ಅಮೆರಿಕಾ-ಚೀನಾ ಉದ್ವಿಗ್ನತೆ ಮುಂದುವರೆಯುತ್ತಿರುವ ಮಧ್ಯೆ ಐರ್ಲೆಂಡ್‌ನಲ್ಲಿ 420 ಮಿಲಿಯನ್ ಯುರೋಗಳಷ್ಟು (500 ಮಿಲಿಯನ್ ಡಾಲರ್) ಹೂಡಿಕೆಯೊಂದಿಗೆ ಯುರೋಪಿನಲ್ಲಿ ತನ್ನ ಮೊದಲ ದತ್ತಾಂಶ ಕೇಂದ್ರ( ಡಾಟಾ ಸೆಂಟರ್ )ವನ್ನು ಟಿಕ್‌ಟಾಕ್ ಸ್ಥಾಪಿಸುತ್ತಿದೆ.
ನೂರಾರು ಉದ್ಯೋಗಗಳ ಸೃಷ್ಟಿ, ಟಿಕ್‌ಟಾಕ್ ಬಳಕೆದಾರರ ಡೇಟಾದ ಸುರಕ್ಷತೆ ಮತ್ತು ರಕ್ಷಣೆಯನ್ನು ಸುಧಾರಿಸುವುದು, ಯುರೋಪಿನ ಬಳಕೆದಾರರಿಗೆ ಲೋಡಿಂಗ್ ಸಮಯವನ್ನು ಕಡಿಮೆ ಮಾಡುವುವ ಭರವಸೆ ನೀಡಿರುವ ಈ ಹೊಸ ದತ್ತಾಂಶ ಕೇಂದ್ರವು 2022 ರ ಆರಂಭದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಒಮ್ಮೆ ಆನ್‌ಲೈನ್‌ಗೆ ಹೋದರೆ, ಯುರೋಪಿಯನ್ ಬಳಕೆದಾರರ ಡೇಟಾ ಆ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಟಿಕ್‌ಟಾಕ್ ಹೇಳಿದೆ. ವರ್ಷದ ಆರಂಭದಲ್ಲಿ ಅದು ಡಬ್ಲಿನ್‌ನಲ್ಲಿ ತನ್ನ ಇಎಂಇಎ ಟ್ರಸ್ಟ್ ಮತ್ತು ಸೇಫ್ಟಿ ಹಬ್ ಅನ್ನು ಸ್ಥಾಪಿಸಿತು. ಹೊಸ ಹೂಡಿಕೆ ಐರ್ಲೆಂಡ್‌ಗೆ ನಮ್ಮ ದೀರ್ಘಕಾಲೀನ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ಅದು ಹೇಳಿದೆ.
ಚೀನಾ ಮೂಲದ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಲಿಮಿಟೆಡ್ ವಿದೇಶಿ ನಿಯಂತ್ರಕರನ್ನು ಸಮಾಧಾನಪಡಿಸುವ ಸಲುವಾಗಿ ತನ್ನ ದೇಶೀಯ ಚೀನೀ ಕಾರ್ಯಾಚರಣೆಯನ್ನು ಟಿಕ್‌ಟಾಕ್‌ನಿಂದ ದೂರವಿರಿಸಲು ಕೆಲಸ ಮಾಡುತ್ತಿದೆ.
ಅಮೆರಿಕಾ ಸಂಸದರು ಮತ್ತು ಟ್ರಂಪ್ ಆಡಳಿತವು ಟಿಕ್‌ಟಾಕ್ ಬಳಕೆದಾರರ ಡೇಟಾವನ್ನು ಸಂಗ್ರಹಿಸಿ ರಾಷ್ಟ್ರೀಯ ಭದ್ರತಾ ಅಪಾಯವನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದರು. ಅಲ್ಲದೆ ಪ್ರಸ್ತುತ ಟಿಕ್‌ಟಾಕ್ ಅಮೆರಿಕಾದಲ್ಲಿನ ತನ್ನ ಕಾರ್ಯಾಚರಣೆಯನ್ನು ಮೈಕ್ರೋಸಾಫ್ಟ್ ಅಥವಾ ಬೇರೆ ಅಮೇರಿಕಾ ಕಂಪೆನಿಗೆ ಮಾರಾಟ ಮಾಡುವ ಆರು ವಾರಗಳ ಗಡುವನ್ನು ಎದುರಿಸುತ್ತಿದೆ.
ಪ್ರಸ್ತುತ ಇದು ಅಮೆರಿಕಾ ಮತ್ತು ಸಿಂಗಾಪುರದ ಸರ್ವರ್‌ಗಳಲ್ಲಿ ಅಂತರರಾಷ್ಟ್ರೀಯ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತದೆ.
ಓದಿ: ಟಿಕ್‌ಟಾಕ್ ಖರೀದಿಗೆ ಟ್ರಂಪ್ ಜೊತೆ ಮೈಕ್ರೋಸಾಫ್ಟ್ ಮಾತುಕತೆ: ಸತ್ಯ ನಾದೆಲ್ಲಾ


