ಉದ್ಧವ್ ಠಾಕ್ರೆ ನಾಳೆ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಜೆ 6.40 ಕ್ಕೆ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಮೊದಲು ಡಿಸೆಂಬರ್ 1 ರಂದು ಕಾರ್ಯಕ್ರಮ ನಡೆಯುವುದಾಗಿ ಘೋಷಿಸಲಾಗಿದ್ದು, ಬದಲಾವಣೆಯಾಗಿದ್ದು ನಾಳೆಯೇ ನಡೆಯಲಿದೆ.
ಉಪಮುಖ್ಯಮಂತ್ರಿಗಳು ಸೇರಿದಂತೆ ಹೊಸ ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಸಚಿವ ಸ್ಥಾನಗಳ ಹಂಚಿಕೆಯನ್ನು “ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು” ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಲಾಸಾಹೇಬ್ ಥೋರತ್ ಹೇಳಿದ್ದಾರೆ.
ಮಹಾರಾಷ್ಟ್ರದ 43 ಸಚಿವ ಸ್ಥಾನಗಳನ್ನು ಮೂರು ಪಕ್ಷಗಳ ನಡುವೆ ವಿಂಗಡಿಸುವ ಚರ್ಚೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಶಿವಸೇನೆಗೆ 15, ಎನ್‌ಸಿಪಿಗೆ 15 ಮತ್ತು ಕಾಂಗ್ರೆಸ್‌ಗೆ 12 ಸಚಿವ ಸ್ಥಾನಗಳು ಸಿಗಲಿವೆ. ಆದರೆ ಸಣ್ಣ ಪಕ್ಷಗಳಾದ ಸ್ವಾಭಿಮಾನಿ ಸಂಗಥಾನ ಮತ್ತು ಸಮಾಜವಾದಿ ಪಕ್ಷಕ್ಕೂ ಅವಕಾಶ ಕಲ್ಪಿಸಬೇಕಾಗಿದೆ.
ಗೃಹ, ಹಣಕಾಸು ಮತ್ತು ಕಂದಾಯ ಇಲಾಖೆ ಸೇರಿದಂತೆ ದೊಡ್ಡ ಸಚಿವಾಲಯಗಳನ್ನು ಯಾರು ಪಡೆಯುತ್ತಾರೆ ಎಂಬುದರ ಬಗ್ಗೆ ಇನ್ನು ಯಾವುದೇ ಒಪ್ಪಂದವಾಗಿಲ್ಲ. ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
“ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರೆ, ಕಾಂಗ್ರೆಸ್ ನಿಂದ ಬಾಲಾಸಾಹೇಬ್ ಥೋರತ್ ಮತ್ತು ಎನ್‌ಸಿಪಿಯಿಂದ ಜಯಂತ್ ಪಾಟೀಲ್ ಅವರು ಉಪಮುಖ್ಯಮಂತ್ರಿಗಳಾಗಲಿದ್ದಾರೆ” ಎಂದು ಎನ್‌ಸಿಪಿಯ ಮಜೀದ್ ಮೆಮನ್ ಹೇಳಿದ್ದಾರೆ.
ಆದರೆ ಥೋರತ್‌ರವರು “ಇನ್ನೂ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ. ಅಂತಹ ಯಾವುದೇ ಸಾಧ್ಯತೆಯ ಬಗ್ಗೆ ನನಗೆ ತಿಳಿದಿಲ್ಲ. ಅಂತಹ ಉಹಾಪೋಹಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಶಿವಸೇನೆ ಮತ್ತು ಯಾವಾಗಲೂ ವರ್ಣಪಟಲದ ವಿರುದ್ಧ ಬದಿಗಳಲ್ಲಿರುವ ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡಲು ಸಹಾಯ ಮಾಡುವ ಸಾಮಾನ್ಯ ಕನಿಷ್ಠ ಕಾರ್ಯಸೂಚಿಯನ್ನು ಮೈತ್ರಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಭಾವೀ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ವಿಧಾಸ ಸಭೆಯ ಸದಸ್ಯರಾಗದ ಕಾರಣದಿಂದ ವಿಧಾನ ಪರಿಷತ್ತಿನ ಸದಸ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.



???