ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾಂತ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್ ಅವರಿಗೆ ಶ್ರೀರಾಮಸೇನೆಯ ಗೂಂಡಾಗಳು ಅಡ್ಡಿಪಡಿಸಿ ಸುಮಾರು ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಒಡೆದು ಹಾಕಿರುವ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ FIR ದಾಖಲಿಸಲಾಗಿದೆ.
ಸಂತ್ರಸ್ತ ನಬಿಸಾಬ್ ಅವರು ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾಧ್ಯಮಗಳೊಂದಗೆ ಮಾತನಾಡಿರುವ ನಬಿಸಾಬ್, “ನನಗೆ ಆ ಹುಡುಗರ ಮೇಲೆ ಯಾವುದೇ ಕೋಪವಿಲ್ಲ. ನನಗೆ ದೂರು ಕೊಡುವುದು ಸಹ ಇಷ್ಟವಿರಲಿಲ್ಲ. ಆದರೆ ಬಹಳಷ್ಟು ಜನ ಮತ್ತು ಪೊಲೀಸರು ಕಂಪ್ಲೇಂಟ್ ಮಾಡಬೇಕು ಅಂದ ಕಾರಣ ದೂರು ನೀಡಿದ್ದೀನಿ. ಆದರೆ ‘ನನ್ನ ಹಣ್ಣು ಹಾಳು ಮಾಡಿದರು’ ಅಂತ ಕಂಪ್ಲೇಂಟ್ ಕೊಟ್ಟಿದ್ದೀನಿ” ಎಂದು ತಿಳಿಸಿದ್ದಾರೆ.
ನಾನು ಮುಂದೆಯೂ ಸಹ ಅದೇ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಸಾಕು. ಅದಕ್ಕೆ ಅವಕಾಶ ಕೊಡದಿದ್ದರೂ ಪರವಾಗಿಲ್ಲ ಆಂಜನೇಯ ಬಾಬಾನ ದರ್ಶನ ಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಗತಿಪರ ಹೋರಾಟಗಾರರಾದ ಬಸವರಾಜ ಸೂಳಿಬಾವಿ, ಪತ್ರಕರ್ತರಾದ ಸಂಗಮೇಶ್ ಮೆಣಸಿನಕಾಯಿ ಮತ್ತು ಮುಸ್ತಫಾ ಕುನ್ನಿಭಾವಿ, ನಾಗರಾಜ ಕಿರಣಗಿ ಸೇರಿದಂತೆ ಹಲವರು ನಬಿಸಾಬ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿ ಧನಸಹಾಯ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಬಡಪಾಯಿ ಮುಸ್ಲಿಮನ ಮೇಲೆ ಶ್ರೀರಾಮಸೇನೆಯ ಗೂಂಡಾಗಿರಿ: ಅನ್ಯಾಯದ ವಿರುದ್ಧ ಮಿಡಿದ ಮನಸ್ಸುಗಳು



ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುವ ಸರ್ಕಾರಿ ಪೋಲೀಸ್ ಬಡವರ ಶ್ರಮಿಕರ ಬದುಕಿಗೆ ಯಾವ ರೀತಿ ಆಶ್ರಯ ಕಲ್ಪಿಸಿದೆ ಎಂದು ಪ್ರಶ್ನೆ ಉಗಮವಾಗುತ್ತದೆ..
ರಕ್ಷಣಾ ಇಲಾಖೆಯ ಕಾರ್ಯ ವೈಖರಿ ತುಂಬಾ ಅಪಮಾನಕಾರಿಯಾಗಿದೆ.
By breaking some watermelons those gundas thought they have achieved a uphill task.