ಉತ್ತರ ಪ್ರದೇಶ ಸರ್ಕಾರವು “ಪರೀಕ್ಷೆ ಇಲ್ಲ-ಕರೋನಾ ಇಲ್ಲ” ಎಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಕ್ಕಾಗಿ ಉತ್ತರ ಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಅಧಿಕಾರಾವಧಿ ಮುಗಿಯುವುದಕ್ಕೆ ಆರು ತಿಂಗಳ ಮೊದಲು 2015 ರಲ್ಲಿ ಸ್ವಯಂ ಪ್ರೇರಿತ ನಿವೃತ್ತಿಯನ್ನು ಪಡೆದ ಸೂರ್ಯ ಪ್ರತಾಪ್ ಸಿಂಗ್ “ಉತ್ತರ ಪ್ರದೇಶದಲ್ಲಿ ಪ್ರಾಮಾಣಿಕ ಅಧಿಕಾರಿಯೊಬ್ಬರು ಸೇವೆ ಸಲ್ಲಿಸುವುದು ಅಸಾಧ್ಯ” ಎಂದು ಹೇಳುವ ಮೂಲಕ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಸೂರ್ಯ ಪ್ರತಾಪ್ ಸಿಂಗ್ ಬುಧವಾರ ಟ್ವೀಟ್ ಮಾಡಿ “ಮುಖ್ಯ ಕಾರ್ಯದರ್ಶಿ ಕೆಲವು ಡಿಎಂಗಳನ್ನು ಯೋಗಿಯ ತಂಡ -11 ರ ಸಭೆ ಮಾಡಿ ಖಂಡಿಸಿ, ’ನೀವು ಇಷ್ಟು ಜೋರಾಗಿ ಪರೀಕ್ಷೆ ಪರೀಕ್ಷೆ ಎಂದು ಕೂಗುತ್ತಿದ್ದೀರಿ ನೀವು ಯಾವುದಾದರು ಪ್ರಶಸ್ತಿಗಳನ್ನು ನಿರೀಕ್ಷಿಸಿದ್ದೀರಾ?’ ಎಂದು ಕೇಳಿದರು. ಯುಪಿ ಮುಖ್ಯ ಕಾರ್ಯದರ್ಶಿ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತಾರೆಯೇ ? ಉತ್ತರ ಪ್ರದೇಶದ ತಂತ್ರ: ಪರೀಕ್ಷೆ ಇಲ್ಲ = ಕರೋನಾ ಇಲ್ಲ.” ಎಂದು ಬರೆದಿದ್ದರು.
ಲಾಕ್‌ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆಯಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಮುಖ್ಯಮಂತ್ರಿ ಆದಿತ್ಯನಾಥ್ 11 ಜನರು ಐಎಎಸ್ ಅಧಿಕಾರಿಗಳ ತಂಡವನ್ನು ರಚಿಸಿ ’ಟೀಮ್ 11’ ಹಸರು ಕೊಟ್ಟಿದ್ದರು.
ಸೆಕ್ರಟರಿಯೇಟ್ ಪೊಲೀಸ್ ಠಾಣೆಯ ಅಧಿಕಾರಿ ಸುಭಾಷ್ ಸಿಂಗ್, ಸೂರ್ಯ ಪ್ರತಾಪ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಗುರುವಾರ ಸಂಜೆ ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ನೋಂದಾವಣೆಯಾದ ಎಫ್‌ಐಆರ್ ನಲ್ಲಿ “ನಿವೃತ್ತ ಐಎಎಸ್ ಅಧಿಕಾರಿಯೂ ತಪ್ಪು ಸಂಗತಿಗಳ ಆಧಾರದ ಮೇಲೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಹಾಗೂ ಇದು ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ” ಎಂದು ಆರೋಪಿಸಲಾಗಿದೆ.
ಆದಾಗ್ಯೂ, ಸೂರ್ಯ ಪ್ರತಾಪ್ ಸಿಂಗ್ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ಸರ್ಕಾರದಿಂದ ಸ್ಪಷ್ಟೀಕರಣವನ್ನು ನಿರೀಕ್ಷಿಸುತ್ತಿದ್ದಾರೆ.
“ಮುಖ್ಯ ಕಾರ್ಯದರ್ಶಿ (ಆರ್.ಕೆ. ತಿವಾರಿ) ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ಅಧಿಕಾರಿ. ದುರದೃಷ್ಟವಶಾತ್, ಅವರು ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಸೂರ್ಯ ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ.
“ಬಿಜೆಪಿಯ ನಾಯಕರು ನಾನು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಹಿಂದಿನ ಸರ್ಕಾರದ ವಿರುದ್ಧ ಚಳವಳಿಯನ್ನು ನಡೆಸಿದಾಗ ನನ್ನ ಬೆನ್ನು ತಟ್ಟುತ್ತಿದ್ದರು.” ಎಂದು ಅವರು ಹೇಳಿದ್ದಾರೆ.
2014 ರಲ್ಲಿ ಅಖಿಲೇಶ್ ಯಾದವ್ ಆಳ್ವಿಕೆಯಲ್ಲಿ ಉತ್ತರ ಪ್ರದೇಶ ಮಂಡಳಿಯ ಪರೀಕ್ಷೆಗಳಲ್ಲಿ ಮೋಸ ಮಾಫಿಯಾ ಏರಿಕೆಯ ವಿರುದ್ಧ ಸೂರ್ಯ ಪ್ರತಾಪ್ ಸಿಂಗ್ ಮಾತನಾಡಿದ್ದರು.
“ನನ್ನ ಉತ್ತಮ ಉದ್ದೇಶಗಳು ಮತ್ತು ಚಿಂತನೆಗಳನ್ನು 25 ವರ್ಷಗಳ ಉದ್ಯೋಗದಲ್ಲಿ 54 ವರ್ಗಾವಣೆಗಳಿಂದ ಬದಲಾಯಿಸಲಾಗಿಲ್ಲ, ಇನ್ನು ಒಂದು ಎಫ್‌ಐಆರ್ ನಲ್ಲಿ ಬದಲಾಗುತ್ತದೆಯೇ? ” ಸೂರ್ಯ ಪ್ರತಾಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.
25 साल में 54 ट्रान्स्फ़र जब मेरी सदनीयत व नीतियाँ नहीं बदल सके तो एक FIR क्या बदलेगी?
सत्य पक्ष हमेशा सत्ता पक्ष पर भारी पड़ता है। जय हिंद— Surya Pratap Singh (@suryapsinghias) June 11, 2020
69,000 ಶಾಲಾ ಶಿಕ್ಷಕರ ನೇಮಕಾತಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದ ಕಾರಣ ಆದಿತ್ಯನಾಥ್ ಅವರೊಂದಿಗೆ ಕೋಪಗೊಂಡಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.
ಓದಿ: