Homeಮುಖಪುಟಮಾಜಿ IAS ಕಣ್ಣನ್ ಗೋಪಿನಾಥನ್ ಅವರಿಗೆ ಕಾಶ್ಮೀರಿ ವಿದ್ಯಾರ್ಥಿಯಿಂದ ಭಾವನಾತ್ಮಕ ಪತ್ರ

ಮಾಜಿ IAS ಕಣ್ಣನ್ ಗೋಪಿನಾಥನ್ ಅವರಿಗೆ ಕಾಶ್ಮೀರಿ ವಿದ್ಯಾರ್ಥಿಯಿಂದ ಭಾವನಾತ್ಮಕ ಪತ್ರ

ದಾಲ್ ಸರೋವರದ ತೀರದಲ್ಲಿರುವ ಕಾಶ್ಮೀರದಲ್ಲಿ ಒಂದು ದಿನ ನಿಮಗೆ ಆತಿಥ್ಯ ನೀಡಲು ನಾನು ಬಯಸುತ್ತೇನೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿರುವ ನನ್ನ ಮನೆಯ ಕಡೆಗೆ ನಿಮ್ಮನ್ನು ಸವಾರಿ ಕರೆದುಕೊಂಡು ಹೋಗಲು ನಾನು ಇಷ್ಟಪಡುತ್ತೇನೆ.

- Advertisement -
- Advertisement -

(ಕಾಶ್ಮೀರದ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯನ್ನು ವಿರೋಧಿಸಿ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ರವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದನ್ನು ಕೆಲವು ತಿಂಗಳುಗಳ ನಂತರ ತಿಳಿದ ಕಾಶ್ಮೀರದ ವಿದ್ಯಾರ್ಥಿ ಗಾಜಿ ಮುಜಮ್ಮಿಲ್ ಪತ್ರವೊಂದನ್ನು ಬರೆದಿದ್ದಾರೆ. ಅದರ ಕನ್ನಡ ಅನುವಾದ ಕೆಳಗಿನಂತಿದೆ.)

ನೀವು ಭಾರತೀಯ ಆಡಳಿತ ಸೇವೆ (ಐಎಎಸ್) ಗೆ ರಾಜೀನಾಮೆ ನೀಡಿ ಸುಮಾರು ಎಂಟು ತಿಂಗಳಾಗಿದೆ. ಭಾರತದ ಪ್ರತಿಯೊಬ್ಬ ಯುವಕರು ಕನಸು ಕಾಣುತ್ತಿರುವ ಹುದ್ದೆಗೆ ನೀವು ರಾಜೀನಾಮೆ ನೀಡುವುದು ಎಷ್ಟು ಸುಲಭ ಅಥವಾ ಕಷ್ಟವಾಗುತ್ತಿತ್ತು ಎಂದು ನಿಮ್ಮ ರಾಜೀನಾಮೆಯನ್ನು ಕೇಳಿದ ನಂತರ ನಾನು ಆಗಾಗ್ಗೆ ಈ ಬಗ್ಗೆ ಯೋಚಿಸುತ್ತಿದ್ದೆ. ಸರ್, ಆಗಸ್ಟ್ 05 ರ ನಂತರ ಕಾಶ್ಮೀರದಲ್ಲಿ ಅತ್ಯಂತ ಕೆಟ್ಟ ಲಾಕ್‌ಡೌನ್‌ನಲ್ಲಿದ್ದ ನಾನು, ಭಾರತದ ಅಮಾನವೀಯ ಸಂವಹನ ಕ್ಲ್ಯಾಂಪ್‌ಡೌನ್‌ಗೆ ವಿರುದ್ದವಾಗಿ ನೀವು ರಾಜೀನಾಮೆ ನೀಡಿದ್ದೀರಿ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಅನೇಕ ಪೋಸ್ಟ್‌ಗಳನ್ನು ನೋಡಿದ ನಂತರವೇ ಇದು ನನ್ನ ಗಮನಕ್ಕೆ ಬಂತು.

