Homeಕರೋನಾ ತಲ್ಲಣಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ

ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ

ಬಿಜೆಪಿ ಮುಖಂಡರ ಟ್ವೀಟ್‌ಗಳ ಕೆಳಗೆ "ಮ್ಯಾನಿಪುಲೆಟೆಡ್ ಮೀಡಿಯಾ (ತಿರುಚಲಾದ ವಿಷಯ)" ಎಂದು ಟ್ವಿಟರ್ ಹೆಸರಿಸಿದೆ.

- Advertisement -

ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಮಾಡಿದ ಬಿಜೆಪಿಯ ಉನ್ನತ ನಾಯಕರ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮಹತ್ವದ ಕ್ರಮ ಕೈಗೊಂಡಿದೆ. ಬಿಜೆಪಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ‘ಟೂಲ್ಕಿಟ್’ ಒಂದು ಕಟ್ಟುಕಥೆ, ತಿರುಚಿದ ಆರೋಪ ಎಂದು ಟ್ವಿಟರ್ ಅನುಮೋದಿಸಿದೆ.

ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಅಡ್ಡಿ ಮಾಡುವ ಬಗ್ಗೆ ಕಾಂಗ್ರೆಸ್ ‘ಟೂಲ್‌ಕಿಟ್’ ಎಂದು ಆರೋಪಿಸಿದ ಟ್ವೀಟ್ ಸ್ಕ್ರೀನ್‌ ಶಾಟ್‌ಗಳನ್ನು ಉಲ್ಲೇಖಿಸಿದ ಟ್ವೀಟರ್, ಇದೊಂದು ‘ಮ್ಯಾನಿಪುಲೆಟೆಡ್ ಮೀಡಿಯಾ’ (ತಿರುಚಲಾದ ವಿಷಯ) ಎಂದು ತಿಳಿಸಿದೆ. ಆ ಮೂಲಕ ಬಿಜೆಪಿಯ ಸುಳ್ಳು ಅಭಿಯಾನಕ್ಕೆ ತಡೆ ಒಡ್ಡಿದೆ.

ಟ್ವಿಟರ್ ತನ್ನ ನೀತಿಗಳ ವಿಭಾಗದಲ್ಲಿ ಹೀಗೆ ಹೇಳುತ್ತದೆ, “ನಾವು ಮಾಧ್ಯಮಗಳನ್ನು (ವೀಡಿಯೊಗಳು, ಆಡಿಯೋ ಮತ್ತು ಚಿತ್ರಗಳು) ಒಳಗೊಂಡಿರುವ ಟ್ವೀಟ್‌ಗಳನ್ನು ಜನರನ್ನು ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ರೀತಿಯಲ್ಲಿ ರಚಿಸಿದ್ದರೆ ಅದನ್ನು ನಮ್ಮ ಕಂಪನಿ ಒಪ್ಪುವುದಿಲ್ಲ……”

ಈ ನೀತಿಯ ಪರಿಣಾಮವಾಗಿಯೇ ಸಾಂಕ್ರಾಮಿಕದ ಕುರಿತು ಕಾಂಗ್ರೆಸ್ ಮೇಲೆ ಆರೋಪ ಮಾಡಿದ ಹಲವು ಬಿಜೆಪಿ ನಾಯಕರ ಟ್ವೀಟ್‌ಗಳನ್ನು ಉಲ್ಲೇಖಿಸಿ, ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಟ್ವೀಟರ್ ಹೇಳಿದೆ. ಅವರ ಟ್ವೀಟ್ ಕೆಳಗೆ ಮ್ಯಾನಿಪುಲೆಟೆಡ್ ಮೀಡಿಯಾ ಎಂದು ಎಚ್ಚರಿಕೆ ನೀಡಿದೆ.

ಅಮೆರಿಕದಲ್ಲಿ ಟ್ರಂಪ್ ಆಡಳಿತದ ಕೊನೆಯ ದಿನಗಳಲ್ಲಿ ಟ್ವಿಟರ್ ಆಗಾಗ್ಗೆ ಇದೇ ರೀತಿಯ ಎಚ್ಚರಿಕೆಗಳನ್ನು ಬಳಸುತ್ತಿತ್ತು. ಅಂತಿಮವಾಗಿ ಟ್ರಂಪ್ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯಿತು.

ಬಿಜೆಪಿಯ ಉನ್ನತ ನಾಯಕರು ತಮ್ಮ ಪಕ್ಷದ ಬಗ್ಗೆ ಅಪಾದಿಸಿದ ಬಗ್ಗೆ ‘ಟೂಲ್‌ಕಿಟ್’ ಎಂದು ಪ್ರಸಾರವಾದ ಸುದ್ದಿ ನಕಲಿ ಎಂದು ಕಾಂಗ್ರೆಸ್ ಟ್ವಿಟರ್ ಕಂಪನಿಗೆ ದೂರು ನೀಡಿದ ನಂತರ ಗುರುವಾರ ಸಂಜೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರ ಟ್ವೀಟ್ ಅನ್ನು ಬ್ಲಾಕ್ ಮಾಡಲಾಗಿತು. ಈ ಮೊದಲು, ಸತ್ಯ-ಪರಿಶೀಲನಾ ವೆಬ್‌ಸೈಟ್ ಆಲ್ಟ್‌ನ್ಯೂಸ್‌ ಸಮಗ್ರ ವರದಿಯನ್ನು ಪ್ರಕಟಿಸಿ, ಬಿಜೆಪಿಯ ಉನ್ನತ ನಾಯಕತ್ವವು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿರುವ ದಾಖಲೆಯನ್ನು ನಕಲಿ ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಪ್ರಸಾರ ಮಾಡಿದೆ ಎಂದು ಬಯಲು ಮಾಡಿತ್ತು.

ಮಂಗಳವಾರ, ಹಲವಾರು ಉನ್ನತ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು #CongressToolKitExposed ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಕಾಂಗ್ರೆಸ್ ಮೇಲೆ ದಾಳಿ ನಡೆಸಲು ಆಪಾದಿತ ಟೂಲ್‌ಕಿಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ರಾಜಕೀಯ ಜಗಳ ಏರ್ಪಟ್ಟಿತ್ತು. ಕಾಂಗ್ರೆಸ್‌ನ ನಾಯಕರು ಕೋವಿಡ್ ರೋಗಿಗಳಿಗೆ ನೀಡಿದ ಸಹಾಯಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿತ್ತು. ಆದರೆ ಬಿಜೆಪಿ ಸೃಷ್ಟಿಸಿದ ಟೂಲ್‌ಕಿಟ್ ಡಾಕ್ಯುಮೆಂಟಿನಲ್ಲಿ ಇದೆಲ್ಲ ನಕಲಿ ಎಂಬಂತೆ ಬಿಂಬಿಸಲಾಗಿತ್ತು.

ಕುಂಭಮೇಳದ ಯಾತ್ರಿಗಳನ್ನು ಸೂಪರ್-ಸ್ಪ್ರೆಡರ್ಸ್ ಎಂದು ದೂಷಿಸಲು ಪ್ರಯತ್ನಿಸಲಾಗಿದೆ ಮತ್ತು ಈದ್ ಕೂಟಗಳಿಗೆ ಹಾಜರಾದವರ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಆರೋಪಿಸಿ, ಇದು ಕಾಂಗ್ರೆಸ್‌ನ ‘ಹಿಂದೂ ವಿರೋಧಿ’ ಪಕ್ಷಪಾತ ಮತ್ತು ಕೋಮುವಾದವನ್ನು ಉಂಟುಮಾಡುವ ಉದ್ದೇಶವನ್ನು ಸಾಬೀತುಪಡಿಸಿತು ಎಂದು ಬಿಜೆಪಿ ಅಪಾದಿಸಿತ್ತು.

#CongressToolKitExposed ಎಂಬ ತಪ್ಪು ಹ್ಯಾಶ್‌ಟ್ಯಾಗ್ ಅನ್ನು ಬಳಸಿದವರಲ್ಲಿ ಇತರ ಉನ್ನತ ಬಿಜೆಪಿ ನಾಯಕರಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ, ಕಿರೆಣ ರಿಜಿಜು, ಅನುರಾಗ್ ಠಾಕೂರ್ ಮತ್ತು ಪ್ರಹ್ಲಾದ್ ಜೋಶಿ, ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಬಿರೆನ್ ಸಿಂಗ್, ಸಂಸದರಾದ ರಾಜ್ಯವರ್ಧನ್ ರಾಥೋಡ್, ತೇಜಸ್ವಿ ಸೂರ್ಯ, ರಾಹುಲ್ ಕಸ್ವಾನ್, ಪಿಸಿ ಮೋಹನ್, ಶೋಭಾ ಕರಂದ್ಲಾಜೆ, ಮನೋಜ್ ಕೋಟಕ್, ವಿನಯ್ ಸಹಸ್ರಬುದ್ದೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಇದ್ದಾರೆ.

ಕಾಂಗ್ರೆಸ್ ತಕ್ಷಣವೇ ಟೂಲ್ಕಿಟ್ ಅನ್ನು ಕಟ್ಟುಕಥೆ ಎಂದು ಕರೆದು ಈ ಎಲ್ಲ ಬಿಜೆಪಿ ನಾಯಕರ ವಿರುದ್ಧ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿತ್ತು. “ಪ್ರಸ್ತುತ ಸಾಂಕ್ರಾಮಿಕದ ಮಧ್ಯೆ, ಭಾರತದ ಜನರಿಗೆ ಅಗತ್ಯ ನೆರವು ನೀಡುವಲ್ಲಿ ಮೋದಿ ಸರ್ಕಾರದ ಮಹತ್ತರವಾದ ವೈಫಲ್ಯದಿಂದ ಗಮನವನ್ನು ಬೇರೆಡೆ ಸೆಳೆಯಲು” ಬಿಜೆಪಿ ಈ ಮೋಸದ ಕೃತ್ಯವನ್ನು ಮಾಡಿದೆ ಎಂದು ಅದು ಆಪಾದಿಸಿತ್ತು.

ಆ ಟ್ವೀಟ್‌ಗಳನ್ನು ತೆಗೆದುಹಾಕಿ ಮತ್ತು ನಕಲಿ ಟೂಲ್‌ಕಿಟ್ ಹಂಚಿಕೊಂಡವರ ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅದು ಟ್ವಿಟರ್‌ಗೆ ಪತ್ರ ಬರೆದಿತ್ತು. “ಪ್ರಸ್ತುತ ಸಾಂಕ್ರಾಮಿಕದ ಮಧ್ಯೆ ದೇಶದಲ್ಲಿ ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದಾದ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲು ಬಿಜೆಪಿಯ ಉನ್ನತ ನಾಯಕರು ಟ್ವಿಟ್ಟರ್ ಅನ್ನು ಒಂದು ವೇದಿಕೆಯಾಗಿ ಬಳಸಿದ್ದಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಿಜೆಪಿ ಮತ್ತು ಅದರ ಐಟಿ ಸೆಲ್ ಆಗಾಗ್ಗೆ ರಾಜಕೀಯ ನಕಲಿ ಸುದ್ದಿಗಳನ್ನು ಸೃಷ್ಟಿಸುತ್ತದೆ, ಇದನ್ನು ಹಂಚಿಕೊಳ್ಳುವ ಅದರ ಹೆಚ್ಚಿನ ನಾಯಕರು ಮತ್ತು ಸದಸ್ಯರು ಸಾಮಾನ್ಯವಾಗಿ ಶಿಕ್ಷೆ ಅನುಭವಿಸುವುದಿಲ್ಲ ಎಂದು ದಿ ವೈರ್ ವರದಿ ಮಾಡಿದೆ.

ಅಂತಹ ಹಿನ್ನೆಲೆಯಲ್ಲಿ, ಟ್ವಿಟ್ಟರ್ ಸಂಬೀತ್ ಪತ್ರಾ ಅವರ ಟ್ವೀಟ್ ಅನ್ನು ತೆಗೆದು ಹಾಕಿದ್ದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ.

ಇದೇ ‘ಟೂಲ್‌ಕಿಟ್’ ಸಂದೇಶ ಹರಡಿದ ನಮ್ಮ ರಾಜ್ಯದ ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಮತ್ತು ಶೋಭಾ ಕರಂದ್ಲಾಜೆ ಕೂಡ ಈಗ ಜನರ ಮುಂದೆ ಬೆತ್ತಲಾಗಿದ್ದಾರೆ.


ಇದನ್ನೂ ಓದಿ; ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares