Homeಕರೋನಾ ತಲ್ಲಣಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು

ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು

- Advertisement -
- Advertisement -

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನ ನಿತ್ಯ ಉಲ್ಭಣಿಸುತ್ತಲೇ ಇದೆ. ಇದರ ಪರಿಣಾಮವಾಗಿ ಸ್ಮಶಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ನಿತ್ಯ ನೂರಾರು ಕೋವಿಡ್‌‌ ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆಯನ್ನು ನಡೆಸುವದರಲ್ಲಿ ನಿರತರಾಗಿದ್ದಾರೆ. ಕರ್ನಾಟಕ ಸರ್ಕಾರವಾಗಲಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಸ್ಮಶಾನ ಕಾರ್ಮಿಕರ ಸುರಕ್ಷತೆಯ ಬಗ್ಗೆ ಯೋಚನೆಯನ್ನೂ ಮಾಡಿಲ್ಲ.

ಅಖಿಲ ಭಾರತ ಟ್ರೇಡ್ ಯೂನಿಯನ್ ಕೌನ್ಸಿಲ್ (AICCTU) ವರದಿಯು ಹೇಳುವ ಪ್ರಕಾರ ಬಿಬಿಎಂಪಿ ಅಥವಾ ಇತರ ಧಾರ್ಮಿಕ ಸಂಸ್ಥೆಗಳು ನಿರ್ವಹಿಸುವ ಸ್ಮಶಾನಗಳಲ್ಲಿನ ಕಾರ್ಮಿಕರು ಬಿಬಿಎಂಪಿ ಮತ್ತು ಸಂಸ್ಥೆಗಳ ನಿರ್ಲಕ್ಷದ ಫಲವಾಗಿ ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ಮಶಾನ ಕಾರ್ಮಿಕರು ಮತ್ತವರ ಕುಟುಂಬದ ಸದಸ್ಯರು ಪ್ರತಿನಿತ್ಯ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯು ಸ್ಮಶಾನ ಕಾರ್ಮಿಕರನ್ನು ಹೊಸ ಬಗೆಯ ವ್ಯವಸ್ಥೆಯ ಕ್ರೌರ್ಯಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡಿಕೊಳ್ಳಲು ಅನುಮತಿ- ಯಾರು ಬಳಸಬಹುದು ಎಂಬ ಮಾಹಿತಿ ಇಲ್ಲಿದೆ

ಸ್ಮಶಾನ ಮತ್ತು ಚಿತಾಗಾರಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕರು ದಲಿತರೇ ಆಗಿದ್ದಾರೆ. ಹಲವು ತಿಂಗಳುಗಳಿಂದ ವೇತನವಿಲ್ಲದೇ ದುಡಿಯುತ್ತಿದ್ದಾರೆ. ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಕಾರ್ಮಿಕರು ದಿನದಲ್ಲಿ ಸರ್ಕಾರ ನಿಗದಿಪಡಿಸಿದ ಕೆಲಸದ ವೇಳೆಗಿಂತಲೂ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯಲ್ಲಿನ ಕೊರತೆಯಿಂದಾಗಿ ರಜೆಯಿಲ್ಲದೆ ತಿಂಗಳಾನುಗಟ್ಟಲೆ ಕಾರ್ಮಿಕರು ಸ್ಮಶಾನದಲ್ಲಿ ದೇಹಗಳನ್ನು ಘನತೆಯಿಂದ ಮಣ್ಣುಮಾಡುತ್ತಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಇವೆಲ್ಲದರ ನಡುವೆ ಸ್ಮಶಾನ ಕಾರ್ಮಿಕರಿಗೆ ಕನಿಷ್ಟ ಸುರಕ್ಷತೆಗಳನ್ನು ಒದಗಿಸಲೂ ವಿಫಲವಾಗಿದೆ. ಕಾರ್ಮಿಕರಿಗೆ ಕೋವಿಡ್ ಚಿಕಿತ್ಸೆ ಸೇರಿದಂತೆ ನ್ಯಾಯವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನಿರಾಕರಿಸುತ್ತಲೇ ಬಂದಿದೆ.

ಕೊರೊನಾ 2 ನೇ ಅಲೆ ಗ್ರಾಮೀಣ ಭಾರತಕ್ಕೆ; ಪ್ರಕರಣಗಳು ಮತ್ತು ಸಾವುಗಳು ನಾಲ್ಕು ಪಟ್ಟು ಹೆಚ್ಚಳ! | NaanuGauri

ಅಖಿಲ ಭಾರತ ಟ್ರೇಡ್ ಯೂನಿಯನ್ ಕೌನ್ಸಿಲ್ ವರದಿ ಹೇಳುವಂತೆ, ವಿಶ್ವ ಆರೋಗ್ಯ ಸಂಸ್ಥೆ(WHO) ಮತ್ತು ಸರ್ಕಾರದ ಯಾವುದೇ ಮಾರ್ಗಸೂಚಿಗಳನ್ನು ಮತ್ತು ಸುರಕ್ಷತಾ ಕ್ರಮಗಳನ್ನು ಬೆಂಗಳೂರಿನ ಸ್ಮಶಾನಗಳಲ್ಲಿ ಗಾಳಿಗೆ ತೂರಲಾಗಿದೆ. ಸ್ಮಶಾನಗಳು ನಗರದಿಂದ ದೂರ ಇರುವುದರಿಂದ ಮತ್ತು ಜನರು ಕೋವಿಡ್ ಭೀತಿಯಿಂದ ಸ್ಮಶಾನಗಳಿಗೆ ಹೋಗಲು ಹೆದರುತ್ತಿರುವುದರಿಂದ ಸರ್ಕಾರದ ಈ ಅವ್ಯಸ್ಥೆ ಯಾರ ಗಮನಕ್ಕೂ ಬರುತ್ತಿಲ್ಲ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಸಾವಿನ ಶೋಕದಲ್ಲಿ ಮುಳುಗಿರುವ ಪರಿಣಾಮ ಸ್ಮಶಾನಗಳ ಅವ್ಯವಸ್ಥೆ ಮತ್ತು ಕಾರ್ಮಿಕರು ಅನುಭವಿಸುತ್ತಿರುವ ಯಾತನೆಗಳು ಅವರ ಕಣ್ಣಿಗೆ ಬೀಳುತ್ತಿಲ್ಲ.

ಬಿಬಿಎಂಪಿ ಮತ್ತು ಸ್ಮಶಾನಗಳನ್ನು ನಡೆಸುವ ಇತರ ಧಾರ್ಮಿಕ ಸಂಸ್ಥೆಗಳ ಈಗಿನ ಗಮನ ಹೇಗಾದರೂ ಮೃತದೇಹಗಳನ್ನು ವಿಲೇವಾರಿ ಮಾಡುವುದಷ್ಟೆ ಆಗಿದ್ದು ಉಳಿದ ವ್ಯವಸ್ಥೆಯ ಕುರಿತು ಅವರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇತರ ಸಂಘ ಸಂಸ್ಥೆಗಳು ಮತ್ತು ರಾಜಕೀಯ ವ್ಯಕ್ತಿಗಳು ಸ್ಮಶಾನದ ಪ್ರವೇಶದ್ವಾರದಲ್ಲಿ ತಮ್ಮ ದೊಡ್ಡ ಕಟೌಟುಗಳನ್ನು ಹಾಕಿಕೊಂಡು ಅಂತ್ಯಕ್ರಿಯೆ ನಡೆಸುತ್ತಿರುವ ಮೃತರ ಕುಂಟಂಬಗಳಿಗೆ ಉಚಿತ ನೀರು, ಉಪಹಾರ ಕಾಫಿ ತಿಂಡಿಗಳನ್ನು ಕೊಡುವುದಕ್ಕಷ್ಟೇ ಸೀಮಿತವಾಗಿವೆ. ಮೊದಲೇ ನಾಗರಿಕ ಸಮಾಜಕ್ಕೆ ಅಸ್ಪ್ರಶ್ಯವಾಗಿದ್ದ ಸ್ಮಶಾನ ಮತ್ತು ಸ್ಮಶಾನ ಕಾರ್ಮಿಕರು ಕೋವಿಡ್ ಸಾಂಕ್ರಾಮಿಕದ ಭೀತಿಯ ಕಾರಣಗಳಿಂದ ಇಂದು ಸಮಾಜದ ದೃಷ್ಟಿಗೂ ಬೀಳುತ್ತಿಲ್ಲ.

ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?

AICCTU ಸದಸ್ಯರು ಮತ್ತು ಸ್ವಯಂ ಸೇವಕರ ತಂಡ ಮೇ‌ 4 ರಿಂದ ಮೇ 8 ರ ಅವಧಿಯಲ್ಲಿ ಬೆಂಗಳೂರಿನ 26 ಸ್ಮಶಾನಗಳಿಗೆ ಭೇಟಿ ನೀಡಿದೆ. ಈ ವೇಳೆ ಅಲ್ಲಿನ ಕಾರ್ಮಿಕರನ್ನು AICCTU ಮಾತನಾಡಿಸಿದಾಗ ಕಾರ್ಮಿಕರು ನಿತ್ಯ 14 ಗಂಟೆ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ದಿನವಿಡಿ ಸ್ಮಶಾನಗಳಲ್ಲೇ ಕೆಲಸ ನಿರ್ವಹಿಸಿ ರಾತ್ರಿಯ ವೇಳೆ ಮತ್ತೆ ಮೃತದೇಹಗಳು‌ ಬರುವ ಸಾಧ್ಯತೆಗಳಿರುವ ಕಾರಣ ಸ್ಮಶಾನದ ಮೂಲೆಯೊಂದರಲ್ಲಿ ಗೋಣಿಚೀಲವನ್ನು ಹಾಸಿ ಅದರ ಮೇಲೆ ಇವರು ನಿದ್ದೆ ಹೋಗುತ್ತಿದ್ದಾರೆ. ಕನಿಷ್ಠ ವೇತನ, ಆರೋಗ್ಯ, ವಿಮೆ, ರಜೆ, ಕೆಲಸದ ಆಯ್ಕೆಯೆಲ್ಲವನ್ನು ನಿರಾಕರಿಸಿ ಕಾರ್ಮಿಕರನ್ನು ಸರ್ಕಾರ ದುಡಿಸಿಕೊಳ್ಳುತ್ತಿರುವ ರೀತಿ ಇದು ಎಂದು ಸ್ಮಶಾನಗಳಿಗೆ ಭೇಟಿ ನೀಡಿದ ತಂಡ ಮಾಹಿತಿ ನೀಡಿದೆ.

ಎಚ್ಚರ: ದೈಹಿಕ ಅಂತರ ಕಾಪಾಡದ ಸೋಂಕಿತ ವ್ಯಕ್ತಿ 406 ಜನರಿಗೆ ಕೊರೊನಾ ಹರಡಬಲ್ಲ | Naanu gauri

ಮಾಧ್ಯಮಗಳ ವರದಿ ಪ್ರಕಾರ ಮೇ 1 ರಿಂದ ಮೇ 7 ರವರೆಗೆ ಬೆಂಗಳೂರಿನಲ್ಲಿ 1.51 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ ಅವರಲ್ಲಿ 1,119 ಜನರು ಸೋಂಕಿತರು ಮೃತಪಟ್ಟಿರುತ್ತಾರೆ. ಇನ್ನು ಮೇ 8 ರಿಂದ ಮೇ 14 ರ ವರೆಗಿನ ಒಂದು ವಾರದ ಅವಧಿಯಲ್ಲಿ ಸರಿಸುಮಾರು 1.2 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದು ಅವರಲ್ಲಿ 1,756 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದೇ ಮೇ 25 ರಂದು ಕರ್ನಾಟಕದಲ್ಲಿ 25,311 ಕೋವಿಂಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು 529 ಜನರು ಮೃತಪಟ್ಟಿದ್ದಾರೆ.

ಸುದೀರ್ಘ ಕೆಲಸದ ಅವಧಿ

ಸರ್ಕಾರದ ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆಯು ತನ್ನ‌ ಉದ್ಯೋಗಿಗಳನ್ನು ಒಂದು ದಿನದಲ್ಲಿ 8 ಗಂಟೆಗಳಿಂತ ಹೆಚ್ಚು ಅವಧಿ ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ. ಹೆಚ್ಚಿನ ಅವಧಿಯ ಕೆಲಸಕ್ಕೆ ಅಧಿಕ ವೇತನವನ್ನು ಸಂಸ್ಥೆಯು ಉದ್ಯೋಗಿಗಳಿಗೆ ಪಾವತಿಸಬೇಕಿದೆ. ಆದರೆ ಬೆಂಗಳೂರಿನ ಸ್ಮಶಾನಗಳ ಸ್ಥಿತಿ ಬೇರೆ ಇದೆ. ಇಲ್ಲಿ ಈ ನಿಯಮಾವಳಿಗೆ ಯಾವ ಬೆಲೆಯೂ ಇಲ್ಲ. ಇದಕ್ಕೆ ಕಾರಣ ಕಾರ್ಮಿಕರ ಕೊರತೆ ಮತ್ತು ಧೀಡರನೆ ಹೆಚ್ಚಿದ ಸಾವಿನ ಸಂಖ್ಯೆ.

