2020ರ ಪುಲಿಟ್ಜೆರ್ ಪ್ರಶಸ್ತಿ ಜಮ್ಮುಕಾಶ್ಮೀರದ ಮೂವರು ಛಾಯಚಿತ್ರ ಪತ್ರಕರ್ತರಿಗೆ ಲಭಿಸಿದೆ. ಕೊರೊನಾ ಕಾರಣ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ಘೋಷಿಸಲಾಯಿತು.
ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕರಾದ ದಾರ್ ಯಾಸಿನ್, ಮುಖ್ತಾರ್ ಖಾನ್, ಮತ್ತು ಚನ್ನಿ ಆನಂದ್ ಅವರು ಕಳೆದ ವರ್ಷ ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿನ ಲಾಕ್ ಡೌನನ್ನು ಸೆರೆಹಿಡಿಯುವಲ್ಲಿ ಅವರು ಮಾಡಿದ ಕಾರ್ಯಗಳಿಗಾಗಿ ಬಹುಮಾನಗಳನ್ನು ಗೆದ್ದರು.
ಆರ್ಟಿಕಲ್ 370 ನ್ನು ರದ್ದು ಮಾಡಿದ ನಂತರ, ಫೋನ್ಗಳು ಹಾಗೂ ಇಂಟರ್ನೆಟ್ ಸೇವೆಯನ್ನು ತಡೆ ಹಿಡಿದು ಜಮ್ಮುಕಾಶ್ಮೀರದಾದ್ಯಂತ ಕರ್ಫ್ಯೂ ಹಾಗೂ ಲಾಕ್ ಡೌನ್ ಮಾಡಲಾಗಿತ್ತು. ಮುಖ್ಯವಾಗಿ ಫೋನು ಹಾಗೂ ಇಂಟರ್ ನೆಟ್ ಕಡಿತದಿಂದಾಗಿ ಕಾಶ್ಮೀರದ ಜನ ಜೀವನದ ಪರಿಸ್ಥಿತಿಗಳನ್ನು ಲಾಕ್ಡೌನ್ ಪರಿಸ್ಥಿತಿಯಲ್ಲಿ ಜಗತ್ತಿಗೆ ತೋರಿಸುವುದು ಕಷ್ಟಕರವಾಗಿತ್ತು.
ಪ್ರಶಸ್ತಿ ಗೆದ್ದವರ ಕೆಲ ಫೋಟೊಗಳು ಈ ಕೆಳಗಿವೆ.

ಆದರೆ ಮೂವರು ಫೋಟೊ ಜರ್ನಲಿಸ್ಟ್ಗಳು ಪ್ರತಿಭಟನೆ, ಪೊಲೀಸ್ ಮತ್ತು ಅರೆಸೈನಿಕರ ನಡೆ ಮತ್ತು ದೈನಂದಿನ ಜೀವನದ ರಸ್ತೆ ತಡೆಗಳ ಚಿತ್ರಗಳನ್ನು ಸೆರೆಹಿಡಿದು, ಕೆಲವೊಮ್ಮೆ ಅಪರಿಚಿತರ ಮನೆಗಳಿಂದ ಕವರ್ ಪಡೆದುಕೊಂಡು ತರಕಾರಿ ಚೀಲಗಳಲ್ಲಿ ಕ್ಯಾಮೆರಾಗಳನ್ನು ಅಡಗಿಸಿ ನಂತರ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರೊಂದಿಗೆ ನವದೆಹಲಿಯ ಅಸೋಸಿಯೇಟೆಡ್ ಪ್ರೆಸ್ ಕಚೇರಿಗೆ ಫೋಟೋ ಫೈಲ್ಗಳನ್ನು ಕೊಂಡೊಯ್ಯಲು ಮನವೊಲಿಸಿದದ್ದರು.

ವಿಜೇತರಲ್ಲಿ ಒಬ್ಬರಾದ ಯಾಸಿನ್ “ಇದು ಯಾವಾಗಲೂ ಇಲಿ ಮತ್ತು ಬೆಕ್ಕಿನ ಆಟ, ಇಂತಹ ಕಷ್ಟಡಗಳು ನಮ್ಮನ್ನು ಎಂದಿಗೂ ಮೌನವಾಗದಂತೆ ಗಟ್ಟಿಗೊಳಿಸುತ್ತದೆ. ಬಹುಮಾನಕ್ಕೆ ನಾನು ಆಯ್ಕೆಯಾಗಿದ್ದು ನನ್ನ ಸಹೋದ್ಯೋಗಿಗಳ ಮೂಲಕ ಕೇಳಿ ತುಂಬಾ ಖುಷಿಗೊಂಡೆ. ಇದಕ್ಕಾಗಿ ನಾವು ತುಂಬಾ ಶ್ರಮಿಸಿದ್ಧೇವೆ. ಬೆಂಬಲ ನೀಡಿದ ನಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಕೃತಜ್ಞರಾಗಿರುತ್ತೇವೆ.”

ಬಹುಮಾನವನ್ನು ನಿರ್ವಾಹಕರಾದ ಡಾನಾ ಕ್ಯಾನೆಡಿ ಯೂಟ್ಯೂಬ್ನಲ್ಲಿ ಲೈವ್ ಸ್ಟ್ರೀಮ್ ಮೂಲಕ ಪ್ರಕಟಿಸಿದರು. ಜಮ್ಮುಕಾಶ್ಮೀರದಲ್ಲಿ ಲಾಕ್ಡೌನ್ ಮತ್ತು ಸಂಪರ್ಕ ನಿರ್ಬಂಧದ ಮಧ್ಯೆ ಜನ ಜೀವನದ ಗಮನಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಲಾಯಿತು.

ಆದರೆ ವಿಪರ್ಯಾಸವೇನೆಂದರೆ ಈ ಪತ್ರಕರ್ತರಿಗೆ ಪುಲಿಟ್ಜೆರ್ ಬಹುಮಾನ ಘೋಷಿಸುವಾಗ ಈ ಕಡೆ ಕಾಶ್ಮೀರದಲ್ಲಿ “ರಾಷ್ಟ್ರ ವಿರೋಧಿ” ಚಟುವಟಿಕೆ ಮಾಡಿದ್ದಾರೆಂದು ಮೂವರು ಕಾಶ್ಮೀರಿ ಪತ್ರಕರ್ತರರಾದ ಪೀರ್ಜಾಡಾ ಆಶಿಕ್, ಗೌಹರ್ ಗೀಲಾನಿ ಮತ್ತು ಮಸ್ರತ್ ಜಹ್ರಾ ಅವರನ್ನು ಬಂಧಿಸಲಾಗಿದೆ. ಫ್ರೀಲಾನ್ಸಿಂಗ್ ಫೋಟೊ ಜರ್ನಲಿಸ್ಟ್ ಆಗಿರುವ ಮಸ್ರತ್ ಜಹರಾ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಏಳು ವರ್ಷಗಳವರೆಗೆ ಜೈಲಿನಲ್ಲಿಡಬಹುದು.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಟ್ವಿಟರ್ ಇಲ್ತಿಜಾ ಮುಫ್ತಿ ಅಸೋಸಿಯೇಟೆಡ್ ಪ್ರೆಸ್ ಪತ್ರಿಕೆಯ ಮೂವರು ಫೋಟೋ ಜರ್ನಲಿಸ್ಟ್ಗಳನ್ನು ತನ್ನ ತಾಯಿಯ ಟ್ವಿಟ್ಟರ್ ಖಾತೆಯಿಂದ ಅಭಿನಂದಿಸಿದ್ದಾರೆ.
Congratulations @daryasin @muukhtark_khan for your exemplary photography capturing the humanitarian crisis in Kashmir post illegal abrogation of Article 370. Bizarre that our journalists win accolades abroad but are punished under draconian laws on home turf https://t.co/FEliDToHkN
— Mehbooba Mufti (@MehboobaMufti) May 5, 2020
ಕೇಂದ್ರ ಸರ್ಕಾರದಿಂದ ಈ ಪತ್ರಕರ್ತರಿಗೆ ಪ್ರಶಸ್ತಿ ಬಂದಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಇವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
It’s been a difficult year for journalists in Kashmir & that’s saying something considering the last 30 years haven’t exactly been easy. Congratulations to @daryasin, @muukhtark_khan & @channiap on this prestigious award. More power to your cameras. https://t.co/A7SH5hUEGZ
— Omar Abdullah (@OmarAbdullah) May 5, 2020
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಹುಮಾನಿತರಿಗೆ ಅಭಿನಂದನಾ ಟ್ವೀಟ್ ಕಳುಹಿಸಿದ್ದಾರೆ.
Congratulations to Indian photojournalists Dar Yasin, Mukhtar Khan and Channi Anand for winning a Pulitzer Prize for their powerful images of life in Jammu & Kashmir. You make us all proud. #Pulitzer https://t.co/A6Z4sOSyN4
— Rahul Gandhi (@RahulGandhi) May 5, 2020
ಇದನ್ನೂ ಓದಿ: ಮಾಜಿ IAS ಕಣ್ಣನ್ ಗೋಪಿನಾಥನ್ ಅವರಿಗೆ ಕಾಶ್ಮೀರಿ ವಿದ್ಯಾರ್ಥಿಯಿಂದ ಭಾವನಾತ್ಮಕ ಪತ್ರ
ನಮ್ಮ Facebook ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


