Homeಮುಖಪುಟವರವರ ರಾವ್ ಅನಾರೋಗ್ಯದ ಸ್ಥಿತಿಯನ್ನು ದುರುಪಯೋಗ ಮಾಡುತ್ತಿದ್ದಾರೆ; ಅವರಿಗೆ ಜಾಮಿನು ನೀಡಕೂಡದು: NIA

ವರವರ ರಾವ್ ಅನಾರೋಗ್ಯದ ಸ್ಥಿತಿಯನ್ನು ದುರುಪಯೋಗ ಮಾಡುತ್ತಿದ್ದಾರೆ; ಅವರಿಗೆ ಜಾಮಿನು ನೀಡಕೂಡದು: NIA

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)" ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆಯುವ ಅಗತ್ಯವಿಲ್ಲ" ಎಂದು ಹೇಳಿದೆ.

- Advertisement -
- Advertisement -

ಕವಿ ಮತ್ತು ರಾಜಕೀಯ ಚಿಂತಕ ವರವಾರ ರಾವ್ ಅವರಿಗೆ 79 ವರ್ಷ ವಯಸ್ಸಾಗಿದ್ದು, ನ್ಯೂರೋಲಾಜಿಕಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ನ್ರೂರೋಲಾಜಿಕಲ್ ಸಮಸ್ಯೆಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ವೈದ್ಯರು ಸೂಚಿಸಿದ್ದಾರೆ. ಮೇ ತಿಂಗಳಲ್ಲಿ ಆರೋಗ್ಯ ಹದಗೆಟ್ಟ ನಂತರ ಅವರನ್ನು ಸರ್ಕಾರಿ ಜೆಜೆ ಆಸ್ಪತ್ರೆಗೆ ಸಾಗಿಸಬೇಕಾಯಿತು.

ಅಂದಿನಿಂದ, ಅವರು ಜೈಲು ಆಸ್ಪತ್ರೆಯಿಂದ ಜೆಜೆ ಸೇಂಟ್ ಜಾರ್ಜ್ ಮತ್ತು ಈಗ ಖಾಸಗಿ ನಾನಾವತಿ ಆಸ್ಪತ್ರೆಗೆ ತೆರಳಿದ್ದಾರೆ.

ಈ ಎಲ್ಲದರ ಹೊರತಾಗಿಯೂ, ಕಳೆದ ವಾರ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)” ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಪಡೆಯುವ ಅಗತ್ಯವಿಲ್ಲ” ಎಂದು ಹೇಳಿದೆ.

ರಾವ್ ಅವರನ್ನು ವಕೀಲರಾದ ಸುದೀಪ್ ಪಾಸ್ಬೋಲಾ ಮತ್ತು ಆರ್. ಸತ್ಯನಾರಾಯಣನ್ ಪ್ರತಿನಿಧಿಸುತ್ತಿದ್ದಾರೆ. ಇತ್ತೀಚಿನ ಜಾಮೀನು ಅರ್ಜಿಯನ್ನು ಅವರ ಅನಾರೋಗ್ಯದ ಆಧಾರದ ಮೇಲೆ ಹಾಕಲಾಗಿದೆ.

ಬಾಂಬೆ ಹೈಕೋರ್ಟ್‌ಗೆ ತನಿಖಾ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಖಲೇಟ್ ಸಲ್ಲಿಸಿದ 172 ಪುಟಗಳ ಅಫಿಡವಿಟ್‌ನಲ್ಲಿ, ಹಿರಿಯ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯದಿಂದ ಜಾಮೀನು ಕೋರಿ ಪರಿಸ್ಥಿತಿಯ ಅನಗತ್ಯ ಲಾಭ ಪಡೆಯುತ್ತಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮಹಾರಾಷ್ಟ್ರದ ಎಲ್ಗರ್ ಪರಿಷತ್-ಕೊರೆಗಾಂವ್ ಭೀಮಾ ಹಿಂಸಾಚಾರ ಪ್ರಕರಣದಲ್ಲಿ ಪಾತ್ರವಹಿಸಿದ್ದಾರೆಂದು ಆರೋಪಿಸಿ ರಾವ್ ಅವರನ್ನು ಜೂನ್ 2018 ರಲ್ಲಿ ಬಂಧಿಸಿದಾಗಿನಿಂದ ಜೈಲಿನಲ್ಲಿದ್ದಾರೆ.

ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ಜೈಲಿನಲ್ಲಿ ಅವರ ಆರೋಗ್ಯವು ತೀವ್ರವಾಗಿ ಹದಗೆಟ್ಟಿದೆ ಎಂದು ರಾವ್ ಅವರ ಕುಟುಂಬ ಮತ್ತು ಅವರ ವಕೀಲರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಎರಡು ಬಾರಿ ಅವರೊಂದಿಗೆ ಮಾತನಾಡಿದ್ದ ಅವರ ಪತ್ನಿ ಹೇಮಲತಾ, ಅವರ ಮಾತು ಸ್ಥಿಮಿತತೆಯನ್ನು ಕಳೆದುಕೊಂಡಿದೆ. ಕುಟುಂಬ ಸದಸ್ಯರನ್ನು ಗುರುತಿಸುತ್ತಿಲ್ಲ ಎಂದು ಹೇಳಿದ್ದಾರೆ.

ರಾವ್ ಜೈಲಿನಲ್ಲಿದ್ದರೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತದೆ ಎಂದು ಅವರ ಕುಟುಂಬ ಆತಂಕ ವ್ಯಕ್ತಪಡಿಸಿದೆ.

ರಾವ್ ಅವರ ಕುಟುಂಬವು ಕಳೆದ ವಾರ ಅವರನ್ನು ಜೆಜೆ ಆಸ್ಪತ್ರೆಯಲ್ಲಿ ಭೇಟಿ ಮಾಡಿದಾಗ ಅವರು ಯಾವುದೇ ಸರಿಯಾದ ವೈದ್ಯಕೀಯ ಆರೈಕೆಯಿಲ್ಲದೆ, ಮಣ್ಣಾದ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡು ಅದರ ಕುರಿತು ದುಃಖ ತೋಡಿಕೊಂಡಿದ್ದರು.

ಆದರೆ ಎನ್‌ಐಎ, ಇವೆಲ್ಲವೂ ಸ್ವತಃ ಜಾಮೀನು ಪಡೆಯಲು ಆರೋಗ್ಯ ಸ್ಥಿತಿಯ ದುರುಪಯೋಗವಾಗಿದೆ ಎಂದು ಹೇಳಿದೆ.

ಜೈಲಿನಲ್ಲಿ ಅತಿ ಹೆಚ್ಚು ಜನಸಂದಣಿಯನ್ನು ಹೊಂದಿರುವ ಮಹಾರಾಷ್ಟ್ರವು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಇಲ್ಲಿಯವರೆಗೆ, ಅಲ್ಲಿ 500 ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಯುಎಪಿಎ, ಎಂಸಿಒಸಿಎ, ಪಿಎಂಎಲ್‌ಎ, ಎಂಪಿಐಡಿ, ಎನ್‌ಡಿಪಿಎಸ್ ಮುಂತಾದ ವಿಶೇಷ ಕಾನೂನುಗಳ ಅಡಿಯಲ್ಲಿ ಕೆಲವರಿಗೆ ಸಮಿತಿ ವಿನಾಯಿತಿ ನೀಡಿದೆ (ಇದು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಅಡಿಯಲ್ಲಿರುವವರಿಗೆ ಹೆಚ್ಚುವರಿಯಾಗಿ ಜಾಮೀನಿನ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಒದಗಿಸುತ್ತದೆ).

ವರವರ ರಾವ್ ಮತ್ತು ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿರುವ ಹಲವರು ವಿಶೇಷ ಕಾನೂನಿನ ಸಮಿತಿಯ ನಿಗದಿತ ವಿನಾಯಿತಿಯಡಿಯಲ್ಲಿ ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ಕಾಶ್ಮೀರ, ಅಸ್ಸಾಂನ ಎರಡು ಜೈಲುಗಳಲ್ಲಿ ಅರ್ಧದಷ್ಟು ಖೈದಿಗಳಿಗೆ ಕೊರೊನಾ ಸೋಂಕು!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...