‘ಐಎಎಸ್ ಅಧಿಕಾರಿ ಮತ್ತೆ ತನ್ನ ಸೇವೆಗಳಿಗೆ ಮರಳಲು ನಿರಾಕರಿಸಿದರು’ ಎಂಬ ಸುದ್ದಿ ಈಗ ನಮ್ಮಲ್ಲಿ ವೈರಲ್‌ ಆಗಿದೆ. “ಕಾಶ್ಮೀರ” ಎಂಬುದನ್ನು ನಿಮ್ಮ ಹೆಸರಿನೊಂದಿಗೆ ಸುದ್ದಿಗಳಲ್ಲಿ ಲಗತ್ತಿಸಿ, ಕಾಶ್ಮೀರದಲ್ಲಿ ಲಾಕ್ ಡೌನ್ ಮತ್ತು ವ್ಯಕ್ತಿ ಸ್ವಾತಂತ್ರ್ಯ ನಿರಾಕರಣೆಯನ್ನು ವಿರೋಧಿಸಿ ಕಳೆದ ವರ್ಷ ಆಗಸ್ಟ್ 21 ರಂದು ನೀವು ರಾಜೀನಾಮೆ ನೀಡಿದ್ದೀರಿ ಎಂದು ತಿಳಿದಾಗ ನನ್ನನ್ನು ಆಕರ್ಷಿಸಿತು. ಅದರ ನಂತರ ಕಾಶ್ಮೀರದ ಸಾಮಾಜಿಕ ಜಾಲತಾಣಗಳು ಮತ್ತು ಜಾಲತಾಣಿಗರು ನಿಮ್ಮ ಚಿತ್ರಗಳನ್ನು ಪೋಸ್ಟ್ ಮಾಡುವುದು, ನಿಮ್ಮನ್ನು ಹೊಗಳುವುದು, ಗೌರವವನ್ನು ತೋರಿಸುವುದು ಹಾಗೂ ಕಾಶ್ಮೀರದಿಂದ ನಿಮ್ಮ ಬಗ್ಗೆ ಪ್ರೀತಿ ತೋರುವುದನ್ನು ನಾನು ನೋಡಿದೆ.


ಇದನ್ನೂ ಓದಿ: ನಾನು ರಾಜಿನಾಮೆ ನೀಡಿದ್ದು ಏಕೆಂದರೆ… : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ


ನೀವು ಕಾಶ್ಮೀರಿಗಳ ಮೇಲೆ ಆಗುತ್ತಿರುವ ದಬ್ಬಾಳಿಕೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಸುದ್ದಿ ಓದುತ್ತಿರುವಾಗ ನನ್ನ ರಾಜ್ಯದ ಅಧಿಕಾರಿಗಳು ನನಗೆ ನೆನಾಪದರು. ಅವರದೇ ರಾಜ್ಯದ ನೋವನ್ನು ಅವರು ಹೇಗೆ ಅನುಭವಿಸಿದರು ಎಂಬುದನ್ನು ನೋಡಲು ಆಗಸ್ಟ್ 2019 ರ ಪೋಸ್ಟ್‌ಗಳನ್ನು ಗಮನಸಿದೆ. ಪ್ರತಿಷ್ಟಿತ ಸೇವೆಯನ್ನು ನೀವು ಪದತ್ಯಾಗ ಮಾಡಿದ್ದು ನನ್ನ ಬೆನ್ನುಮೂಳೆಯನ್ನು ನಡುಗಿಸಿತು. ಯಾಕೆಂದರೆ, ಕಾಶ್ಮೀರಿ ಐಎಎಸ್ ಅಧಿಕಾರಿಗಳು ಭಾರತದ ಸಂವಿಧಾನದಡಿಯಲ್ಲಿ ನಮಗೆ ಖಾತರಿಪಡಿಸಿದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ವಿರೋಧಿಸಿ ಏಕರೂಪವಾಗಿ ರಾಜೀನಾಮೆ ನೀಡಬಹುದಿತ್ತು. ಅದು ಯಾವ ಪರಿಣಾಮವನ್ನು ಬೀರಬಹುದು ಮತ್ತು ಅದರ ಪರಿಣಾಮಗಳೇನು? ನಾನು ಯೋಚಿಸುತ್ತಲೇ ಇದ್ದೆ. ಹಾಗಾಗಲಿಲ್ಲ. ಆದರೆ ನೀವು ರಾಜಿನಾಮೆ ಕೊಟ್ಟ ನಂತರ ಹೇಳಿದಂತೆ “ಆತ್ಮಸಾಕ್ಷಿಗೆ ಉತ್ತರಿಸಬೇಕಿದೆ” ಎಂದ ಮಾತಿನಿಂದ ನನಗೆ ಉತ್ತರ ಸಿಕ್ಕಿತು. ಇದು ನನ್ನ ಸತ್ತ ಮತ್ತು ಅವಮಾನದಿಂದ ನಾಶವಾದ ಮನಸ್ಸು ಮತ್ತು ಆತ್ಮಕ್ಕೆ ಪ್ರತಿಕ್ರಿಯಿಸಿತು.

ಸರ್, ಬಾಹ್ಯ ಬದಲಾವಣೆಗಳಿಗೆ ಇಲ್ಲಿನ ಜನ ಬಹಳ ಸೂಕ್ಷ್ಮವಾಗಿರುತ್ತಾರೆ. ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಏನಾದರೂ ಸಂಭವಿಸಲಿದೆ ಎಂದು ಕಾಶ್ಮೀರಿಗಳ ಹೃದಯಗಳು ಗ್ರಹಿಸಿದ್ದವು, ಆದರೆ ನಮ್ಮ ಉನ್ನತ ಅಧಿಕಾರಿಗಳೇ ಇಡೀ ಜನಸಂಖ್ಯೆಯನ್ನು ಮಂಕಾಗಿ ಇಟ್ಟುಕೊಂಡು, ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದರು.

ಸರ್, ಅಂತಹ ಪ್ರತಿಷ್ಟಿತ ಹುದ್ದೆಯನ್ನು ತ್ಯಜಿಸುವ ನಿರ್ಧಾರ ನಿಮಗೆ ಸುಲಭದ ಕೆಲಸ ಆಗಿರಲಿಕ್ಕಿಲ್ಲ. ನಿಮ್ಮ ನಿರ್ಧಾರದ ಬಗ್ಗೆ ಸಮಾಜದಲ್ಲಿ ಜನಸಾಮಾನ್ಯರ ಪ್ರತಿರೋಧವನ್ನು ಎದುರಿಸಿರಬಹುದು ಹಾಗೂ ಒಂದು ಬಣದ ಐಟಿ ಸೆಲ್ಲಿನ ಪ್ರಖರ ಟೀಕೆಗಳನ್ನು ಸ್ವೀಕರಿಸಿದ್ದೀರಿ. ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ನಿಮಗೆ ಸಮಯ ಹಾಗೂ ಮತ್ತೆ ಕಿರುಕುಳ ಮತ್ತು ಕರೆ ಮಾಡಲಾಗಿದೆ ಎಂದು ನಾನು ಕೇಳಿದ್ದೇನೆ. ವೈಯಕ್ತಿಕವಾಗಿ, ಪ್ರಜ್ಞಾವಂತ ವಿದ್ಯಾರ್ಥಿಯಾಗಿ, ನಿಮ್ಮಂತಹ ಅಧಿಕಾರಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು, ಜನರಿಗೆ ಸೇವೆ ಸಲ್ಲಿಸಲು ವ್ಯವಸ್ಥೆಯಲ್ಲಿರಬೇಕು ಎಂದು ನಾನು ನಂಬುತ್ತೇನೆ. ಆದರೆ ಸಹೋದರರ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ ಒಬ್ಬರ ಮನಸಾಕ್ಷಿಯು ಮೌನವಾಗಿ ಮತ್ತು ನಿರಾಳವಾಗಿರಲು ಹೇಗೆ ಅನುಮತಿಸುತ್ತದೆ? ನಂಬಿದ ನಂಬಿಕೆಗಳಿಗೆ ಕೊನೆಯವರೆಗೂ ನಿಲ್ಲುವುದು. ಸರ್ಕಾರವು ಭ್ರಷ್ಟ ಮತ್ತು ಸೊಕ್ಕಿನಿಂದ ಕೂಡಿರುವಾಗ ಸಾರ್ವಜನಿಕ ಸೇವೆಯಲ್ಲಿರುವವರು ಎಲ್ಲವನ್ನೂ ಸಾಮಾನ್ಯ ಕಾರ್ಯದಂತೆ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ನೀವು ನಿಜವಾಗಿಯೂ ಒಂದು ಉದಾಹರಣೆಯಾಗಿದ್ದೀರಿ.


ಇದನ್ನೂ ಓದಿ: ಮತ್ತೆ ಕರ್ತವ್ಯಕ್ಕೆ ಬನ್ನಿ ಎಂದ ಕೇಂದ್ರ: IAS ಅಲ್ಲ, ಸ್ವಯಂಸೇವಕನಾಗಿ ಮಾತ್ರ ಬರುತ್ತೇನೆ ಎಂದ ಕಣ್ಣನ್


ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಸಿರುಗಟ್ಟುವಂತೆ ಮಾಡಿದಾಗ, ಸಂವಿಧಾನವನ್ನು ರಕ್ಷಿಸಲು ಬದ್ಧವಾಗಿರುವ ಸಾರ್ವಜನಿಕ ಸೇವೆಯಲ್ಲಿರುವವರು ಸುಮ್ಮನಿರಲು ಹಾಗೂ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಅದರಿಂದ ನೀವು ಒಂದು ಉದಾಹರಣೆಯಾಗಿದ್ದೀರಿ. ಏಳು ವರ್ಷಗಳಿಂದ ಐಎಎಸ್ ಅಧಿಕಾರಿಯಾಗಿ, ರಾಜಕೀಯ ಗಿಮಿಕ್‌ಗಳ ಮುಂದೆ ನೀವು ಎಂದಿಗೂ ತಲೆಬಾಗಲಿಲ್ಲ ಮತ್ತು ಪಕ್ಷಪಾತವಿಲ್ಲದೆ ನೀವು ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ನಿರ್ಭಯವಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದೀರಿ ಎಂದು ನಿಮ್ಮ ದಾಖಲೆ ಸಾಬೀತುಪಡಿಸುತ್ತದೆ. ಸುಂದರವಾದ ಹಾಗೂ ಜರ್ಜರಿತವಾದ ಸಂತರ ಕಣಿವೆಯಲ್ಲಿ ಅಧಿಕಾರಶಾಹಿ ಕುರ್ಚಿಗಳ ಶಕ್ತಿಯನ್ನು ಒಮ್ಮೆ ನೋಡಿದಾಗ, ಎಲ್ಲಾ ಆದರ್ಶಗಳನ್ನು ಮತ್ತು ಮೌಲ್ಯಗಳನ್ನು ಮರೆತುಬಿಡುವ ಲಜ್ಜೆಗೆಟ್ಟ ಮತ್ತು ಸೊಕ್ಕಿನ ಅಧಿಕಾರಿಗಳೊಂದಿಗೆ ನಿಮ್ಮ ಹೋಲಿಕೆ ಮಾಡುವುದು ಅನ್ಯಾಯವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿರುವ ಬಗ್ಗೆ ಅವರು ಯಾವುದೇ ಕಾಳಜಿಯನ್ನು ತೋರಿಸಿಲ್ಲ.

ಕಾಶ್ಮೀರದ ಲಾಕ್‌ಡೌನ್‌ಗೆ ನೀವು ರಾಜೀನಾಮೆ ನೀಡಿದ್ದರಿಂದ, 2008 ರಲ್ಲಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫಾಸಲ್ ನಿಮಗೆ ನೆನಪಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಕಾಶ್ಮೀರದಲ್ಲಿ ನಡೆದ ಹತ್ಯೆಗಳನ್ನು ವಿರೋಧಿಸಿ 2019ರ ಜನವರಿ 9 ರಂದು ಈ ಸೇವೆಗೆ ರಾಜೀನಾಮೆ ನೀಡಿದ್ದರು. ಆಗಸ್ಟ್ 05 ರಿಂದ ಅವರು ಜೈಲಿನಲ್ಲಿದ್ದಾರೆ. ರಾಜೀನಾಮೆ ನೀಡಿದ್ದಕ್ಕೆ ಅಂತಹ ಅದೃಷ್ಟ ನಿಮಗೆ ಬರದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ನಿಮ್ಮ ಈ ತ್ಯಾಗವನ್ನು ಯಾವಾಗಲೂ ಕಾಶ್ಮೀರದ ಜನತೆ ನೆನಪಿಟ್ಟುಕೊಳ್ಳುತ್ತಾರೆ . ಇತಿಹಾಸವು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ. ಇತಿಹಾಸವು ನಿಮ್ಮನ್ನು ಹಾಗೂ ಈ ಸೊಕ್ಕಿನ ಆಡಳಿತದ ಪರವಾಗಿದ್ದ ಪ್ರತೀ ನಿಷ್ಠಾವಂತರ ಕುರಿತು ಹೇಳುತ್ತದೆ. ಕಾಶ್ಮೀರಿಗಳು ಸಾಯುತ್ತಿರುವಾಗ ಮೌನವಾಗಿದ್ದ ಪ್ರತಿಯೊಬ್ಬರನ್ನು ಇತಿಹಾಸ ಹೇಳುತ್ತದೆ.

ಕೊವಿಡ್ -19 ವಿರುದ್ಧದ ಈ ಹೋರಾಟದಲ್ಲಿ ನಿಮ್ಮ ಆರೋಗ್ಯ, ಸಂಪತ್ತು ಮತ್ತು ಮನಸ್ಸಿನಿಂದ ನಿಮ್ಮ ಸೇವೆಗಳನ್ನು ಸಮಾಜದ ಕಡೆಗೆ ವಿಸ್ತರಿಸುತ್ತೀರಿ ಮತ್ತು ಸ್ವಯಂಸೇವಕರಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.

ನಿಮ್ಮ ಸೇವೆಯ ಅವದಿಯಲ್ಲಿ ನೀವು ಇತರರ ಮೇಲೆ ದೌರ್ಜನ್ಯಗಳನ್ನು ನಡೆಸಿಲ್ಲ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಅದು ನಿಮ್ಮ ವರ್ಗದ ಅಧಿಕಾರಿಗಳ ಟ್ರೇಡ್‌ಮಾರ್ಕ್ ಆಗಿದೆ. ದಾಲ್ ಸರೋವರದ ತೀರದಲ್ಲಿರುವ ಕಾಶ್ಮೀರದಲ್ಲಿ ಒಂದು ದಿನ ನಿಮಗೆ ಆತಿಥ್ಯ ನೀಡಲು ನಾನು ಬಯಸುತ್ತೇನೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿರುವ ನನ್ನ ಮನೆಯ ಕಡೆಗೆ ನಿಮ್ಮನ್ನು ಸವಾರಿ ಕರೆದುಕೊಂಡು ಹೋಗಲು ನಾನು ಇಷ್ಟಪಡುತ್ತೇನೆ.

ಮೋರ್ ರೆಸ್ಪೆಕ್ಟ್, ಮೋರ್ ಲವ್ ಮತ್ತು ಮೋರ್ ಪವರ್ ಟು ಯು

ಧನ್ಯವಾದ ನಿಮಗೆ

ಇಂತಿ

ಗಾಜಿ ಮುಜಮ್ಮಿಲ್

ವಿಭಿನ್ನ ಲಾಕ್‌ಡೌನ್‌ನಲ್ಲಿರುವ ಕಾಶ್ಮೀರಿ ವಿದ್ಯಾರ್ಥಿ.

(ಗಾಜಿ ಮುಜಮ್ಮಿಲ್ ಅವರು ಜಮ್ಮು ಹಾಗೂ ಕಾಶ್ಮೀರ ವಿದ್ಯಾರ್ಥಿ ಚಳವಳಿಯ ಕಾರ್ಯಕರ್ತರಾಗಿದ್ದಾರೆ. ಅವರನ್ನು ಈ ಮೂಲಕ ಸಂಪರ್ಕಿಸಬಹುದು. [email protected])


ಇದನ್ನೂ ಓದಿ: ಕಣ್ಣನ್ ಗೋಪಿನಾಥನ್ ಹಾಗೂ ಪ್ರಶಾಂತ್ ಭೂಷಣ್‌ ವಿರುದ್ದ ಕೇಸು ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...