Homeಮುಖಪುಟಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎನ್ನುವುದು ಸುಳ್ಳು: ಇಲ್ಲಿವೆ ನೋಡಿ ಬ್ರಾಹ್ಮಣರಿಗಿರುವ ಸರ್ಕಾರದ 15 ಯೋಜನೆಗಳು

ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎನ್ನುವುದು ಸುಳ್ಳು: ಇಲ್ಲಿವೆ ನೋಡಿ ಬ್ರಾಹ್ಮಣರಿಗಿರುವ ಸರ್ಕಾರದ 15 ಯೋಜನೆಗಳು

ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ. ಹಾಗಾಗಿ ಅವರು ಹಿಂದುಳಿಯುತ್ತಿದ್ದಾರೆ ಎಂಬ ಆರೋಪ ಅಲ್ಲಲ್ಲಿ ಕೇಳಿಬರುತ್ತದೆ. ಅದು ಸುಳ್ಳು ಎಂದು ಪತ್ರಕರ್ತ ನವೀನ್ ಸೂರಿಂಜೆಯವರು ತಮ್ಮ ಫೇಸ್‌ಬುಕ್‌ನಲ್ಲಿ ಆಧಾರ ಸಹಿತ ವರದಿಯೊಂದನ್ನು ಬರೆದಿದ್ದಾರೆ. ನಾನುಗೌರಿ ಓದುಗರಿಗಾಗಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

- Advertisement -
- Advertisement -

ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ. ಹಾಗಾಗಿ ಅವರು ಹಿಂದುಳಿಯುತ್ತಿದ್ದಾರೆ ಎಂಬ ಆರೋಪ ಅಲ್ಲಲ್ಲಿ ಕೇಳಿಬರುತ್ತದೆ. ಅದು ಸುಳ್ಳು ಎಂದು ಪತ್ರಕರ್ತ ನವೀನ್ ಸೂರಿಂಜೆಯವರು ತಮ್ಮ ಫೇಸ್‌ಬುಕ್‌ನಲ್ಲಿ ಆಧಾರ ಸಹಿತ ವರದಿಯೊಂದನ್ನು ಬರೆದಿದ್ದಾರೆ. ನಾನುಗೌರಿ ಓದುಗರಿಗಾಗಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

“ಎಲ್ಲವೂ ದಲಿತರಿಗೇ ಕೊಟ್ರು. ಮೀಸಲಾತಿಯಲ್ಲಿ ಶಿಕ್ಷಣ, ಕೆಲಸ, ಊಟ ಎಲ್ಲವೂ ದಲಿತರಿಗೇ. ಹಾಗಾದರೆ ಉಳಿದ ಹಿಂದುಗಳೂ ಏನು ಮಾಡಬೇಕು” ಎಂದು ಹಿಂದುಳಿದ ವರ್ಗದ ಹಿಂದೂಗಳನ್ನು ಎತ್ತಿಕಟ್ಟಿದ್ದೇ ಬ್ರಾಹ್ಮಣರು. ಹೀಗೆ ಹೇಳುತ್ತಲೇ ಎಲ್ಲಾ ಸರಕಾರಿ ಯೋಜನೆಗಳನ್ನು ತನ್ನದಾಗಿಸಿಕೊಂಡವರು ಬ್ರಾಹ್ಮಣರು. ಬ್ರಾಹ್ಮಣರಿಗೆ ಕರ್ನಾಟಕ ರಾಜ್ಯ ಸರ್ಕಾರವೊಂದೇ ನೀಡುವ ಯೋಜನೆಗಳೇನು ಎಂಬುದನ್ನು ನೋಡಿದರೆ ತಲೆ ತಿರುಗುತ್ತದೆ.

1. ಸುಭದ್ರ ಯೋಜನೆ
ಬ್ರಾಹ್ಮಣ ಸಮುದಾಯದ ಅನಾಥ/ನಿರಾಶ್ರಿತ ಅಂಗವಿಕಲ, ವಿಧವೆ ಮಹಿಳೆಯರು , ಹಿರಿಯ ನಾಗರೀಕರಿಗೆ ಮಾಸಿಕ ಪಿಂಚಣಿ.

2. ಸೌಖ್ಯ ಯೋಜನೆ
ನಿರಾಶ್ರಿತರಾದ ಬ್ರಾಹ್ಮಣ ವಿಧವೆ ಹಾಗೂ ಹಿರಿಯ ನಾಗರೀಕರಿಗೆ ಆಶ್ರಯ ಕಲ್ಪಿಸಲು ವೃದ್ಧಾಶ್ರಮಗಳ ಸ್ಥಾಪನೆ/ವೃದ್ಧಾಶ್ರಮ ವೆಚ್ಚ ಮರುಪಾವತಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದು.
ಅರ್ಹ ಬ್ರಾಹ್ಮಣರಿಗೆ ಉಚಿತ ವೈದ್ಯಕೀಯ ತಪಾಸಣೆ ಆಯೋಜಿಸುವುದು. ಅರ್ಹ ಬ್ರಾಹ್ಮಣರಿಗೆ ಉಚಿತ ಕಾನೂನು ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಸೇವೆಗಳನ್ನು ಆಯೋಜಿಸುವುದು.

3. ಕಲ್ಯಾಣ ಯೋಜನೆ:
ಬ್ರಾಹ್ಮಣರಿಗಾಗಿ ಸಾಮೂಹಿಕ ವಿವಾಹ/ಉಪನಯನಗಳನ್ನುಆಯೋಜಿಸುವುದು.
ಬಿಪಿಎಲ್ ಬ್ರಾಹ್ಮಣ ಕುಟುಂಬದ ಕೃಷಿಕರನ್ನು/ ಅಡಿಗೆಯವರನ್ನು/ ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ ಮೂರು ಲಕ್ಷ ರೂಪಾಯಿ ಮೊತ್ತದ ವಿತ್ತಬಾಂಡ್ ವಿತರಿಸುವುದು.

4. ಚೈತನ್ಯ ಉತ್ಸವ ಯೋಜನೆ:
ಬ್ರಾಹ್ಮಣ ಸಮುದಾಯದ ಯುವ ಪೀಳಿಗೆಯ ಯುವ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಉತ್ಸವಗಳನ್ನು ಆಯೋಜಿಸುವುದು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬ್ರಾಹ್ಮಣ ಯುವಕ-ಯುವತಿಯರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ಪಾವತಿ.

5. ಕಿರುಸಾಲ ಯೋಜನೆ:
ಸಣ್ಣ ಪುಟ್ಟ ಗೃಹ ಉದ್ಯಮ ಮಾಡುತ್ತಿರುವ ಬ್ರಾಹ್ಮಣ ಸಮುದಾಯಕ್ಕೆ ನೆರವು ನೀಡುವ ಉದ್ದೇಶದಿಂದ ಕಿರು ಸಾಲ ಯೋಜನೆಯನ್ನು ಮಂಡಳಿ ಜಾರಿಗೆ ತಂದಿದೆ. 50 ಸಾವಿರ ರೂ. ಸಾಲ ನೀಡಲಿದ್ದು, ಈ ಸಾಲಕ್ಕೆ ಮಂಡಳಿಯ ವತಿಯಿಂದ 10 ಸಾವಿರ ಸಹಾಯಧನ ನೀಡಲಾಗುವುದು.

6. ಸಾಂದೀಪನಿ ಶಿಷ್ಯವೇತನ ಯೋಜನೆ:
ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಕೋರ್ಸ್ ಗಳನ್ನು ಕಲಿಯುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಪಾವತಿ ಮಾಡುವುದು.
ಭಾರತದಲ್ಲಿ ಹಾಗೂ ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅತೀ ಕಡಿಮೆ / ಶೂನ್ಯ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲು ಬ್ಯಾಂಕ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ(Day Scholar/ hosteller Maintenance) ಹಾಗೂ ಶುಲ್ಕ ಮರುಪಾವತಿ(Fee Reimbursement) ಒದಗಿಸುವುದು.

7. ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ :
ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ/ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ/ವಿದ್ವಾಂಸರಿಗೆ ಶಿಷ್ಯ ವೇತನ ನೀಡುವುದು.

8. ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ :
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು.

9. ಚಾಣಕ್ಯ ಆಡಳಿತ ತರಬೇತಿ ಯೋಜನೆ :
ಐ.ಎ.ಎಸ್, ಐ.ಪಿ.ಎಸ್, ಐ.ಎಫ್.ಎಸ್, ಐ.ಆರ್.ಎಸ್, ಕೆ.ಎ.ಎಸ್, ಇತ್ಯಾದಿ ಪರೀಕ್ಷೆಗಳ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುವುದು.

10. ಸನ್ನಿಧಿ ಯೋಜನೆ :
ಅರ್ಹ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ & ಉಚಿತ ಹಾಸ್ಟಲ್ ನಿರ್ಮಾಣ/ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವುದು / ಹಾಸ್ಟಲ್ ಶುಲ್ಕವನ್ನು ಮರು ಪಾವತಿಸುವುದು.
ಬ್ರಾಹ್ಮಣ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟಲ್ ಗಳ ನಿರ್ಮಾಣ.

11. ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ:
ಬ್ರಾಹ್ಮಣರಿಗೆ ಉದ್ಯೋಗ/ಸ್ವಯಂ ಉದ್ಯೋಗ/ಕೌಶಲ್ಯಾಭಿವೃದ್ಧಿಗಾಗಿ ಉದ್ಯೋಗಮೇಳಗಳನ್ನು ಆಯೋಜಿಸುವುದು, ತರಬೇತಿ ಕೇಂದ್ರಗಳನ್ನು ತೆರೆಯುವುದು. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಅಕೌಂಟೇನ್ಸಿ, ಕಂಪನಿ ಸೆಕ್ರೇಟರಿ ಇನ್ನಿತರ ವೃತ್ತಿಪರ ಪರೀಕ್ಷೆಗಳಿಗೆ ಉಚಿತ ಶಿಕ್ಷಣ / ತರಬೇತಿ.
ಸಿ.ಇ.ಟಿ, ಜೆ.ಇ.ಇ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ತರಬೇತಿ ನಡೆಸುವುದು.

12. ಬ್ರಾಹ್ಮಣ ಮಹಿಳೆಯರಿಗೆ ಕರಕುಶಲ ವಸ್ತುಗಳ ತಯಾರಿಕೆಗಾಗಿ/ಗುಡಿ ಕೈಗಾರಿಕೆಗಾಗಿ ತರಬೇತಿ, ಸಹಾಯಧನ ಪಾವತಿ ಹಾಗೂ ಮಾರುಕಟ್ಟೆ ನಿರ್ಮಾಣ.

13. ಬ್ರಾಹ್ಮಣ ಸ್ವಸಹಾಯ ಸಂಘಗಳ ಸ್ಥಾಪನೆ ಹಣಕಾಸಿನ ನೆರವು

14. ಪುರುಷೋತ್ತಮ ಯೋಜನೆ:
ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಹಾಗೂ ಸಹಾಯ. ಸ್ವಯಂ ಉದ್ಯೋಗ / ನವೋದ್ಯಮ (Start-ups) ಪ್ರಾರಂಭಿಸಲು ಇಚ್ಛಿಸುವ ಅರ್ಹ ಬ್ರಾಹ್ಮಣ ಉದ್ಯಮಿಗಳಿಗೆ ಆರಂಭಿಕ ಸಹಾಯ ಧನ ನೀಡುವುದು.
ಬ್ರಾಹ್ಮಣರಿಗಾಗಿ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
ಬ್ರಾಹ್ಮಣರಿಗಾಗಿ ಔದ್ಯಮಿಕ ಪೂರ್ವಪಾಲನಾ ಕೇಂದ್ರ (Business Incubation Centres)

15. ಅನ್ನದಾತ ಯೋಜನೆ:
ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಕಡಿಮೆ ಬಡ್ಡಿ ದರಗಳಲ್ಲಿ ಅರ್ಹ ಬ್ರಾಹ್ಮಣ ರೈತರಿಗೆ ಸಾಲ ಒದಗಿಸುವುದು. ವ್ಯವಸಾಯಕ್ಕಾಗಿ ತೆರೆದ ಬಾವಿ ಅಥವಾ ಬೋರ್ ವೆಲ್ ಗಳನ್ನು ಕೊರೆಯಲು ಅರ್ಹ ಬ್ರಾಹ್ಮಣ ರೈತರಿಗೆ ಸಹಾಯ ಧನ ಒದಗಿಸುವುದು. ಹೈನುಗಾರಿಕೆ ಹಾಗೂ ಕೃಷಿಆಧಾರಿತ ಚಟುವಟಿಕೆಗಳಿಗೆ ಬ್ರಾಹ್ಮಣ ರೈತರಿಗೆ ಸಹಾಯಧನ ಮತ್ತು ತರಬೇತಿ.

ಇದ್ಯಾವುದೂ ಹಿಂದೂಗಳಿಗಾಗಿನ ಯೋಜನೆಯಲ್ಲ. ಕೇವಲ ಬ್ರಾಹ್ಮಣರಿಗಾಗಿನ ಯೋಜನೆಗಳು. ಎಲ್ಲವನ್ನೂ ದಲಿತರಿಗೇ ಮೀಸಲಿರಿಸಿದರು ಎಂದು ಬಹುಸಂಖ್ಯಾತ ಹಿಂದೂಗಳನ್ನು ಎತ್ತಿಕಟ್ಟಿ ರಾಜಕೀಯವಾಗಿ ಪ್ರಭಾವಿಗಳಾದ ಬ್ರಾಹ್ಮಣ ಸಮುದಾಯ ಪಡೆಯುತ್ತಿರುವ ಯೋಜನೆಗಳಿವು. ಖಂಡಿತವಾಗಿಯೂ ಬ್ರಾಹ್ಮಣರು ಈ ಯೋಜನೆಗಳ ಸದುಪಯೋಗ ಪಡೆಯಲಿ. ಆದರೆ ಶತಶತಮಾನಗಳಿಂದ ಹಿಂದುಳಿದ ಸಮುದಾಯಗಳು ಇದೇ ಯೋಜ‌ನೆಯನ್ನು ಪಡೆದಾಗ ಬ್ರಾಹ್ಮಣರ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರತಿಕ್ರಿಯೆಗಳು ಎಷ್ಟು ಅಪಾಯಕಾರಿಯಾಗಿದ್ದವು ಎಂಬುದನ್ನು ಬ್ರಾಹ್ಮಣರ ಮಾತನ್ನೇ ವೇದವಾಕ್ಯ ಎಂದುಕೊಂಡ ಹಿಂದುಳಿದ ವರ್ಗಗಳು ತಿಳಿದುಕೊಳ್ಳಲಿ.

ವಿಪರ್ಯಾಸ ಎಂದರೆ, ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಿಂದಿನ ಸಿದ್ದರಾಮಯ್ಯ ಸರಕಾರ ಜಾತಿ ಜನಗಣತಿ ಮಾಡಲು ಮುಂದಾದಾಗ ಕಾಂಗ್ರೆಸ್ ಮತ್ತು ಬಿಜೆಪಿಯ ಬ್ರಾಹ್ಮಣರು ವಿರೋಧ ವ್ಯಕ್ತಪಡಿಸಿದ್ದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳು ಮತ್ತು ದಲಿತರು ಸರಕಾರಿ ಯೋಜನೆಯನ್ನು ಪಡೆದುಕೊಳ್ಳಬಹುದು ಎಂಬ ಭಯದಿಂದ ಜಾತಿಜನಗಣತಿಯನ್ನು ವಿರೋಧಿಸಿದ್ದರು. ಬ್ರಾಹ್ಮಣರ ಮಾತುಗಳಿಗೆ ಬಲಿಯಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಹಿಂದೂ ಮುಖಂಡರೂ ಜಾತಿ ಜನಗಣತಿಯನ್ನು ವಿರೋಧಿಸಿದ್ದರು. ಇದೀಗ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ಬ್ರಾಹ್ಮಣ ಸಮುದಾಯದ ಬಗ್ಗೆ ರಾಜ್ಯಾದ್ಯಂತ ಗಣತಿಗೆ ನಿರ್ಧರಿಸಲಾಗಿದೆ.

ಜಾತಿ ಆಧರಿತ ಮೀಸಲಾತಿಯನ್ನು ವಿರೋಧಿಸುವ ಹಿಂದೂ ಸಂಘಟನೆಗಳು ಮತ್ತು ಅದರಲ್ಲಿ ಹಿಂದುಳಿದ ವರ್ಗಗಳ ನಾಯಕರು, ಕಾರ್ಯಕರ್ತರು ಈಗ ಏನನ್ನುತ್ತಾರೆ ? ಇನ್ನಾದರೂ ಈ ಪಿತೂರಿಗಳ ಬಗ್ಗೆ ಅರಿತುಕೊಳ್ಳುವುದು ಒಳ್ಳೆಯದು.

ಕೃಪೆ: ನವೀನ್ ಸೂರಿಂಜೆಯವರ ಫೇಸ್‌ಬುಕ್ ನಿಂದ.
(ಯೋಜನೆಗಳ ಮಾಹಿತಿ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ)


ಇದನ್ನೂ ಓದಿ: ರೈತ ಹೊಸ ಬೆಳೆಯನ್ನು ಬೆಳೆಯಬಲ್ಲ…. ಹೊಸ ನಗರವನ್ನು ಸೃಷ್ಟಿಸಬಲ್ಲ…!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....