ರಾಜ್ಯದಲ್ಲಿ ಪ್ರವಾಸೋದ್ಯಮವು ಕುಸಿತ ಕಾಣುತ್ತಿದೆ ಎಂದು ಪ್ರತಿಪಾದಿಸಲು “ಸುಳ್ಳು ಅಂಕಿ-ಅಂಶಗಳನ್ನು” ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಗೋವಾ ಸರ್ಕಾರವು ವ್ಯಕ್ತಿಯೊಬ್ಬರ ವಿರುದ್ಧ ಶುಕ್ರವಾರ ಪೊಲೀಸ್ ದೂರು ದಾಖಲಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವ್ಯಕ್ತಿಯು ಲಂಡನ್ ಮೂಲದ ವಿಶ್ಲೇಷಣಾ ಕಂಪನಿಯಾದ CEIC ಡೇಟಾದ ಅಂಕಿಅಂಶಗಳನ್ನು ಉಲ್ಲೇಖಿಸಿ, “ಗೋವಾದಲ್ಲಿ ಪ್ರವಾಸೋದ್ಯಮವು ಕುಸಿಯುತ್ತಿದೆ” ಎಂದು ಹೇಳಿದ್ದರು. ಪ್ರವಾಸೋದ್ಯಮ ಕುಸಿತ
ಗೋವಾದಲ್ಲಿ ವಿದೇಶಿ ಪ್ರವಾಸಿಗರ 2019 ಮತ್ತು 2023 ಅಂಕಿ ಅಂಶಗಳ ನಡುವಿನ ಹೋಲಿಕೆಯನ್ನು ಉಲ್ಲೇಖಿಸಿ ರಾಮಾನುಜ್ ಮುಖರ್ಜಿ ಅವರು ನವೆಂಬರ್ 5 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು ವಿದೇಶಿ ಪ್ರವಾಸಿಗರು ಗೋವಾ ಬದಲಿಗೆ ಶ್ರೀಲಂಕಾದಂತಹ ಇತರ ಸ್ಥಳಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಭಾರತೀಯ ಪ್ರವಾಸಿಗರು ಗೋವಾಕ್ಕೆ ಇನ್ನೂ ಭೇಟಿ ನೀಡುತ್ತಿದ್ದಾರೆ. ಅದರೆ, ವಿದೇಶದಲ್ಲಿ ಗೋವಾದಂತೆಯೆ ಇರುವ ಹಲವಾರು ಅಗ್ಗದ ಸ್ಥಳಗಳಿರುವಾಗ ಮತ್ತು ಗೋವಾದಲ್ಲಿ ಪ್ರವಾಸಿಗರ ಶೋಷಣೆಯ ಬಗ್ಗೆಗಿನ ವಿಚಾರ ಹರಡಿದರೆ ಅವರು ಕೂಡಾ ಶೀಘ್ರದಲ್ಲೇ ಗೋವಾಗೆ ಭೇಟಿ ನೀಡುವುದನ್ನು ನಿಲ್ಲಿಸುತ್ತಾರೆ” ಎಂದು ಅವರು ಹೇಳಿದ್ದರು.
ಲಂಡನ್ ಮೂಲದ ವಿಶ್ಲೇಷಣಾ ಕಂಪನಿಯಾದ CEIC ಡೇಟಾದ ಅಂಕಿಅಂಶಗಳನ್ನು ಉಲ್ಲೇಖಿಸಿ, “ಗೋವಾದಲ್ಲಿ ಪ್ರವಾಸೋದ್ಯಮವು ಕುಸಿತ ಕಂಡಿದೆ” ಎಂದು ಮುಖರ್ಜಿ ಉಲ್ಲೇಖಿಸಿದ್ದರು. ಪ್ರವಾಸೋದ್ಯಮ ಕುಸಿತ
Tourism in Goa is down in dumps
Foreign tourists have abandoned the state already. Look at 2019 v 2023 numbers. Russians and Brits who used to visit annually have opted for Sri Lanka instead.
Indian tourists still visiting, but soon likely to ditch it as word spreads about… pic.twitter.com/RF2TLC2Zvi
— Ramanuj Mukherjee (@law_ninja) November 5, 2024
ಮುಖರ್ಜಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗೋವಾದಲ್ಲಿ ವಿಶ್ವಾಸಾರ್ಹ ಸಾರಿಗೆ ಮತ್ತು ಸಮಂಜಸವಾದ ಹೋಟೆಲ್ ದರಗಳನ್ನು ಹುಡುಕಲು ಹೆಣಗಾಡುತ್ತಿರುವ ಅನುಭವಗಳ ಬಗ್ಗೆ ವಿವರಿಸಿದ್ದಾರೆ.
ಆದಾಗ್ಯೂ, ರಾಜ್ಯದ ಪ್ರವಾಸೋದ್ಯಮ ಇಲಾಖೆಯು, ಮುಖರ್ಜಿ ಅವರು ಸುಳ್ಳು ದತ್ತಾಂಶವನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದೆ. ಅವರು “ಸಾರ್ವಜನಿಕ ಕಿಡಿಗೇಡಿತನ” ಮಾಡುತ್ತಿದ್ದಾರೆ ಎಂದು ಎಂದು ಆರೋಪಿಸಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಅವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಇಂತಹ ಸುಳ್ಳು ಹೇಳಿಕೆಗಳ ಪ್ರಚಾರವು ನಮ್ಮ ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತರುವುದಲ್ಲದೆ, ಸಾರ್ವಜನಿಕ ನೆಮ್ಮದಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಅವರ ಈ ಹೇಳಿಕೆಯು ಗೋವಾದ ಇಮೇಜ್ ಅನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಗುಪ್ತ ಕಾರ್ಯಸೂಚಿಯ ಭಾಗವಾಗಿರಬಹುದು ಎಂದು ಪ್ರವಾಸೋದ್ಯಮ ಇಲಾಖೆಯು ವಿಶೇಷವಾಗಿ ಆತಂಕ ವ್ಯಕ್ತಪಡಿಸಿದೆ” ಎಂದು ಅವರು ದೂರಿನಲ್ಲಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಪೋಸ್ಟ್ ಅನ್ನು ಅಪ್‌ಲೋಡ್ ಮಾಡುವ ಮೊದಲು ಮುಖರ್ಜಿ ಅವರು ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮಾಲೋಚಿಸಿಲ್ಲ, ಅವರು ನೀಡಿರುವ ಅಂಕಿ-ಅಂಶದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಜೊತೆಗೆ ಅವರ ಹೇಳಿಕೆಗಳು ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿವೆ” ಎಂದು ಅವರು ಆರೋಪಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ದೂರಿಗೆ ಪ್ರತಿಕ್ರಿಯಿಸಿರುವ ಮುಖರ್ಜಿ, ತಾನು ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಸಿಗರು ಎತ್ತುವ ದೂರುಗಳನ್ನು ಪರಿಹರಿಸುವ ಬದಲು ರಾಜ್ಯ ಸರ್ಕಾರವು “ಟೀಕೆಗಳನ್ನು ಮುಚ್ಚಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಟೀಕೆಗಳನ್ನು ಇಲ್ಲದಂತೆ ಮಾಡಲು ಕಾನೂನಿನ ದುರುಪಯೋಗ ಮಾಡುವ ಬದಲು, ನಾನು ಉಲ್ಲೇಖಿಸಿದ ಅಂಕಿ ಅಂಶಗಳು ತಪ್ಪಾಗಿದೆ ಎಂದು ಅವರು ಸರಿಯಾದ ಅಂಕಿ ಅಂಶಗಳನ್ನು ಅಲ್ಲಿಗೆ ಹಾಕಬೇಕು. ಸರ್ಕಾರದ ಈ ಬೆದರಿಕೆಯನ್ನು ಕಾನೂನು ವಿಧಾನಗಳ ಮೂಲಕ ಎದುರಿಸುತ್ತೇನೆ” ಎಂದು ಮುಖರ್ಜಿ ಅವರು ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿ ನೀತಿ ರದ್ದು ಮಾಡಿದ ಕೆನಡಾ – ಭಾರತದ 90% ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ವಿದ್ಯಾರ್ಥಿ ನೀತಿ ರದ್ದು ಮಾಡಿದ ಕೆನಡಾ – ಭಾರತದ 90% ವಿದ್ಯಾರ್ಥಿಗಳ ಭವಿಷ್ಯ ಅತಂತ್ರ


