Homeಮುಖಪುಟ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ': ಮಂದೀಪ್ ಪುನಿಯಾ

‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ

ಅಧಿಕಾರಸ್ಥರಿಂದ ಕಿರುಕುಳಕ್ಕೊಳಗಾದ ಜನರ ಬಗ್ಗೆ ವರದಿ ಮಾಡಲು ಹಿಂತಿರುಗುತ್ತಿದ್ದೇನೆ ಎಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಪತ್ರಕರ್ತ ಮಂದೀಪ್ ಪುನಿಯಾ ತಿಳಿಸಿದ್ದಾರೆ.

- Advertisement -
- Advertisement -

ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಳದಲ್ಲಿ ಪೊಲೀಸರಿಂದ ಬಂಧಿತರಾಗಿ, ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾದ ಪತ್ರಕರ್ತ ಮಂದೀಪ್ ಪುನಿಯಾ, ಬಂಧನದಲ್ಲಿದ್ದಾಗ ಅನುಭವಿಸಿದ ಕ್ರೂರ ಹಿಂಸೆಯಿಂದ ತಾನು ವಿಚಲಿತನಾಗಿಲ್ಲ ಮತ್ತು “ಅಧಿಕಾರಸ್ಥರಿಂದ ಕಿರುಕುಳಕ್ಕೊಳಗಾದ ಜನರ ಬಗ್ಗೆ ವರದಿ ಮಾಡಲು ಹಿಂತಿರುಗುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಗುರುವಾರ ಎನ್‌ಡಿಟಿವಿ ಪುನಿಯಾರ ಜೊತೆ ನಡೆಸಿದ ಸಂದರ್ಶನದ ವಿಡಿಯೋ ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಒಂದು ಮಿಲಿಯನ್‌ಗೂ (10 ಲಕ್ಷಕ್ಕೂ) ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಪುನಿಯಾ ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಜೈಲಿನ ಒಳಗೆ ಭೇಟಿಯಾದ ಅಮಾಯಕ ರೈತರ ಸುತ್ತ ಒಂದು ಸ್ಟೋರಿ ಬರೆಯಲು ಅವರು ತಮ್ಮ ದೇಹದ ಮೇಲೆ “ಟಿಪ್ಪಣಿಗಳನ್ನು” ಬರೆದುಕೊಂಡು ಹೊರ ಬಂದಿದ್ದಾರೆ.

ದಿ ಕಾರವಾನ್ ನಿಯತಕಾಲಿಕೆಗೆ ಮತ್ತು ಇತರ ಕೆಲವು ಮಾಧ್ಯಮ ಸಂಸ್ಥೆಗಳಿಗೆ ವರದಿ/ಸ್ಟೋರಿ ನೀಡುವ 43 ವರ್ಷದ ಸ್ವತಂತ್ರ ಪತ್ರಕರ್ತ ಪುನಿಯಾ, ತನ್ನನ್ನು ಶನಿವಾರ ಹೇಗೆ ಬಂಧಿಸಲಾಯಿತು, ತನ್ನ ಮೇಲೆ ಹೇಗೆ ಹಲ್ಲೆ ನಡೆಸಲಾಯಿತು ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಸುಳ್ಳು ಆರೋಪ ಹೇಗೆ ಹೊರಿಸಲಾಗಿತು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಹಸ್ತಕ್ಷೇಪವಲ್ಲ, ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ: ಸೋನಾಕ್ಷಿ ಸಿನ್ಹಾ