ಇದನ್ನೂ ಓದಿ: ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

ಬಿಬಿಎಂಪಿಯು ಹೆಚ್ಚಿದ ಅಗತ್ಯಕ್ಕೆ ತಕ್ಕಂತೆ ಕಾರ್ಮಿಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳದಿರುವುದೂ ಕಾರ್ಮಿಕರ ದುಃಸ್ಥಿತಿಗೆ ಮತ್ತೊಂದು ಮುಖ್ಯ ಕಾರಣ. ಕೋವಿಡ್‌ಗೂ ಮೊದಲು ಸ್ಮಶಾನ ಮತ್ತು ಚಿತಾಗರಗಳಿಗೆ ದಿನಕ್ಕೆ 5 ರಿಂದ 6 ಮೃತದೇಹಗಳು ಬರುತ್ತಿದ್ದವು. ಆದರೆ ಏಪ್ರಿಲ್ 2021 ರ ನಂತರ ಬೆಂಗಳೂರಿನ ಸ್ಮಶಾನಗಳಿಗೆ ಬರುತ್ತಿರುವ ಮೃತದೇಹಗಳ ಸಂಖ್ಯೆ 15 ಪಟ್ಟು ಹೆಚ್ಚಿದೆ. ಅಂದರೆ ಸರಿ ಸುಮಾರು 75 ಮೃತದೇಹಗಳು ಅಂತ್ಯಕ್ರಿಯೆಗಾಗಿ ಸ್ಮಶಾನ ಸೇರುತ್ತಿವೆ. ಆದರೆ ಕಾರ್ಮಿಕರ ಸಂಖ್ಯೆ ಮೊದಲಿನಷ್ಟೆ ಇದೆ. ಇದರ ಪರಿಣಾಮವಾಗಿ ಸ್ಮಶಾನ ಕಾರ್ಮಿಕರು ದಿನದ 14 ಗಂಟೆ ಹೆಣ ಸುಡುವ, ಮಣ್ಣುಮಾಡುವ ಕೆಲಸದಲ್ಲಿ ತೊಡಗುವಂತಾಗಿದೆ.

ವಿದ್ಯುತ್ ಚಿತಾಗಾರಗಳಲ್ಲಿ ಕಾರ್ಮಿಕರು ಬೆಳಿಗ್ಗೆ ಏಳು ಗಂಟೆಗೆ ಹೆಣ ಸುಡಲು ಆರಂಭಿಸಿದರೆ ಬಿಡುವಿರದೇ ರಾತ್ರಿ 8 ರ ವರೆಗೆ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು 3 ಚಿತಾಗಾರಗಳಲ್ಲಿ ಕಟ್ಟಿಗೆಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಮೃತದೇಹಗಳ ಅಂತ್ಯಕ್ರಿಯೆ ಪ್ರಕ್ರಿಯೆ ಇನ್ನೂ ದೀರ್ಘವಾಗಿರುತ್ತದೆ. ಇಲ್ಲಿ ಮುಂಜಾನೆ 5 ಕ್ಕೆ ತಮ್ಮ ಕೆಲಸ ಆರಂಭಿಸುವ ಚಿತಾಗಾರದ ಕಾರ್ಮಿಕರು ಮಧ್ಯರಾತ್ರಿ 2 ಗಂಟೆಯ ವರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ಮೇಲೆ ಬಿದ್ದಿರುವ ಅಧಿಕ ಕೆಲಸ ಒತ್ತಡವನ್ನು ಕಡಿಮೆ ಮಾಡುವ ಮತ್ತು ಅದರಿಂದ ಕಾರ್ಮಿಕರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವಾಗಲಿ ಬಿಬಿಎಂಪಿಯಾಗಲಿ ಇದುವರೆಗೆ ಒಂದೇ ಒಂದು ಸೂಚನೆಯನ್ನು ಸುತ್ತೋಲೆಯನ್ನು ಹೊರಡಿಸಿಲ್ಲ.

