ನ್ಯಾಯಾಂಗಕ್ಕೆ ಅವಹೇಳನಕಾರಿ ಎಂದು ಪರಿಗಣಿಸಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಅನಿರ್ದಿಷ್ಟ ಟ್ವೀಟ್‌ಗಳಿಗಾಗಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಪ್ರಾರಂಭಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಷಾಂತ್ ಭೂಷಣ್ ಅವಹೇಳನಕಾರಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದರಿಂದ ಟ್ವಿಟರ್ ಇಂಡಿಯಾ ವಿರುದ್ಧ ಸಹ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಪ್ರಾರಂಭಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ವಿಷಯವನ್ನು ಬುಧವಾರ ವಿಚಾರಣೆ ನಡೆಸಲಿದೆ.
ಪ್ರಶಾಂತ್ ಭೂಷಣ್ ನ್ಯಾಯಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬಹಳ ಹಿಂದಿನಿಂದಲೂ ಧ್ವನಿ ಎತ್ತುತ್ತಿದ್ದಾರೆ. ಇತ್ತೀಚೆಗೆ ಕೊರೊನಾ ಸಾಂಕ್ರಾಮಿಕದ ಮಧ್ಯೆ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳನ್ನು ಸರ್ವೋಚ್ಚ ನ್ಯಾಯಾಲಯವು ನಿಭಾಯಿಸಿದ ರೀತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿ ಧ್ವನಿ ಎತ್ತಿದ್ದರು.
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ ವರವಾರ ರಾವ್ ಮತ್ತು ಸುಧಾ ಭಾರದ್ವಾಜ್ ಅವರಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಸಹ ಅವರು ನೀಡಿದ್ದರು.
ಕಳೆದ ಒಂದು ದಶಕದಲ್ಲಿ, 2 ಜಿ ಹಗರಣದಿಂದ ಹಿಡಿದು, ರಫೇಲ್, ವೈದ್ಯಕೀಯ ಕಾಲೇಜು ಹಗರಣ ಮತ್ತು ಬಿರ್ಲಾ-ಸಹಾರಾ ಡೈರಿಗಳವರೆಗೆ ಉನ್ನತ ವ್ಯಕ್ತಿಗಳ ಭ್ರಷ್ಟಾಚಾರದ ಕುರಿತು ಹಲವಾರು ಸಮಸ್ಯೆಗಳನ್ನು ಎತ್ತಿತೋರಿಸಿ ಪ್ರಶ್ನಿಸುವಲ್ಲಿ ಪ್ರಶಾಂತ್ ಭೂಷಣ್ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಈಗ ಭೂಷಣ್ ಅವರ ಯಾವ ಟ್ವೀಟ್‌ಗಳ ಕುರಿತು ವಿಚಾರಣೆಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟವಾಗಿಲ್ಲ.
ಮುಖ್ಯ ನ್ಯಾಯಮೂರ್ತಿಗಳಾಗಿರುವ ಎಸ್. ಎ. ಬಾಬ್ಡೆ, ರಂಜನ್ ಗೊಗೊಯ್, ದೀಪಕ್ ಮಿಶ್ರಾ ಮತ್ತು ಜೆ. ಎಸ್. ಖೇಹರ್ ಸೇರಿ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ಇದೆ ಪ್ರಜಾಪ್ರಭುತ್ವ ನಾಶದಲ್ಲಿದೆ ಎಂದು ಹೇಳಿದ್ದರ ಕುರಿತು, ಸುಪ್ರೀಂ ಕೋರ್ಟ್ ಪಾತ್ರವನ್ನು ಟೀಕಿಸಿ ಭೂಷಣ್ ಅವರು ಟ್ವೀಟ್ ಮಾಡಿದ್ದರು.
When historians in future look back at the last 6 years to see how democracy has been destroyed in India even without a formal Emergency, they will particularly mark the role of the Supreme Court in this destruction, & more particularly the role of the last 4 CJIs
— Prashant Bhushan (@pbhushan1) June 27, 2020
ಮುಖ್ಯನ್ಯಾಯಮೂರ್ತಿ ಹೆಲ್ಮೆಟ್ ಮತ್ತು ಮಾಸ್ಕ್ ಇಲ್ಲದೇ ಬಿಜೆಪಿ ನಾಯಕರೊಬ್ಬರ ಹಾಡ್ಲಿ ಡೇವಿಡ್ಸನ್ ಗಾಡಿಯಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು.
CJI rides a 50 Lakh motorcycle belonging to a BJP leader at Raj Bhavan Nagpur, without a mask or helmet, at a time when he keeps the SC in Lockdown mode denying citizens their fundamental right to access Justice! pic.twitter.com/PwKOS22iMz
— Prashant Bhushan (@pbhushan1) June 29, 2020
ಆದಾಗ್ಯೂ, ಹೆಚ್ಚಿನ ಕಾನೂನು ತಜ್ಞರು ಈ ಟ್ವೀಟ್‌ಗಳು ಪದಗಳನ್ನು ಔಪಚಾರಿಕವಾಗಿ ಅರ್ಥೈಸಿಕೊಳ್ಳುವುದರಿಂದ ನ್ಯಾಯಾಲಯದ ನಿಂದನೆಗೆ ಕಾರಣವಾಗುವುದಿಲ್ಲ ಎಂದಿದ್ದಾರೆ.
ಗೌತಮ್ ಭಾಟಿಯಾ ಹೀಗೆ ಟ್ವೀಟ್ ಮಾಡಿದ್ದಾರೆ;
Seen the so-called "petition" on the basis of which the SC has allegedly initiated contempt proceedings against Prashant Bhushan. There is no point in dignifying it with a substantive response. The top court is embarrassing itself, and there is nothing more to say.
— Gautam Bhatia (@gautambhatia88) July 21, 2020
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸಿ ಹಾಕಿ ಫ್ಯಾಸಿಸಂ ತರಲಾಗಿದೆ : ಪ್ರಶಾಂತ್ ಭೂಷಣ್ ಭಾಷಣದ ಬರಹ ರೂಪ


