Homeಅಂಕಣಗಳುನೂರರ ನೋಟ: ಪ್ರಜಾಪ್ರಭುತ್ವದ ಕಗ್ಗೊಲೆಯ ಮೂರು ಪ್ರಕರಣಗಳು

ನೂರರ ನೋಟ: ಪ್ರಜಾಪ್ರಭುತ್ವದ ಕಗ್ಗೊಲೆಯ ಮೂರು ಪ್ರಕರಣಗಳು

- Advertisement -
- Advertisement -

ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ (1) ಕಾಶ್ಮೀರಕ್ಕೆ ಇನ್ನೂ statehood ಕೊಡದೆ ಇರುವುದು (2) ದೆಹಲಿಯಲ್ಲಿ ಅಧಿಕಾರ ಚುನಾಯಿತ ಸರ್ಕಾರದ ಕೈಯಲ್ಲಿರುವುದನ್ನು ಸಹಿಸದೆ ಕೇಂದ್ರ ಸರ್ಕಾರದಿಂದ ನೇಮಕರಾದ ಚುನಾಯಿತರಲ್ಲದ ಲೆಫ್ಟಿನೆಂಟ್ ಗವರ್ನರ್‌ರಿಗೆ ಅಸಂವಿಧಾನ ರೀತ್ಯಾ ಚುನಾಯಿತ ಸರ್ಕಾರದ ಮೇಲೆ ದಬ್ಬಾಳಿಕೆ ನಡೆಸುವ ಶಾಸನ ಜಾರಿಗೆ ತಂದಿರುವುದು (3) ಪುದುಚೇರಿಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಜಂಟಿ ಸರ್ಕಾರ ಅನೇಕ ವರ್ಷಗಳಿಂದ ಆಡಳಿತ ನಡೆಸುತ್ತಿತ್ತು. ಬಿಜೆಪಿ ಕೇಂದ್ರ ಸರ್ಕಾರ ತಾನು ನೇಮಿಸಿದ ರಾಜ್ಯಪಾಲರ ಮೂಲಕ ಪುದುಚೇರಿ ಚುನಾಯಿತ ಸರ್ಕಾರವನ್ನು ಕಿತ್ತೆಸೆಯಲು ಅಸಂವಿಧಾನಕಾರಿ ಷಡ್ಯಂತ್ರಗಳನ್ನು ರಚಿಸಿ ಆ ಸರ್ಕಾರವನ್ನು ಕೆಳಗಿಳಿಸಿ ಗೌರ್‍ನರ್ ರೂಲ್ ಜಾರಿಗೆ ತಂದಿರುವುದು.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ಕಿತ್ತುಹಾಕಿ ಮೋದಿ ಸರ್ಕಾರ ಕಾಶ್ಮೀರವನ್ನು ಮೂರು ಪ್ರಾಂತ್ಯಗಳಾಗಿ ಒಡೆದು ಗೌರ್‍ನರ್ ಕೈಗೆ ಅಧಿಕಾರ ನೀಡಿ ಒಂದೆರಡು ವರ್ಷ ಕಳೆದರೂ, ಕಾಶ್ಮೀರಕ್ಕೆ ಇನ್ನೂ statehood ಕೊಟ್ಟಿಲ್ಲ. ಚುನಾವಣೆ ನಡೆಸಿಲ್ಲ. ಚುನಾಯಿತ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿಲ್ಲ. 13.2.2021ರಂದು ಕೇಂದ್ರ ಸರ್ಕಾರದ ಗೃಹಮಂತ್ರಿಗಳು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ರಚನೆಯ ಮಸೂದೆ ಮಂಡಿಸಿದಾಗ ಗೃಹ ಸಚಿವ ಷಾ ಅವರು ಜಮ್ಮು ಕಾಶ್ಮೀರಕ್ಕೆ statehoodನ್ನು ಸರಿಯಾದ ಸಮಯದಲ್ಲಿ ನೀಡಲಾಗುವುದು ಎಂದು ಉತ್ತರಿಸಿದರು. ಅದರರ್ಥ ಸದ್ಯಕ್ಕಂತೂ statehood ಘೋಷಣೆ ಮಾಡುವುದಿಲ್ಲ ನಮಗೆ ಸಮಯ ಸರಿಯೆನಿಸಿದಾಗ statehood ದಯಪಾಲಿಸುವುದು ಎಂದು ಅರ್ಥೈಸಬೇಕಾದೀತು.

PC :The Federal News

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 371ನೆ ವಿಧಿಯನ್ನು ಮೋದಿ ಸರ್ಕಾರ ರದ್ದುಪಡಿಸಿದ ರೀತಿಯೇ ವಿಚಿತ್ರವಾಗಿತ್ತು. ಸರ್ಕಾರ ಈ ತಿದ್ದುಪಡಿ ತಂದು ಅದಕ್ಕೆ ರಾಷ್ಟ್ರಪತಿಯವರ ಸಹಿ ಹಾಕಿಸುವ ಮುನ್ನ ಪಾರ್ಲಿಮೆಂಟಿನ ಮುಂದೆ ಈ ಪ್ರಸ್ತಾಪ ಇಡಬೇಕಾಗಿತ್ತು. ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಆಯ್ಕೆಗೊಂಡ ಶಾಸನ ಸಭೆಯ ಸದಸ್ಯರನ್ನು ಈ ತಿದ್ದುಪಡಿಯ ಬಗೆಗೆ ಚರ್ಚೆ ಮಾಡಲು ಅವಕಾಶ ಕಲ್ಪಿಸಬೇಕಾಗಿತ್ತು. Referendum ಮುಖಾಂತರ ಜನರ ಸಮ್ಮತಿ ಪಡೆಯಬೇಕಾಗಿತ್ತು. ಈ ಮಾರ್ಗ ಬಿಟ್ಟು ಮೋದಿ ಸರ್ಕಾರ 50 ಸಾವಿರ ಸೈನಿಕರನ್ನು ಜಮ್ಮು ಕಾಶ್ಮೀರಕ್ಕೆ ಕಳಿಸಿ ಜನ ಬೆಚ್ಚಿ ಬೀಳುವಂತೆ ಮಾಡಿತು. ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಗೃಹಬಂಧನದಲ್ಲಿ ಇಡಲಾಯಿತು. ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದ ಪತ್ರಿಕೆ ಸಂಪಾದಕರು, ಗೌರವಯುತ ನಾಗರಿಕರು ಇವರನ್ನೆಲ್ಲ ಬಂಧಿಸಲಾಯಿತು. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದು ಭಾರತದ ಇತರ ಪ್ರಾಂತ್ಯದವರಿಗೆ, ವಿಶ್ವಕ್ಕೆ ತಿಳಿಯದಂತೆ ಮಾಡಲು ಎಲ್ಲ ಸುದ್ದಿವಾಹಕ ಯಂತ್ರಸಾಧನಗಳನ್ನು ಸ್ಥಗಿತಗೊಳಿಸಲಾಯಿತು. ಭಾರತದ ಅವಿಭಾಜ್ಯ ಅಂಗವಾಗಿರುವ ಒಂದು ರಾಜ್ಯವನ್ನು ಈ ರೀತಿ ನಡೆಸಿಕೊಂಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ?

ಎರಡು ವರ್ಷಗಳೆ ಕಳೆದು ಹೋಗಿದ್ದರೂ ಇನ್ನೂ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತತೆ ನೀಡದಿರುವುದು statehood ನೀಡದಿರುವುದು ಪ್ರಜಾಪ್ರಭುತ್ವದ ಬೆನ್ನಲುಬನ್ನೇ ಮುರಿಯುವ ಒಂದು ಹುನ್ನಾರ.

ಎರಡನೆಯ ಪ್ರಜಾಪ್ರಭುತ್ವದಕಗ್ಗೊಲೆಯ ಕೆಲಸ ನಡೆಸಿರುವುದು ರಾಜಧಾನಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲರ ಸರ್ಕಾರ ಅಧಿಕ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಈ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲು ಮೋದಿ ಸರ್ಕಾರ ಮೊದಲಿನಿಂದಲೂ ಹವಣಿಸುತ್ತಿತ್ತು. ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್‌ಗೂ, ಮುಖ್ಯಮಂತ್ರಿ ಕೇಜ್ರಿವಾಲರಿಗೂ ಈ ವಿಷಯದಲ್ಲಿ ದೊಡ್ಡ ಹೋರಾಟವೇ ನಡೆದುಹೋಯಿತು. ಮುಖ್ಯಮಂತ್ರಿ ಕೇಜ್ರಿವಾಲ್‌ರವರು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮುಂದೆ ಅನೇಕ ದಿನಗಳವೆರೆಗೆ ಪ್ರತಿಭಟನೆ ಮಾಡಿದರು. ಸರ್ವೋಚ್ಚ ನ್ಯಾಯಾಲಯ ಮಧ್ಯೆ ಪ್ರವೇಶಿಸಬೇಕಾಗಿ ಬಂದು, ಲೆಫ್ಟಿನೆಂಟ್ ಗವರ್ನರ್‌ರು ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪದೇ ಪದೇ ತಲೆ ಹಾಕದ ಹಾಗೆ ತಾಕೀತು ಮಾಡಿತು.

