ಗುರುಗಾಂವ್‌ನಲ್ಲಿರುವ ‘ಅರ್ಬನ್ ಕಂಪನಿ’ಯ ಪ್ರಧಾನ ಕಛೇರಿಯ ಮುಂದೆ ಅದರ ಮಹಿಳಾ ಕಾರ್ಮಿಕರು ಕಂಪೆನಿ ಪರಿಚಯಿಸಿರುವ ಹೊಸ ಬದಲಾವಣೆಯನ್ನು ವಿರೋಧಿಸಿ ಸೋಮವಾರದಂದು ಪ್ರತಿಭಟನೆ ನಡೆಸಿದ್ದಾರೆ. ಅರ್ಬನ್ ಕಂಪೆನಿಯು ಮನೆ-ಮನೆಗಳಿಗೆ ತೆರಳಿ ಸೇವೆ ನೀಡುವ ಆಪ್ ಆಧಾರಿತ ಕಂಪನಿಯಾಗಿದೆ. ಈ ಕಂಪನಿಯಲ್ಲಿ ಬ್ಯುಟೀಷಿಯನ್‌ಗಳು, ಮನೆ ಶುಚಿಗೊಳಿಸುವವರು, ಉಪಕರಣಗಳ ದುರಸ್ತಿ ಮಾಡುವವರು, ಪೈಂಟಿಂಗ್ ಸೇರಿದಂತೆ ಹಲವಾರು ಸೇವೆಗಳನ್ನು ನೀಡುವ ತರಬೇತಿ ಪಡೆದ ಕಾರ್ಮಿಕರು ಇರುತ್ತಾರೆ. ಅವರು ಮನೆಗಳಿಗೆ ತೆರಳಿ ತಮ್ಮ ಸೇವೆಯನ್ನು ನೀಡುತ್ತಾರೆ.
ಕಂಪೆನಿಯ ಬ್ಯುಟಿ ವಿಭಾಗದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಕಂಪೆನಿಯು ಅಪ್ಲಿಕೇಶನ್‌ನಲ್ಲಿ ಪ್ರಸ್ತಾಪಿಸಿದ ನೀತಿ ಬದಲಾವಣೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಕಂಪೆನಿ ಮಾಡಿರುವ ಈ ಬದಲಾವಣೆಗಳು ತಮ್ಮ ಗಳಿಕೆ ಮತ್ತು ಗೌರವಯುತ ವೇತನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:ರೈಲ್ವೆ ಹಳಿಗಳ ಮೇಲೆ 2020ರಲ್ಲಿ ಮೃತಪಟ್ಟವರು 8,700 ಮಂದಿ, ಹೆಚ್ಚಿನವರು ವಲಸೆ ಕಾರ್ಮಿಕರು
ಅರ್ಬನ್ ಕಂಪನಿಯ ಪ್ರಸ್ತಾಪಿಸಿದ ನೀತಿ ಬದಲಾವಣೆಯಿಂದ ಮಹಿಳಾ ಕಾರ್ಮಿಕರು ತಮ್ಮ ಕೈಯ್ಯಿಂದಲೇ ಪಾವತಿಸಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ. ಕಂಪೆನಿಯಯು ಹೊಸ ನೀತಿಯನ್ನು ಕೈಬಿಡುವವರೆಗೂ ಪ್ರತಿಭಟನೆಯನ್ನು ವಾಪಾಸುಪಡೆಯುವುದಿಲ್ಲ ಎಂದು ಹೇಳಿದ್ದು, ಕೊರೆಯುವ ಚಳಿಯಿದ್ದರೂ ರಾತ್ರಿ ಪೂರ್ತಿ ಪ್ರತಿಭಟನೆ ನಡೆಸಿದ್ದಾರೆ.
‘ಅಖಿಲ ಭಾರತ ಗಿಗ್ ವರ್ಕರ್ಸ್ ಯೂನಿಯನ್’ ಮುಷ್ಕರ ಹೂಡಿರುವ ಮಹಿಳೆಯರಿಗೆ ಬೆಂಬಲ ವ್ಯಕ್ತಪಡಿಸಿದೆ. ಆಪ್ ಆಧಾರಿತ ಸೇವೆ ನೀಡುವ ಕಾರ್ಮಿಕರನ್ನು ಉದ್ಯೋಗಿಗಳಾಗಿ ವರ್ಗೀಕರಿಸುವ ತಕ್ಷಣದ ಅವಶ್ಯಕತೆಯಿದೆ. ಹೀಗಾಗದರೆ ಅವರು ಕಾನೂನು ಮತ್ತು ಕಂಪೆನಿಯ ಮೂಲಸೌಕರ್ಯದಿಂದ ಪ್ರಯೋಜನ ಪಡೆಯಬಹುದು ಎಂದು ಯೂನಿಯನ್ ಹೇಳಿದೆ.
ಆಪ್ ಆಧಾರಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಂಪನಿಗಳು ಕಾರ್ಮಿಕರು ಎಂಬ ನೆಲೆಯಲ್ಲಿ ನೇಮಿಸುವುದರ ಬದಲಿಗೆ ಕಂಪೆನಿಯ ಪಾಲುದಾರರು ಎಂಬ ನೆಲೆಯಲ್ಲಿ ನೇಮಿಸುತ್ತದೆ. ಇದರಿಂದಾಗಿ ಕಾರ್ಮಿಕರಿಗೆ ಕಾರ್ಮಿಕ ಕಾನೂನಿನ ಲಾಭಗಳು ಲಭ್ಯವಾಗುವುದಿಲ್ಲ.
ಇದನ್ನೂ ಓದಿ:ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು


