Homeಮುಖಪುಟಇಂದು ’ಜಾಗತಿಕ ಹುಲಿ ದಿನ’ | ಭಾರತದಲ್ಲಿವೆ ಅತಿ ಹೆಚ್ಚು ಹುಲಿಗಳು ...!

ಇಂದು ’ಜಾಗತಿಕ ಹುಲಿ ದಿನ’ | ಭಾರತದಲ್ಲಿವೆ ಅತಿ ಹೆಚ್ಚು ಹುಲಿಗಳು …!

- Advertisement -
- Advertisement -

ಜುಲೈ 29 ನ್ನು ’ಜಾಗತಿಕ ಹುಲಿ ದಿನ’ ಎಂದು ಆಚರಿಸಲಾಗುತ್ತಿದೆ. ಇದು ಹುಲಿ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ವಾರ್ಷಿಕ ಆಚರಣೆಯಾಗಿದೆ. ಹುಲಿಗಳನ್ನು ಹೊಂದಿರುವ 13 ರಾಷ್ಟ್ರಗಳು 2010 ರಂದು ಸೇಂಟ್ ಪೀಟರ್‌ ಬರ್ಗ್‌ನಲ್ಲಿ ಶೃಂಗಸಭೆ ನಡೆಸಿ 2022 ರ ಹೊತ್ತಿಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಐತಿಹಾಸಿಕ ಬದ್ದತೆಯನ್ನು ಘೋಷಿಸಿದ್ದವು. ಅಂದಿನಿಂದ ಪ್ರತಿ ವರ್ಷ ಜುಲೈ 29 ಅನ್ನು ಜಾಗತಿಕ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ.

’ಜಾಗತಿಕ ಹುಲಿ ದಿನ’ವು ಹುಲಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಹುಲಿ ಸಂರಕ್ಷಣಾ ವಿಷಯಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ.

ಫೋಟೋ: ದಿ ಇಂಡಿಯನ್ ಎಕ್ಸ್‌ಪ್ರೆಸ್

ಈ ಪ್ರಯತ್ನದಿಂದಾಗಿ ಭಾರತ, ರಷ್ಯಾ ಮತ್ತು ನೇಪಾಳ ಕಾಡಿನಲ್ಲಿರುವ ಜಾಗತಿಕ ಹುಲಿಗಳ ಸಂಖ್ಯೆಯು ಕೆಲವು ವರ್ಷಗಳಿಂದ ಗಮನಾರ್ಹವಾಗಿ ಹೆಚ್ಚಳವಾಗಿದೆ. ಕಳೆದ ಒಂದು ಶತಮಾನದಲ್ಲಿ ಜಗತ್ತಿನಲ್ಲಿ 97% ದಷ್ಟು ಹುಲಿಗಳು ನಾಶವಾಗಿವೆ ಎಂದು ಅಧ್ಯಯನಗಳು ಹೇಳುತ್ತದೆ. ಜಾಗತಿಕವಾಗಿ ಹುಲಿಗಳ ಸಂಖ್ಯೆ ಕಳೆದ ನೂರು ವರ್ಷಗಳಲ್ಲೇ ಇದೆ ಮೊದಲ ಬಾರಿಗೆ ಹೆಚ್ಚಳವಾಗಿದೆ. ಪ್ರಸ್ತುತ ವಿಶ್ವದ ಕಾಡಿನಲ್ಲಿ 3890 ಹುಲಿಗಳಿವೆ ಎಂದು WWF (ವರ್ಲ್ಡ್‌ ವೈಡ್‌ಲೈಫ್‌ ಫಂಡ್) ಹೇಳುತ್ತದೆ. ಅದರಲ್ಲೂ 75% ಅಂದರೆ ಹುಲಿಗಳು ಭಾರತದಲ್ಲಿವೆ ಎಂಬುವುದು ವಿಶೇಷವಾಗಿದೆ.

ಅದಲ್ಲದೆ ಡಬ್ಲ್ಯುಡಬ್ಲ್ಯುಎಫ್ ಪ್ರಕಾರ ಅಮೆರಿಕಾ (ಸುಮಾರು 5000 ದಿಂದ 7000) ದಲ್ಲಿ ಸಾಕು ಹುಲಿಗಳು ಇವೆ ಎನ್ನಲಾಗಿದೆ. ಅಲ್ಲಿ ಕಾಡು ಪ್ರಾಣಿಗಳನ್ನು ಸಾಕದಿರುವಂತೆ ಯಾವುದೆ ಕಾನೂನುಗಳಿಲ್ಲ. ಹುಲಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಐದು ತಿಂಗಳ ಹುಲಿ ಮರಿಗೆ US $ 14,000 ಬೆಲೆಯನ್ನು ನಿಗದಿಪಡಿಸಲಾಗಿದೆ.

ಈ ಕುರಿತು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕಾರ್ ಟ್ವೀಟ್‌ ಮಾಡಿ “1973 ರಲ್ಲಿ ಹುಲಿ ಸಂರಕ್ಷಣಾ ಯೋಜನೆ ಆರಂಭಿಸಿದಾಗ ಕೇವಲ 09 ರಷ್ಟಿದ್ದ ಹುಲಿ ಅಭಯಾರಣ್ಯಗಳ ಸಂಖ್ಯೆ ಈಗ 50ಕ್ಕೆ ತಲುಪಿದೆ. ಭಾರತದಲ್ಲಿ 2967 ಹುಲಿಗಳಿವೆ. ಹುಲಿಗಳ ಆಹಾರ ಸರಪಳಿಯ ಉತ್ತುಂಗದಲ್ಲಿದೆ. ಹೆಚ್ಚಿದ ಹುಲಿಗಳಿರುವುದು ದೃಢವಾದ ಜೈವಿಕ-ವೈವಿಧ್ಯತೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.


ಓದಿ: ಪರಿಸರ ಮಾಲಿನ್ಯಕ್ಕೆ ಯಾರನ್ನು ದೂಷಿಸಬೇಕು? ನಾವೇನು ಮಾಡಬೇಕು?


ಹುಲಿ ದಿನಾಚರಣೆಯ ಬಗ್ಗೆ ಮಾತನಾಡಿದ ವನ್ಯಜೀವಿ ತಜ್ಞ ಅನೂಪ್ ಪ್ರಕಾಶ್, “ಹುಲಿಯು ನಮ್ಮ ಜೈವಿಕ ಪರಿಸರದ ಬಹಳ ಮುಖ್ಯವಾದ ಪ್ರಾಣಿಯಾಗಿದೆ. ಒಂದು ಹುಲಿ ಇರಬೇಕೆಂದರೆ 5 ಚದರ ಕಿ.ಮೀ. ನಿಂದ ಹಿಡಿದು 100 ಚ.ಕಿ.ಮೀ. ಜಾಗ ಬೇಕಾಗುತ್ತದೆ. ಅಂದರೆ ಒಂದು ಹುಲಿ ಚೆನ್ನಾಗಿದೆ ಎಂದರೆ ಅಲ್ಲಿ ಪರಿಸರ ಸಮತೋಲನವಿದೆ, ಅದಿರುವ ವಿಸ್ತಾರವಾದ ಪ್ರದೇಶದ ಅರಣ್ಯ ಚೆನ್ನಾಗಿದೆ, ಅದಕ್ಕೆ ಆಹಾರವಾದ ಜಿಂಕೆ ತರದ ಪ್ರಾಣಿಗಳು, ಅದಕ್ಕೆ ವಾಸಿಸಲು ಯೋಗ್ಯವಾದ ಸ್ಥಳ, ನೀರು ಲಭ್ಯವಿದೆ ಹಾಗೂ ಮನುಷ್ಯರ ಚಲನೆ ಇಲ್ಲವೆಂದರ್ಥ. ಹುಲಿಯನ್ನು ಉಳಿಸಿದರೆ ಇತರ ಪ್ರಭೇದದ ಜೀವಿಗಳನ್ನು ಕೂಡಾ ಉಳಿಸಿದಂತೆ” ಎಂದು ಹೇಳುತ್ತಾರೆ.

ಫೋಟೋ ಕೃಪೆ: ದಿ ಗ್ರೇಟ್ ಪಾಜೆಕ್ಟ್

ಭಾರತ ಹುಲಿ ಸಂರಕ್ಷಣೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡರೂ ಕೂಡಾ ಇಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂದು ಅನೂಪ್ ಆತಂಕ ವ್ಯಕ್ತಪಡಿಸುತ್ತಾರೆ. “ಅಭಿವೃದ್ದಿಯ ಹೆಸರಲ್ಲಿ ಅರಣ್ಯ ನಾಶ ಹೆಚ್ಚಿದೆ. ಹುಲಿಗಳಿರುವ ಪ್ರದೇಶಗಳಲ್ಲೇ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದೆ. ನದಿ ತಿರುವು ಎಂದು ಹುಲಿಗಳ ಪ್ರದೇಶಗಳನ್ನು ನಾಶ ಮಾಡಲಾಗುತ್ತದೆ. ಇವೆಲ್ಲವು ನಡೆಯುತ್ತಿರುವ ಸಂಧರ್ಭದಲ್ಲಿ ಸರ್ಕಾರ ಹೆಸರಿಗೆ ಮಾತ್ರ ಹುಲಿ ದಿನವನ್ನಾಗಿ ಆಚರಿಸುವುದನ್ನು ಬಿಟ್ಟು ವಾಸ್ತವವಾಗಿ ಹುಲಿ ಸಂರಕ್ಷಣೆಗೆ ಒತ್ತುಕೊಡಬೇಕು” ಎಂದು  ಆಗ್ರಹಿಸಿದ್ದಾರೆ.

ಬಂಗಾಲಿ ಹುಲಿ, ಕ್ಯಾಸ್ಪಿಯನ್ ಹುಲಿ, ಸೈಬೀರಿಯನ್ ಹುಲಿ, ದಕ್ಷಿಣ ಚೀನಾ ಹುಲಿ, ಇಂಡೋಚೈನಿಸ್ ಹುಲಿ, ಮಲಯನ್ ಹುಲಿ, ಜಾವಾ ಹುಲಿ, ಬಾಲಿ ಹುಲಿ, ಸುಮಾತ್ರ ಹುಲಿ ಹೀಗೆ ಹುಲಿಯನ್ನು ಹಲವಾರು ಪ್ರಭೇದಗಳನ್ನಾಗಿ ಗುರುತಿಸಲಾಗಿದೆ.

ಇವುಗಳಲ್ಲಿ ಬಾಲಿ, ಜಾವಾ ಹಾಗೂ ಕ್ಯಾಸ್ಪಿಯನ್ ಹುಲಿ ಪ್ರಬೇಧಗಳು 1980ರ ಹೊತ್ತಿಗೆ ನಿರ್ನಾಮವಾಗಿವೆ ಎನ್ನಲಾಗಿದೆ.


ಓದಿ:

ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...