Homeಕರ್ನಾಟಕಪುಸ್ತಕ ಮುದ್ರಣಕ್ಕೆ 'ಹಣ' ಕೊಟ್ಟಿದ್ದು ಯೂನಿವರ್ಸಿಟಿ, 'ಐಎಸ್‌ಬಿಎನ್‌' ಹೊರಗಿನವರದ್ದು; ಕಾಸರಗೋಡು ಕೇಂದ್ರೀಯ 'ವಿವಿ'ಯಲ್ಲಿ ಅಧಿಕಾರ ದುರುಪಯೋಗ?

ಪುಸ್ತಕ ಮುದ್ರಣಕ್ಕೆ ‘ಹಣ’ ಕೊಟ್ಟಿದ್ದು ಯೂನಿವರ್ಸಿಟಿ, ‘ಐಎಸ್‌ಬಿಎನ್‌’ ಹೊರಗಿನವರದ್ದು; ಕಾಸರಗೋಡು ಕೇಂದ್ರೀಯ ‘ವಿವಿ’ಯಲ್ಲಿ ಅಧಿಕಾರ ದುರುಪಯೋಗ?

- Advertisement -
- Advertisement -

ಪುಸ್ತಕ ಮುದ್ರಣಕ್ಕೆ ವಿಶ್ವವಿದ್ಯಾಲಯ ಹಣ ಕೊಟ್ಟಿದ್ದು, ‘ಐಎಸ್‌ಬಿಎನ್‌’ ನಂಬರ್ ಮಾತ್ರ ಸಂಸ್ಥೆಗೆ ಸಂಬಂಧ ಇಲ್ಲದವರದ್ದನ್ನು ಬಳಸಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಪುಸ್ತಕ ಮುದ್ರಣದ ಹೊಣೆ ಹೊತ್ತಿದ್ದ ಕೇರಳದ ಕಾಸರಗೋಡಿನ ಕೇಂದ್ರೀಯ ವಿಶ್ವ ವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸೌಮ್ಯಾ ಹೇರಿಕುದ್ರು ಅವರ ಮೇಲೆ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ.

ಪುಸ್ತಕ ಮುದ್ರಣದಲ್ಲಿ ಭೌತಿಕ ಮತ್ತು ಡಿಜಿಟಲ್ ರೂಪಗಳಲ್ಲಿರಬಹುದಾದ ಪುಸ್ತಕಗಳನ್ನು ಗುರುತಿಸುವಲ್ಲಿ, ಪ್ರಮಾಣೀಕರಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುವ ಐ.ಎಸ್.ಬಿ.ಎನ್ ಅನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದಿದೆ.

ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಮೈಸೂರಿನ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ 21 ಮತ್ತು 22 ಫೆಬ್ರವರಿ, 2024ರಂದು, ‘ಪ್ರಾಚೀನ ಕನ್ನಡ ಸಾಹಿತ್ಯ: ಓದಿನ ಕ್ರಮಗಳು’ ಎನ್ನುವ ಶೀರ್ಷಿಕೆಯಡಿ ಎರಡು ದಿನಗಳ ಅಂತಾರಾಷ್ಟೀಯ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಸೆಮಿನಾರ್ ಮುಗಿದ ಬಳಿಕ ಅಲ್ಲಿ ಮಂಡಿಸಿದ ವಿಚಾರಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣ ಮಾಡಲಾಗಿದೆ. ಮುದ್ರಣಕ್ಕೆ ಯೂನಿವರ್ಸಿಟಿ ಆಡಳಿತ ಮಂಡಳಿ 30 ಸಾವಿರ ರೂಪಾಯಿ ಹಣ ನೀಡಿದ್ದು, ಕೇರಳ ವಿವಿಯ ಕನ್ನಡ ವಿಭಾಗ ಪ್ರಕಟಿಸಿರುವ ಪುಸ್ತಕದ ಬಾರ್ ಕೋಡ್ ಸೌಮ್ಯ ಅವರ ಪತಿ ಪ್ರದೀಪ್ ಕುಮಾರ್ ಶೆಟ್ಟಿಯವರ ಹೆಸರಿನಲ್ಲಿದೆ. ಇದು ಅಧಿಕಾರ ಹಾಗೂ ಯೂನಿವರ್ಸಿಟಿ ಹಣದ ದುರುಪಯೋಗ ಎಂದು ಕೆಲವರು ಆರೋಪ ಮಾಡಿದ್ದಾರೆ.

ಇಂಟರ್ನ್ಯಾಶನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್ (ISBN) ಅನ್ನು ಭಾರತ ಸರಕಾರದ ಅಧೀನದಲ್ಲಿ ಬರುವ ನವದೆಹಲಿಯ ರಾಜಾರಾಮ ಮೋಹನ್ ರಾಯ್ ನ್ಯಾಶನಲ್ ಏಜೆನ್ಸಿ ಪುಸ್ತಕ ಪ್ರಕಾಶಕರಿಗೆ ನೀಡುತ್ತದೆ. ಪುಸ್ತಕಗಳನ್ನು ವರ್ಗೀಕರಿಸುವಲ್ಲಿ, ಗುರುತಿಸುವಲ್ಲಿ, ಅದರ ಪ್ರಕಾಶಕರನ್ನು ನಿರ್ಧರಿಸುವಲ್ಲಿ ಈ ಬಾರ್ ಕೋಡ್ ಬಹಳ ಮುಖ್ಯವಾಗಿದೆ.

ಈ ಬಗ್ಗೆ ‘ನಾನುಗೌರಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಕೇಂದ್ರೀಯ ವಿಶ್ವ ವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸೌಮ್ಯಾ ಹೇರಿಕುದ್ರು, ಪುಸ್ತಕ ಮುದ್ರಣಕ್ಕೆ ವಿವಿ ‘ಹಣ’ ಕೊಟ್ಟಿದ್ದು ನಿಜ. ಆದರೆ, ಪುಸ್ತಕವನ್ನು ಮಾರಾಟ ಮಾಡಲಾಗುವುದಿಲ್ಲ. ಉಚಿತವಾಗಿ ವಿತರಣೆ ಮಾಡುತ್ತೇವೆ;  ಐಎಸ್‌ಬಿಎನ್‌ ಸಂಖ್ಯೆಯ ಯಾವುದನ್ನಾದರೂ ಬಳಸಬಹುದು ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

“ಪುಸ್ತಕ ಮುದ್ರಣಕ್ಕೆ ವಿಶ್ವವಿದ್ಯಾಲಯದ ಹಣ ಬಳಸಿರುವುದು ನಿಜ.. ‘ಪ್ರಾಚೀನ ಕನ್ನಡ ಸಾಹಿತ್ಯ: ಓದಿನ ಕ್ರಮಗಳು’ ಎನ್ನುವ ಶೀರ್ಷಿಕೆಯಡಿ ಅಂತಾರಾಷ್ಟೀಯ ವಿಚಾರ ಸಂಕಿರಣ ನಡೆದಿದೆ. ಅದನ್ನು ಪುಸ್ತಕ ರೂಪದಲ್ಲಿ ತರುವುದಕ್ಕೆ ಆಡಳಿತ ಮಂಡಳಿ ಹಣ ನೀಡಿದೆ. ಈ ಪುಸ್ತಕವನ್ನು ನಾವು ಮಾರಾಟ ಮಾಡುವುದಿಲ್ಲ, ಪುಸ್ತಕಗಳನ್ನು ಉಚಿತ ಪ್ರತಿಯಾಗಿ ನೀಡಬಹುದು. ಅಂಗಡಿಗಳಲ್ಲಿ ಮಾರಾಟ ಮಾಡುವಂತಿಲ್ಲ. ಇದಕ್ಕೆ, ‘ಐಎಸ್‌ಬಿಎನ್‌’ ಹಾಕಿಯೇ ಮುದ್ರಣ ಮಾಡಬೇಕು ಎಂದಿರಲಿಲ್ಲ. ಆದರೆ, ವಿಭಾಗದ ಪ್ರತಿಷ್ಠೆಗಾಗಿ ಇದನ್ನು ಹೊರಗಿನ ಪ್ರಕಾಶಕರಿಗೂ ಕೊಡಬಹುದು. ಖಾಸಗಿಯವರ ಐಎಸ್‌ಬಿಎನ್‌ ನಂಬರ್ ಪಡೆದು ಬಳಸಿಕೊಳ್ಳಬಹುದು” ಎಂದು ಹೇಳಿದರು.

“ಕೇಂದ್ರೀಯ ವಿಶ್ವವಿದ್ಯಾಲಯದ ಸಂಬಂಧಪಟ್ಟವರಿಂದ ಅನುಮತಿ ಪಡೆದ ಪುಸ್ತಕ ಮುದ್ರಣ ಮಾಡಿದ್ದೇವೆ, ನಮ್ಮ ಗ್ರಂಥಾಲಯ ವಿಭಾಗ ಕೆಲವೊಮ್ಮೆ ನಮಗೆ ಐಎಸ್‌ಬಿನ್‌ ನಂಬರ್ ಕೊಡುತ್ತದೆ, ಒಂದು ವೇಳೆ ಖಾಲಿ ಆಗಿದ್ದರೆ ನಾವು ಬೇರೆಯವರಿಂದ ಪಡೆದುಕೊಳ್ಳಬಹುದು. ಇದು ಮಾರಾಟ ಮಾಡುವಂತಹ ಪುಸ್ತಕ ಅಲ್ಲ” ಎಂದರು.

ನಿಮ್ಮದೇ (ಪತಿ ಒಡೆತನದ) ಪ್ರಕಾಶನದ ಐಎಸ್‌ಬಿಎನ್‌ ನಂಬರ್ ಬಳಸಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಪ್ರಕಾಶನದ ಐಎಸ್‌ಬಿಎನ್‌ ಬಳಸಿಕೊಂಡು ಅದರಿಂದ ನಾನು ಲಾಭ ಮಾಡುತ್ತಿಲ್ಲ. ಅದನ್ನು ಮಾರಾಟ ಮಾಡುವುದಾಗಲಿ ಅಥವಾ ದುರ್ಬಳಕೆ ಮಾಡಿಕೊಂಡಿಲ್ಲ. ಪುಸ್ತಕಕ್ಕೆ ಮಸಿ ಬಳಿಯುವ ಕೆಲಸವನ್ನೂ ಮಾಡಿಲ್ಲ. ವಿಚಾರ ಸಂಕಿರಣ ಈಗಾಗಲೇ ನಡೆದುಹೋಗಿದೆ, ಅಲ್ಲಿ ಬಂದು ಮೌಖಿಕವಾಗಿ ಮಾತನಾಡಿರುವ ವಿಷಯಗಳು ಹಾಗೇ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಸಂಪೂನ್ಮೂಲ ವ್ಯಕ್ತಿಗಳ ಭಾಷಣಗಳನ್ನು ದಾಖಲಿಸಲಾಗಿದೆ. ಮುದ್ರಣ ಮಾಡಲೇಬೇಕು ಎಂಬ ಒತ್ತಡವೂ ನಮಗೆ ಇರಲಿಲ್ಲ. ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗ ಆಗಲಿ ಎಂಬ ಕಾರಣಕ್ಕೆ ನಾನೇ ಮುತುವರ್ಜಿ ವಹಿಸಿ ಪುಸ್ತಕ ಮುದ್ರಿಸಲು ನಿರ್ಧರಿಸಿದೆ” ಎಂದು ವಿವರಿಸಿದರು.

“ವಿಭಾಗದ ಪ್ರಚಾರಕ್ಕಾಗಿ ನಾವು ಪುಸ್ತಕ ಮುದ್ರಣ ಮಾಡಿದ್ದೇವೆ, ಯಾರೋ ತಲೆಕೆಟ್ಟವರು ಹೇಳಿದ್ದಕ್ಕೆ ನೀವು ಸಣ್ಣಪುಟ್ಟ ವಿಚಾರಗಳಿಗೆ ಕರೆ ಮಾಡಬಾರದು. ಅದಕ್ಕೆ ನನಗೆ ಸಮಯ ಇಲ್ಲ” ಎಂದು ಅವರು ಹೇಳಿದರು.

ಪುಸ್ತಕ ಮುದ್ರಣದ ಬಗ್ಗೆ ಇರುವ ಕೆಲ ಗೊಂದಲಗಳಿಗೆ ಅವರಿಂದ ಸ್ಪಷ್ಟನೆ ಪಡೆದುಕೊಳ್ಳಲು ಯತ್ನಿಸಲಾಗಿದ್ದು, ಈ ಬಗ್ಗೆ ಡಾ. ಸೌಮ್ಯಾ ಹೇರಿಕುದ್ರು ಅವರನ್ನು ನೇರವಾಗಿ ಪ್ರಶ್ನಿಸಲಾಯಿತು.

ನಾನುಗೌರಿ ಪ್ರಶ್ನೆ: ಈ ಪುಸ್ತಕ ಮುದ್ರಣಕ್ಕೆ ಹಣ ಕೊಟ್ಟಿರುವುದು ವಿಶ್ವವಿದ್ಯಾಲಯ ಅಲ್ಲವೇ?

ಡಾ.ಸೌಮ್ಯ: ಹೌದು

ನಾನುಗೌರಿ ಪ್ರಶ್ನೆ: ಪುಸ್ತಕದಲ್ಲಿರುವ ಐಎಸ್‌ಬಿಎನ್‌ ನಂಬರ್ ವಿವಿಗೆ ಸಂಬಂಧಪಟ್ಟವರದ್ದಲ್ಲ ಅಲ್ಲವೇ?

ಡಾ.ಸೌಮ್ಯ: ಗಂಡ ಅಥವಾ ಯಾರಾದರೂ ಐಎಸ್‌ಬಿಎನ್‌ ನಂಬರ್ ಕೊಡಬಹುದು , ನಾನೇ ಬಳಸಿದ್ದೇನೆ.

ಹೊರಗಿನವರ ಐಎಸ್‌ಬಿಎನ್‌ ನಂಬರ್ ಬಳಿಸಿದರೂ ಪ್ರಶ್ನಿಸದ ವಿವಿ?

ಕೇರಳ ಕೇಂದ್ರೀಯ ವಿವಿಯಲ್ಲಿ ಹೀಗೆ ವಿಭಾಗದ ಮುಖ್ಯಸ್ಥರ ಕುಟುಂಬದವರು ನಡೆಸುವ ಪ್ರಕಾಶನ ಸಂಸ್ಥೆಗೆ 30ಸಾವಿರ ಹಣ ನೀಡಿ, ವಿವಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಸಂಪ್ರದಾಯವಿದೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಸಂಸ್ಥೆಯ ಮುಖ್ಯಸ್ಥರ ಮೌನದ ಬಗ್ಗೆಯೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈ ನಕಲಿ ಐಎಸ್‌ಬಿಎನ್‌ ನಂಬರಿನ ಪುಸ್ತಕದ ಪ್ರಕಟಣೆಯ ಬಗ್ಗೆ ಕನ್ನಡ ವಿಭಾಗದ ಇತರ ಪ್ರಾಧ್ಯಾಪಕರು, ಲೇಖನ ಆಯ್ಕೆ ಮತ್ತು ಪುಸ್ತಕ ಸಂಪಾದನಾ ಮಂಡಳಿ ಸದಸ್ಯರು, ವಿವಿಯ ಅಕಾಡೆಮಿಕ್ ಇಲಾಖೆ ಸಹ ಮೌನವಾಗಿದೆ. ಐಎಸ್‌ಬಿಎನ್‌ ನಕಲಿ ಆಗಿರುವ ಕಾರಣ ಈ ಪುಸ್ತಕದಲ್ಲಿ ಪ್ರಕಟಗೊಂಡ ಲೇಖನಗಳಿಗೆ ಅಕಾಡೆಮಿಕ್ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಗೊಂದಲ ಪ್ರಬಂಧ ಮಂಡಿಸಿದವರಲ್ಲಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಹಣ ಖರ್ಚು ಮಾಡಿಕೊಂಡು ಬಂದು, ಶ್ರಮ ವಹಿಸಿ ಲೇಖನ ಮಂಡಿಸಿದ ಸಂಶೋಧಕರು ಈಗ ನಕಲಿ ಐಎಸ್‌ಬಿಎನ್‌ ಸುಳಿಗೆ ಸಿಲುಕಿದ್ದಾರೆ.

ವಿಚಾರ ಸಂಕಿರಣದ ಸಂಯೋಜಕರೂ ಆಗಿದ್ದ ಸೌಮ್ಯ ಅವರು ವಿಭಾಗದ ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು ಮಂಡಿಸಿದ ಯಾವುದೇ ಪ್ರಬಂಧಗಳನ್ನು ಪುಸ್ತಕದಲ್ಲಿ ಪ್ರಕಟಿಸದೆ, ಸೆಮಿನಾರ್‌ನಲ್ಲಿ ಪ್ರಬಂಧ ಮಂಡಿಸಿದ್ದ ತಮ್ಮ ಸ್ವಜಾತಿಯವರೊಬ್ಬರಿಗೆ ‘ಉತ್ತಮ ಪ್ರಬಂಧ’ವೆಂಬ ಬಹುಮಾನವನ್ನು ನೀಡಿ, ಆ ಲೇಖನ ಪುಸ್ತಕದಲ್ಲಿ ಪ್ರಕಟವಾಗುವಂತೆ, ಅದರ ಕೆಲವು ಸಾಲುಗಳು ಪುಸ್ತಕದ ಹಿಂಪುಟದಲ್ಲಿ ಅಚ್ಚಾಗುವಂತೆಯೂ ನೋಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಐಎಸ್‌ಬಿಎನ್‌ ನಿಯಮಗಳು ಹೇಳುವುದೇನು?

