ಅಗಲಿತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ರವರಿಗೆ ಇಡೀ ದೇಶವೇ ಭಾವಪೂರ್ಣ ಶ್ರಧ್ದಾಂಜಲಿ ಸಲ್ಲಿಸಿತು. ದೇಶದ ನಾಯಕರು ಸೇರಿದಂತೆ, ಚಿತ್ರರಂಗದ ನಟ-ನಟಿಯರು ಮಂಬೈಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು. ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್‌ರವರು ಅಂತಿಮ ನಮನ ಸಲ್ಲಿಸಿದ ಚಿತ್ರಗಳು ಟ್ವಿಟರ್‌ನಲ್ಲಿ ಭಾವನಾತ್ಮಕ ಮತ್ತು ಐಕ್ಯತೆಯ ಸಂದೇಶಗಳೊಂದಿಗೆ ವೈರಲ್ ಆಗುತ್ತಿವೆ.
ಚಿತ್ರದಲ್ಲಿ ಶಾರುಖ್ ಖಾನ್ ಇಸ್ಲಾಂ ಪದ್ದತಿಯಂತೆ ದುವಾ ಮಾಡುತ್ತಿದ್ದರೆ ಅವರ ಮ್ಯಾನೇಜರ್ ಪೂಜಾ ದದ್ಲಾನಿಯವರು ಹಿಂದೂ ಸಂಪ್ರದಾಯದಂತೆ ಕೈಮುಗಿದು ಅಂತಿಮ ನಮನ ಸಲ್ಲಿಸಿದ್ದಾರೆ. ತದನಂತರ ಶಾರುಖ್ ಖಾನ್ ಸಹ ಹಿಂದೂ ಪದ್ದತಿಯಂತೆ ಕೈಮುಗಿದು ಗೌರವ ಸಲ್ಲಿಸಿದ್ದಾರೆ. ಈ ಚಿತ್ರಗಳು ಇದು ನನ್ನ ಭಾರತ, ಜಾತ್ಯಾತೀತ ಭಾರತ, ವಿವಿಧತೆಯನ್ನು ಏಕತೆಯನ್ನು ಸಾರುವ ಬಹುತ್ವದ ಭಾರತ ಎಂಬ ಸಾಲುಗಳೊಂದಿಗೆ ಹಂಚಿಕೆಯಾಗಿವೆ.
💕 nothing & no one can divide us. This is my India pic.twitter.com/fcLDlndcg4
— Sowmya | ಸೌಮ್ಯ (@Sowmyareddyr) February 6, 2022
ಯಾರೂ, ಯಾವುದು ಸಹ ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ. ಇದು ನನ್ನ ಭಾರತ ಎಂದು ಸೌಮ್ಯ ಎಂಬುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
#ShahRukhKhan at #LataMangeshkar 's funeral offering prayers! This is the real heritage & culture of India. Certain religious bigots cannot digest it! pic.twitter.com/75B4w0GY3A
— Chandra Kumar Bose (@Chandrakbose) February 7, 2022
“ಲತಾ ಮಂಗೇಶ್ಕರ್‌ರವರ ಅಂತ್ಯಕ್ರಿಯೆಯಲ್ಲಿ ಶಾರುಖ್ ಖಾನ್‌ರವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದು ಭಾರತದ ನಿಜವಾದ ಪರಂಪರೆ ಮತ್ತು ಸಂಸ್ಕೃತಿಯಾಗಿದೆ. ಕೆಲ ಧಾರ್ಮಿಕ ಮತಾಂಧರು ಇದನ್ನು ಜೀರ್ಣಿಸಿಕೊಳ್ಳಲಾರರು” ಎಂದು ಚಂದ್ರ ಕುಮಾರ್ ಬೋಸ್‌ರವರು ಟ್ವೀಟ್ ಮಾಡಿದ್ದಾರೆ.
These two pictures is enough to tell you who is Shah Rukh Khan ❤️🇮🇳 pic.twitter.com/OqFK54xVAH
— VEER ❤️ (@veersrkian555) February 6, 2022
King Khan prays for Lata Ji as he places some flowers 🤲 #shahrukhkhan #riplatamangeshkar #LataMangeshkar #restinpeacelatamangeshkar pic.twitter.com/SsJloGOfqF
— Pinkvilla (@pinkvilla) February 6, 2022
Ishwar Allah tere naam,⁰sabko sanmati de bhagwan
🙌🙌🙌 pic.twitter.com/qIckax0T9x— Rana Safvi رعنا राना (@iamrana) February 6, 2022
ಈಶ್ವರ್ ಅಲ್ಲಾ ತೇರಾ ನಾಮ್, ಸಬ್ಕೊ ಸನ್ಮತಿ ದೇ ಭಗವಾನ್ ಎಂದು ಚಿತ್ರದೊಂದಿಗೆ ರಾಣ ಸಫ್ವಿ ಬರೆದಿದ್ದಾರೆ.
This is my India https://t.co/prAlTUNksc
— Pawan Khera (@Pawankhera) February 6, 2022
ಇದು ನನ್ನ ಭಾರತ ಎಂದು ಕಾಂಗ್ರೆಸ್ ವಕ್ತಾರ ಪವೇನ್ ಖೇರಾ ಹಂಚಿಕೊಂಡಿದ್ದಾರೆ.
No hate can conquer this….
❤️#ShahRukhKhan pic.twitter.com/rCKoKu2mvX
— Aishe (ঐশী) (@aishe_ghosh) February 6, 2022
ಯಾವ ದ್ವೇಷವನ್ನು ಇದನ್ನು ಅಳಿಸಲು ಸಾಧ್ಯವಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯೆಶಾ ಘೋಷ್ ಬರೆದಿದ್ದಾರೆ.
This is the depiction of BHARAT 💪♥
YOU CAN'T BREAK IT BY DOING 80:20 #ShahRukhKhan pic.twitter.com/t1vZbrNlNm— Samriddhi K Sakunia (@Samriddhi0809) February 6, 2022
ಇದು ಭಾರತದ ನಿಜವಾದ ಅರ್ಥ. 80:20 ಎಂದು ಹೇಳುವ ಮೂಲಕ ಇದನ್ನು ಮುರಿಯಲು ನಿಮಗೆ ಸಾಧ್ಯವಿಲ್ಲ ಎಂದು ಸಮೃದ್ಧಿ ಕೆ ಎಂಬುವವರು ಬರೆದಿದ್ದಾರೆ.
The real India in one picture #ShahRukhKhan pic.twitter.com/czYTUR4QbV
— 𝑻𝒂𝒏𝒗𝒊𝒓👒 (@srkian_Tanvir) February 6, 2022
ನಿಜವಾದ ಭಾರತ ಒಂದು ಚಿತ್ರದಲ್ಲಿ ಎಂದು ತನ್ವೀರ್ ಟ್ವೀಟ್ ಮಾಡಿದ್ದಾರೆ.
ಇದಿಷ್ಟು ಆ ಚಿತ್ರವನ್ನು ನೋಡಿ ಒಂದು ಅತ್ಯುತ್ತಮ ಅಂತಿಮ ನಮನ ಎಂದು ಹೇಳಿರುವುದಾಗಿದೆ. ಆದರೆ ಕೆಲ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ಖಾನ್ ಮಂಗೇಶ್ಕರ್ ಮೇಲೆ “ಉಗುಳುದ್ದಾರೆ” ಎಂದು ಸುಳ್ಳು ಸುದ್ದಿ ಹರಡಿ ಮತಾಂಧತೆ ಮೆರೆದಿದ್ದಾರೆ. ಹರಿಯಾಣದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಯಾದವ್ ಅವರು ಈ ಆರೋಪವನ್ನು ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. “ಕ್ಯಾ ಇಸ್ನೆ ತುಕಾ ಹೈ (ಅವರು ಉಗುಳಿದ್ದಾರಾ)?” ಎಂದು ಟ್ವೀಟ್ ಮಾಡಿರುವ ಅವರು ವಿಡಿಯೊ ತುಣಕನ್ನು ಲಗತ್ತಿಸಿದ್ದಾರೆ.
क्या इसने थूका है ❓ pic.twitter.com/RZOa2NVM5I
— Arun Yadav (@beingarun28) February 6, 2022
ಇದಕ್ಕೆ ಬಹುತೇಕ ಜನ ನಿಮಗೆ ಇಸ್ಲಾಂ ಆಚರಣೆಯ ಕನಿಷ್ಟ ತಿಳುವಳಿಕೆಯು ಇಲ್ಲ. ಅವರು ದುವಾ ಮಾಡಿದ ನಂತರ ಉಫ್ ಎನ್ನುವ ಪದ್ದತಿ ಅನುಸರಿಸಿದ್ದಾರೆ ಅಷ್ಟೆ. ಇಲ್ಲಿಯೂ ನಿಮ್ಮ ಕೋಮುವಾದ ತರಬೇಡಿ ಎಂದು ಖಂಡಿಸಿದ್ದಾರೆ.
ಇದನ್ನೂ ಓದಿ: ಲತಾ ಮಂಗೇಶ್ಕರ್ ಮೇಲೆ ಶಾರುಖ್ ಉಗುಳಿದರೆಂದು ಸುಳ್ಳು ಹಬ್ಬಿಸಿದ ಬಿಜೆಪಿ ನಾಯಕರು!


