Homeಮುಖಪುಟ2020ರ ಪ್ರತಿಷ್ಟಿತ ಪುಲಿಟ್ಜೆರ್ ಪ್ರಶಸ್ತಿ ಗೆದ್ದ ಕಾಶ್ಮೀರದ ಪತ್ರಕರ್ತರು ಸೆರೆಹಿಡಿದ ಫೋಟೊಗಳು

2020ರ ಪ್ರತಿಷ್ಟಿತ ಪುಲಿಟ್ಜೆರ್ ಪ್ರಶಸ್ತಿ ಗೆದ್ದ ಕಾಶ್ಮೀರದ ಪತ್ರಕರ್ತರು ಸೆರೆಹಿಡಿದ ಫೋಟೊಗಳು

- Advertisement -
- Advertisement -

2020ರ ಪುಲಿಟ್ಜೆರ್ ಪ್ರಶಸ್ತಿ ಜಮ್ಮುಕಾಶ್ಮೀರದ ಮೂವರು ಛಾಯಚಿತ್ರ ಪತ್ರಕರ್ತರಿಗೆ ಲಭಿಸಿದೆ. ಕೊರೊನಾ ಕಾರಣ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ಘೋಷಿಸಲಾಯಿತು.

ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕರಾದ ದಾರ್ ಯಾಸಿನ್, ಮುಖ್ತಾರ್ ಖಾನ್, ಮತ್ತು ಚನ್ನಿ ಆನಂದ್ ಅವರು ಕಳೆದ ವರ್ಷ ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿನ ಲಾಕ್ ಡೌನನ್ನು ಸೆರೆಹಿಡಿಯುವಲ್ಲಿ ಅವರು ಮಾಡಿದ ಕಾರ್ಯಗಳಿಗಾಗಿ ಬಹುಮಾನಗಳನ್ನು ಗೆದ್ದರು.

ಆರ್ಟಿಕಲ್ 370 ನ್ನು ರದ್ದು ಮಾಡಿದ ನಂತರ, ಫೋನ್‌ಗಳು ಹಾಗೂ ಇಂಟರ್ನೆಟ್ ಸೇವೆಯನ್ನು ತಡೆ ಹಿಡಿದು ಜಮ್ಮುಕಾಶ್ಮೀರದಾದ್ಯಂತ ಕರ್ಫ್ಯೂ ಹಾಗೂ ಲಾಕ್ ಡೌನ್ ಮಾಡಲಾಗಿತ್ತು. ಮುಖ್ಯವಾಗಿ ಫೋನು ಹಾಗೂ ಇಂಟರ್ ನೆಟ್ ಕಡಿತದಿಂದಾಗಿ ಕಾಶ್ಮೀರದ ಜನ ಜೀವನದ ಪರಿಸ್ಥಿತಿಗಳನ್ನು ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಜಗತ್ತಿಗೆ ತೋರಿಸುವುದು ಕಷ್ಟಕರವಾಗಿತ್ತು.

ಪ್ರಶಸ್ತಿ ಗೆದ್ದವರ ಕೆಲ ಫೋಟೊಗಳು ಈ ಕೆಳಗಿವೆ.

ಆದರೆ ಮೂವರು ಫೋಟೊ ಜರ್ನಲಿಸ್ಟ್‌ಗಳು ಪ್ರತಿಭಟನೆ, ಪೊಲೀಸ್ ಮತ್ತು ಅರೆಸೈನಿಕರ ನಡೆ ಮತ್ತು ದೈನಂದಿನ ಜೀವನದ ರಸ್ತೆ ತಡೆಗಳ ಚಿತ್ರಗಳನ್ನು ಸೆರೆಹಿಡಿದು, ಕೆಲವೊಮ್ಮೆ ಅಪರಿಚಿತರ ಮನೆಗಳಿಂದ ಕವರ್ ಪಡೆದುಕೊಂಡು ತರಕಾರಿ ಚೀಲಗಳಲ್ಲಿ ಕ್ಯಾಮೆರಾಗಳನ್ನು ಅಡಗಿಸಿ ನಂತರ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರೊಂದಿಗೆ ನವದೆಹಲಿಯ ಅಸೋಸಿಯೇಟೆಡ್ ಪ್ರೆಸ್ ಕಚೇರಿಗೆ ಫೋಟೋ ಫೈಲ್‌ಗಳನ್ನು ಕೊಂಡೊಯ್ಯಲು ಮನವೊಲಿಸಿದದ್ದರು.

ಪುಲಿಟ್ಜರ್ 1
ಕಾಶ್ಮೀರಿಗಳು 2019 ರ ಡಿಸೆಂಬರ್‌ನಲ್ಲಿ ಶ್ರೀನಗರದ ಸೂಫಿ ಸಂತರ ದರ್ಗಾದ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು. ಈ ಚಿತ್ರ 3 ಪ್ರಶಸ್ತಿ ವಿಜೇತ ಛಾಯಾಚಿತ್ರ ಪತ್ರಕರ್ತರ ಛಾಯಾಚಿತ್ರಗಳ ಸರಣಿಯ ಭಾಗವಾಗಿತ್ತು.

ವಿಜೇತರಲ್ಲಿ ಒಬ್ಬರಾದ ಯಾಸಿನ್ “ಇದು ಯಾವಾಗಲೂ ಇಲಿ ಮತ್ತು ಬೆಕ್ಕಿನ ಆಟ, ಇಂತಹ ಕಷ್ಟಡಗಳು ನಮ್ಮನ್ನು ಎಂದಿಗೂ ಮೌನವಾಗದಂತೆ ಗಟ್ಟಿಗೊಳಿಸುತ್ತದೆ. ಬಹುಮಾನಕ್ಕೆ ನಾನು ಆಯ್ಕೆಯಾಗಿದ್ದು ನನ್ನ ಸಹೋದ್ಯೋಗಿಗಳ ಮೂಲಕ ಕೇಳಿ ತುಂಬಾ ಖುಷಿಗೊಂಡೆ. ಇದಕ್ಕಾಗಿ ನಾವು ತುಂಬಾ ಶ್ರಮಿಸಿದ್ಧೇವೆ. ಬೆಂಬಲ ನೀಡಿದ ನಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಕೃತಜ್ಞರಾಗಿರುತ್ತೇವೆ.”

ಫೋಟೋ ಕೃಪೆ: ದಾರ್ ಯಾಸಿನ್

ಬಹುಮಾನವನ್ನು ನಿರ್ವಾಹಕರಾದ ಡಾನಾ ಕ್ಯಾನೆಡಿ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮೂಲಕ ಪ್ರಕಟಿಸಿದರು. ಜಮ್ಮುಕಾಶ್ಮೀರದಲ್ಲಿ ಲಾಕ್‌ಡೌನ್ ಮತ್ತು ಸಂಪರ್ಕ ನಿರ್ಬಂಧದ ಮಧ್ಯೆ ಜನ ಜೀವನದ ಗಮನಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಲಾಯಿತು.

ಫೋಟೋ ಕ್ರೆಡಿಟ್: ಚನ್ನಿ ಆನಂದ್

ಆದರೆ ವಿಪರ್ಯಾಸವೇನೆಂದರೆ ಈ ಪತ್ರಕರ್ತರಿಗೆ ಪುಲಿಟ್ಜೆರ್ ಬಹುಮಾನ ಘೋಷಿಸುವಾಗ ಈ ಕಡೆ ಕಾಶ್ಮೀರದಲ್ಲಿ “ರಾಷ್ಟ್ರ ವಿರೋಧಿ” ಚಟುವಟಿಕೆ ಮಾಡಿದ್ದಾರೆಂದು ಮೂವರು ಕಾಶ್ಮೀರಿ ಪತ್ರಕರ್ತರರಾದ ಪೀರ್ಜಾಡಾ ಆಶಿಕ್, ಗೌಹರ್ ಗೀಲಾನಿ ಮತ್ತು ಮಸ್ರತ್ ಜಹ್ರಾ ಅವರನ್ನು ಬಂಧಿಸಲಾಗಿದೆ. ಫ್ರೀಲಾನ್ಸಿಂಗ್ ಫೋಟೊ ಜರ್ನಲಿಸ್ಟ್ ಆಗಿರುವ ಮಸ್ರತ್ ಜಹರಾ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಏಳು ವರ್ಷಗಳವರೆಗೆ ಜೈಲಿನಲ್ಲಿಡಬಹುದು.

ಪೀರ್ಜಾಡಾ ಆಶಿಕ್ (ಎಡ), ಗೌಹರ್ ಗೀಲಾನಿ (ಮಧ್ಯೆ), ಮತ್ತು ಮಸ್ರತ್ ಜಹ್ರಾ (ಬಲ) ಇವರೆಲ್ಲರೂ ಕಾಶ್ಮೀರಿ ಪತ್ರಕರ್ತರಾಗಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಟ್ವಿಟರ್ ಇಲ್ತಿಜಾ ಮುಫ್ತಿ ಅಸೋಸಿಯೇಟೆಡ್ ಪ್ರೆಸ್ ಪತ್ರಿಕೆಯ ಮೂವರು ಫೋಟೋ ಜರ್ನಲಿಸ್ಟ್‌ಗಳನ್ನು ತನ್ನ ತಾಯಿಯ ಟ್ವಿಟ್ಟರ್ ಖಾತೆಯಿಂದ ಅಭಿನಂದಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಈ ಪತ್ರಕರ್ತರಿಗೆ ಪ್ರಶಸ್ತಿ ಬಂದಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಇವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಹುಮಾನಿತರಿಗೆ ಅಭಿನಂದನಾ ಟ್ವೀಟ್ ಕಳುಹಿಸಿದ್ದಾರೆ.


ಇದನ್ನೂ ಓದಿ: ಮಾಜಿ IAS ಕಣ್ಣನ್ ಗೋಪಿನಾಥನ್ ಅವರಿಗೆ ಕಾಶ್ಮೀರಿ ವಿದ್ಯಾರ್ಥಿಯಿಂದ ಭಾವನಾತ್ಮಕ ಪತ್ರ


ಮ್ಮ Facebook ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...