Homeಮುಖಪುಟಭಗತ್ ಸಿಂಗ್‌ ಮತ್ತು ಆತನ ಸಂಗಾತಿಗಳ ಚಿಂತನೆಗಳ ನೆನಪು

ಭಗತ್ ಸಿಂಗ್‌ ಮತ್ತು ಆತನ ಸಂಗಾತಿಗಳ ಚಿಂತನೆಗಳ ನೆನಪು

ಇಂದು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಹುತಾತ್ಮ ದಿನ. ಈ ಮೂವರ ಅದಮ್ಯ ಚೇತನಕ್ಕೆ ನಾವು ಗೌರವಿಸಿ , ಆದರ್ಶವಾಗಿ ಸ್ವೀಕರಿಸೋಣ. ಈ ಮಹಾತ್ಮರು ಹುಟ್ಟಿದ ನೆಲದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಅಲ್ಲವೇ?

- Advertisement -
- Advertisement -

“ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.”

ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ?

ಭಗತ್ ಸಿಂಗ್…!!

ಭಾರತದ ಇತಿಹಾಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನವೇ ಭಗತ್ ಸಿಂಗ್. ಕೇವಲ 23 ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಭಗತ್ ಸಿಂಗ್ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ. ಭಗತ ‌ಸಿಂಗ್ ನ ಆದರ್ಶಗಳನ್ನು ಕೇವಲ ಹುತಾತ್ಮ ‌ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆ.

“ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ನುಡಿದ ಭಗತ್‍ಸಿಂಗ್‍ ಮಾತಿನಂತೆ  ಭಗತ್ ಸಿಂಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಆತನ ವಿಚಾರ, ಆದರ್ಶ ಸಿದ್ಧಾಂತ, ಕ್ರಾಂತಿಯ ಕಿಡಿಗಳು ಇಂದಿಗೂ ಜೀವಂತವಾಗಿವೆ. ಭಗತ್ ಸಿಂಗ್ ನನ್ನು ನಾವು ಕೇವಲ ‘ದೇಶಪ್ರೇಮಿ’ ‘ಹುತಾತ್ಮ’ ಎಂದು ಬಿಂಬಿಸುವ ಮೂಲಕ ಆರಾಧನೆವಷ್ಟೇ ಮಾಡುವುದಲ್ಲ. ಭಗತ್ ಸಿಂಗ್ ಎಂದರೆ ಅದೊಂದು ಕ್ರಾಂತಿಯ ಚಿಲುಮೆ, ಅಮೋಘ ಶಕ್ತಿ ಎಂದು ಅರಿಯಬೇಕು. ಭಗತ್ ಸಿಂಗ್‌ನ ಉನ್ನತ ಧ್ಯೇಯ ಮತ್ತು ಆದರ್ಶ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ. ಆತನ ಕ್ರಾಂತಿಕಾರಿ ಚಿಂತನೆಗಳನ್ನು ಮನಗಂಡು ನಾವೆಲ್ಲರೂ ಮುನ್ನಡೆಯಬೇಕಿದೆ.

ಶಾಹಿದ್ ಭಗತ್ ಸಿಂಗ್, 28ನೆಯ ಸೆಪ್ಟೆಂಬರ್ 1907ರಂದು ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಮೂರನೆಯ ಮಗನಾಗಿ. ಜನಿಸಿದನು. ದೇಶಪ್ರೇಮದ ಹಿನ್ನೆಲೆಯುಳ್ಳ ಕ್ರಾಂತಿಕಾರಿ ವಿಚಾರಧಾರೆಯ ಕುಟುಂಬದಲ್ಲಿ ಹುಟ್ಟಿದ ಭಗತನಿಗೆ ಹುಟ್ಟುತ್ತಲೇ ದೇಶಪ್ರೇಮದ ಕಿಚ್ಚು ಮೊಳಕೆಯೊಡೆಯಿತು. ಅದು 1919ರ ವೇಳೆ ಜಲಿಯಾನ್ ವಾಲ್ ಬಾಗದಲ್ಲಿ ಸಂಭವಿಸಿದ ಹತ್ಯಾಕಾಂಡ ಭಗತ್ ಸಿಂಗ್ ನಿಗೆ ಅತಿಯಾಗಿ ಕಾಡಿತ್ತು.
ಅಂದಿನ ಆ ಘಟನೆ ಭಗತ್ ಸಿಂಗ್ ನನ್ನು ಒಬ್ಬ ಅಪ್ರತಿಮ ಹೋರಾಟದ ನಾಯಕನಾಗಿ ರೂಪಿಸಿದ್ದು. ಮುಂದೆ ಬ್ರಿಟೀಷ್ ರಿಗೆ ಸಿಂಹಸ್ವಪ್ನವಾಗಿ, ಭವಿಷ್ಯ ಭಾರತದ ದಾರ್ಶನಿಕತೆಗಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ಭಗತ್ ಸಿಂಗ್ ಮಿಡಿದಿರುವುದು ಸ್ಪಷ್ಟವಾಗಿ ತೋರುತ್ತದೆ.

ಭಾರತದ ಸ್ವಾತಂತ್ರ್ಯ ಚಳುವಳಿಗೆ ಬ್ರಿಟೀಷರ ವಿರುದ್ಧ ಸಮರ ಸಾರಿರುವ ಭಗತ್‍ಸಿಂಗ್, ಮತ್ತು ಆತನ ಸಂಗಾತಿಗಳಾದ ರಾಜಗುರು ಸುಖದೇವ್ ಮೊದಲಿಗರು. ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ಸಾಮ್ರಾಜ್ಯದ ವಿರುದ್ಧ ಹೋರಾಡಲಿಲ್ಲ.ಶಾಂತಿ ಮತ್ತು ಸೌಹಾರ್ದತೆಗಾಗಿ ಹೋರಾಡಿದ ಭಗತ್ ಸಿಂಗ್ “ಭಾರತದ ನೆಲದಲ್ಲಿ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ಸಮಾಜವಾದಿ ಗಣತಂತ್ರವನ್ನು ಸ್ಥಾಪಿಸುವವರೆಗೂ ನಮ್ಮ ಅವಿರತ ಹೋರಾಟ ದಿಟ್ಟತನದಿಂದ, ದೃಢತೆಯಿಂದ ಮತ್ತು ಅಪರಿಮಿತ ವಿಶ್ವಾಸದಿಂದ ನಡೆಯುತ್ತದೆ” ಎಂದು ಹೇಳುವ ಮೂಲಕ ಮೌಲಿಕ ಚಿಂತನೆಗಳು ಮಂಡಿಸಿದನು.

ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆ ಬಯಸಿದ ಭಗತ್ ಸಿಂಗ್ ಕ್ರಾಂತಿ ಎಂದರೆ ಕ್ರಿಯೆ , ಹಾಗೂ ಪವಿತ್ರವಾದದ್ದು ಎಂದು ತಿಳಿದಿದನು. ಸಂಘಟಿತರಾಗಿ, ವ್ಯವಸ್ಥಿತವಾದ ಕಾರ್ಯ ಯೋಜನೆಯ ಮೂಲಕ ಉದ್ದೇಶಪೂರ್ವಕವಾಗಿ ಬದಲಾವಣೆ ತರುವುದನ್ನು ಕ್ರಾಂತಿ ಎನ್ನಲಾಗುತ್ತದೆ ಎಂದು ಹೇಳಿದನು. ಕ್ರಾಂತಿಕಾರಿಗಳು ಸಂಪೂರ್ಣ ಕ್ರಾಂತಿಗಾಗಿ ಹೋರಾಡುತ್ತೇವೆ ಆದರೆ ಸಂಪ್ರದಾಯವಾದಿಗಳು ಕ್ರಾಂತಿಕಾರಿ ಶಕ್ತಿಯನ್ನು ಭಂಗಗೊಳಿಸಿ ಹೋರಾಟವನ್ನು ವಿಫಲಗೊಳಿಸುತ್ತಾರೆ. ಹಾಗಾಗಿ ಇಂತಹ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ನಾವು ಗೊಂದಲಕ್ಕೆ ಒಳಗಾಗದೇ ಧ್ಯೇಯವನ್ನು ಸಾಧಿಸಬೇಕು ಎಂದು ಎಚ್ಚರಿಸುತ್ತಾನೆ.

ಇನ್ನೂ ಭಗತ್ ಸಿಂಗ್ ಒಬ್ಬ ನಾಸ್ತಿಕವಾದಿಯೇ? ಎಂಬುದು ನಾವು ತಿಳಿದುಕೊಳ್ಳಬೇಕಿದೆ. ನಾನು ಆಸ್ತಿಕ ಹಾಗೂ ನಾಸ್ತಿಕ ಎಂಬ ಎರಡು ಗುಂಪಿಗೂ ಸೇರಿದವನಲ್ಲ. ನಾನು ಸರ್ವವ್ಯಾಪಿ, ಸರ್ವಶಕ್ತ, ಸ್ವರ್ವಾಂತರ್ಯಾಮಿ, ಸರ್ವಗ್ರಾಹಿ ದೇವರ ಅಸ್ತಿತ್ವವನ್ನೆ ನಿರಾಕರಿಸುತ್ತೇನೆಂದು ಹೇಳುತ್ತಾನೆ. ಮನುಷ್ಯ ಜೀವನದಲ್ಲಿ ದೇವರ ಶಿಕ್ಷೆ ಅಥವಾ ಉಡುಗೊರೆಯ ಬಗ್ಗೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ನಮಗೆ ಬದುಕು ಮತ್ತು ಸಾವು ಭೌತಿಕ ನೆಲೆಯಲ್ಲಿ ಮಾತ್ರವೇ ಪ್ರಸ್ತುತ ಎನಿಸುತ್ತದೆ. “ದೇವರ ಸಾಮ್ರಾಜ್ಯದಲ್ಲಿ ಎಲ್ಲವೂ ಸೌಖ್ಯವಿದೆಯೇ?” ಎಂದು ಪ್ರಶ್ನಿಸುತ್ತಾ ನಾನು ನಾಸ್ತಿಕವಾದಿ ಹಾಗೂ ವಾಸ್ತವವಾದಿಯೂ ಹೌದು ಎನ್ನುವ ನಿರ್ಧಾರಕ್ಕೆ ಬರುತ್ತಾನೆ.

“ನಾನು ನನ್ನ ಅಂತಿಮ ಕ್ಷಣಗಳು ಎದುರಾದಾಗ ನಾನು ದೇವರನ್ನು ನಂಬಲು ಆರಂಭಿಸಿದರೆ ನನ್ನ ನೈತಿಕ ಅಧಃಪತನ ಹಾಗೂ ಅವಮಾನದ ಸಂಕೇತವಾಗುತ್ತದೆ. ಇಂತಹ ಕ್ಷುಲ್ಲಕ ಸ್ವಾರ್ಥ ಉದ್ದೇಶಗಳಿಗೆ ನಾನು ದೇವರಿಗೆ ಪ್ರಾರ್ಥಿಸಲಾರೆ” ಎಂದು ಹೇಳುವ ಭಗತ್ ಸಿಂಗ್ ತಾನು ನಂಬಿರುವ ಸಿದ್ಧಾಂತಕ್ಕೆ ಅಂತಿಮವರೆಗೂ ಬದ್ಧನಾಗಿರುವುದು ಇಲ್ಲಿ ಗಮನಿಸಬಹುದು.

ಭಗತ್ ಸಿಂಗ್ ಹುತಾತ್ಮನಾಗಿ 89 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಭಗತ್ ಸಿಂಗ್ ನನ್ನು ನಾವು ಕೇವಲ ಹುತಾತ್ಮ ದೇಶಭಕ್ತ ಎಂದೇ ಬಿಂಬಿಸಿದ್ದೇವೆ. “ಸಮಾಜವನ್ನು ನೂತನ ನೆಲೆಯಲ್ಲಿ,. ಹೆಚ್ಚು ಸಮರ್ಥವಾದ ನೆಲೆಯಲ್ಲಿ, ಪ್ರಸಕ್ತ ಆಡಳಿತ ವ್ಯವಸ್ಥೆ ಮತ್ತು ಪ್ರಭುತ್ವವನ್ನು ಕೊನೆಗೊಳಿಸಿ ವ್ಯವಸ್ಥಿತವಾಗಿ ನವ ಸಮಾಜವನ್ನು ನಿರ್ಮಿಸುವುದು ಕ್ರಾಂತಿಯ ಸ್ವರೂಪ” ಎಂದು ಹೇಳಿದ ಭಗತ್ ಸಿಂಗ್ ಚಿಂತನೆಗಳು ಇಲ್ಲವಾಗುತ್ತಿವೆ. ಆತನ ಮೂಲ ತ್ವತ್ವಾದರ್ಶ ಸಿದ್ಧಾಂತಗಳು ಮೂಲೆಗುಂಪು ಮಾಡುವ ಹುನ್ನಾರದಿಂದ ಕೇವಲ ದೇಶಭಕ್ತಿಯ ಚೌಕಟ್ಟಿನಲ್ಲಿ ಪೂಜಿಸುತ್ತಿರುವುದು ವಿಪರ್ಯಾಸವೇ ಸರಿ.

ಸಾಮಾಜಿಕ ವಿಚಾರಗಳನ್ನು ಸೇರಿದಂತೆ ಇನ್ನಿತರ ಮಹನೀಯರು ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಅನುಭವಾತ್ಮಕವಾಗಿ  ಅರ್ಥೈಸಿಕೊಳ್ಳಲು ಭಗತ್ ಸಿಂಗ್ ಇಷ್ಟಪಡುತ್ತಿದ್ದನು. ಹಾಗಾಗಿ “ಎಲ್ಲ ವಿಚಾರಗಳ ಅಧ್ಯಯನ ನಡೆಸಲು ಸೆರೆಮನೆಯೇ ಸೂಕ್ತ ತಾಣ ಎಂದು ನನಗೆ ಭಾಸವಾಗುತ್ತದೆ. ಯಾವುದೇ ವ್ಯಕ್ತಿ ಸ್ವತಃ ನೋವು ಅನುಭವಿಸಿದಲ್ಲಿ ಮಾತ್ರ‌ ಸ್ವಯಂ ಅಧ್ಯಯನ ಅತ್ಯುನ್ನತ ಹಂತ ಕಾಣಲು ಸಾಧ್ಯ” ಎಂದಾದರು. ತನ್ನ ಅಂತಿಮ ಕ್ಷಣಗಳವರೆಗೂ ಓದುವ ಹವ್ಯಾಸ ಮೈಗೂಡಿಸಿಕೊಂಡ ಭಗತ್ ಸಿಂಗ್ ಒಬ್ಬ ಉತ್ತಮ ಓದುಗ, ಬರಹಗಾರ ಕೂಡ ಹೌದು.

‘ಈ ಸಾವು ಸಹ ಬಹಳ ಸುಂದರವಾಗಿರುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ ‘ ನೋವಿನ ಹೋರಾಟದ ಬದುಕಿನ ಸಂದರ್ಭದಲ್ಲಿ ಸಾವು ಆದರ್ಶಮಯವಾಗಿ ಜೀವಂತಿಕೆ ಪಡೆಯುವುದು ಎಂದು ನುಡಿದ ಭಗತರು ಅಪ್ರತಿಮ ಧೈರ್ಯಶಾಲಿ ಆಗಿದ್ದರು.

ಸಮಕಾಲೀನ ಭಾರತದಲ್ಲಿ ಭಗತ್ ಸಿಂಗ್ ಕೇವಲ ಆರಾಧನೆಗಾಗಿ ಉಳಿದಿದ್ದಾನೆ, ಹೊರತು ಅವನು ಪ್ರತಿಪಾದಿಸಿದ ಸಿದ್ಧಾಂತ ಮಾತ್ರ ಉಸಿರಾಡಲು ನಲುಗುತ್ತಿದೆ. ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ಒದ್ದಾಡುತ್ತಿವೆ.
ನಾನು ಈ ನೆಲದ ಅಸ್ಮಿತೆಯ ಉಳಿವಿಗಾಗಿ ಹೋರಾಡಿದ ನನ್ನನ್ನು ಗುಂಡಿಕ್ಕಿ ಕೊಲ್ಲಲು ವಿನಂತಿಸಿದ ಭಾರತದ ಏಕೈಕ ದೇಶಪ್ರೇಮಿ ಭಗತ್ ಸಿಂಗ್ ನನ್ನು ‘ಭಾರತ ರತ್ನ’ ನೀಡಲು ಅರ್ಹತೆ ಅಳೆಯುತ್ತಾರೆ.

ಭಗತ್ ‌ಸಿಂಗ್, ರಾಜಗುರು ಹಾಗೂ ಸುಖದೇವ್ ಸೇರಿದಂತೆ ಅಸಂಖ್ಯಾತ ಸಂಗಾತಿಗಳನ್ನು ನಾವು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಆದರೆ ಇಂದಿನ ಯುವ ‌‌ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಇರುವುದು ಭಗತ್ ಸಿಂಗ್ ಚಿಂತನೆಗಳಲ್ಲಿ ಮಾತ್ರ. ಅಂದಿನ ‘ರಿಯಲ್ ಹೀರೋ’ ಗಳೇ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ. ಕಿರಿಯ ವಯಸ್ಸಲ್ಲೇ ಭಾರತದ ಭವಿಷ್ಯಕ್ಕಾಗಿ ಗಲ್ಲುಶಿಕ್ಷೆಗೆ ಗುರಿಯಾದ ಭಗತ್ ಸಿಂಗ್ ಮಾನವ ‌ಸಮಾಜಕ್ಕೆ ಆದಷ್ಟು ಹೆಚ್ಚಿನ ಸೇವೆ ಮಾಡಲು ಬಯಸಿದನು. ಭಗತ್ ಸಿಂಗ್ ಧೋರಣೆಯನ್ನು ನಮ್ಮೆಲ್ಲರ ಮನಸ್ಸಿನ ಮೇಲೆ ಅಚ್ಚಳಿಯದೆ ಪ್ರಭಾವ ಬೀರಿವೆ. ಇನ್ನೂ ನಾವು ಬಯಸಿದ ಭವಿಷ್ಯ ಭಾರತಕ್ಕೆ ಭಗತ್ ಸಿಂಗ್ ಆದರ್ಶ, ಚಿಂತನೆಗಳು ಮುನ್ನೆಲೆಗೆ ತರಲು ಪ್ರಯತ್ನಿಸೋಣ, ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿ ನಮ್ಮದಾಗಿಸೋಣ.‌

ಇಂದು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಹುತಾತ್ಮ ದಿನ. ಈ ಮೂವರ ಅದಮ್ಯ ಚೇತನಕ್ಕೆ ನಾವು ಗೌರವಿಸಿ , ಆದರ್ಶವಾಗಿ ಸ್ವೀಕರಿಸೋಣ. ಈ ಮಹಾತ್ಮರು ಹುಟ್ಟಿದ ನೆಲದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...