ದೆಹಲಿಯ 2020 ರ ಗಲಭೆ ಪ್ರಕರಣದಲ್ಲಿ ಹೋರಾಟಗಾರರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರ ಆರು ಜನರ ಜಾಮೀನು ಅರ್ಜಿಗಳ ವಿರುದ್ಧದ ಅರ್ಜಿಗಳನ್ನು ಕೊನೆಯಿಲ್ಲದೆ ಕೇಳುತ್ತಲೆ ಇರಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಪ್ರಾಸಿಕ್ಯೂಷನ್‌ಗೆ ತಿಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಇದು ಕೊನೆಗೊಳ್ಳಬೇಕು
ಈ ವಿಷಯಕ್ಕೆ ಸಂಬಂಧಿಸಿದಂತೆ ಇಮಾಮ್ ಮಾಡಿದ್ದಾರೆ ಎನ್ನಲಾದ ಭಾಷಣಗಳ ಆಯ್ದ ಭಾಗಗಳನ್ನು ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಓದುತ್ತಿದ್ದಾಗ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ಪೀಠವು ಮಧ್ಯಪ್ರವೇಶಿಸಿತು. ಪ್ರಸಾದ್ ಅವರ ವಾದಗಳು ಎಷ್ಟು ಕಾಲ ಮುಂದುವರಿಯುತ್ತವೆ ಎಂದು ಈ ವೇಳೆ ಪೀಠ ಕೇಳಿತು.
“ಇದು ಕೊನೆಗೊಳ್ಳಬೇಕು! ಇದು ಈಗ ಕೊನೆಗೊಳ್ಳಬೇಕು. ಇದು ಕೊನೆಯಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ. ನಾವು ನಿಮಗೆ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ.” ಎಂದು ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ನ್ಯಾಯಾಲಯ ಉಲ್ಲೇಖಿಸಿದೆ. ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಕೂಡ ಪ್ರಕರಣದಲ್ಲಿ ವಾದಗಳನ್ನು ಸಲ್ಲಿಕೆ ಮಾಡಲು ಸಮಯ ಕೋರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನೀವು ಈಗ ಮುಗಿಸಬೇಕು. ಇದು ಕೊನೆಯಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ.” ಎಂದು ಚಾವ್ಲಾ ಹೇಳಿದ್ದಾರೆ. ಪ್ರಕರಣಗಳ ಮುಂದಿನ ವಿಚಾರಣೆಯನ್ನು ಫೆಬ್ರವರಿ 12 ರಂದು ನಡೆಸುವುದಾಗಿ ಪೀಠ ನಿಗದಿಪಡಿಸಿದೆ.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಮೊಹಮ್ಮದ್ ಸಲೀಮ್ ಖಾನ್, ಶಿಫಾ ಉರ್ ರೆಹಮಾನ್, ಶಾದಾಬ್ ಅಹ್ಮದ್, ಅಥರ್ ಖಾನ್, ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ಸಲ್ಲಿಸಿದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
2020ರ ಫೆಬ್ರವರಿ ವೇಳೆ ಈಶಾನ್ಯ ದೆಹಲಿಯಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅವರ ಮೇಲೆ ಪ್ರಕಣಗಳನ್ನು ದಾಖಲಿಸಲಾಗಿದೆ.
ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ದೊಡ್ಡ ಪಿತೂರಿಯ ಭಾಗವಾಗಿ ಹಿಂಸಾಚಾರ ನಡೆದಿದ್ದು, ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದವರು ಇದನ್ನು ಯೋಜಿಸಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಇದನ್ನೂಓದಿ: ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ


