ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸಾವಿರಾರು ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಶ್ರೀಲಂಕಾ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ನಂತರ, ದ್ವೀಪ ರಾಷ್ಟ್ರದ ಮಾಜಿ ಕ್ರಿಕೆಟಿಗರು ಜನಾಂದೋಲನದ ಪರ ದನಿ ಎತ್ತಿದ್ದಾರೆ.
ಕ್ರಿಕೆಟ್ ದಂತಕಥೆ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನ, ಸನತ್ ಜಯಸೂರ್ಯ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಅಧ್ಯಕ್ಷೀಯ ಭವನದ ಹೊರಗೆ ಜಮಾಯಿಸಿರುವ ಪ್ರತಿಭಟನಾಕಾರರ ಮೂರು ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಟ್ವೀಟ್ ಮಾಡಿದ ಕುಮಾರ ಸಂಗಕ್ಕಾರ, “ಇದು ನಮ್ಮ ಭವಿಷ್ಯಕ್ಕಾಗಿ” ಎಂದು ಬರೆದಿದ್ದಾರೆ.
This is for our future. pic.twitter.com/pSMmo4o81Q
— Kumar Sangakkara (@KumarSanga2) July 9, 2022
ಲಂಕಾ ಧ್ವಜಗಳನ್ನು ಬೀಸುತ್ತಿರುವ ಬೃಹತ್ ಜನರ ಗುಂಪನ್ನು ವಿಡಿಯೊ ಕ್ಲಿಪ್‌ನಲ್ಲಿ ನೋಡಬಹುದು. ಜನರನ್ನು ಉದ್ದೇಶಿಸಿ ಧ್ವನಿವರ್ಧಕದ ಮೂಲಕ ಯಾರೋ ಒಬ್ಬರು ಮಾತನಾಡುವುದನ್ನು ಕೇಳಬಹುದು.
ಪ್ರತಿಭಟನಾಕಾರರು ಹಲವು ತಿಂಗಳಿಂದ ಅಧ್ಯಕ್ಷರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಜನರ ಒತ್ತಾಯಕ್ಕೆ ಮಣಿಯದ ಕಾರಣ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲಾಗಿದೆ.
ಮತ್ತೊಬ್ಬ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಕೂಡ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಅಧ್ಯಕ್ಷರನ್ನು “ವಿಫಲ ನಾಯಕ” ಎಂದು ಕರೆದಿದ್ದಾರೆ.
“ವಿಫಲ ನಾಯಕನನ್ನು ಹೊರಹಾಕುವ ಏಕೈಕ ಗುರಿಯೊಂದಿಗೆ ದೇಶ ಈ ರೀತಿಯಲ್ಲಿ ಒಗ್ಗೂಡಿದ್ದನ್ನು ನಾನು ಜೀವಮಾನದಲ್ಲಿ ನೋಡಿರಲಿಲ್ಲ. ದಯವಿಟ್ಟು ಶಾಂತಿಯಿಂದ ಹೋಗಿ” ಎಂದಿರುವ ಅವರು #GoHomeGota ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.
“ನಾನು ಯಾವಾಗಲೂ ಶ್ರೀಲಂಕಾದ ಜನರೊಂದಿಗೆ ನಿಲ್ಲುತ್ತೇನೆ. ಶೀಘ್ರದಲ್ಲೇ ವಿಜಯವನ್ನು ಆಚರಿಸುತ್ತಾರೆ. ಯಾವುದೇ ಉಲ್ಲಂಘನೆಯಾಗದಂತೆ ಹೋರಾಟ ಮುಂದುವರಿಸಬೇಕು” ಎಂದಿದ್ದಾರೆ.
Ialways stand with the People of Sri Lanka. And will celebrate victory soon. This should be continue without any violation. #Gohomegota#අරගලයටජය pic.twitter.com/q7AtqLObyn
— Sanath Jayasuriya (@Sanath07) July 9, 2022
“ಜನ ರೊಚ್ಚಿಗೆದ್ದಿದ್ದಾರೆ. ರಾಜೀನಾಮೆ ನೀಡಿ ಅಥವಾ ಮನೆಗೆ ಹೋಗಿ ಎನ್ನುವುದು ನಿಮಗೆ ಅರ್ಥವಾಗುತ್ತಿಲ್ಲವೇ ಮಿಸ್ಟರ್ ಪ್ರೆಸಿಡೆಂಟ್ ಮತ್ತು ಮಿಸ್ಟರ್ ಪ್ರೈಮ್ ಮಿನಿಸ್ಟರ್? ಇದು ಮಿಸ್ಟರ್ ಬೀನ್ ಸಿನಿಮಾ ಅಲ್ಲ. ಇದು ನಿಜ ಜೀವನ. ನೀವು ಜನರ ಜೀವನದೊಂದಿಗೆ ಆಟವಾಡುತ್ತಿದ್ದೀರಿ” ಎಂದಿದ್ದಾರೆ.
The people are getting agitated. What part of resign or go home don’t you understand Mr. President and Mr. Prime Minister this is not a Mr. BEAN movie this is real life your playing with people lives. #GoHomeGota #GoHomeRanil pic.twitter.com/XGRWXlpGhn
— Sanath Jayasuriya (@Sanath07) July 9, 2022
ಇಂದಿನ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವು ಟ್ವೀಟ್ಗಳನ್ನು ರೀ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ “ಮಿಸ್ಟರ್ ಬೀನ್ ಪ್ಲೀಸ್ ರಿಸೈನ್, ನೋ ಮೋರ್ ಡೀಲ್ಸ್” ಎಂದಿದ್ದಾರೆ.
Mr Bean please resign 🙏🏻 No more deals pic.twitter.com/lH3iHZCIUJ
— Mahela Jayawardena (@MahelaJay) July 9, 2022
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಕೊಲಂಬೊದ ತಮ್ಮ ಸರ್ಕಾರಿ ಅಧಿಕೃತ ನಿವಾಸದಿಂದ ಪರಾರಿಯಾದ ಕೆಲವೇ ಗಂಟೆಗಳ ನಂತರ, ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷೀಯ ನಿವಾಸದ ಕಾಂಪೌಂಡ್ ದಾಟಿದರು. ಅಲ್ಲಿನ ಐಶಾರಾಮಿ ಈಜು ಕೊಳದಲ್ಲಿ ಈಜಿದರು. ಕಿಚನ್‌ನಲ್ಲಿ ಊಟ ಮಾಡಿದರು.
ಪ್ರತಿಭಟನೆಗೆ ಸಂಬಂಧಿಸಿದ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ವೈರಲ್ ಅಗಿರುವ ವಿಡಿಯೊದಲ್ಲಿ ಕೆಲವು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದರೆ, ಇನ್ನು ಕೆಲವರು ವೀಡಿಯೋ ಮಾಡುತ್ತಿರುವುದು ಕಾಣುತ್ತದೆ.
ದೇಶವನ್ನು ಆರ್ಥಿಕ ವಿನಾಶದಿಂದ ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನಾಕಾರರು ಬಸ್‌ಗಳು, ರೈಲುಗಳು ಮತ್ತು ಟ್ರಕ್‌ಗಳಲ್ಲಿ ರಾಜಧಾನಿಗೆ ಆಗಮಿಸಿದ್ದರು. ಅದಕ್ಕೂ ಮೊದಲು ರಾಷ್ಟ್ರಪತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ರಾಷ್ಟ್ರಪತಿ ಗೋಟಬಯಾ ರಾಜಪಕ್ಷ ಅವರನ್ನು ಉಲ್ಲೇಖಿಸಿ “ಗೋಟಾ ಮನೆಗೆ ಹೋಗು” ಎಂದು ಕೂಗುತ್ತಿದ್ದಾರೆ.
ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