“ನಾನು ಸಿಂಘುವಿನಲ್ಲಿನ ರೈತರ ಪ್ರತಿಭಟನಾ ಶಿಬಿರದಲ್ಲಿ ಬ್ಯಾರಿಕೇಡ್‌ಗಳ ಪಕ್ಕದಲ್ಲಿ ನಿಂತಿದ್ದೆ. ನನ್ನ ವರದಿಗಾಗಿ ನಾನು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದೆ. ಕೆಲವು ವಲಸೆ ಕಾರ್ಮಿಕರು ಹಾದುಹೋಗಲು ಪ್ರಯತ್ನಿಸುತ್ತಿದ್ದರು. ಆದರೆ ಪೊಲೀಸರು ನಿರಂತರವಾಗಿ ಅವರನ್ನು ನಿಂದಿಸುತ್ತಿದ್ದರು. ಹಾಗಾಗಿ, ನಾನು ವಲಸೆ ಕಾರ್ಮಿಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ರೆಕಾರ್ಡ್ ಮಾಡುತ್ತಿದ್ದೆ….’

‘ಆ ಸಮಯದಲ್ಲಿ, ಪೊಲೀಸರು ಮೊದಲು ನನ್ನ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ಎಳೆದರು. ನಾನು ಪ್ರತಿಭಟಿಸಿದಾಗ, ಅವರಲ್ಲಿ ಒಬ್ಬರು ‘ಇದು ಮಂದೀಪ್ ಪುನಿಯಾ. ಅವನನ್ನೂ ಕರೆದುಕೊಂಡು ಹೋಗು’ ಎಂದು ಕೂಗಿದರು. ಅವರು ನನ್ನನ್ನು ಕೋಲು/ಲಾಠಿಗಳಿಂದ ಹೊಡೆಯುತ್ತಿದ್ದರು ಮತ್ತು ನನ್ನನ್ನು ನಿಂದಿಸಿದರು….’
“ನನ್ನನ್ನು ಟೆಂಟ್ ಒಂದಕ್ಕೆ ಕರೆದೊಯ್ಯಲಾಯಿತು ಮತ್ತು ಅಲ್ಲಿಯೂ ಹೊಡೆದರು. ಅವರು ನನ್ನ ಸಣ್ಣ ಕನ್ನಡಿರಹಿತ ಕ್ಯಾಮೆರಾ ಮತ್ತು ನನ್ನ ಸ್ಯಾಮ್‌ಸಂಗ್ ಫೋನ್ ಅನ್ನು ಒಡೆದು ಹಾಕಿದರು. ಅವರು ನನ್ನ ಗುರುತಿನ ಚೀಟಿಗಳನ್ನು ಎಸೆದರು” ಎಂದು ಪುನಿಯಾ ಹೇಳಿದ್ದಾರೆ.

ನಂತರ ಅವರು ನನ್ನನ್ನು ಬಿಳಿ ಸ್ಕಾರ್ಪಿಯೋದಲ್ಲಿ ಕೂರಿಸಿ ಮೂರು ನಾಲ್ಕು ಪೊಲೀಸ್ ಠಾಣೆಗಳಿಗೆ ಕರೆದೊಯ್ದರು. ನಂತರ ಮುಂಜಾನೆ 2 ರ ಸುಮಾರಿಗೆ ನನ್ನನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು. ಪೊಲೀಸರು, ‘ಈ ಪ್ರಕರಣ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡಿದೆ. ದಯವಿಟ್ಟು ಅದನ್ನು ನೋಡಿಕೊಳ್ಳಿ’ ಎಂದು ಹೇಳುವ ಮೂಲಕ ವೈದ್ಯರ ಮೇಲೆ ಪ್ರಭಾವ ಬೀರಲು ಸಹ ಪ್ರಯತ್ನಿಸಿದರು. ಆದರೆ ನನ್ನ ಮೇಲಾದ ಎಲ್ಲಾ ಗಾಯಗಳನ್ನು ಪರೀಕ್ಷಿಸುತ್ತೇನೆ ಎಂದು ವೈದ್ಯರು ಹೇಳಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ, ನಂತರ ನನ್ನನ್ನು ಮುಂಜಾನೆ 3 ರ ಸುಮಾರಿಗೆ ಲಾಕಪ್‌ಗೆ ಹಾಕಿದರು….

