Homeಮುಖಪುಟಪಕ್ಷದ ಅಭ್ಯರ್ಥಿಗಳಾಗಲು ಬಯಸುವವರು ₹ 25 ಸಾವಿರ ಪಾವತಿಸಿ: ಕಮಲ್ ಹಾಸನ್‌

ಪಕ್ಷದ ಅಭ್ಯರ್ಥಿಗಳಾಗಲು ಬಯಸುವವರು ₹ 25 ಸಾವಿರ ಪಾವತಿಸಿ: ಕಮಲ್ ಹಾಸನ್‌

- Advertisement -
- Advertisement -

ನಟ-ರಾಜಕಾರಣಿ ಕಮಲ್‌‌ ಹಾಸನ್ ಅವರ ಮಕ್ಕಲ್‌ ನೀದಿ ಮಯ್ಯಂ (ಎಂಎನ್‌ಎಂ) ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಪಕ್ಷದ ಸದಸ್ಯರಿಂದ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ಸೋಮವಾರ ಸಂಜೆ ಪ್ರಕಟಿಸಲಾಗಿದೆ.

ಫೆಬ್ರವರಿ 21 ರ ಭಾನುವಾರದಂದು ಅರ್ಜಿಗಳು ತೆರೆದುಕೊಳ್ಳಲಿದ್ದು, ಸಂಭಾವ್ಯ ಅಭ್ಯರ್ಥಿಗಳು ಎಂದು ಪರಿಗಣಿಸಲು 25 ಸಾವಿರ ರೂ.ಗಳನ್ನು ಪಾವತಿಸಬೇಕು ಮತ್ತು ಪಕ್ಷದ ಸದಸ್ಯರು ಅಲ್ಲದವರೂ ಸಹ ಅರ್ಜಿ ಸಲ್ಲಿಸಬಹುದು ಅಥವಾ ಅವರನ್ನು ನಾಮ ನಿರ್ದೇಶನ ಮಾಡಬಹುದು ಎಂದು ಪಕ್ಷವು ಹೇಳಿದೆ.

ಕಮಲ್ ಹಾಸನ್, ತಮ್ಮ ಪಕ್ಷಕ್ಕೆ “ಬ್ಯಾಟರಿ ಟಾರ್ಚ್” ಚಿಹ್ನೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ನನ್ನನ್ನು ಹೆದರಿಸೋಕೆ ನೋಟಿಸ್ ನೀಡಿದ್ದಾರೆ, ಫೆ. 21ರೊಳಗೆ ಹಿಂಪಡೆಯುತ್ತಾರಂತೆ: ಯತ್ನಾಳ್

2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅದೇ ಚಿಹ್ನೆಯನ್ನು ಪಕ್ಷವು ಬಳಸಿತ್ತು. ಈ ಚೊಚ್ಚಲ ಚುನಾವಣೆಯಲ್ಲಿ ಪಕ್ಷವು ಶೇಕಡಾ 3.77 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಕೆಲವು ನಗರ ಪ್ರದೇಶದಲ್ಲಿ ಪಕ್ಷವು ಶೇಕಡಾ 10 ರಷ್ಟು ಮತಗಳನ್ನು ಪಡೆದುಕೊಂಡಿತ್ತು.

“ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ನಮಗೆ ಟಾರ್ಚ್‌ಲೈಟ್ ಚಿಹ್ನೆ ನೀಡಲಾಗಿದೆ” ಎಂದು ಕಮಲ್ ಹಾಸನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಂಬರುವ ಚುನಾವಣೆಗಳಿಗೆ ಚುನಾವಣಾ ಕಾರ್ಯತಂತ್ರಗಳನ್ನು ನಿರ್ಧರಿಸಲು ಎಂಎನ್‌ಎಂ ಪಕ್ಷದ “ಖಾಯಂ ಅಧ್ಯಕ್ಷ” ರಾಗಿರುವ ಕಮಲ್ ಹಾಸನ್‌ಗೆ ಪಕ್ಷವು ಅಧಿಕಾರ ನೀಡಿದೆ. ಈ ತಂತ್ರಗಳಲ್ಲಿ ಚುನಾವಣಾ ಮೈತ್ರಿ ಮತ್ತು ಅಭ್ಯರ್ಥಿಗಳ ಆಯ್ಕೆಯು ಸೇರಿದೆ ಎಂದು ಪಕ್ಷವು ಹೇಳಿದೆ.

ಇದನ್ನೂ ಓದಿ: ’ಹಿಂದೂ ನಾವೆಲ್ಲ ಒಂದು’ ಎಂದವರು ಜಾತಿ ಸಮಾವೇಶ ಮಾಡುತ್ತಿರುವುದೇಕೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...