Homeಮುಖಪುಟಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆಯಲ್ಲಿ ಟಿಎಂಸಿ ದಿಗ್ವಿಜಯ - ಒಂದೂ ಪುರಸಭೆ ಗೆಲ್ಲದ ಬಿಜೆಪಿ-ಕಾಂಗ್ರೆಸ್!

ಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆಯಲ್ಲಿ ಟಿಎಂಸಿ ದಿಗ್ವಿಜಯ – ಒಂದೂ ಪುರಸಭೆ ಗೆಲ್ಲದ ಬಿಜೆಪಿ-ಕಾಂಗ್ರೆಸ್!

ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿಯವರ ಭದ್ರಕೋಟೆಯಾಗಿದ್ದ ಕಂಠಿ ಪುರಸಭೆಯನ್ನು ಟಿಎಂಸಿ ಗೆದ್ದುಕೊಂಡಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ನಡೆದ ನಗರ ಸ್ಥಳೀಯ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು, ಚುನಾವಣೆ ನಡೆದ 107 ಪುರಸಭೆಗಳ ಪೈಕಿ 103 ಪುರಸಭೆಗಳನ್ನು ಟಿಎಂಸಿ ಗೆದ್ದುಕೊಂಡಿದೆ. ಈ ಮೂಲಕ ವಿಪಕ್ಷಗಳಿಗೆ ಮಣ್ಣು ಮುಕ್ಕಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿಯವರ ಭದ್ರಕೋಟೆಯಾಗಿದ್ದ ಕಂಠಿ ಪುರಸಭೆಯನ್ನು ಟಿಎಂಸಿ ಗೆದ್ದುಕೊಂಡಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ಇದೆಲ್ಲದರ ನಡುವೆ, ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಪಕ್ಷವು ಡಾರ್ಜಿಲಿಂಗ್ ಪುರಸಭೆಯನ್ನು ಗೆದ್ದುಕೊಂಡಿದ್ದು, ಅಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮಣಿಸಿದೆ. ಡಾರ್ಜಿಲಿಂಗ್ ಮುನ್ಸಿಪಾಲಿಟಿಯ ಒಟ್ಟು 32 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಜಿಜೆಎಂ ಗೆದ್ದುಕೊಂಡು ಅಧಿಕಾರ ಹಿಡಿದಿದೆ.

ಕೆಲವು ಪಟ್ಟಣಗಳಲ್ಲಿ ಕೆಲವು ವಾರ್ಡ್‌ಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗೆದ್ದಿದ್ದರೂ ಯಾವುದೇ ಪುರಸಭೆಯಲ್ಲಿ ಅಧಿಕಾರ ಹಿಡಿಯುವಷ್ಟ ಸ್ಥಾನಗಳನ್ನು ಗೆಲ್ಲಲಾಗಿಲ್ಲ.

ಸಿಪಿಐ (ಎಂ) ನೇತೃತ್ವದ ಎಡರಂಗವು ನಾಡಿಯಾ ಜಿಲ್ಲೆಯ ತಾಹೆರ್ಪುರ ಪುರಸಭೆಯಲ್ಲಿ ಗೆಲುವು ಸಾಧಿಸಿದೆ. ಅದು 27 ಪುರಸಭೆಗಳಲ್ಲಿ ಟಿಎಂಸಿ ಎಲ್ಲಾ ವಾರ್ಡ್‌ಗಳನ್ನು ಗೆದ್ದುಕೊಂಡಿದ್ದು, ಆ ಪುರಸಭೆಗಳಲ್ಲಿ ಪ್ರತಿಪಕ್ಷವೇ ಇಲ್ಲದಂತಾಗಿದೆ.

ಮುರ್ಷಿದಾಬಾದ್‌ನ ಬೆಲ್ದಂಗಾ, ಪುರುಲಿಯಾದಲ್ಲಿ ಝಲ್ಡಾ, ಹೂಗ್ಲಿಯ ಚಂಪ್ದಾನಿ ಪುರಸಭೆಗಳಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸಲು ಸಾಧ್ಯವಾಗಿಲ್ಲ. ಈ ಪುರಸಭೆಗಳಲ್ಲಿ ಅತ್ರಂತ್ರ ಸ್ಥಿತಿ ನಿರ್ಮಾಣವಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಈ ಪುರಸಭೆಗಳಲ್ಲಿ ಅಡಳಿತ ರಚಿಸುವ ಪಕ್ಷಗಳಿಗೆ ಕೀಲಿ ಕೈ ಆಗಲಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಸುವೇಂಧು ಅಧಿಕಾರಿ ಕುಟುಂಬದ ತೆಕ್ಕೆಯಲ್ಲಿದ್ದ ಕಂಠಿ ಪುರಸಭೆಯನ್ನು ಟಿಎಂಸಿ ಕಿತ್ತುಕೊಂಡಿದೆ. ಈ ಪುರಸಭೆಯಲ್ಲಿ ಸುವೇಂದು ಅಧಿಕಾರಿ ಅವರ ತಂದೆ ಸಿಸಿರ್ ಅಧಿಕಾರಿ ಅವರು 1981-86 ರಿಂದ ಐದು ವರ್ಷಗಳನ್ನು ಹೊರತುಪಡಿಸಿ, 1971- 2009 ರವರೆಗೆ 25 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷರಾಗಿದ್ದರು. ನಂತರ, ಅವರು ಸಂಸದರಾಗಿ ಆಯ್ಕೆಯಾದರು. ಬಳಿಕ, ಕಂಠಿ ಪುರಸಭೆಯ ಅಧಿಕಾರ ಸಿಶಿರ್ ಅವರ ಕಿರಿಯ ಪುತ್ರ ದಿಬ್ಯೇಂದು ಅಧಿಕಾರಿ ವಹಿಸಿಕೊಂಡಿದ್ದರು. ಆ ನಂತರ, 2016 ರಲ್ಲಿ ಸಿಶಿರ್ ಅವರ ಮೂರನೇ ಮಗ ಸೌಮೇಂದು ಅಧಿಕಾರಿ ಅವರು ಕಂಠಿ ಪುರಸಭೆಯ ಅಧ್ಯಕ್ಷರಾಗಿದ್ದರು. ಇದೀಗ, ಸುವೇಂದು ಅಧಿಕಾರಿ ಕುಟುಂಬದ ಭದ್ರಕೋಟಿಯನ್ನು ಟಿಎಂಸಿ ಬೇಧಿಸಿದೆ.

ಉಳಿದಂತೆ, ಕೂಚ್ಬೆಹಾರ್ ಜಿಲ್ಲೆಯ ದಿನ್ಹತಾ ಪುರಸಭೆಯನ್ನು ಟಿಎಂಸಿ ಅವಿರೋಧವಾಗಿ ಗೆದ್ದುಕೊಂಡಿದೆ. ಇಲ್ಲಿ ಮತದಾನ ನಡೆದಿಲ್ಲ.


ಇದನ್ನೂ ಓದಿ; ಸಮಸ್ಯೆ ಮೀಸಲಾತಿಯಲ್ಲಿಲ್ಲ, ಬದಲಿಗೆ NEET ನಲ್ಲಿದೆ: ನೀಟ್ ರದ್ಧತಿಗೆ ಕನ್ನಡಿಗರ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...