Homeಮುಖಪುಟಟೂಲ್‌ಕಿಟ್-ಟ್ವೀಟ್: ಕಾಂಗ್ರೆಸ್ ನಾಯಕರಿಗೆ ನೋಟಿಸ್ ಜಾರಿ, ಸಂಬಿತ್ ಪಾತ್ರಾಗೆ ಸಮನ್ಸ್ ಸಾಧ್ಯತೆ

ಟೂಲ್‌ಕಿಟ್-ಟ್ವೀಟ್: ಕಾಂಗ್ರೆಸ್ ನಾಯಕರಿಗೆ ನೋಟಿಸ್ ಜಾರಿ, ಸಂಬಿತ್ ಪಾತ್ರಾಗೆ ಸಮನ್ಸ್ ಸಾಧ್ಯತೆ

- Advertisement -
- Advertisement -

ದೆಹಲಿ ಪೊಲೀಸರು ಟ್ವಿಟರ್ ಇಂಡಿಯಾದ ದೆಹಲಿ ಮತ್ತು ಗುರಗಾಂವ್ ಕಚೇರಿಗಳಿಗೆ ಭೇಟಿ ನೀಡಿದ ಒಂದು ದಿನದ ನಂತರ, ಬಿಜೆಪಿಯ ಟೂಲ್‌ಕಿಟ್ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕ ಮಂಗಳವಾರ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತಾ ಮತ್ತು ಪಕ್ಷದ ವಕ್ತಾರ ಎಂ.ವಿ ರಾಜೀವ್ ಗೌಡ ಅವರಿಗೆ ನೋಟಿಸ್ ನೀಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೋವಿಡ್ ನಿರ್ವಹಣೆ ವಿಷಯ ಬಳಸಿಕೊಂಡು, ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರವನ್ನು ನಿಂದಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಆರೋಪಿಸಿ ಆಡಳಿತ ಪಕ್ಷದ ಮುಖಂಡರು ಮಾಡಿದ್ದ ಕೆಲವು ಪೋಸ್ಟ್‌ಗಳನ್ನು ’ತಿರುಚಿದ ಸಂಗತಿ’ (ಮ್ಯಾನಿಪುಲೆಟೆಡ್ ಮೀಡಿಯಾ) ಎಂದು ಟ್ವಿಟರ್ ಕಂಪನಿ ಫ್ಲ್ಯಾಗ್ ಮಾಡಿದ ಕೆಲವು ದಿನಗಳ ನಂತರ, ಟ್ವೀಟರ್‌ಗೆ ಎರಡು ನೋಟಿಸ್ ಕಳಿಸಲಾಗಿತ್ತು. ನಿನ್ನೆ ಸೋಮವಾರ ಈ ನೋಟಿಸ್ ಅನ್ನು ನೇರವಾಗಿ ನೀಡಲು ಟ್ವೀಟರ್ ಕಚೇರಿಗಳಿಗೆ ಹೋದ ದೆಹಲಿ ಪೊಲೀಸರಿಗೆ ಅಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಿಕ್ಕಿರಲಿಲ್ಲ.

ಇದನ್ನೂ ಓದಿ: ನಾಳೆ ಕರಾಳ ದಿನ ಆಚರಣೆ: ರೈತರಿಗೆ ಕಾಂಗ್ರೆಸ್ ಸೇರಿ 12 ಪಕ್ಷಗಳ ಬೆಂಬಲ

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ಪೋಸ್ಟ್ ಅನ್ನು ಟ್ವೀಟರ್ ’ತಿರುಚಿದ ಸಂಗತಿ’ (ಮ್ಯಾನಿಪುಲೆಟೆಡ್ ಮೀಡಿಯಾ) ಎಂದು ಟ್ಯಾಗ್ ಮಾಡಿದ್ದನ್ನು ಕೇಂದ್ರವು ಆಕ್ಷೇಪಿಸಿತ್ತು. “ಯಾವುದೇ ಎಫ್‌ಐಆರ್ ದಾಖಲಿಸುವ ಮೊದಲು ನಡೆಸುವ ಸಹಜ ಕ್ರಮದಂತೆ ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಈ ವಿಷಯದಲ್ಲಿ ಭಾಗಿಯಾಗಿರುವ ಎಲ್ಲ ಸಂಬಂಧಪಟ್ಟ ಜನರು ಮತ್ತು ಸಂಸ್ಥೆಗಳಿಗೆ ಸಮನ್ಸ್ ನೀಡಿದ್ದೇವೆ. ಟೂಲ್‌ಕಿಟ್‌ನ ಬಗ್ಗೆ ಟ್ವಿಟರ್‌ಗೆ ಯಾವ ಮಾಹಿತಿ ಇದೆ ಎಂದು ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ಅವರು ’ಮ್ಯಾನಿಪ್ಯುಲೇಟೆಡ್ ಮೀಡಿಯಾ ’ಲೇಬಲ್ ನೀಡಲು ಏಕೆ ಆಯ್ಕೆ ಮಾಡಿದ್ದಾರೆಂದು ತಿಳಿಯಲು ನಾವು ಟ್ವಿಟರ್‌ಗೆ ಸೂಚನೆ ನೀಡಿದ್ದೇವೆ. ಟ್ವಿಟರ್ ಹೊರತುಪಡಿಸಿ, ದೂರುದಾರರಾದ ಕಾಂಗ್ರೆಸ್ ಪ್ರತಿನಿಧಿಗಳಿಗೆ ನಾವು ನೋಟಿಸ್ ನೀಡಿದ್ದೇವೆ, ಘಟನೆಗಳ ಸಂಪೂರ್ಣ ಅನುಕ್ರಮವನ್ನು ವಿವರಿಸಲು ತನಿಖೆಗೆ ಸಹಕರಿಸಲು ಕೇಳಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿಚಾರಣೆಗಾಗಿ ನಾವು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರಿಗೆ ನೋಟಿಸ್/ಸಮನ್ಸ್ ನೀಡಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಸೋಮವಾರ, ದೆಹಲಿ ಪೊಲೀಸ್ ಪಿಆರ್‌ಒ ಚಿನ್ಮಯ್ ಬಿಸ್ವಾಲ್, ಈ ಕ್ರಮವು “ದಿನ ನಿತ್ಯದ ಪ್ರಕ್ರಿಯೆಯ ಒಂದು ಭಾಗವಾಗಿದೆ” ಎಂದು ಹೇಳಿದ್ದರು.

“ಟ್ವಿಟರ್ ಇಂಡಿಯಾ ಎಂ.ಡಿ ನೀಡಿದ ಉತ್ತರಗಳು ಬಹಳ ಅಸ್ಪಷ್ಟವಾಗಿರುವುದರಿಂದ, ನೋಟಿಸ್ ನೀಡಲು ಸರಿಯಾದ ವ್ಯಕ್ತಿ ಯಾರು ಎಂದು ನಾವು ತಿಳಿಯಲು ಟ್ವಿಟರ್ ಕಚೇರಿಗೆ ನೇರವಾಗಿ ನೋಟಿಸ್ ನೀಡಲು ಹೋಗಲಾಗಿತ್ತು” ಎಂದು ಅವರು ಹೇಳಿದ್ದರು.

ದೆಹಲಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕಾಂಗ್ರೆಸ್ ದೂರಿನಲ್ಲಿ, ಲೆಟರ್‌ಹೆಡ್‌ನಲ್ಲಿನ ವಿಷಯ ಮತ್ತು ಇತರರು ಮಾಡಿದ ಟ್ವೀಟ್‌ಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಮತ್ತು ಟ್ವಿಟರ್‌ಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಆನ್‌ಲೈನ್ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೂರ್ಕರ ಕೈಗೆ ಅಧಿಕಾರ ಸಿಕ್ಕಿದರೆ ಆಗುವುದು ಹೀಗೆ. ಅಯೋಗ್ಯರಿಗೆ ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...