ಪೊಲೀಸರ ಹೇಳಿಕೆಗಳನ್ನು ತೆಗೆದುಕೊಳ್ಳಲು ನಾನು ದಿನವಿಡೀ ಅವರೊಂದಿಗೆ ಮಾತನಾಡುತ್ತಿದ್ದ ಕಾರಣ ಪೊಲೀಸರಿಗೆ ನನ್ನ ಹೆಸರು ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಒಂದು ದಿನದ ಹಿಂದೆ ನಾನು ರೈತರ ಮೇಲೆ ಕಲ್ಲು ಎಸೆದ ಬಗ್ಗೆ ವರದಿ ಮಾಡಿದ್ದೆ. ರೈತರ ಮೇಲೆ ಹಲ್ಲೆ ನಡೆಸಿದ ಜನರು ಬಿಜೆಪಿಗೆ ಹೇಗೆ ಸಂಪರ್ಕ ಹೊಂದಿದ್ದಾರೆಂದು ನಾನು ವರದಿ ಮಾಡಿದ್ದೆ ” ಎಂದು ಪುನಿಯಾ ಹೇಳಿದ್ದಾರೆ.

ಹೆಚ್ಚಾಗಿ ರೈತರೇ ಆಗಿದ್ದ ಇತರ ಕೈದಿಗಳಿಂದ ನನಗೆ ಜೈಲಿನಲ್ಲಿ ಆತ್ಮೀಯ ಸ್ವಾಗತ ದೊರೆಯಿತು. “ಎಲ್ಲರೂ ನನ್ನನ್ನು ಜೈಲಿನಲ್ಲಿ ಚೆನ್ನಾಗಿ ನಡೆಸಿಕೊಂಡರು. ಎಲ್ಲ ಖೈದಿಗಳು ನನ್ನನ್ನು ಮತ್ತು ನನ್ನ ಹೆಸರನ್ನು ಆಗಲೇ ತಿಳಿದಿದ್ದರೆಂದು ತೋರುತ್ತದೆ. ಪೊಲೀಸರು ನನ್ನನ್ನು ಹೊಡೆದಿದ್ದಾರೆಂದು ಅವರಿಗೆ ತಿಳಿದಿತ್ತು” ಎಂದು ಅವರು ಹೇಳಿದರು.

“ಒಳಗೆ ಹೋಗುವಾಗ, ವ್ಯವಸ್ಥೆಯ ಬಲಿಪಶು ಎಂದು ನಾನು ಭಾವಿಸಿದೆ. ಆದರೆ ಜೈಲಿನಲ್ಲಿರುವ ಈ ಜನರು ಹೇಗೆ ದೊಡ್ಡ ಬಲಿಪಶುಗಳಾಗಿದ್ದಾರೆಂದು ನಾನು ನೋಡಿದೆ. ಪೊಲೀಸರ ಹೊಡೆತಗಳಿಂದ ಆ ರೈತರ ಕಾಲುಗಳು ನೀಲಿ ಬಣ್ಣಕ್ಕೆ ತಿರುಗಿದ್ದವು, ಹೊರಗೆ ಕಾಣಿಸದ ಮೂಗೇಟುಗಳಿಂದ ಅವರು ಬಳಲುತ್ತಿದ್ದರು. ಅಧಿಕಾರದಲ್ಲಿರುವವರಿಂದ ಕಿರುಕ್ಕೊಳಗಾದ ಜನರ ಕುರಿತು ವರದಿ ಮಾಡುವುದು ಎಷ್ಟು ಮುಖ್ಯ ಎಂದು ನನಗೆ ಅರ್ಥವಾಯಿತು, ಏಕೆಂದರೆ ಅಧಿಕಾರದಲ್ಲಿರುವ ಜನರು ಸತ್ಯ ಹೊರಬರಲು ಬಯಸುವುದಿಲ್ಲ” ಎಂದು ಪುನಿಯಾ ಅಭಿಪ್ರಾಯಪಟ್ಟಿದ್ದಾರೆ.

“ಅದಕ್ಕಾಗಿಯೇ ನಾನು ಒಂದು ಪೆನ್ನಿನ ವ್ಯವಸ್ಥೆ ಮಾಡಿಕೊಂಡು, ನನ್ನ ದೇಹದ ಮೇಲೆ ಟಿಪ್ಪಣಿಗಳನ್ನು ಬರೆದುಕೊಳ್ಳಲು ಪ್ರಾರಂಭಿಸಿದೆ. ನಾನು ರೈತರ ಹೆಸರುಗಳು ಮತ್ತು ಅವರ ಕತೆಗಳನ್ನು ಕೇಳಿಸಿಕೊಂಡೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಗ್ರಾಮದವರಾದ ಗುರುದ್ವಾರದ 70 ವರ್ಷದ ಧಾರ್ಮಿಕ ವ್ಯಕ್ತಿಯನ್ನು (ಅರ್ಚಕ) ಸಹ ನಾನು ಭೇಟಿಯಾದೆ. ಪ್ರತಿಭಟನೆಯಲ್ಲಿ ಅವರು ರೈತರಿಗೆ ಆಹಾರವನ್ನು ನೀಡುತ್ತಿದ್ದ ಕಾರಣ ಅವರನ್ನು ಬಂಧಿಸಲಾಯಿತು” ಎಂದು ಅವರು ಹೇಳಿದರು.

“ನಾನು ಖಂಡಿತವಾಗಿಯೂ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗುತ್ತೇನೆ. ಏಕೆಂದರೆ ಅಧಿಕಾರದಲ್ಲಿರುವವರಿಂದ ಕಿರುಕುಳಕ್ಕೊಳಗಾಗುತ್ತಿರುವ ಈ ಜನರ ಬಗ್ಗೆ ವರದಿ ಮಾಡುವುದು ಬಹಳ ಮುಖ್ಯ. ನಾನು ಹಿಂತಿರುಗಿ ರೈತರ ಪ್ರತಿಭಟನೆಯ ಬಗ್ಗೆ ಅಗತ್ಯವಿರುವ ಸೂಕ್ಷ್ಮತೆಯೊಂದಿಗೆ ವರದಿ ಮಾಡುತ್ತೇನೆ” ಎಂದು ಪುನಿಯಾ ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಶನಿವಾರ ಮಂದೀಪ್ ಪುನಿಯಾ ಬಂಧನದ ಸಮಯದಲ್ಲೇ, ದೆಹಲಿಯ ಹೊರವಲಯದಲ್ಲಿ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಎರಡು ತಿಂಗಳ ಕಾಲ ನಡೆದ ರೈತರ ಪ್ರತಿಭಟನೆಯ ಮೇಲೆ ಪೊಲೀಸ್ ದಬ್ಬಾಳಿಕೆಯೂ ನಡೆಯುತ್ತಿತ್ತು.

ಜನವರಿ 26ರ ಘಟನೆಗಳ ನಂತರ ಪೊಲೀಸ್ ಅಧಿಕಾರಿಗಳು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ರಸ್ತೆಗಳನ್ನು ಅಗೆದಿದ್ದಾರೆ, ಮೊಳೆಗಳನ್ನು ನೆಟ್ಟಿದ್ದಾರೆ ಮತ್ತು ರೈತರ ಆಂದೋಲನವನ್ನು ಉಸಿರುಗಟ್ಟಿಸಲು ಬಹು-ಪದರಗಳ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಶಿಬಿರಗಳನ್ನು ತಲುಪದಂತೆ ಪತ್ರಕರ್ತರನ್ನು ತಡೆಯಲಾಗಿದೆ. ಈ ಕುರಿತು ಜಗತ್ತಿನಾದ್ಯಂತ ಖಂಡನೆಗಳು ವ್ಯಕ್ತವಾಗಿವೆ.


ಇದನ್ನೂ ಓದಿ: ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...