Homeಮುಖಪುಟಮತ್ತೆ ಕರ್ತವ್ಯಕ್ಕೆ ಬನ್ನಿ ಎಂದ ಕೇಂದ್ರ: IAS ಅಲ್ಲ, ಸ್ವಯಂಸೇವಕನಾಗಿ ಮಾತ್ರ ಬರುತ್ತೇನೆ ಎಂದ ಕಣ್ಣನ್

ಮತ್ತೆ ಕರ್ತವ್ಯಕ್ಕೆ ಬನ್ನಿ ಎಂದ ಕೇಂದ್ರ: IAS ಅಲ್ಲ, ಸ್ವಯಂಸೇವಕನಾಗಿ ಮಾತ್ರ ಬರುತ್ತೇನೆ ಎಂದ ಕಣ್ಣನ್

- Advertisement -
- Advertisement -

ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಎಂಟು ತಿಂಗಳ ಹಿಂದೆ ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ್ದ ಕಣ್ಣನ್ ಗೋಪಿನಾಥನ್ ಅವರಿಗೆ ಮರಳಿ ಕರ್ತವ್ಯಕ್ಕೆ ಬರುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ.

ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಕರ್ತವ್ಯಕ್ಕೆ ಸೇರಲು ಕೇಂದ್ರ ಸರ್ಕಾರ ತಿಳಿಸಿದೆಯಾದರು ಕಣ್ಣನ್ ಅವರು ಸರ್ಕಾರಿ ಸೇವೆಯಲ್ಲಿ ಮತ್ತೆ ಸೇರ್ಪಡೆಗೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.

“ನನ್ನನ್ನು ಕರ್ತವ್ಯಕ್ಕೆ ಮತ್ತೆ ಸೇರಲು ಕೇಳಿಕೊಂಡ ಸರ್ಕಾರದಿಂದ ಪತ್ರವೊಂದನ್ನು ಸ್ವೀಕರಿಸಿದ್ದೇನೆ. ನನ್ನನ್ನು ಅವರ ಅಧೀನೆಯಲ್ಲಿ ಇಡಲು ಇದನ್ನು ಕಳುಹಿಸಿದ್ದಾರೆ, ಕೊರೋನಾ ವಿರುದ್ದ ನಾನು ಈಗಾಲೇ ಕೆಲಸ ಮಾಡುತ್ತಿದ್ದೇನೆ. ಈ ಸಂಕಷ್ಟದ ಸಮಯದಲ್ಲಿ ವಾಲಂಟೀಯರ್‌ ಆಗಿ ಕೆಲಸ ಮಾಡುತ್ತೇನೆಯೇ ಹೊರತು ಮತ್ತೇ ಐಎಎಸ್ ಸೇವೆಗೆ ಸೇರುವುದಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ನಾನು ಇದೀಗ ಕೆಲವು ಸೇವೆಯಲ್ಲಿ ತೊಡಗಿದ್ದೇನೆ. ಇದನ್ನು ಮುಂದುವರಿಸಲು ನಾನು ಬಯಸುತ್ತೇನೆ. ಸರ್ಕಾರ ಬಯಸಿದರೆ ನಾನು ದಾದ್ರಾ ಮತ್ತು ನಗರ ಹವೇಲಿ ಮತ್ತು ದೇಶದ ಯಾವುದೇ ಭಾಗಗಳಿಗೆ ಹೋಗತ್ತೇನೆ, ಆದರೆ ಸ್ವಯಂಸೇವಕರಾಗಿ ಮಾತ್ರ. ಐಎಎಸ್ ತೊರೆಯುವುದು ಚೆನ್ನಾಗಿ ಯೋಚಿಸಿ ಕೈಗೊಂಡ ನಿರ್ಧಾರ ಹಾಗೂ ಅದಕ್ಕೆ ನಾನು ಬದ್ದನಾಗಿದ್ದೇನೆ ”ಎಂದು ಕಣ್ಣನ್ ಹೇಳಿದ್ದಾರೆ.

ಗೋಪಿನಾಥನ್ ಎಂಟು ತಿಂಗಳ ಹಿಂದೆ ರಾಜಿನಾಮೆ ನೀಡಿದ್ದರೂ, ಸರ್ಕಾರ ಇನ್ನೂ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ನಾನು ರಾಜಿನಾಮೆ ನೀಡಿದ್ದು ಏಕೆಂದರೆ… : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ


“ನನ್ನನ್ನು ಸರ್ಕಾರವೂ ಹಿಂತಿರುಗಲು ಕೇಳಿಕೊಳ್ಳುವುದು ಒಳ್ಳೆಯ ಉದ್ದೇಶದಿಂದಲ್ಲ ಎಂದು ನಾನು ಭಾವಿಸುತ್ತೇನೆ. ಕೊರೊನಾ ವಿರುದ್ದ ನಾನು ಮಹಾರಾಷ್ಟ್ರದ ಕೆಲವು ಎನ್‌ಜಿಒಗಳೊಂದಿಗೆ ಈಗಾಗಲೇ ಕೆಲಸ ಮಾಡುತ್ತಿದ್ದೇನೆ. ಸೇವೆ ಮಾಡಲು ನನಗೆ ಐಎಎಸ್ ಟ್ಯಾಗ್ ಅಗತ್ಯವಿಲ್ಲ. ನನ್ನ ಪ್ರಸ್ತುತ ಸ್ವಾತಂತ್ರ್ಯದ ಬಗ್ಗೆ ನನಗೆ ಸಂತೋಷವಿದೆ ”ಎಂದು ಅವರು ಹೇಳಿದರು.

ಈ ಹಿಂದೆ ಕೇರಳದಲ್ಲಿ ಉಂಟಾದ 2018ರ ಪ್ರವಾಹದ ಸಂದರ್ಭದಲ್ಲಿ ಅವರು ದಾದ್ರಾ ಮತ್ತು ನಗರ ಹವೇಲಿ ಆಡಳಿತದ ಚೆಕ್ ಹಸ್ತಾಂತರಿಸಿ ಸದ್ದಿಲ್ಲದೆ ಸ್ಥಳದಿಂದ ಹೊರಟು ಹೋಗಿದ್ದರು. ರಜೆಯಲ್ಲಿದ್ದಾಗ ಪರಿಹಾರ ಸಾಮಗ್ರಿಗಳನ್ನು ಲೋಡ್ ಮಾಡುವ ಮತ್ತು ಇಳಿಸುವ ಮೂಲಕ ಎಂಟು ದಿನಗಳ ಕಾಲ ವಿವಿಧ ಪರಿಹಾರ ಶಿಬಿರಗಳಲ್ಲಿ ಕೆಲಸ ಮಾಡಿದ್ದ ಕಣ್ಣನ್ ತನ್ನ ಬ್ಯಾಚ್-ಮೇಟ್ ಆಗಿದ್ದ ಎರ್ನಾಕುಲಂ ಜಿಲ್ಲಾಧಿಕಾರಿ ವೈ ಎಸ್ ಸಫರುಲ್ಲಾ ಅವರನ್ನು ಗುರುತಿಸಿದ ನಂತರ ಅಲ್ಲಿಂದ ಅವರು ಹೊರಟು ಹೋಗಿದ್ದರು.

ಗೋಪಿನಾಥನ್ ಅವರ ಸೇವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಂತರದ ದಿನಗಳಲ್ಲಿ ವೈರಲ್ ಆಗಿತ್ತು. ಕಣ್ಣನ್ ಗೋಪಿನಾಥನ್ ಆಲಪ್ಪುಳ ಜಿಲ್ಲೆಯ ಎರಾಮಲ್ಲೂರ್ ಮೂಲದವರು. ಇವರು ರಾಜಿನಾಮೆ ನೀಡುವಾಗ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...