ಅಂತರರಾಷ್ಟ್ರೀಯ ಪ್ರಮಾಣಿತ ಪುಸ್ತಕ ಸಂಖ್ಯೆ (ಐಎಸ್‌ಬಿಎನ್‌) ಅನ್ನು ಪ್ರಾಥಮಿಕವಾಗಿ ಪುಸ್ತಕದ ಪ್ರಕಾಶಕರಿಗೆ ನಿಗದಿಪಡಿಸಲಾಗುತ್ತದೆ. ಅದು ನಿರ್ದಿಷ್ಟ ಪ್ರಕಟಣೆಯನ್ನು ಮಾತ್ರವಲ್ಲದೆ ಆ ಪ್ರಕಟಣೆಯ ಪ್ರಕಾಶಕರನ್ನು ಸಹ ಗುರುತಿಸುತ್ತದೆ. ಸಾಮಾನ್ಯವಾಗಿ, ಐಎಸ್‌ಬಿಎನ್‌ಗಳನ್ನು ಪ್ರಕಾಶಕರು ಅಥವಾ ಘಟಕಗಳ ನಡುವೆ ವರ್ಗಾಯಿಸಲಾಗುವುದಿಲ್ಲ. ಪುಸ್ತಕದ ಪ್ರಕಾಶಕರು ಬದಲಾದರೆ, ಹೊಸ ಪ್ರಕಾಶಕರು ತಮ್ಮದೇ ಆದ ಐಎಸ್‌ಬಿಎನ್‌ ಅನ್ನು ಪ್ರಕಟಣೆಗೆ ಪಡೆದುಕೊಳ್ಳಬೇಕು.

ಪ್ರಕಾಶಕರನ್ನು ಐಎಸ್‌ಬಿಎನ್‌ನ ಮಾಲೀಕರೆಂದು ಪರಿಗಣಿಸಲಾಗುತ್ತದೆ, ಅದರ ನಿಯೋಜನೆ ಮತ್ತು ಬಳಕೆಗೆ ಜವಾಬ್ದಾರರಾಗಿರುತ್ತಾರೆ. ಇದು ಪ್ರಕಟಣೆಯ ಹಣಕಾಸಿನ ಜವಾಬ್ದಾರಿಯನ್ನು ಒಳಗೊಂಡಿದೆ.

ಐಎಸ್‌ಬಿಎನ್‌ ನಿರ್ದಿಷ್ಟ ಪುಸ್ತಕಕ್ಕೆ ಅದರ ಸ್ವರೂಪ, ಆವೃತ್ತಿ ಮತ್ತು ಪ್ರಕಾಶಕರನ್ನು ಒಳಗೊಂಡಂತೆ ವಿಶಿಷ್ಟ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪುಸ್ತಕದ ವಿಷಯ, ಸ್ವರೂಪ, ಬೈಂಡಿಂಗ್ ಅಥವಾ ಪ್ರಕಾಶಕರಲ್ಲಿನ ಬದಲಾವಣೆಗಳಿಗೆ ಹೊಸ ಐಎಸ್‌ಬಿಎನ್‌ ಅಗತ್ಯವಿದೆ. ಒಮ್ಮೆ ಐಎಸ್‌ಬಿಎನ್‌ ಅನ್ನು ನಿಯೋಜಿಸಿದ ನಂತರ, ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.

ಐಎಸ್‌ಬಿಎನ್‌ ಏಜೆನ್ಸಿಯಲ್ಲಿ ನೋಂದಾಯಿಸಲಾದ ಪ್ರಕಾಶಕರ ಹೆಸರನ್ನು ಪುಸ್ತಕದ ವಿವರಗಳು ಮತ್ತು ಮುದ್ರೆಯಲ್ಲಿ ನಿಖರವಾಗಿ ಪ್ರತಿಬಿಂಬಿಸಬೇಕು.

ಜಂಟಿ ಪ್ರಕಟಣೆಗಳು: ಜಂಟಿ ಪ್ರಕಟಣೆಗಳ ಸಂದರ್ಭದಲ್ಲಿ, ಎರಡೂ ಪ್ರಕಾಶಕರು ತಮ್ಮ ಐಎಸ್‌ಬಿಎನ್‌ ಗಳನ್ನು ಪುಸ್ತಕದಲ್ಲಿ ಸೇರಿಸಿಕೊಳ್ಳಬಹುದು. ಆದರೆ, ಯಾವ ಐಎಸ್‌ಬಿಎನ್‌ ಯಾವ ಪ್ರಕಾಶಕರಿಗೆ ಸೇರಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸಲು ಶಿಫಾರಸು ಮಾಡಲಾಗಿದೆ.

ಆರ್‌ಎಸ್‌ಎಸ್ ಸಂಬಂಧಿತ ಶಿಕ್ಷಣ ಸಮ್ಮೇಳನವನ್ನು ಟೀಕಿಸಿದ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...