ಕೊರೊನಾ
PC: George Osodi/Bloomberg

ಕನಿಷ್ಠ ವೇತನ

ಸ್ಮಶಾನ ಮತ್ತು ಚಿತಾಗಾರಗಳಿ ಭೇಟಿ ನೀಡಿದ AICCTU ತಂಡ ಗಮನಿಸಿರುವಂತೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನೂ ನೀಡಲಾಗುತ್ತಿಲ್ಲ. ಕೆಲವೊಮ್ಮೆ ಮೂರು ತಿಂಗಳಿಗೊಮ್ಮೆಯೊ, ಆರು ತಿಂಗಳಿಗೊಮ್ಮೆಯೊ ಕಾರ್ಮಿಕರಿಗೆ ಬಿಬಿಎಂಪಿ ಸಂಬಳವನ್ನು ನೀಡುತ್ತದೆ. ಇನ್ನು ಕೆಲವು ಸಲ ವೇತನಗಳ ಪಾವತಿ ಒಂದು ವರ್ಷಕ್ಕೂ ಹೆಚ್ಚು ವಿಳಂಬವಾಗಿರುವ ನಿದರ್ಶನಗಳೂ ಇವೆ. ಸ್ಮಶಾನ ಕಾರ್ಮಿಕರಿಗೆ 1,000 ರೂಪಾಯಿಗಳಿಂದ 10,500 ರೂಪಾಯಿಗಳ ವರೆಗೆ ವೇತನವನ್ನು ನೀಡಲಾಗುತ್ತಿದೆ. ಇದು ಕನಿಷ್ಠ ವೇತನ ಕಾಯ್ದೆಯಡಿ‌ನಿಗದಿ ಪಡಿಸಲಾದ 13,132.60 ರೂಪಾಯಿಗಳಿಂತ ಅತ್ಯಂತ ಕಡಿಮೆ. ಹೆಚ್ಚಿನ ಸ್ಮಶಾನ ಕಾರ್ಮಿಕರ ಜೀವನ ಅಂತ್ಯಕ್ರಿಯೆಗೆ ಬರುವ ಮೃತ ವ್ಯಕ್ತಿಯ ಕುಟುಂಬಸ್ಥರು ನೀಡುವ 100-200 ರೂಪಾಯಿಗಳ ಟಿಪ್ಸ್ ಆಧಾರದ ಮೇಲೆ ನಿಂತಿದೆ.

ಇದನ್ನೂ ಓದಿ: ‘ದೊರೆಸ್ವಾಮಿ ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ’- ಸಿದ್ದರಾಮಯ್ಯ ಅವರಿಂದ ಶ್ರದ್ದಾಂಜಲಿ ಬರಹ

AICCTU ತಂಡ ಹೇಳುವ ಪ್ರಕಾರ ಬೆಂಗಳೂರಿನ ಸ್ಮಶಾನ ಮತ್ತು ಚಿತಾಗಾರಗಳಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ವೇತನ ಕನಿಷ್ಠ ವೇತನ ಕಾಯ್ದೆಯ ಉಲ್ಲಂಘನೆಯಾಗಿದೆ. ಇದರ ಜೊತೆಗೆ ಕಾರ್ಮಿಕರಿಗೆ ಭವಿಷ್ಯ ನಿಧಿ, ಸುರಕ್ಷಾ ವಿಮೆ, ಗ್ರಾಚುಟಿ ಮತ್ತು ಬೋನಸ್ ಗಳನ್ನು ಕೊಡಲು ಬಿಬಿಎಂಪಿ ನಿರಾಕರಿಸುತ್ತಲೇ ಬಂದಿದೆ. ಹಾಡು ಹಗಲೇ ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗುತ್ತಿದ್ದರೂ, ಸ್ಮಶಾನ ಕಾರ್ಮಿಕರ ಶೋಷಣೆ ನಡೆಯುತ್ತಿದ್ದರು ಕರ್ನಾಟಕದ ಕಾರ್ಮಿಕ‌ ಕಲ್ಯಾಣ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು AICCTU ವರದಿ ಹೇಳುತ್ತದೆ.

ಸ್ಮಶಾಣ ಕಾರ್ಮಿಕರಿಗೆ ಸಿಗದ ಯಾವುದೇ ವೈದ್ಯಕೀಯ ಸೌಲಭ್ಯ

ಚಿತಾಗಾರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ನಿತ್ಯ ಅನೇಕ ಅಪಘಾತಗಳಿಗೆ ಒಳಗಾಗುತ್ತಾರೆ. ಕೆಲವು ಕಾರ್ಮಿಕರ ಕೈ ಕಾಲುಗಳು ಸುಟ್ಟು ಹೋಗಿವೆ, ಕೆಲವರ ಮಖಕ್ಕೆ ದೇಹಕ್ಕೆ ಬೆಂಕಿ ತಗುಲಿದೆ ಆದರೆ ಸಂಬಂಧಿಸಿದ ಸಂಸ್ಥೆ ಇವರ ಸುರಕ್ಷತೆಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಸ್ಮಶಾನಗಳ ಗುಂಡಿ ತೆಗೆಯುವಾಗ ಹಲವು ಕಾರ್ಮಿಕರ ಬೆನ್ನು ಮೂಳೆ ಉಳುಕಿದೆ ಇತರ ಅಪಘಾತಕ್ಕೂ ಅನೇಕ ಕಾರ್ಮಿಕರು ಒಳಗಾಗಿದ್ದಾರೆ. ಸಂಬಂಧ ಪಟ್ಟ ಆಢಳಿತ ವ್ಯವಸ್ಥೆ ಮಾತ್ರ ಇದುವರೆಗೆ ಕಾರ್ಮಿಕರಿಗೆ ವೈದ್ಯಕೀಯ ವಿಮೆಯನ್ನೋ ಚಿಕಿತ್ಸೆಯನ್ನೋ ಒದಗಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