ಇತ್ತೀಚೆಗೆ ಮೋದಿ ಸರ್ಕಾರ ಮತ್ತೆ ದೆಹಲಿಯ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ತಲೆ ಹಾಕಲು ಅಧಿಕಾರ ನೀಡಿ, ಎರಡನೇ ಬಾರಿಗೆ ಹೆಚ್ಚು ಬಹುಮತದಿಂದ ಆಯ್ಕೆಯಾಗಿ ಬಂದಿರುವ ಕೇಜ್ರಿವಾಲ್ ಸರ್ಕಾರಕ್ಕೆ ತೊಡರುಗಾಲು ಹಾಕಲು ಅವಕಾಶ ಮಾಡಿಕೊಡುವ ಅವೈಜ್ಞಾನಿಕ ಕಾಯ್ದೆಗಳನ್ನು ರೂಪಿಸಿದ್ದಾರೆ. ಸರ್ಕಾರದ ಮಂತ್ರಿಮಂಡಲವಾಗಲಿ, ಮಂತ್ರಿಗಳೇ ಆಗಲಿ ಯಾವುದೇ ತೀರ್ಮಾನ ಮಾಡುವ ಮೊದಲು ಲೆಫ್ಟಿನೆಂಟ್ ಗವರ್ನರ್‌ರೊಡನೆ ಸಮಾಲೋಚನೆ ನಡೆಸಿ ಒಪ್ಪಿಗೆ ಪಡೆಯಬೇಕು ಎಂಬ ಬರ್ಬರ ಕಾನೂನು ರಚಿಸಲಾಗಿದೆ. ಪ್ರಜೆಗಳ ಭವಿಷ್ಯವನ್ನು ನಿರ್ಧರಿಸುವವರು ಚುನಾಯಿತ ಪ್ರತಿನಿಧಿಗಳಾಗಿರಬೇಕೇ ಹೊರತು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಅಲ್ಲ. ಇದೇ ರೀತಿಯ ಅನೇಕ ಪ್ರತಿಬಂಧಕಗಳನ್ನು ಹಾಕಿ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯಗಳಿಗಿಂತ ಮೋದಿ ಸರ್ಕಾರದ ಆಯ್ಕೆಯ ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯಗಳಿಗೇ ದೆಹಲಿ ಸರ್ಕಾರ ಮಾನ್ಯತೆ ಕೊಡಬೇಕೆಂದರೆ ಇದು ಪ್ರಜಾಸತ್ತೆಯ ಅವಹೇಳನವಲ್ಲದೇ ಬೇರೇನೂ ಅಲ್ಲ.

ಮತ್ತೆ ದೆಹಲಿ ಸರ್ಕಾರ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಲೆಫ್ಟಿನೆಂಟ್ ಗವರ್ನರ್ ಮತ್ತು ಮೋದಿ ಸರ್ಕಾರದ ವಿರುದ್ಧ ಕಾನೂನು ಸಮರ ಆರಂಭಿಸುವುದು ಅನಿವಾರ್ಯವೆನಿಸಿದೆ.

ಮೂರನೆಯದು ಪುದುಚೇರಿಯ ರಾಜಕೀಯದಲ್ಲಿ ಬಿಜೆಪಿ ಸರ್ಕಾರದಿಂದ ನೇಮಕರಾದ ರಾಜ್ಯಪಾಲರ ಹಸ್ತಕ್ಷೇಪ.

ಹಲವು ವರ್ಷಗಳ ಕಾಲ ರಾಜ್ಯಪಾಲರಾಗಿದ್ದ ಕಿರಣ ಬೇಡಿಯವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಕಾಂಗ್ರೆಸ್ ಡಿಎಂಕೆ ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಿದರು. ಈ ಮೈತ್ರಿ ಸರ್ಕಾರದ ಅಧಿಕಾರಗಳನ್ನು ನೇರವಾಗಿ ಸಂಪರ್ಕಿಸುವ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಿದರು. ಮುಖ್ಯಮಂತ್ರಿಗಳ ವಿರುದ್ಧ ಸಮರ ಸಾರಿದರು. ಪಕ್ಷದ ಸದಸ್ಯರ ಬಲವನ್ನು ಕುಗ್ಗಿಸಿ ಸರ್ಕಾರ ಬೀಳುವಂತೆ ಮಾಡಲು ಪ್ರಯತ್ನಿಸಿದರು. ಡಿಪಾಸಿಟ್ ಕಳೆದುಕೊಂಡು ಹೀನಾಯವಾಗಿ ಸೋತಿದ್ದ ಬಿಜೆಪಿಯ ಮೂವರನ್ನು ರಾಜ್ಯಪಾಲರು ನಾಮಕರಣ ಸದಸ್ಯರನ್ನಾಗಿ ಶಾಸನಸಭೆಗೆ ನೇಮಿಸಿದರು. ಅವಿಶ್ವಾಸ ನಿರ್ಣಯ ತರುವ ಮೂಲಕ ಶಾಸನಸಭೆಯಲ್ಲಿ ಬಹುಮತ ಕಳೆದುಕೊಳ್ಳುವಂತೆ ಮಾಡಿದರು. ಕೇಂದ್ರ ಸರ್ಕಾರ ಇದ್ದ ರಾಜ್ಯಪಾಲರನ್ನು ಕಿತ್ತುಹಾಕಿ ಗೌರ್‍ನರ್ ರೂಲ್‌ಅನ್ನು ಹೇರಿ ಹೊಸ ಗೌರ್‍ನರ್‌ಅನ್ನು ನೇಮಿಸಿತು. ಈ ರೀತಿಯಲ್ಲಿ ಮೋದಿ ಸರ್ಕಾರ ಅಧಿಕಾರದಲ್ಲಿದ್ದ ಕಾಂಗ್ರೆಸ್, ಡಿಎಂಕೆ ಸಂಯುಕ್ತ ಸರ್ಕಾರದ ಪತನಕ್ಕೆ ಸಂಚುಹೂಡಿ ಅದರಲ್ಲಿಯೂ ಫಲಾನುಭವಿಗಳಾದರು.

ಕೇಂದ್ರ ಸರ್ಕಾರ ಧೋರಣೆ ಏನು ಎಂಬುದನ್ನು ಪುದುಚೇರಿ ಪ್ರಕರಣದಿಂದ ನಾವು ತಿಳಿಯಬಹುದು. ತನ್ನ ವಿರೋಧ ಪಕ್ಷ ಸುಭದ್ರವಾಗಿ ಸರ್ಕಾರ ನಡೆಸುತ್ತಿದ್ದ ರಾಜ್ಯದಲ್ಲಿ, ಆ ಪಕ್ಷದ ಶಾಸಕರಲ್ಲಿ ಒಡಕುಉಂಟು ಮಾಡಿ, ಆ ಸರ್ಕಾರವನ್ನು ಅವಿಶ್ವಾಸ ನಿರ್ಣಯದ ಮೂಲಕ ಉರುಳಿಸಿ, ವಜಾಮಾಡಿ ಗೌರ್‍ನರ್ ರೂಲ್ ಎಂಬ ಹಿಂಬಾಗಿಲಿನ ಮೂಲಕ ತೆಕ್ಕೆಗೆ ತೆಗೆದುಕೊಂಡು, ಮುಂದೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದು ಮೋದಿ ಸರ್ಕಾರದ ನೀತಿಯಾಗಿದೆ.

ಬೇರೆ ಪಕ್ಷಗಳ ಹಿಡಿತದಲ್ಲಿರುವ ರಾಜ್ಯಗಳನ್ನು ಬಿಜೆಪಿ ರಾಜ್ಯವನ್ನಾಗಿ ಪರಿವರ್ತಿಸಲು ಸಂಚು ಮಾಡುವುದರಲ್ಲಿ ಮೋದಿ ಸರ್ಕಾರ ಎತ್ತಿದ ಕೈ. ಈ ಪ್ರವೃತ್ತಿಯನ್ನು ತಡೆಗಟ್ಟಲು ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಹೋರಾಟ ನಡೆಸಬೇಕು. ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಎಲ್ಲರೂ ಈ ಹೋರಾಟದಲ್ಲಿ ಕೂಡಿಕೊಳ್ಳಬೇಕು.


ಇದನ್ನೂ ಓದಿ: ಎನ್‌ಸಿಟಿ ದೆಹಲಿ ತಿದ್ದುಪಡಿ ಬಿಲ್: ಬೇರೆ ರಾಜ್ಯಗಳ ಬಾಗಿಲಿಗೂ ಕೇಂದ್ರೀಕರಣದ ಭೂತ ವಕ್ಕರಿಸುವ ಮುನ್ಸೂಚನೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...