Homeಮುಖಪುಟದೆಹಲಿಯ ಪರಿಸ್ಥಿತಿ ಭಯಾನಕವಾಗಿದೆ; ರೋಗಿಗಳ ಪರಿಸ್ಥಿತಿ ಪ್ರಾಣಿಗಳಿಗಿಂತ ಕೆಟ್ಟದಾಗಿದೆ: ಸುಪ್ರೀಂ ಕೋರ್ಟ್ ಆತಂಕ

ದೆಹಲಿಯ ಪರಿಸ್ಥಿತಿ ಭಯಾನಕವಾಗಿದೆ; ರೋಗಿಗಳ ಪರಿಸ್ಥಿತಿ ಪ್ರಾಣಿಗಳಿಗಿಂತ ಕೆಟ್ಟದಾಗಿದೆ: ಸುಪ್ರೀಂ ಕೋರ್ಟ್ ಆತಂಕ

ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಿಂದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ, ಮೃತದೇಹಗಳನ್ನು ನಿರ್ವಹಿಸುವ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರತಿಕ್ರಿಯೆಗಳನ್ನು ಕೋರಿದೆ.

- Advertisement -
- Advertisement -

ದೆಹಲಿಯ ಪರಿಸ್ಥಿತಿಯನ್ನು “ಭಯಾನಕ” ಎಂದು ಹೇಳಿರುವ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರವನ್ನು ಮೃತ ದೇಹಗಳ ಕೆಟ್ಟನಿರ್ವಹಣೆಗಾಗೆ ಖಂಡಿಸಿದೆ. ಅಲ್ಲದೆ ಕೊರೊನಾ ರೋಗಿಗಳಿಗೆ ನೀಡಿದ ಚಿಕಿತ್ಸೆಯು “ಪ್ರಾಣಿಗಳಿಗಿಂತ ಕೆಟ್ಟದಾಗಿದೆ” ಎಂದು ಹೇಳಿದೆ.

ದೆಹಲಿ ಸರ್ಕಾರವೂ ಶವಗಳಿಗೆ ನೀಡಿದ ಕಾಳಜಿಯ ಕೊರತೆಯನ್ನು ಎತ್ತಿ ತೋರಿಸುವ ಮಾಧ್ಯಮ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠ, “ದೆಹಲಿಯ ಪರಿಸ್ಥಿತಿ ಭಯಾನಕ ಹಾಗೂ ಕರುಣಾಜನಕವಾಗಿದೆ” ಎಂದು ಹೇಳಿದೆ.

“ದೆಹಲಿ ಮತ್ತು ಅದರ ಆಸ್ಪತ್ರೆಗಳ ಒಳಗೆ ರೋಗಿಗಳಿಗೆ ನೀಡಿದ ಚಿಕಿತ್ಸೆಯನ್ನು ನೋಡಿ. ರೋಗಿಗಳು ಅಳುತ್ತಿದ್ದಾರೆ, ಯಾರೂ ಅವರನ್ನು ನೋಡಿಕೊಳ್ಳುತ್ತಿಲ್ಲ. ಮಾಧ್ಯಮಗಳು ವರದಿ ಮಾಡಿದಂತೆ ರೋಗಿಗಳ ಸಾವಿನ ನಂತರ ಸಂಬಂಧಿಕರಿಗೆ ಸಹ ಮಾಹಿತಿ ನೀಡಲಾಗುವುದಿಲ್ಲ….” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಮೃತ ದೇಹಗಳನ್ನು ಈ ರೀತಿ ಪರಿಗಣಿಸಲಾಗುತ್ತಿದ್ದರೆ, ಮೃತ ದೇಹಗಳು ಕಸದಲ್ಲಿ ಕಂಡುಬರುತ್ತವೆ! ಮಾಧ್ಯಮಗಳು ಈ ಶೋಚನೀಯ ಪರಿಸ್ಥಿತಿಗಳನ್ನು ಎತ್ತಿ ತೋರಿಸಿದೆ. ಜನರಿಗೆ ಚಿಕಿತ್ಸೆ ನೀಡುತ್ತಿರುವುದು ಪ್ರಾಣಿಗಳಿಗಿಂತ ಕೆಟ್ಟದಾಗಿದೆ ”ಎಂದು ನ್ಯಾಯಮೂರ್ತಿ ಎಂ ಆರ್ ಷಾ ಹೇಳಿದರು.

ರಾಜ್ಯದಲ್ಲಿ ಸಾಂಕ್ರಮಿಕ ರೋಗದ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದಕ್ಕೆ ಅರವಿಂದ್ ಕೇಜ್ರೀವಾಲ್ ಅವರ ಸರ್ಕಾರವನ್ನು ತರಾಟೆಗೆ ಪಡೆದಿರುವ ನ್ಯಾಯಪೀಠ “ದೆಹಲಿಯಲ್ಲಿ ಪರೀಕ್ಷಾ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎಂದು ನಮಗೆ ತಿಳಿಸಿ” ಎಂದು ನ್ಯಾಯಮೂರ್ತಿ ಎಂ ಆರ್ ಷಾ ಸರ್ಕಾರಕ್ಕೆ ಹಾಜರಾಗುವಂತೆ ಹೇಳಿದರು.

“ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಲು ನಾವು ರಾಜ್ಯವನ್ನು ಕೇಳುತ್ತಿದ್ದೇವೆ, ಅಗತ್ಯವಿರುವವರಿಗೆ ಪರೀಕ್ಷೆಯನ್ನು ನಿರಾಕರಿಸಬಾರದು …” ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ನ್ಯಾಯಪೀಠವು ಇತರ ವರದಿಗಳನ್ನು ಉಲ್ಲೇಖಿಸಿ “ಕೊರೊನಾ ವೈರಸ್ ನಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಯಲ್ಲಿ ಪ್ರವೇಶ ಪಡೆಯಲು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಾರೆ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಹಾಸಿಗೆಗಳು ಖಾಲಿ ಇವೆ …”

“ಮೂಲಸೌಕರ್ಯ ಇರಬೇಕು, ಹಾಸಿಗೆಗಳು ಇರಬೇಕು, ರೋಗಿಗಳನ್ನು ನೋಡಿಕೊಳ್ಳುತ್ತಿಲ್ಲ, ಇದು ಶೋಚನೀಯ ಸ್ಥಿತಿ” ಎಂದು ನ್ಯಾಯಮೂರ್ತಿ ಷಾ ಹೇಳಿದರು.

ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯಗಳಿಂದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ, ಮೃತದೇಹಗಳನ್ನು ನಿರ್ವಹಿಸುವ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರತಿಕ್ರಿಯೆಗಳನ್ನು ಕೋರಿತು.

ಕೊರೊನಾ ರೋಗಿಗಳು ಮತ್ತು ಸೋಂಕಿತ ವ್ಯಕ್ತಿಗಳ ಮೃತ ದೇಹಗಳ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಜೂನ್ 17 ರೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್  ಕೇಂದ್ರ ಸರ್ಕಾರವನ್ನು ಕೋರಿದೆ.


ಓದಿ: ಜುಲೈ 31 ರೊಳಗೆ ದೆಹಲಿಯಲ್ಲಿ 5.5 ಲಕ್ಷ ಜನರಿಗೆ ಕೊರೊನಾ ಸೋಂಕು!


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...