Homeಮುಖಪುಟಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ - ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

- Advertisement -
- Advertisement -

ಎಂಬತ್ತರ ದಶಕದಲ್ಲಿ ದ್ವಾರಕೀಶ ಅವರು ʻಎಲ್ಲಿದೆಯೋ ನ್ಯಾಯಾ, ಅಣ್ಣಾ, ಎಲ್ಲಿದೆಯೋ ನ್ಯಾಯಾʼ ಅಂತ ಹಾಡಿದರು. ಆ ಹಾಡು ಬರೆದ ಚಿರಂತನ ಕವಿ ಚಿ.ಉದಯಶಂಕರ ಅವರು ʻಬಡವನು ನ್ಯಾಯವ ಕೇಳುವುದೇ ಅನ್ಯಾಯʼ ಅನ್ನುವ ಅಂತಿಮ ಸತ್ಯವೊಂದನ್ನು ದ್ವಾರಕೀಶ ಅವರ ಬಾಯಿಯಲ್ಲಿ ಹೇಳಿಸಿದರು.

ಆ ಹಾಡು ಈಗ ನೆನಪಾಗಲಿಕ್ಕೆ ಕಾರಣ ಏನಂದರ ನಾವು ನಮ್ಮ ದೇಶದ ಲಕ್ಷಾಂತರ ಕಾರ್ಮಿಕರನ್ನು ಸಾವಿರಾರು ಕಿಲೊಮಿಟರ್ ನಡಕೊಂಡು ಹೋಗಲಿಕ್ಕೆ ಬಿಟ್ಟು ಮನಿಯೊಳಗ ನೆಟ್ ಫ್ಲಿಕ್ಸ ನೋಡಾಕ ಹತ್ತೇವಿ.

ಅವರು ನಮ್ಮನ್ನ ನ್ಯಾಯ ಎಲ್ಲಿದೆ ಅಂತ ಕೇಳಾಕ ಒಲ್ಲರು, ಹಂಗ ಏನರ ಕೇಳಿದರ ಅದಕ್ಕ ಉತ್ತರ ಕೊಡಾಕ ನಮ್ಮ ಕಡೆ ಆಗವಲ್ಲದು. ಅವರ ಸಂಕಟಕ್ಕ ಮರುಗೋದು ಬಿಟ್ಟು, ನಾವು “ಅವರು ಯಾಕ ತಮ್ಮ ರಾಜ್ಯ ಬಿಟ್ಟು ಇಲ್ಲಿಗೆ ಬರಾಕ ಹೋದರು?”, “ಅವರ ರಾಜ್ಯದ ಸರಕಾರಗಳು ಅವರಿಗೆ ಕೆಲಸ ಕೊಡಲಿಕ್ಕೆ ಯಾಕ ಆಗಲಿಲ್ಲ?”, ಇಲ್ಲಿಗೆ ಬಂದು ಐದು- ಹತ್ತು ಸಾವಿರ ರುಪಾಯಿ ಗಳಿಸೋರು ಅವರು, ಅವರಿಗೆ ಅಷ್ಟೂ ಕೊಡಾಕ ಆಗಲಿಲ್ಲೇನು ಅಲ್ಲಿನ ಸರಕಾರದವರಿಗೆ ಅಂತ ಪಾಟಿ ಸವಾಲು ಮಾಡಾಕ ಹತ್ತೇವಿ.

ʻಹಂಗಾರ ಅವರಿಗೆ ಅನ್ಯಾಯ ಆಗೇತೋ ಇಲ್ಲವೋ?ʼ ಅಂತ ಕೇಳಿದರೆ. ʻಹೌದುʼ ಅಂತ ನಾಚಿಕೋತನ ಹೇಳತೇವಿ. ಹಂಗಾರ ಈ ಅನ್ಯಾಯ ಆಗಲಾರದಂಗ ಏನು ಮಾಡಬಹುದಿತ್ತು ಅಂತ ಕೇಳಿದರ ಯಾರ ಹತ್ತರನೂ ಉತ್ತರ ಇಲ್ಲ.

ಆ ಉತ್ತರದ ಸಾಧ್ಯತೆಗಳನ್ನ ಇಲ್ಲಿ ನೋಡೋಣ.

ಮೊದಲನೆಯದು ʻಅನ್ನ ಭಾಗ್ಯʼ ಅನ್ನೋ ಹೆಸರಿನ ಯೋಜನೆ. ಆ ಹೆಸರಿನ ಬದಲಿಗೆ ʻಹಕ್ಕಿನ ಅನ್ನʼ ಅಂತ ಇಡಬಹುದಾಗಿತ್ತು. ಇದು ಕೇಂದ್ರ ಕೊಡುವ ಸಬ್ಸಿಡಿ ಜೊತೆಗೆ ರಾಜ್ಯದ ಸಬ್ಸಿಡಿಯನ್ನೂ ಸೇರಿಸಿ ಬಡವರಿಗೆ ಅಕ್ಕಿ-ಗೋಧಿ ಕೊಡುವ ಯೋಜನೆ. ಇದು ಪರ-ವಿರೋಧ ದನಿಗಳನ್ನು ಎಬ್ಬಿಸಿತು. ಇದು ಕಷ್ಟಪಟ್ಟ ದುಡಿಯುವವರ ಕೈಯಿಂದ ಹಣ ಕಸಿದು ಬಡವರಿಗೆ ತಿನ್ನಿಸಿ ಅವರನ್ನು ಆಲಸಿಯಾಗಿಸಿತು ಅಂತ ಕೆಲವರು ಭೀಕರವಾಗಿ ವಿರೋಧಿಸಿದರು. ಇನ್ನು ಕೆಲವರು ಬಡವರ ಕಷ್ಟಕಾಲಕ್ಕೆ ಆಯಿತು ಅಂತ ಸ್ವಾಗತಿಸಿದರು.

ʻಇದು ಅಪೂರ್ಣವಾಯಿತು, ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು. ಇದರಲ್ಲಿನ ಬ್ರಷ್ಟಾಚಾರದ ಅವಕಾಶಗಳನ್ನು ಕಮ್ಮಿ ಮಾಡಬೇಕಾಗಿತ್ತುʼ ಅಂತ ಇನ್ನು ಕೆಲವರು ಸೃಜನಾತ್ಮಕ ಟೀಕೆ ಮಾಡಿದರು, ಸಲಹೆ ನೀಡಿದರು.

ಇಂಥದ್ದರಲ್ಲಿ ಒಂದು ಒಳ್ಳೆಯ ಐಡಿಯಾ ಅಂದರೆ ಫುಡ್ ಬಾಸ್ಕೆಟ್ ಅಥವಾ ʻಊಟದ ಬುಟ್ಟಿʼ. ಹಿಂಗಂದರ, ಬರೇ ಅಕ್ಕಿ, ಗೋಧಿ, ಕೊಡೋದಲ್ಲ, ಕಾಳು-ಬೇಳೆ- ಎಣ್ಣೆ- ಹಾಲಿನ ಪದಾರ್ಥ, ಸಕ್ಕರೆ- ಉಪ್ಪು- ಮಸಾಲೆ ಸಾಮಾನು, – ಸೋಪು, ಹಣ್ಣು- ತರಕಾರಿ ಸಹಿತ ಸೇರಿಸಿ ಬಡವರಿಗೆ ಕೊಡೋದು. ಕೆಲವು ದೇಶಗಳಲ್ಲಂತೂ ಇದನ್ನು ಎಲ್ಲರಿಗೂ ಕೊಡತಾರ. ಬ್ಯಾಡಾ ಅಂದವರು ಬಿಡಬಹುದು. ಗ್ಯಾಸಿನ ಸಬ್ಸಿಡಿ ಇದ್ದಂಗ.

ಇದು ಐವತ್ತು ವರ್ಷಗಳಿಂದ ಕ್ಯೂಬಾ ದೇಶದಲ್ಲಿ ನಡೆದುಕೊಂಡು ಬಂದದ. ಭಾರತಕ್ಕಿಂತ ಕಮ್ಮಿ ತಲಾ ಆದಾಯ ಇರುವ ದೇಶಗಳಲ್ಲಿ ಸಹಿತ ಇಂತಹ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಾವು.

ಅದರಲ್ಲಿ ಕೆಲವು ನೋಡೋಣ. ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ – ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

ಕ್ಯೂಬಾದಾಗ ಎಲ್ಲಾರಿಗೂ ಕೊಡತಾರ. ಆದರ ಬ್ಯಾರೆ ದೇಶಗಳೊಳಗ ಬಡವರಿಗಷ್ಟ ಕೊಡತಾರ.

ನಾವು ಯಾಕ ಕೊಡಲಿಕ್ಕೆ ಆಗಲೊಲ್ಲದು?

ಯಾಕಂದರ ಕೇಂದ್ರ ನಮಗ ರೊಕ್ಕ ಕೊಡೋದಿಲ್ಲ, ಅಕ್ಕಿ ಕೊಡತೇತಿ. ಪ್ರತಿ ತಿಂಗಳ, ಪ್ರತಿ ಮನುಷಾನ ಲೆಕ್ಕದಲೆ, 27 ರೂಪಾಯಿ ಕೊಡತೆತಿ. ಅದನ್ನ ಒಂದು ಕೇಜಿ ಅಕ್ಕಿಯ ರೂಪದಾಗ ಕೊಡತೇತಿ. ಅದ ರೊಕ್ಕ ನಮಗ ಕೊಟ್ಟರ ನಾವು ಏನಾದರೂ ತೊಗೋಬಹುದು.

ಕರ್ನಾಟಕದಾಗ ಸರಬರಾಜು ಆಗೋ ಅಕ್ಕಿ ಛತ್ತೀಸಘಡ, ಜಾರಖಂಡಿನಿಂದ ಬರತೇತಿ. ಗೋಧಿ ಪಂಜಾಬು- ಹರಿಯಾಣಾ- ಮಹಾರಾಷ್ಟ್ರ ದಿಂದ ಬರತೇತಿ.

ಸುಮಾರು ಎರಡು – ಮೂರು ಸಾವಿರ ಕಿಲೋಮಿಟರು ದೂರದಿಂದ ಅಕ್ಕಿ ಸಾಗಣೆ ಮಾಡೋ ಖರ್ಚನ್ನ ರಾಜ್ಯ ಸರಕಾರ ಹೊರತೇತಿ. ಅದರ ಬದಲಿಗೆ ಅದ 27 ರೂಪಾಯಿ ರಾಜ್ಯಕ್ಕ ಕೊಟ್ಟರ, ನಮ್ಮ ರೈತರು ಬೆಳದ ಅಕ್ಕಿ ನಾವು ಖರೀದಿಸಿ ರೊಕ್ಕ ಉಳಿಸಬಹುದು, ಕಿರಿಕಿರಿ ಇರಲಾರದೇ ಹಂಚಬಹುದು.

ವಿಕೇಂದ್ರಿಕೃತ ವ್ಯವಸ್ಥೆ ಜಾರಿ ಆದರ ಉತ್ತರ ಕರ್ನಾಟಕದಾಗ ಜೋಳ, ದಕ್ಷಿಣದಾಗ ರಾಗಿ, ಕರಾವಳಿಯೊಳಗ ಕೆಂಪು ಅಕ್ಕಿ ಖರೀದಿಸಿ, ಅಲ್ಲಲ್ಲೇ ಹಂಚಬಹುದು.

ಅದಕ್ಕ ಒಮ್ಮೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೂರದರ್ಶನದಾಗ ಫೋನು ಇನ್ನು ಕಾರ್ಯಕ್ರಮ ನಡೆಸಿದಾಗ ಕಾರ್ಯಕರ್ತರೊಬ್ಬರು ಇದು ಅನ್ನ ಭಾಗ್ಯ ಅಲ್ಲ, ಸರಿಯಾಗಿ ಜಾರಿಮಾಡಿದರೆ ಅದು ರೈತ ಭಾಗ್ಯ. ಸರಕಾರ ರೈತರಿಂದ ಜೋಳ -ಕಾಳು ಖರೀದಿಸಿದರೆ ರೈತರಿಗೆ- ಗೃಹಿಣಿಯರಿಗೆ ಇಬ್ಬರಿಗೂ ಅನುಕೂಲ ಅಂತ ಹೇಳಿದ್ದರು. ಮುಖ್ಯಮಂತ್ರಿಗಳಿಗೆ ಐಡಿಯಾ ಇಷ್ಟ ಆತು, ಖರೆ, ಆದರಿ ವಿಧಾನಸೌಧದ ಪಟ್ಟ ಭದ್ರ ಕಪಾಟುಗಳಲ್ಲಿ ಆ ಫೈಲು ಥಂಡಿ ಹಿಡೀತು.

