ತಿರುಪತಿಯ ತಿರುಮಲ ದೇವಸ್ಥಾನದ ಲಡ್ಡುವಿಗೆ ಬಳಸುವ ತುಪ್ಪಕ್ಕೆ ದನ ಮತ್ತು ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಕಲಬೆರಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ನಾಲ್ವರು ಆರೋಪಿಗಳನ್ನು ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಿರುಪತಿ ತುಪ್ಪದಲ್ಲಿ
ಬಂಧಿತರನ್ನು ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ಬಿಪಿನ್ ಜೈನ್ ಮತ್ತು ಪೋಮಿಲ್ ಜೈನ್; ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ ವ್ಯವಸ್ಥಾಪಕ ನಿರ್ದೇಶಕ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ. ತಿರುಪತಿ ತುಪ್ಪದಲ್ಲಿ
ತಿರುಮಲದ ಲಡ್ಡು ತಯಾರಿಸುವ ತುಪ್ಪ ಪೂರೈಕೆಯಲ್ಲಿನ ಅಕ್ರಮಗಳ ತನಿಖೆಯ ಭಾಗವಾಗಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ. ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಟೆಂಡರ್ ಪ್ರಕ್ರಿಯೆಯನ್ನು ತಿದ್ದುಪಡಿ ಮಾಡಲು ವೈಷ್ಣವಿ ಡೈರಿ ಸುಳ್ಳು ದಾಖಲೆಗಳು ಮತ್ತು ಸೀಲುಗಳನ್ನು ರಚಿಸಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ನಕಲಿ ದಾಖಲೆಗಳ ಮೂಲಕ ಭೋಲೆ ಬಾಬಾ ಡೈರಿಯಿಂದ ತುಪ್ಪ ಖರೀದಿ ಮಾಡಿರುವುದಾಗಿ ಸೂಚಿಸಿವೆ. ಅದಾಗ್ಯೂ, ಈ ಡೈರಿಯು ಅಗತ್ಯ ಪ್ರಮಾಣದಲ್ಲಿ ಪೂರೈಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಆರೋಪಿಗಳನ್ನು ಸೋಮವಾರ ತಿರುಪತಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ಮೇಲ್ವಿಚಾರಣೆಗೆ ತಿರುಪತಿಯಲ್ಲಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯ ಮತ್ತು ಸಿಬಿಐ ಜಂಟಿ ನಿರ್ದೇಶಕ ವಿರೇಶ್ ಪ್ರಭು ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.
ಪ್ರಕರಣವು ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದು, ಆ ಸಮಯದಲ್ಲಿ ಲಡ್ಡು ಪ್ರಸಾದದಲ್ಲಿ ದನಗಳು ಸೇರಿದಂತೆ ಪ್ರಾಣಿಗಳ ಕೊಬ್ಬುಗಳನ್ನು ಸೇರಿಸಿದ್ದಾಗಿ ಆರೋಪಿಸಲಾಗಿತ್ತು. ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ಸಿಬಿಐ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ತಂಡದಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ಸದಸ್ಯರು ಕೂಡ ಇದ್ದರು.
ತನಿಖೆ ಕಳೆದ ವರ್ಷ ಪ್ರಾರಂಭವಾಗಿದ್ದು, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಡ್ಡು ತಯಾರಿಕೆಗೆ ಪ್ರತಿದಿನ 15,000 ಕೆಜಿ ಹಸುವಿನ ತುಪ್ಪದ ಅಗತ್ಯವಿದೆ. ತಮಿಳುನಾಡಿನ ಎಆರ್ ಫುಡ್ಸ್ ಪ್ರತಿ ಕೆಜಿಗೆ 320 ರೂ.ಗೆ ತುಪ್ಪ ಪೂರೈಸಲು ಟೆಂಡರ್ ಪಡೆದುಕೊಂಡಿತ್ತು. ಜುಲೈ 8 ರಂದು, ಎಂಟು ಟ್ಯಾಂಕರ್‌ಗಳ ತುಪ್ಪ ಬಂದಿದ್ದು, ನಾಲ್ಕನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಜುಲೈ 17 ರಂದು ಲಡ್ಡು ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಪತ್ತೆಯಾಗಿದೆ ಎಂದು ಸಾರ್ವಜನಿಕ ಪ್ರಯೋಗಾಲಯ ವಿಶ್ಲೇಷಣೆ ಹೇಳಿತ್ತು. ಇವುಗಳಲ್ಲಿ ಹಂದಿ ಕೊಬ್ಬು, ದನದ ಕೊಬ್ಬು ಮತ್ತು ಮೀನಿನ ಎಣ್ಣೆ, ಹಾಗೆಯೇ ತರಕಾರಿ ಆಧಾರಿತ ಕೊಬ್ಬುಗಳು ಸೇರಿವೆ ಎಂದು ವರದಿ ಹೇಳಿತ್ತು. ಉಲ್ಲಂಘನೆಗಳ ವ್ಯಾಪ್ತಿ ಮತ್ತು ಹೊಣೆಗಾರರನ್ನು ನಿರ್ಧರಿಸಲು ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಇದನ್ನೂಓದಿ: ಮಣಿಪುರ ಸಂಘರ್ಷದಲ್ಲಿ ಹತರಾಗಿದ್ದು 258 ಕ್ಕೂ ಹೆಚ್ಚು ಜನ; 20 ತಿಂಗಳು ಕಳೆದರೂ ನಿಲ್ಲದ ಹಿಂಸಾಚಾರ
ಮಣಿಪುರ ಸಂಘರ್ಷದಲ್ಲಿ ಹತರಾಗಿದ್ದು 258 ಕ್ಕೂ ಹೆಚ್ಚು ಜನ; 20 ತಿಂಗಳು ಕಳೆದರೂ ನಿಲ್ಲದ ಹಿಂಸಾಚಾರ