AICCTU ತಂಡ ಭೇಟಿನೀಡಿದಾಗ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕೋವಿಡ್ ಮೃತ ದೇಹಗಳನ್ನು ಹೂಳುವ ಸಂದರ್ಭದಲ್ಲಿ ಯಾವುದೇ ಪಿಪಿಇ ಕಿಟ್ ಅಥವ ಇತರ ಸುರಕ್ಷಾ ಉಪಕರಣಗಳನ್ನು ಧರಿಸಿದಿರುವುದು ಕಂಡು ಬಂದಿದೆ. ಈ ಕುರಿತು ಕೇಳಿದಾಗ ನಮಗೆ ಯಾವುದೇ ಪಿಪಿಇ ಕಿಟ್ ಅಥವಾ ಇತರ ಸುರಕ್ಷ ಉಪಕರಣಗಳನ್ನು ಯಾರೂ ಕೊಟ್ಟಿಲ್ಲ. ಒಮ್ಮೆ ಬಿಬಿಎಂಪಿಯವರು ಕೊಟ್ಟಿದ್ದರು ಅದು ಒಂದು ಬಾರಿ ಮಾತ್ರ ಬಳಕೆಗೆ ಯೋಗ್ಯವಾದ ಉಪಕರಣವಾಗಿತ್ತು. ಪ್ರತಿನಿತ್ಯ ನಮಗೆ ಯಾರೂ ಸುರಕ್ಷಾ ಉಪಕರಣಗಳನ್ನು ಒದಗಿಸುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸ್ಮಶಾನದ ಉದ್ಯೋಗಿಯೊಬ್ಬರು ತಿಳಿಸಿರುತ್ತಾರೆ.

ಇದನ್ನೂ ಓದಿ: ಕೇಂದ್ರ ಜನರಿಗಿಂತ ಸಾಮಾಜಿಕ ಜಾಲತಾಣಗಳನ್ನು ಆದ್ಯತೆಯಾಗಿ ಪರಿಗಣಿಸಿದೆ: ರಾಹುಲ್ ಗಾಂಧಿ

ಚಿತಾಗಾರ ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಉದ್ಯೋಗಿಗಳಿಗೆ ಕೋವಿಡ್ ಲಸಿಕೆಯನ್ನು ಇದುವರೆಗೆ ನೀಡಲಾಗಿಲ್ಲ. ಕಾಲಕಾಲಕ್ಕೆ ಕೋವಿಡ್ ಸೋಂಕಿನ ಪತ್ತೆ ಪರೀಕ್ಷೆಯನ್ನು ಮಾಡಲಾಗುತ್ತಿಲ್ಲ. ಇದರಿಂದಾಗಿ ಕಾರ್ಮಿಕರ ಜೊತೆಗೆ ಅವರ ಕುಟುಂಬಸ್ಥರು ಸೋಂಕಿಗೆ ತುತ್ತಾಗಿರುವ ಅನೇಕ ಘಟನೆಗಳು ನಡೆದಿವೆ. ಸದ್ಯ ಬೆಂಗಳೂರಿನ ಅನೇಕ ಸ್ಮಶಾನಗಳಲ್ಲಿ ಮೃತದೇಹಗಳನ್ನು ಮಣ್ಣು ಮಾಡಿದ ಬಳಿಕ ಕೈ ತೊಳೆಯಲು ಸಾಬೂನು‌ ಮತ್ತು ಸ್ಯಾನಿಟೈಝರ್ ವ್ಯವಸ್ಥೆಗಳಿಲ್ಲದಿರುವುದು ಭೇಟಿಯ ವೇಳೆ ಕಂಡುಬಂದಿದೆ ಎಂದು AICCTU ವರದಿಯಲ್ಲಿ ದಾಖಲಿಸಲಾಗಿದೆ.

ಮುಂಬೈ,ಕೊರೊನಾ ಸೋಂಕು,ಶವ ನಾಪತ್ತೆ

 

ಬೆಂಗಳೂರಿನ ಕೆಲವು ಸ್ಮಶಾನಗಳ ಪರಿಸ್ಥಿತಿಯು ಎಷ್ಟು ಶೋಚನೀಯವಾಗಿದೆಯೆಂದರೆ ಕಾರ್ಮಿಕರಿಗೆ ಸರಿಯಾಗಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿಗೆ ಸ್ಥಳಗಳಿಲ್ಲ. ಮಹಿಳಾ ಕಾರ್ಮಿಕರು ಇದರಿಂದ ಬಲವಂತವಾಗಿ ಸ್ಮಶಾನದ ಯಾವುದೋ ಒಂದು ಮೂಲೆಯನ್ನು ಶೌಚಾಲಯವನ್ನಾಗಿ ಬಳಸಬೇಕಾಗಿದೆ. ಕಾರ್ಮಿಕರು ತಂಗಲು ಸ್ಮಶಾನಗಳಲ್ಲಿ ಬೇರೆ ವ್ಯವಸ್ಥೆ ಇಲ್ಲದಿರುವುದರಿಂದ ಮೃತದೇಹಗಳನ್ನು ಮಣ್ಣು ಮಾಡಿದ ಸ್ಥಳದ ಪಕ್ಕದಲ್ಲೇ ಅನೇಕರು ಗೋಣಿ ಚೀಲಗಳನ್ನು ಹಾಸಿ‌ ಮಲಗುತ್ತಾರೆ. ಕೆಲವು ಕಾರ್ಮಿಕರು ಸ್ಮಶಾನಕ್ಕೆ ಹೊಸ ಮೃತದೇಹಗಳು ಬಂದಾಗ ಅವನ್ನು ಇರಿಸಲು ವ್ಯವಸ್ಥೆ ಮಾಡಿರುವ ಪ್ರವೇಶ ದ್ವಾರದ ಸ್ಥಳದಲ್ಲಿಯೇ ಮಲಗಿರುವುದು ಕಂಡು ಬಂದಿದೆ. ಇನ್ನು ಕೆಲವೊಮ್ಮೆ ಕಾರ್ಮಿಕರು ಅಂತ್ಯಕ್ರಿಯೆಗಾಗಿ ಕಾಯುತ್ತಿರುವ ದೇಹಗಳ ಪಕ್ಕದಲ್ಲಿಯೇ ಕುಳಿತು ಕೆಲ ಕಾಲ ವಿಶ್ರಮಿಸುತ್ತಿರುವುದು ಕಂಡು ಬಂದಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರಿ‌ನ ಸ್ಮಶಾನ ಕಾರ್ಮಿಕರ ಶೋಚನೀಯ ಪರಿಸ್ಥಿತಿಯನ್ನು ವರದಿ ಮಾಡಿದೆ.

ಬೆಂಗಳೂರಿನ ಸ್ಮಶಾನಗಳಿಗೆ ಭೇಟಿ ನೀಡಿದ ತಂಡವು ತನ್ನ ವರದಿಯಲ್ಲಿ ಬಿಬಿಎಂಪಿ‌ ಮತ್ತು ಸರ್ಕಾರಗಳು ತ್ವರಿತವಾಗಿ ಸ್ಮಶಾನ ಕಾರ್ಮಿಕರ ಸಹಾಯಕ್ಕೆ ನಿಲ್ಲಬೇಕಿದೆ. ಕೋವಿಡ್‌ನಿಂದ ಮೃತಪಟ್ಟ ನಾಗರಿಕರಿಗೆ ಘನತೆಯ ಸಾವು ಒದಗಿಸುತ್ತಿರುವ ರಾಜ್ಯದ ಫ್ರಂಟ್ ಲೈನ್ ವಾರಿಯರ್ ಗಳಿಗೆ ಸುರಕ್ಷತೆ, ಉದ್ಯೋಗದ ಭದ್ರತೆ, ವೇತನ, ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವಂತೆ AICCTU ತನ್ನ ವರದಿಯಲ್ಲಿ ಸರ್ಕಾರವನ್ನು ಆಗ್ರಹಿಸಿದೆ. ಸ್ಮಶಾನ ಕಾರ್ಮಿಕರ ಕೆಲಸದ ಪರಿಸ್ಥಿತಿಯ ಸುಧಾರಣೆಗೆ ಕ್ರಮ ಕೈಗೊಳಲ್ಲು ಶೀಘ್ರದಲ್ಲೇ ಸಮಿತಿಯೊಂದನ್ನು ನೇಮಕಮಾಡುವಂತೆ AITCCU ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಕೃಷಿ ಕಾನೂನುಗಳನ್ನು ವಾಪಸ್ ಪಡೆದು, ಪ್ರತಿಭಟನೆಯಲ್ಲಿ ಮಡಿದ ರೈತರನ್ನು ಹುತಾತ್ಮರೆಂದು ಘೋಷಿಸಿ- ಸಿದ್ದರಾಮಯ್ಯ

ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುವವರು ಮುಖ್ಯವಾಗಿ ದಲಿತರು ಅಥವಾ ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದವರು.‌ ಸರ್ಕಾರ ತನ್ನ ಇತರ ಎಲ್ಲಾ ಫ್ರಂಟ್ ಲೈನ್ ವಾರಿಯರ್‌ಗಳಿಗೆ ನೀಡುವ ಸೌಲಭ್ಯಗಳನ್ನು ಸ್ಮಶಾನ ಕಾರ್ಮಿರಿಗೆ ನೀಡುತ್ತಿಲ್ಲ. ಅವರ ಆರೋಗ್ಯ ಮತ್ತು ಸುರಕ್ಷತೆಯ ಕುರಿತಾಗಿ ದಿವ್ಯ ನಿರ್ಲಕ್ಷ ತಾಳಿದೆ. ಈ ಕುರಿತು ಬಿಬಿಎಂಪಿ ಮತ್ತು ಇತರ ಅಧಿಕಾರಿಗಳನ್ನು ವೈರ್ ಸುದ್ದಿ ಸಂಸ್ಥೆ ಸಂಪರ್ಕಿಸಲು ಪ್ರಯತ್ನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಬಿಬಿಎಂಪಿಯ ಹೆಸರು ಹೇಳಲಿಚ್ಚಸಿದ ಹಿರಿಯ ಅಧಿಕಾರಿಯೊಬ್ಬರು ವೈರ್‌ಗೆ ಪ್ರತಿಕ್ರಿಯಿಸಿ ಪ್ರತಿಯೊಬ್ಬರೂ ಕೋವಿಂಡ್ ಸಾಂಕ್ರಾಮಿಕ ಅಪಾಯದಲ್ಲಿದ್ದಾರೆ. ಯಾವ ಇಲಾಖೆಗೂ ಈ ಸಂದರ್ಭದಲ್ಲಿ ಈ ವಿಷಯಗಳ ಕುರಿತು ಗಮನ ಹರಿಸುವಷ್ಟು ಬಿಡುವಿಲ್ಲ. ಸ್ಮಶಾನ ಮತ್ತು ಕಾರ್ಮಿಕರ ಪರಿಸ್ಥಿತಿಯ ಸುಧಾರಣೆಗೆ ಸರದಕಾರಕ್ಕೆ ಒಂದಷ್ಟು ಕಾಲಾವಾಕಾಶ ಬೇಕು. ಇದೊಂದು ಸುದೀರ್ಘ ಪ್ರಕ್ರಿಯೆ ಎಂದು ಉತ್ತರಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಮೃತದೇಹಗಳಿಗೆ ಘನತೆಯ ಸಾವು ನೀಡುವಂತಹ ಸರ್ಕಾರದ ತುರ್ತು ಕಾರ್ಯವನ್ನು ನಿರ್ವಹಿಸುತ್ತಿರುವ ಸ್ಮಶಾನ ಕಾರ್ಮಿಕರಿಂದು ಅತ್ಯಂತ ಅಪಾಯದಲ್ಲಿದ್ದಾರೆ. ಕಾರ್ಮಿಕರ ಕುಟುಂಬಗಳು ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಬಿಬಿಎಂಪಿ ಮತ್ತು ಸರ್ಕಾರದ ಈ ಅಮಾನವೀಯ ವ್ಯವಸ್ಥೆಯ ಕುರಿತು ಮಾಧ್ಯಮಗಳೂ ಕುರುಡಾಗಿವೆ. ಹಾಗದಾರೆ ಎಲ್ಲರಿಗೂ ಅಸ್ಪ್ರಶ್ಯವಾದ ಕೋವಿಡ್ ಮೃತದೇಹಗಳಿಗೆ ಗೌರವಯುತ ಅಂತ್ಯ ನೀಡುವ ಸ್ಮಶಾನ ಕಾರ್ಮಿಕರ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಮೂಲ : ವೈರ್
ಅನುವಾದ : ರಾಜೇಶ್ ಹೆಬ್ಬಾರ್

ಇದನ್ನೂ ಓದಿ: ತೇಜಸ್ವಿ ಸೂರ್ಯರಿಗೆ ಒಂದು ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...