ಬುಡಕಟ್ಟು ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ್ ದೇವರಕೊಂಡ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅದರ ಬೆನ್ನಲ್ಲೇ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ. ಅವರು ತಮಿಳು ನಟ ಸೂರ್ಯ ಅವರ ‘ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ಪಹಲ್ಗಾಮ್ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಸರಿಯಾದ ಶಿಕ್ಷಣ ಕೊಟ್ಟರೆ ಇಂತಹವರು ಬ್ರೇನ್ ವಾಶ್ ಆಗೋದು ತಪ್ಪುತ್ತದೆ. 500 ವರ್ಷಗಳ ಹಿಂದೆ ಬುಡಕಟ್ಟು ಜನರು ಸಾಮಾನ್ಯ ಜ್ಞಾನವಿಲ್ಲದೆ ಹೊಡೆದಾಡಿಕೊಳ್ಳುತ್ತಿದ್ದರು. ಈ ಉಗ್ರರು ಕೂಡ ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದರು.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಜಯ್ ಅವರು ಬುಡಕಟ್ಟು ಜನರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಅವರ ವಿರುದ್ಧ ದೂರನ್ನೂ ದಾಖಲಿಸಲಾಗಿದೆ. ಇದರ ಬೆನ್ನಲ್ಲೆ ವಿವಾದಕ್ಕೆ ತೆರೆ ಎಳೆಯಲು ವಿಜಯ್ ಯತ್ನಿಸಿದ್ದಾರೆ.
Vijay Deverakonda Faces Legal Complaint for Remarks Against Tribal Community at Retro Movie Pre-Release Event#Hyderabad: A complaint has been filed against actor Vijay Deverakonda by the Tribal Lawyers Association for allegedly making derogatory remarks about the tribal… pic.twitter.com/3E8cXSE3SP
— Hyderabad Mail (@Hyderabad_Mail) May 2, 2025
ತಮ್ಮ ಹೇಳಿಕೆಗೆ ಕ್ಷಮೆ ಕೇಳಿ ಪತ್ರ ಬರೆದಿರುವ ಅವರು, “ರೆಟ್ರೋ ಸಿನಿಮಾದ ಕಾರ್ಯಕ್ರಮದಲ್ಲಿ ನಾನು ನೀಡಿದ ಹೇಳಿಕೆ ಕೆಲವು ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬುದು ಗೊತ್ತಾಯಿತು. ನನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನನಗೆ ಯಾವುದೇ ಸಮುದಾಯ ಅಥವಾ ಬುಡಕಟ್ಟು ಸಮುದಾಯದ ಜನರ ಮನಸ್ಸನ್ನು ನೋಯಿಸುವ ಉದ್ದೇಶವಿಲ್ಲ. ಭಾರತದ ಎಲ್ಲ ಜನರು ಒಂದೇ ಎಂಬುದು ನನ್ನ ಭಾವನೆ” ಎಂದು ಹೇಳಿದ್ದಾರೆ.
“ನಾನು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡಿಲ್ಲ. ನಾವೆಲ್ಲರೂ ಒಂದೇ, ಒಟ್ಟಿಗೆ ಮುಂದೆ ಸಾಗಬೇಕು. ಎಲ್ಲರನ್ನೂ ನನ್ನ ಕುಟುಂಬವೆಂದೇ ನಾನು ಭಾವಿಸುತ್ತೇನೆ. ನಾನು ಬುಡಕಟ್ಟು ಎಂಬ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಆ ಬಗ್ಗೆ ವಿಷಾದಸುತ್ತೇನೆ” ಎಂದು ಹೇಳಿದ್ದಾರೆ.
To my dear brothers ❤️ pic.twitter.com/QBGQGOjJBL
— Vijay Deverakonda (@TheDeverakonda) May 3, 2025