Homeಮುಖಪುಟಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

- Advertisement -
- Advertisement -

ತಮಿಳುನಾಡಿನಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಪ್ರಬಲ ಪ್ರಾದೇಶಿಕ ಪಕ್ಷ ಡಿಎಂಕೆ ನಡುವಿನ ಸ್ಥಾನ ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ.
ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿಯುವ ಹಂತದಲ್ಲಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

2018 ರ ಡಿಸೆಂಬರ್‌ನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಂದ ಪಕ್ಷದ ಆಡಳಿತವನ್ನು ವಹಿಸಿಕೊಂಡಿದ್ದರು, ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 2019 ರ ಸಾರ್ವತ್ರಿಕ ಚುನಾವಣೆಗಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದಾಗ ದೇಶವನ್ನು ಅಚ್ಚರಿಗೊಳಿಸಿತು. ಅದು ಅಚ್ಚರಿ ಉಂಟು ಮಾಡಿತ್ತು.

ಕಾಂಗ್ರೆಸ್‌ನ ಸುದೀರ್ಘ ಮಿತ್ರಪಕ್ಷಗಳಲ್ಲಿ ಒಬ್ಬರಾದ ಡಿಎಂಕೆಯ ಸ್ಟಾಲಿನ್ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ ಮೊದಲ ಯುಪಿಎ ನಾಯಕರಾಗಿದ್ದರು.
ಈಗ, ಎರಡು ವರ್ಷಗಳ ನಂತರ, ಡಿಎಂಕೆ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಮುರಿಯುವ ಅಂಚಿನಲ್ಲಿದೆ! 2006, 2011 ಮತ್ತು 2016 ರಲ್ಲಿ ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಅದರ ಅತಿದೊಡ್ಡ ಪಾಲುದಾರ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ನೊಂದಿಗೆ ಡಿಎಂಕೆ ಸ್ವಲ್ಪ ಕಠಣವಾಗಿ ವರ್ತಿಸುತ್ತಿದೆ. ಇದನ್ನು ಸೈಕಾಲಿಜಿಕಲ್ ಮೂವ್ (ಮಾನಸಿಕ ನಡೆ) ಎನ್ನಲಾಗುತ್ತಿದೆ.

2021 ರ ವಿಧಾನಸಭಾ ಚುನಾವಣೆಗೆ ಮುನ್ನ, ಡಿಎಂಕೆ ಸ್ಪಷ್ಟವಾಗಿ ಕಾಂಗ್ರೆಸ್ ಕೇವಲ 20 ಸ್ಥಾನಗಳನ್ನು ಮಾತ್ರ ನೀಡಬಲ್ಲೆವು ಎಂದು ಹೇಳಿದೆ. ಮೊದಲಿಗೆ 18 ಸ್ಥಾನ ನೀಡುವುದಾಗಿ ಹೇಳಿದ ಅದು ಆರಂಭಿಕ ಮಾತುಕತೆಗಳ ನಂತರ 20 ಸ್ಥಾನದ ಆಫರ್ ಮಾಡಿದೆ.

ಈಗ ಕಾಂಗ್ರೆಸ್ ಮೇಲೆ ಜವಾಬ್ದಾರಿ ಇದೆ, ಮೈತ್ರಿಯಲ್ಲಿ ಮುಂದುವರಿಯಬೇಕೋ, ಇಲ್ಲವೋ ಎಂಬುದನ್ನು ಅದು ನಿರ್ಧರಿಸುವ ಕಾಲ ಬಂದಿದೆ. 2016 ಕ್ಕೆ ಹೋಲಿಸಿದರೆ ಕೇವಲ ಅರ್ಧದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಬೇಕು ಅಥವಾ ಮೈತ್ರಿಯಿಂದ ಹೊರನಡೆಯಲು ಸಿದ್ಧವಾಗಬೇಕು.

ಹಾಗಾದರೆ ಡಿಎಂಕೆ ಈ ಆಕ್ರಮಣಕಾರಿ ನಿಲುವನ್ನು ಏಕೆ ಅಳವಡಿಸಿಕೊಂಡಿದೆ? “ಇದು ಮಾನಸಿಕ ನಡೆ” ಎಂದು ಡಿಎಂಕೆಯ ಉನ್ನತ ಮೂಲವೊಂದು ಹೇಳುತ್ತಿದೆ.. “ಕಾಂಗ್ರೆಸ್ ಹೊರನಡೆದರೆ ನಮಗೆ ಬೇಸರವಿಲ್ಲ. ವಾಸ್ತವವಾಗಿ ಅವರು ಮೈತ್ರಿಯಿಂದ ಹೊರಗುಳಿಯಬೇಕು ಎಂದು ಹಲವರು ಪ್ರತಿಪಾದಿಸುತ್ತಾರೆ. ಪಕ್ಷವು ದೊಡ್ಡ ಮೈತ್ರಿಯ ಭಾಗವಾಗಿದ್ದರೆ ಮಾತ್ರ ಡಿಎಂಕೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಅನೇಕ ಮತದಾರರು ಭಾವಿಸುತ್ತಾರೆ, ನಾವು ಆ ಕಲ್ಪನೆಯನ್ನು ಮುರಿಯಬೇಕಾಗಿದೆ. ಕಾಂಗ್ರೆಸ್ಸಿನಂತಹ ಮೈತ್ರಿ ಪಾಲುದಾರರಿಲ್ಲದೆ ಡಿಎಂಕೆ ಭರ್ಜರಿ ಜಯ ಸಾಧಿಸಬಹುದು ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷದ ಕಾರ್ಯತಂತ್ರ ತಂಡದ ಅನೇಕ ನಾಯಕರು ಮತ್ತು ಸದಸ್ಯರು ಮಾತನಾಡುತ್ತಾ, ಕಾಂಗ್ರೆಸ್ಸಿನ ಉಪಸ್ಥಿತಿಯು ಡಿಎಂಕೆ ಭವಿಷ್ಯವನ್ನು ಹಾನಿಗೊಳಿಸುತ್ತದೆ ಮತ್ತು ಡಿಎಂಕೆಯ ಒಟ್ಟಾರೆ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದು ಅವರ ಅಂದಾಜಾಗಿದೆ.

“ದಕ್ಷಿಣ ತಮಿಳುನಾಡಿನ ಜೊತೆಗೆ, ಕನ್ಯಾಕುಮಾರಿಯಂತಹ ಜಿಲ್ಲೆಗಳಲ್ಲಿ, ಕಾಂಗ್ರೆಸ್‌ಗೆ ಎಲ್ಲಿಯೂ ಗಮನಾರ್ಹವಾದ ಮತ ಬ್ಯಾಂಕ್ ಇಲ್ಲ. ವಾಸ್ತವವಾಗಿ ಪ್ರತಿ ಚುನಾವಣೆಯಲ್ಲೂ ನಾವು ಸ್ಥಳೀಯ ಡಿಎಂಕೆ ನಾಯಕರ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ಡಿಎಂಕೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸುತ್ತಿದ್ದೆವೆ. ಅವರು ಅಂತಿಮವಾಗಿ ಪಕ್ಷದ ವಿರುದ್ಧ ದಂಗೆ ಏಳುತ್ತಾರೆ ” ಎಂದು ಡಿಎಂಕೆ ಮೂಲವೊಂದು ತಿಳಿಸಿದೆ.

ಡಿಎಂಕೆ ಅಂದಾಜೆಂದರೆ, ಪಶ್ಚಿಮ ತಮಿಳುನಾಡು ಎಐಎಡಿಎಂಕೆ ಭದ್ರಕೋಟೆಯಾಯಿತು. ಇದಕ್ಕೆ ಕಾರಣ, ಪಕ್ಷವು ಈ ಪ್ರದೇಶದ ಸ್ಥಾನಗಳನ್ನು ಕೇವಲ ಮೈತ್ರಿಯ ಕಾರಣಕ್ಕೆ ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತ ಬಂದಿದ್ದು. ಪಕ್ಷವು ಈಗ ತನ್ನದೇ ಆದ ನಾಯಕರು ಸ್ಪರ್ಧಿಸಿ ಈ ಭಾಗದಲ್ಲಿ ಒಂದು ಶಕ್ತಿಯಾಗಿ ಪುನರುಜ್ಜೀವನಗೊಳ್ಳಬೇಕೆಂದು ಬಯಸಿದೆ.

ಮತ್ತೊಂದು ಡಿಎಂಕೆ ಮೂಲವು, 2021 ಡಿಎಂಕೆ ಚುನಾವಣೆಯಾಗಿದೆ ಮತ್ತು ಕಾಂಗ್ರೆಸ್ ಕೂಡ ಅದನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು. “ನಮ್ಮ ಲೆಕ್ಕಾಚಾರಗಳನ್ನು ಆಧರಿಸಿ, ನಾವು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತೇವೆ, ಕಾಂಗ್ರೆಸ್ ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಅಗ್ರಿಸ್ಸಿವ್ ವಿಚಾರ ಅಲ್ಲ, ವಾಸ್ತವದ ಲೆಕ್ಕಾಚಾರ” ಎಂದು ತಿಳಿಸಿದೆ.

ತಿರುಮವಾಲವನ್ ನೇತೃತ್ವದ ವಿಸಿಕೆ ಎಂಬ ಮತ್ತೊಂದು ಮೈತ್ರಿ ಪಾಲುದಾರರೊಂದಿಗಿನ ಮಾತುಕತೆಗಳಲ್ಲಿ ಡಿಎಂಕೆ ಕಠಿಣವಾಗಿದೆ. ವಿಸಿಕೆ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೂ, ಡಿಎಂಕೆ ಕೇವಲ ಆರು ಸ್ಥಾನಗಳಲ್ಲಿ ಸ್ಪರ್ಧಿಸಲು ಸೂಚಿಚಿದೆ. ಮಾತುಕತೆಯ ನಂತರ, ಗುರುವಾರ ಮಧ್ಯಾಹ್ನ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ತಿರುಮವಾಲವನ್ ಅವರ ಮೈತ್ರಿಯಲ್ಲಿ ಪಕ್ಷವು ಕಾರ್ಯತಂತ್ರದ ಪ್ರಯೋಜನವನ್ನು ಹೊಂದಿದೆ, ಕಾಂಗ್ರೆಸ್‌ಗೆ ಅದರ ಕೊರತೆಯಿದೆ ಎಂಬ ಕಾರಣದಿಂದಾಗಿ ಪಕ್ಷವು ವಿಸಿಕೆಯನ್ನು ಮಿತ್ರಪಕ್ಷವಾಗಿ ಇಟ್ಟುಕೊಳ್ಳಲು ಬಯಸುತ್ತದೆ ಎಂದು ಡಿಎಂಕೆ ನಾಯಕರು ಹೇಳಿದರು. ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ವನ್ನಿಯಾರ್ ನೇತೃತ್ವದ ಪಿಎಂಕೆ ವಿರುದ್ಧ ದಲಿತ ಸಮುದಾಯದ ಮತಗಳನ್ನು ಕ್ರೂಢೀಕರಿಸಲು ವಿಸಿಕೆ ಸಹಾಯ ಮಾಡುತ್ತದೆ.

ಡಿಎಂಕೆ ಪರವಾಗಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐಪಿಎಸಿ) ಕಾರ್ಯತಂತ್ರ ರೂಪಿಸುತ್ತಿದೆ. ಸಲಹಾ ಸಂಸ್ಥೆಯ ದೈನಂದಿನ ಅಂದಾಜು ಪಕ್ಷಕ್ಕೆ ಭರ್ಜರಿ ಜಯವನ್ನು ಊಹಿಸುತ್ತಲೇ ಇವೆ. ಇದು ಮೂಡಿಸಿದ ವಿಶ್ವಾಸದಿಂದಾಗಿ, ಅಗತ್ಯಬಿದ್ದರೆ ಕಾಂಗ್ರೆಸ್‌ಗೆ ವಿದಾಯ ಹೇಳುವ ಡಿಎಂಕೆ ಸಿದ್ಧವಾಗಿದೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು, ತಮ್ಮ ಸಂಶೋಧನೆ ಅಥವಾ ರಾಜಕೀಯ ತಿಳುವಳಿಕೆಯ ಆಧಾರದ ಮೇಲೆ ಪ್ರಶಾಂತ್ ಅವರ ಐಪಿಎಸಿ ಸಲಹೆಗಳನ್ನು ನೀಡಬಹುದು. ಆದರೆ ಈ ಜೂಜು ವರ್ಕ್ಔಟ್ ಆಗದಿದ್ದರೆ ಸ್ಟಾಲಿನ್ ರಾಜಕೀಯ ಪರಿಣಾಮಗಳನ್ನು ಭರಿಸಬೇಕಾಗುತ್ತದೆ’ ಎಂದಿದ್ದಾರೆ.

“ಕರುಣಾನಿಧಿ ಅವರು ಮಹಾ ಮೈತ್ರಿ ಬಯಸಿದ ರಾಜಕಾರಣಿಯಾಗಿದ್ದರೆ ಮತ್ತು ಅನೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿದ್ದ ನಾಯಕರಾಗಿದ್ದರೆ, ಸ್ಟಾಲಿನ್‌ಗಾಗಿ ರೂಪಿಸಲಾಗಿರುವ ಮಾರ್ಗವು ವಿಭಿನ್ನವಾಗಿದೆ. ಅದು ‘ಏಕಾಂಗಿಯಾಗಿ ಗೆಲ್ಲಬಲ್ಲ ಡಿಎಂಕೆ ಮಾರ್ಗ” ಎಂದು ಡಿಎಂಕೆ ಮೂಲಗಳು ವಾದಿಸುತ್ತಿವೆ. ಏಪ್ರಿಲ್ 6 ರ ಚುನಾವಣೆಯಲ್ಲಿ ಈ ಹೆಚ್ಚಿನ ಪಾಲಿನ, ರಿಸ್ಕ್ ಜೂಜು ಲಾಭ ತರುತ್ತದೆಯೇ ಎಂಬುದನ್ನು ಕಾದು ನೊಡಬೇಕಿದೆ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...