ಇನ್ನ ಸರಕಾರದವರು ಎಷ್ಟು ದಡ್ಡರು ಅಂದರ ಅವರು ಒಂದೇ ತಪ್ಪನ್ನ ಎರಡೆರಡು ಸರತೆ ಮಾಡತಾರು. ಉದಾಹರಣೆಗೆ ತೊಗರಿ ಕಾಳಿನ ಬೆಲೆ ಕುಸಿದರೆ ರೈತರಿಂದ ಖರೀದಿ ಮಾಡತಾರು. ಈ ವರ್ಷ 55 ರೂಪಾಯಿಗೆ ಒಂದು ಕೇಜಿಯಂತೆ ಖರೀದಿ ಮಾಡಿದಾರು. ಆರು ತಿಂಗಳ ಬಿಟ್ಟು ಮಿಲ್ಲು ಮಾಲಿಕರು ಹಾಗೂ ಮಧ್ಯವರ್ತಿಗಳಿಂದ ಸರಕಾರಿ ಹಾಸ್ಟೆಲ್ಲುಗಳ ಹುಡುಗರ ಸಲುವಾಗಿ 90 ರೂಪಾಯಿಗೆ ತೊಗರಿ ಬೇಳೆ ಖರೀದಿ ಮಾಡತಾರು. ರೈತರಿಂದ ಖರೀದಿ ಮಾಡಿದ ತೊಗರಿ ಕಾಳನ್ನೇ ಮಿಲ್ಲಿನಲ್ಲಿ ಒಡೆದು ಹಾಕಿಸಿ ಹಾಸ್ಟೆಲ್ಲಿಗೆ ಪೂರೈಸೋವಷ್ಟು ಕನಿಷ್ಟ ಸಾಮಾನ್ಯ ಜ್ಞಾನ ಅವರಿಗೆ ಇಲ್ಲ.

ಮೂರನೇಯದು ಇಂದಿರಾ ಕ್ಯಾಂಟೀನು. ಮೊದಲನೆಯದು ಅದರ ಹೆಸರ ಹಿಂದಿನ ರಾಜಕೀಯ. ಕಾಂಗ್ರೆಸ್ಸಿನವರು ಇಂದಿರಮ್ಮಾ ಕ್ಯಾಂಟಿನ ಅಂತ ಮಾಡಿದ್ದರ ಅದರ ಇಂದಿರಾ ತಗದು ಅಮ್ಮಾ ಅಂತ ಭಾಜಪ ದವರು ಮುಂದು ವರೆಸಬಹುದಿತ್ತು. ಇಲ್ಲಾ ಅಂದರ ಅನ್ನಪೂರ್ಣಾ ಅಡುಗೆ ಮನೆ ಅಂತಾದರೂ ಇವರು ಬದಲಾಯಿಸಬೇಕಾಗಿತ್ತು. ಅಥವಾ ಅದ ಕೆಲಸಾ ಕಾಂಗ್ರೆಸ್ಸಿನವರು ಮಾಡಬೇಕಿತ್ತು. ಅದುನೂ ಆಗಲಿಲ್ಲ.

ಎರಡನೇಯದ್ದು ಅವಕ್ಕೆ ರಾಜ್ಯ ಖಜಾನೆಯಿಂದ ಹಣ ಹೊಂದಿಸೋ ಕೆಲಸ ಸಿದ್ರಾಮಯ್ಯನವರು ಮಾಡಲಿಲ್ಲ. ಅವರು ಮಾಡಿದ್ದು ಎರಡು ತಪ್ಪು. ಅವನ್ನು ನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಯವರು ನಡೆಸಬೇಕು ಅನ್ನೋ ನಿಯಮ ಮಾಡಿದ್ದು. ಎರಡನೇಯದ್ದು ಗುತ್ತಿಗೆದಾರರ ಕೈಯೊಳಗ ಕೊಟ್ಟಿದ್ದು.

