್ಥೆಯೇ ನೀಟ್. ಒಂದು ದೇಶ, ಒಂದು ಪರೀಕ್ಷೆ ಹೆಸರಲ್ಲಿ ಒಕ್ಕೂಟ ಸರ್ಕಾರ ಕನ್ನಡದ ಮಕ್ಕಳ ಹಕ್ಕನ್ನು ಕಸಿದಿದೆ. ಅದರ ಪರಿಣಾಮವಾಗಿಯೇ ಕನ್ನಡದ ಮಕ್ಕಳು ಹೊರದೇಶಗಳಿಗೆ ಹೋಗುವಂತಾಗಿದೆ. #BanNeet #RIPNaveen ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಟ್ವೀಟ್ ಮಾಡಿದ್ದಾರೆ.
NEET ಎಂಬುದು ಪದೇ ಪದೇ ಬಡವರ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ಇದರಿಂದ ನಗರದ ಶ್ರೀಮಂತರಿಗೆ ಮಾತ್ರ ಲಾಭ. ಗ್ರಾಮೀಣ, ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಒಟ್ಟಾಗಿ ನಿಂತು ಈ ದಬ್ಬಾಳಿಕೆ ವಿರುದ್ಧ ಹೋರಾಡುವ ಸಮಯ ಇದಾಗಿದೆ. ನೀಟ್ ರದ್ದುಗೊಳಿಸೋಣ ಎಂದು ಶ್ರುತಿ ಮರುಳಪ್ಪ ಟ್ವೀಟ್ ಮಾಡಿದ್ದಾರೆ.
Time and again, every other incident is proving how anti-federal, anti-poor #NEET is. It benefits only the urban rich. Talented students are deprived of the opportunities they deserve. Time to stand together and fight this oppression. #BanNEET https://t.co/KgtsrRYNvc
— Shruthi Marulappa। ಶ್ರುತಿ ಮರುಳಪ್ಪ (@shruthihm1) March 2, 2022
#NEET is the main root cause for Indian Students to go to overseas inorder to get medical seat. NEET just backs the urban rich whereas middle class and poor struggle to get opportunities. We must oppose this system of injustice#BanNEET#BanNeet pic.twitter.com/1przCYeQBF
— Rishu Singh (@rishu__singh) March 2, 2022
ಇದನ್ನೂ ಓದಿ: ಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು


