Homeಅಂತರಾಷ್ಟ್ರೀಯಶ್ರೀಲಂಕಾ: ರಾಷ್ಟ್ರಪತಿ ನಿವಾಸ ವಶಪಡಿಸಿ ಸ್ವಿಮಿಂಗ್‌ಪೂಲ್‌ನಲ್ಲಿ ಈಜಾಡಿದ ಪ್ರತಿಭಟನಾಕಾರರು

ಶ್ರೀಲಂಕಾ: ರಾಷ್ಟ್ರಪತಿ ನಿವಾಸ ವಶಪಡಿಸಿ ಸ್ವಿಮಿಂಗ್‌ಪೂಲ್‌ನಲ್ಲಿ ಈಜಾಡಿದ ಪ್ರತಿಭಟನಾಕಾರರು

- Advertisement -
- Advertisement -

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಕೊಲಂಬೊದ ತಮ್ಮ ಸರ್ಕಾರಿ ಅಧಿಕೃತ ನಿವಾಸದಿಂದ ಪರಾರಿಯಾದ ಗಂಟೆಗಳ ನಂತರ, ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷೀಯ ನಿವಾಸದ ಕಾಂಪೌಂಡ್‌ ದಾಟಿ ಅಲ್ಲಿನ ಐಶರಾಮಿ ಈಜು ಕೊಳದಲ್ಲಿ ಈಜಿ ಖುಷಿ ಪಟ್ಟಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈರಲ್ ಅಗಿರುವ ವಿಡಿಯೊದಲ್ಲಿ ಕೆಲವು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದರೆ, ಇನ್ನು ಕೆಲವರು ವೀಡಿಯೋ ಮಾಡುತ್ತಿರುವುದು ಕಾಣುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶವನ್ನು ಆರ್ಥಿಕ ವಿನಾಶದಿಂದ ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನಾಕಾರರು ಬಸ್‌ಗಳು, ರೈಲುಗಳು ಮತ್ತು ಟ್ರಕ್‌ಗಳಲ್ಲಿ ರಾಜಧಾನಿಗೆ ಆಗಮಿಸಿದ್ದರು. ಅದಕ್ಕೂ ಮೊದಲು ರಾಷ್ಟ್ರಪತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಉದ್ರಿಕ್ತ ಪ್ರತಿಭಟನಾಕಾರರು ರಾಷ್ಟ್ರಪತಿ ಗೋಟಬಯಾ ರಾಜಪಕ್ಷ ಅವರನ್ನು ಉಲ್ಲೇಖಿಸಿ “ಗೋಟಾ ಮನೆಗೆ ಹೋಗು” ಎಂದು ಕೂಗುತ್ತಿದ್ದಾರೆ.

ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...