ಅವನ್ನು ತಮಿಳುನಾಡಿನ ರೀತಿ ಮಹಿಳಾ ಸ್ವಸಹಾಯ ಸಂಘಗಳ ಕೈಗೆ ಕೊಟ್ಟಿದ್ದರ ಅವು ಚಂದಾಗಿ ನಡೆಸಿಕೊಂಡು ಬರತಿದ್ದರು. ಏಳು ವರ್ಷದ ಹಿಂದೆ ಸುರುವಾದ ಈ ಬಡವರ ಅಡುಗೆ ಮನೆಗಳು ಇಲ್ಲಿಯವರೆಗೆ 25 ಕೋಟಿ ಇಡ್ಲಿ, 30 ಕೋಟಿ ಚಪಾತಿ ಹಾಗೂ 20 ಕೋಟಿ ಪ್ಲೇಟು ಅನ್ನ ತಯಾರಿಸಿದ್ದಾವು. ಅವುಗಳ ಬೆಲೆ ಬದಲಾಗಿಲ್ಲ. ಈ ಲಾಕ್ ಡೌನ್ ಸಮಯದಾಗೂನು ಕೆಲಸ ಮಾಡಿದಾವು. ಬಡವರ ಪ್ರಾಣ ಕಾದವು.

ಆದರ ನಮ್ಮಲ್ಲೆ ಹಂಗ ಆಗಲಿಲ್ಲ. ಬಡವರು ಉಪವಾಸ ಬಿದ್ದರು. ಪ್ರವಾಸಿ ಕಾರ್ಮಿಕರು ಯಾವುದೋ ಸಂಘ ಸಂಸ್ಥೆಗಳು ಕೊಡೋ ಆಹಾರಕ್ಕ ಕಾಯ್ದು ಕೊಂಡು ದಿನಗಟ್ಟಲೇ ಇದ್ದರು. ಏನೂ ಸಿಗಲಾರದಾಗ ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನೇ ಕಣ್ಣೀರು ಕುಡಿದು ಕುಂತರು.

ಇಂದಿರಾ ಕ್ಯಾಂಟೀನು ತಗದರ ಗದ್ದಲ ಆಗತೇತಿ ಅಂತ ಮುಚಿಕೊಂಡು ಕೂತರು. ಸಾರಾಯಿ ದುಕಾನು ತೆಗೆದು ಅಲ್ಲಿನ ಜನ ಜಂಗುಳಿ – ನೂಕು ನುಗ್ಗಲು ನೋಡಿ ಮುಸಿ ಮುಸಿ ನಕ್ಕ ನಮ್ಮ ಸರಕಾರ ಇಂದಿರಾ ಕ್ಯಾಂಟಿನ ತೆರೆಯಲಿಲ್ಲ. ಬಡವರಿಗೆ ಅನ್ನಕ್ಕಿಂತಲೂ ಎಣ್ಣೆ ಬೇಕು ಅಂತ ನಕ್ಕರು ಅಷ್ಟ.

ಇವೆಲ್ಲಾ ನಮ್ಮ ರೈತರ ಪರವಾಗಿ, ಮಹಿಳೆಯರ ಪರವಾಗಿ ಮಾತಾಡುವ ಪುಡಾರಿ ನಾಯಕರಿಗೆ ಕಾಣೋದಿಲ್ಲ. ಜನ ಜಾಗೃತಿ ಹೊರತು ಪ್ರಜಾಸತ್ತೆಗೆ ಬೇರೆ ಔಷಧಿ ಇಲ್ಲ ಅಂತ ಬೆಂಜಮಿನ್ ಫ್ರ‍್ಯಾಂಕ್ಲಿನ್ ಹೇಳಿದಂಗ, ನಮಗನ ತಿಳೀಲಿಲ್ಲಾ ಅಂದರ ನಮ್ಮ ನಾಯಕರಿಗೆ ಹೆಂಗ ತಿಳೀಬೇಕು?


ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್‌ನ ಹಲವರ ಪರಿಸ್ಥಿತಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...