ಉತ್ತರ ಪ್ರದೇಶದ ಝಾನ್ಸಿಯ ಸಾರ್ವಜನಿಕ ಉದ್ಯಾನವನವೊಂದರಲ್ಲಿ ಜಿಮ್ ಮಾಡಲು ಅಳವಡಿಸಲಾದ ಉಪಕರಣವೊಂದು ಯಾರೂ ಅದನ್ನು ಬಳಸದಿದ್ದರೂ ಸಹ ತನ್ನಿಂದ ತಾನೇ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Scary. In a park in Jhansi pic.twitter.com/9jJ5ay212D
— मीडियावाला (@purusharthlive) June 12, 2020
ಬಹಳಷ್ಟು ಜನರು ಇದು ದೆವ್ವ, ಭೂತ ಎಂದು ಟೈಟಲ್ ಕೊಟ್ಟು ಅದನ್ನು ಫೇಸ್ ಬುಕ್, ವಾಟ್ಸಾಪ್ ಮತ್ತು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಒಂದಷ್ಟು ಜನರು ಭಯಭೀತರಾಗಿ ಝಾನ್ಸಿ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಅದೇ ಸಮಯಕ್ಕೆ ಹಿಂದಿ ಪತ್ರಿಕೆ ಅಮರ್ ಉಜಾಲ “ಯಾರೋ ಇದನ್ನು ಬಳಸಿದ ನಂತರ ಕಣ್ಣಿಗೆ ಕಾಣದ ಸಣ್ಣ ದಾರವನ್ನು ಕಟ್ಟಿ ಹೋಗಿದ್ದಾರೆ. ಹಾಗಾಗಿ ಅದು ಸ್ವಯಂ ಕೆಲಸ ಮಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ನಂತರ ಸ್ವತಃ ಪೊಲೀಸರೇ ಆ ಪಾರ್ಕ್ ಗೆ ಭೇಟಿ ನೀಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಆಗಲೂ ಆ ಜಿಮ್ ಉಪಕರಣ ಕೆಲಸ ಮಾಡುತ್ತಲೇ ಇತ್ತು. ಪೊಲೀಸರು ಸಹ ಅದರ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ.
Fitness freak ghost ??@jhansipolice got a tip off about an open gym being used by ghosts!Team laid seige & soon found t real ghosts-Some mischievous person made video of moving swing & shared on #socialmedia. Miscreants will b hosted in a ‘haunted’ lockup soon #NoHostForGhost pic.twitter.com/JUaYt4IJMS
— RAHUL SRIVASTAV (@upcoprahul) June 12, 2020
ನಂತರ ಪರಿಶೀಲಿಸಲಾಗಿ ಅಲ್ಲಿ ಯಾವ ದೆವ್ವ, ಭೂತವೂ ಇಲ್ಲ ಮತ್ತು ಸಣ್ಣದಾರವನ್ನು ಸಹ ಕಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಮರ್ ಉಜಾಲ ಪತ್ರಿಕೆಯ ವರದಿಗ ಝಾನ್ಸಿ ಪೊಲೀಸರು ಪ್ರತಿಕ್ರಿಯೆ ನೀಡಿ ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ ಎಂದು ತಾಕೀತು ಮಾಡಿದ್ದಾರೆ.
ನಂತರ ಪೊಲೀಸರು ಯಾರು ಇಲ್ಲಿದಿದ್ದರ ಆ ಯಂತ್ರ ಕೆಲಸ ಮಾಡಲು ಕಾರಣವೇನು ಎಂಬುದನ್ನು ಕಂಡುಹಿಡಿದಿದ್ದಾರೆ. ಯಾರೋ ಕಿಡಿಗೇಡಿ ಈ ಜಿಮ್ ಯಂತ್ರ ಬಳಸುವಾಗ ಅದಕ್ಕೆ ಹೆಚ್ಚಿನ ಗ್ರೀಸ್ ಬಳಿದಿದ್ದಾರೆ. ಅಲ್ಲದೇ ಅದನ್ನು ಜೋರಾಗಿ ಚಲಸುವಂತೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಗ್ರೀಸ್ ಬಳಸಿದ್ದರಿಂದ ಅದು ಕೆಲಸ ಮಾಡುತ್ತಲೇ ಇದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
इस झूले में अधिक ग्रीस लगे होने से एक बार हिला देने पर कुछ सेकंड तक हिलता रहता है।किसी शरारती तत्व ने झूला हिलाकर वीडियो बनाकर सोशल मीडिया पर डाल दिया है।पुलिस ने जाँच की और झूले को हिलाकर उसका वीडियो बनाया है।पुलिस शरारती तत्व को तलाश रही है।भूत की बात अफ़वाह है #FakeNewsAlert https://t.co/5uWjpJcvO8 pic.twitter.com/KiiwbyDVQ8
— Jhansi Police (@jhansipolice) June 13, 2020
ಅಲ್ಲದೇ ಈ ಕಿಡಿಗೇಡಿ ಕೃತ್ಯ ಮಾಡಿದವರು ಖಂಡಿತ ಹಿಡಿದು ಶಿಕ್ಷಿಸುತ್ತೇವೆ ಎಂದು ಝಾನ್ಸಿಯ ಹಿರಿಯ ಪೊಲೀಸ್ ಅಧಿಕಾರಿ ರಾಹುಲ್ ಶ್ರೀವತ್ಸವ್ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ ದೆವ್ವ ಭೂತದ ಕತೆ ಕಟ್ಟು ಕತೆ ಎಂಬುದು ಸ್ಪಷ್ಟವಾಗಿದೆ.


