Homeಮುಖಪುಟಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಗಳಿಂದ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ಖುಲಾಸೆ

ಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಗಳಿಂದ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ಖುಲಾಸೆ

- Advertisement -
- Advertisement -

ತೆಹಲ್ಕಾ ನಿಯತಕಾಲಿಕದ ಸಂಸ್ಥಾಪಕ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಗೋವಾ ನ್ಯಾಯಾಲಯವು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದೆ. ಗೋವಾದ ರೆಸಾರ್ಟ್ ಒಂದರಲ್ಲಿ 2013ರಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿತ್ತು.

ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದ ತರುಣ್ ತೇಜ್‌ಪಾಲ್, 2014 ರಿಂದ ಜಾಮೀನಿನ ಮೇಲೆ ಹೊರಗಿದ್ದರು. 8 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ.

2017 ರಲ್ಲಿ ವಿಚಾರಣಾ ನ್ಯಾಯಾಲಯ ತರುಣ್ ತೇಜ್‌ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕಾನೂನುಬಾಹಿರ ಬಂಧನ ಆರೋಪಗಳನ್ನು ದಾಖಲಿಸಿತ್ತು. ಈ ಆರೋಪಗಳ ವಿರುದ್ಧ ತರುಣ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಗೋವಾ ನ್ಯಾಯಾಲಯದಲ್ಲಿಯೇ ವಿಚಾರಣೆ ಮುಂದುವರಿಯಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಇದನ್ನೂ ಓದಿ: ವಾಟ್ಸಪ್‌‌ ಹೊಸ ಗೌಪ್ಯತಾ ನೀತಿ ವಿವಾದ – ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದ ಸರ್ಕಾರ

ತರುಣ್ ತೇಜ್‌ಪಾಲ್ ಅವರ ಪರವಾಗಿ ನ್ಯಾಯಾಲಯದ ತೀರ್ಪನ್ನು ವಿವರಿಸಿರುವ ಪುತ್ರಿ ಕ್ಯಾರಾ ತೇಜ್‌ಪಾಲ್, ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

’ಈ ನ್ಯಾಯಾಲಯವು ಕಠಿಣ, ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆಗೆ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪ್ರಾಯೋಗಿಕ ವಸ್ತುಗಳನ್ನು ದಾಖಲೆಯಲ್ಲಿ ಪರಿಶೀಲಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ” ಎಂದು ತರುಣ್ ತೇಜ್‌ಪಾಲ್ ಹೇಳಿದ್ದಾರೆ. ಜೊತೆಗೆ ಕೋವಿಡ್‌ನಿಂದ ನಿಧನರಾದ ತಮ್ಮ ವಕೀಲ ರಾಜೀವ್ ಗೋಮ್ಸ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ಏಳೂವರೆ ವರ್ಷಗಳಿಂದ ಈ ಸುಳ್ಳು ಆರೋಪದ ಪರಿಣಾಮವನ್ನು ನಮ್ಮ ವೈಯಕ್ತಿಕ, ವೃತ್ತಿಪರ ಮತ್ತು ಸಾರ್ವಜನಿಕ ಜೀವನದ ಪ್ರತಿಯೊಂದು ಹಂತಗಳಲ್ಲೂ ಅನುಭವಿಸಿದ್ದೇವೆ. ಈ ದಿನಗಳು ನಮ್ಮ ಕುಟುಂಬಕ್ಕೆ ಅಘಾತಕಾರಿ ದಿನಗಳು ಎಂದಿದ್ದಾರೆ.

ಇದನ್ನೂ ಓದಿ: ಕೇರಳ ಐತಿಹಾಸಿಕ ನಿರ್ಧಾರ: ದೇವಸ್ವಂ( ಮುಜರಾಯಿ ಇಲಾಖೆ) ಸಚಿವರಾಗಿ ದಲಿತ ಸಮುದಾಯದ ಶಾಸಕ ಆಯ್ಕೆ

ಗೋವಾದಲ್ಲಿನ ಸೆಷನ್ಸ್ ನ್ಯಾಯಾಲಯವು ಬುಧವಾರ ತನ್ನ ತೀರ್ಪನ್ನು ಘೋಷಿಸಬೇಕಾಗಿತ್ತು ಆದರೆ ತೌತೆ ಚಂಡಮಾರುತದಿಂದಾಗಿ ವಿದ್ಯುತ್ ವೈಫಲ್ಯವನ್ನು ಉಲ್ಲೇಖಿಸಿ ತೀರ್ಪನ್ನು ಮುಂದೂಡಲಾಗಿತ್ತು. ಈ ಹಿಂದೆಯೂ ಕೊರೊನಾ ವೈರಸ್ ಬಿಕ್ಕಟ್ಟು ಸೇರಿದಂತೆ ವಿವಿಧ ಕಾರಣಗಳಿಗಾಗಿ ತೀರ್ಪು ವಿಳಂಬವಾಗಿತ್ತು.

ಅತ್ಯಾಚಾರ ಆರೋಪ ದಾಖಲಾದ ಕೂಡಲೇ ತೆಹಲ್ಕಾ ಸಂಪಾದಕ ಸ್ಥಾನದಿಂದ ತೇಜ್‌ಪಾಲ್ ಹೊರಬಂದಿದ್ದರು. ಆರು ತಿಂಗಳಲ್ಲಿಯೇ ಮತ್ತೆ ಆ ಸ್ಥಾನಕ್ಕೆ ಮರಳಿದ್ದರು. 2013ರ ನವೆಂಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರು, 2014ರ ಮೇ ತಿಂಗಳಿನಿಂದ ಜಾಮೀನಿನ ಮೇಲೆ ತರುಣ್ ಹೊರ ಬಂದಿದ್ದರು.

ಗೋವಾ ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ 2,684 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು, ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿದ್ದರು. 2017 ರಲ್ಲಿ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸುವ ಮನವಿಯನ್ನು ತಳ್ಳಿಹಾಕಿತ್ತು.


ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...