Homeಮುಖಪುಟ”ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸವಿಲ್ಲ": ಸದ್ದಾಂ ಹುಸೇನ್‌

”ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸವಿಲ್ಲ”: ಸದ್ದಾಂ ಹುಸೇನ್‌

- Advertisement -
- Advertisement -

ಸುಪ್ರೀಂಕೋರ್ಟ್‌ ನೀಡಿರುವ ಅಯೋಧ್ಯೆ ತೀರ್ಪನ್ನು ಇಡೀ ದೇಶವೇ ಗೌರವಿಸಿದೆ. ಕೆಲ ಭಿನ್ನಾಭಿಪ್ರಾಯ, ಮುನಿಸಿನ ಮಧ್ಯೆಯೂ ಸುಪ್ರೀಂ ತೀರ್ಪಿಗೆ ಎಲ್ಲರೂ ತಲೆಬಾಗಿದ್ದಾರೆ. ಆದರೆ ಕೆಲವರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಶಾಂತಿ, ನೆಮ್ಮದಿಯಿಂದ ನಾವೆಲ್ಲಾ ಒಂದೇ ಎಂಬ ಮಂತ್ರವನ್ನೇ ಜೀವನದ ಉಸಿರಾಗಿಸಿಕೊಂಡು ಬದುಕುತ್ತಿದ್ದಾರೆ. ಇದೇ ನಮ್ಮ ದೇಶದ ಭಾವೈಕ್ಯತೆಯ ಸಂದೇಶ ಕೂಡ.

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ… ಬೆಂಗಳೂರಿನಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲರಿಗೂ ಆದರ್ಶಪ್ರಾಯವಾಗುವಂಥ ಮಾತು ಹೇಳಿದ್ದಾನೆ. ಮಾತಷ್ಟೇ ಅಲ್ಲ, ಕೃತಿಯೂ ಕೂಡ ಹಾಗೇ ಇದೆ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ಸದ್ದಾಂ ಹುಸೇನ್‌ ಎಂಬ ಮುಸ್ಲಿಂ ಯುವಕ ಮಂದಿರ, ಮಸೀದಿಯಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಎಂದು ಹೇಳಿದ್ದಾನೆ.

ಜಾತಿ, ಧರ್ಮ ಎಂದು ಹೊಡೆದಾಡುವವರು ತಲೆತಗ್ಗಿಸುವಂತಿದೆ 27 ವರ್ಷದ ಸದ್ದಾಂ ಹುಸೇನ್‌ ಬದುಕು. ಸದ್ದಾಂ ಮುಸ್ಲಿಂನಾದರೂ ಮಸೀದಿ ಮತ್ತು ಮಂದಿರ ಎರಡಕ್ಕೂ ಹೋಗುತ್ತಾನೆ. ನಮಾಜ್‌ ಮಾಡುತ್ತಾನೆ, ಪೂಜೆಯನ್ನೂ ಮಾಡುತ್ತಾನೆ. ದಿನ ಬೆಳಗಾದರೆ ಮಸೀದಿಗೆ ಹೋಗಿ ಸ್ವಚ್ಛತಾ ಕಾರ್ಯ ಮಾಡುತ್ತಾನೆ. ಹಾಗೆಯೇ ಹಬ್ಬ-ಹರಿದಿನಗಳಲ್ಲಿ, ಬಿಡುವು ಸಿಕ್ಕಾಗ ಮಂದಿರಗಳಿಗೂ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗುತ್ತಾನೆ.

’ನನಗೆ ಶಾಂತಿ, ನೆಮ್ಮದಿ ಮುಖ್ಯ. ಯಾವ ಧರ್ಮವಾದರೇನು, ಜಾತಿಯಾದರೇನು..? ನನಗೆ ಮಂದಿರ ಮತ್ತು ಮಸೀದಿ ಎರಡರಲ್ಲೂ ಸಂತೋಷ ಸಿಗುತ್ತದೆ’ ಎನ್ನುವುದು ಸದ್ದಾಂ ಅವರ ಮನದಾಳದ ಮಾತು. ’ನಾನು ಟಿವಿ ಹಾಗೂ ನ್ಯೂಸ್‌ ನೋಡುವುದಿಲ್ಲ. ನನ್ನ ಸಹೋದರ ಬಂದು ನನಗೆ ಅಯೋಧ್ಯೆ ತೀರ್ಪಿನ ಕುರಿತು ಹೇಳಿದ. ಆದರೆ ನನಗೆ ಅದ್ಯಾವುದಕ್ಕೂ ಏನೂ ಅನ್ನಿಸಲಿಲ್ಲ. ನನಗೆ ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ’ ಅಂತಾರೆ ಸದ್ದಾಂ.

ರಂಜಾನ್‌ ಆಗಿರಲಿ ಅಥವಾ ರಾಮನವಮಿಯೇ ಬರಲಿ, ಎಲ್ಲರೂ ನನ್ನನ್ನು ಸ್ವಚ್ಛತಾ ಕೆಲಸಕ್ಕೆ ಕರೆಯುತ್ತಾರೆ. ಮಿನಾರ್‌ ಕಂಬಗಳನ್ನು ಹತ್ತಿ ಕ್ಲೀನ್‌ ಮಾಡಿದ್ದೇನೆ, ಮಸೀದಿ ಗೋಡೆಗಳಿಗೆ ಬಣ್ಣವನ್ನೂ ಬಳಿದಿದ್ದೇನೆ. ಮಂದಿರಗಳನ್ನು ಸ್ವಚ್ಛಗೊಳಿಸಿದ್ದೇನೆ. ರಂಜಾನ್‌ ದಿನಗಳಲ್ಲಿ ಉಪವಾಸ ಬಿಡುವ ಮುನ್ನ ಪ್ರಾರ್ಥನೆಗೆ ಬರುವ ಜನರಿಗೆ ಹಣ್ಣು-ಹಂಪಲು  ಹಂಚುತ್ತೇನೆ. ದೇವರ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ.

ಇಷ್ಟೇ ಅಲ್ಲ.. ರಾಮಮಂದಿರಕ್ಕೂ ಹೋಗುತ್ತೇನೆ. ಗೋಪುರಗಳನ್ನು ಹತ್ತಿ ಶುಚಿಗೊಳಿಸುತ್ತೇನೆ. ರಾಮನವಮಿ ಹಬ್ಬಕ್ಕೂ ಮೊದಲು ಮಂದಿರಕ್ಕೆ ಪೇಂಟಿಂಗ್‌ ಮಾಡುತ್ತೇನೆ ಎನ್ನುತ್ತಾನೆ. ಅಂದ ಹಾಗೇ ಸದ್ದಾಂ ಓದಿರುವುದು ಕೇವಲ ಎರಡನೇ ತರಗತಿ ಮಾತ್ರ. ಗಂದಿಗೆ ಹೆಸರಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ತಾಯಿ ಮತ್ತು ಸಹೋದರನೊಂದಿಗೆ ವಾಸ್ತವ್ಯ ಹೂಡಿರುವ ಸದ್ದಾಂ ಏರಿಯಾ ಜನರಿಗೆ ಕೈಲಾದಷ್ಟು ಸಹಾಯ ಮಾಡುತ್ತಾನೆ. ಕಷ್ಟದಲ್ಲಿರುವವರಿಗೆ ಹೆಗಲು ಕೊಡುತ್ತಾನೆ.

ದೇವರು ಎಲ್ಲರಿಗೂ ಒಬ್ಬನೇ ಮತ್ತು ಒಂದೇ. ಹಿಂದೂ ಮತ್ತು ಮುಸ್ಲಿಂರು ಸಹೋದರರಿದ್ದಂತೆ ಎಂದು ನಂಬಿರುವ ಸದ್ದಾಂ ಅವರ ಗುಣಗಾನ ಮಾಡಿದ್ದಾರೆ ಗಂದಿಗೆ ಅಂಗಡಿ ಮಾಲೀಕ ವೆಂಕಟೇಶ್‌ ಬಾಬು. ನಾವೆಲ್ಲಾ ಸಮಾಜದ ಶಾಂತಿ, ಏಕತೆ, ಐಕ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜಕ್ಕೆ ಧಕ್ಕೆ ಬಾರದಂತೆ ಜೀವಿಸಬೇಕು ಎನ್ನುವುದೇ ಸದ್ದಾಂ ಬದುಕಿನ ಉದ್ದೇಶ.

ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ: ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಕ್ಕೂ ಹೆಚ್ಚು ನಕ್ಸಲರ ಸಾವು

ಸುಕ್ಮಾ/ಬಿಜಾಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಕ್ಮಾದಲ್ಲಿ 10 ಕ್ಕೂ ಹೆಚ್ಚು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಯಿತು,...

ಆರ್‌ಎಸ್‌ಎಸ್ ಅರೆಸೈನಿಕ ಸಂಘಟನೆಯಲ್ಲ; ಬಿಜೆಪಿಯನ್ನು ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ: ಮೋಹನ್ ಭಾಗವತ್

ಭೋಪಾಲ್: ಸಮವಸ್ತ್ರ ಮತ್ತು ದೈಹಿಕ ವ್ಯಾಯಾಮಗಳ ಹೊರತಾಗಿಯೂ, ಸಂಘವು ಅರೆಸೈನಿಕ ಸಂಘಟನೆಯಲ್ಲ ಮತ್ತು ಬಿಜೆಪಿಯನ್ನು ನೋಡಿ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ದೊಡ್ಡ ತಪ್ಪು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ...

ತೆಲಂಗಾಣ ವಿಧಾನಸಭೆಯಲ್ಲಿ ‘ಮನರೇಗಾ’ ಬದಲಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕಾರ 

ಹೈದರಾಬಾದ್: ಬಿಜೆಪಿ ಸದಸ್ಯರ ವಿರೋಧದ ನಡುವೆಯೂ, ತೆಲಂಗಾಣ ವಿಧಾನಸಭೆಯು ಶುಕ್ರವಾರ MGNREGA ಅನ್ನು VB G RAM G ಕಾಯ್ದೆಯೊಂದಿಗೆ ಬದಲಾಯಿಸುವ ಕೇಂದ್ರದ ಕ್ರಮವನ್ನು ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿತು ಮತ್ತು ಹಿಂದಿನ ಶಾಸನವನ್ನು...

ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯುತ್ತಾರೆ. 1818ರಲ್ಲಿ ಪೇಶ್ವೆಗಳ ರಾಜ್ಯಭಾರ ಕೊನೆಗೊಂಡು ಬ್ರಿಟಿಷರ ಆಡಳಿತ ಶುರುವಾಗಿತ್ತು. ಬ್ರಿಟೀಷರು ಅಧಿಕಾರ ವಹಿಸಿಕೊಂಡು ಹದಿಮೂರು ವರ್ಷಗಳ...

‘ಪ್ರಾಯಶ್ಚಿತ ದಿನ..’: ಮಾನ್ಯ ಪಾಟೀಲ್ ಮರ್ಯಾದೆಗೇಡು ಹತ್ಯೆ ಖಂಡಿಸಿದ ಲಿಂಗಾಯತ ಸಂಘಟನೆಗಳು

ಅಮಾನವೀಯ ಘಟನೆಗೆ ಸಾಕ್ಷಿಯಾಗಿರುವ ಮಾನ್ಯ ಪಾಟೀಲ್ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ 'ಜಾಗತಿಕ ಲಿಂಗಾಯತ ಮಹಾಸಭಾ' ನೇತೃತ್ವದಲ್ಲಿ ಶುಕ್ರವಾರ 'ಪ್ರಾಯಶ್ಚಿತ ದಿನ' ಆಚರಿಸಲಾಯಿತು. ದಲಿತ ಸಂಘಟನೆಗಳು ಸಂತ್ರಸ್ತೆಯ ಪತಿಯ ಕುಟುಂಬವನ್ನು ಸಕ್ರಿಯವಾಗಿ ಬೆಂಬಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರೂ,...

ಬಿಹಾರ| ‘ಬಾಂಗ್ಲಾದೇಶಿ’ ಎಂದು ಆರೋಪಿಸಿ ಮುಸ್ಲಿಂ ಕಾರ್ಮಿಕನನ್ನು ಥಳಿಸಿದ ಗುಂಪು

ಬಾಂಗ್ಲಾದೇಶಿ ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಂ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಬಲಿಪಶು ಖುರ್ಷಿದ್ ಆಲಂ, ಧಾರ್ಮಿಕ ಘೋಷಣೆಗಳನ್ನು ಪಠಿಸಲು ನಿರಾಕರಿಸಿದ ನಂತರ ಸುಮಾರು...

ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಇವಿಎಂ ಮೇಲೆ ಜನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದ ವರದಿ : ಅಲ್ಲಗಳೆದ ಸಚಿವ ಪ್ರಿಯಾಂಕ್ ಖರ್ಗೆ

ಹೆಚ್ಚಿನ ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ನಂಬುತ್ತಾರೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ರಾಜ್ಯವ್ಯಾಪಿ ಸಮೀಕ್ಷೆಯ...

ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್‌ಗಳನ್ನು ಅಸ್ಸಾಂ ಸರ್ಕಾರಕ್ಕೆ ಹಿಂದಿರುಗಿಸಿದ ಪತ್ರಕರ್ತರು

ಅಸ್ಸಾಂ ಸರ್ಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ಪಡೆದ ಮೊಬೈಲ್ ಫೋನ್‌ಗಳನ್ನು ಕನಿಷ್ಠ ಇಬ್ಬರು ಪತ್ರಕರ್ತರು ಗುರುವಾರ ಹಿಂದಿರುಗಿಸಿದ್ದಾರೆ ಎಂದು 'ಸ್ಕ್ರೋಲ್' ವರದಿ ಮಾಡಿದೆ. ಅಸ್ಸಾಂನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದಲ್ಲಿ ನೋಂದಾಯಿಸಲಾದ 2,200...

ಕೋಗಿಲು ಬಡಾವಣೆ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ...

ರ‍್ಯಾಗಿಂಗ್ ದೈಹಿಕ ಹಿಂಸೆ; ಎರಡು ತಿಂಗಳ ಬಳಿಕ 19 ವರ್ಷದ ವಿದ್ಯಾರ್ಥಿನಿ ಸಾವು

ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ....